ಆಧ್ಯಾತ್ಮಿಕತೆಯಿಂದ ಮಾತ್ರ ಜೀವನದಲ್ಲಿ ಶಾಂತಿ ಹಾಗು ನೆಮ್ಮದಿ ದೊರೆಯಲು ಸಾಧ್ಯವೆಂದು ದೇವಿ ಆರಾಧಕ ಬುದ್ನಿ ಗುರುಗಳು ತಿಳಿಸಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಾಮಪುರದ ಹೂಗಾರ ತೋಟದಲ್ಲಿ ಜರುಗಿದ ಶ್ರೀ ಮಲ್ಲಿಕಾರ್ಜುನ ಶಂಕರ ಶಿವಾಚಾರ್ಯರ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಶರಣರ ಜೀವನ ಚರಿತ್ರೆಯೇ ವಿಶೇಷವಾದುದು.

ಎಂದಿಗೂ ಸ್ವಾರ್ಥ ಬಯಸದೆ ಲೋಕ ಕಲ್ಯಾಣಕ್ಕಾಗಿಯೇ ಶ್ರಮಿಸಿದವರಲ್ಲಿ ಮಲ್ಲಿಕಾರ್ಜುನ ಶಂಕರ ಶಿವಾಚಾರ್ಯರು ಒಬ್ಬರು ಎಂದರು.
ಮೇಲು ಅಮ್ಮಲಜೇರಿ ಮಾತನಾಡಿ ಭಕ್ತಿಯು ಆಂತರಿಕ ಶಕ್ತಿ ಹೆಚ್ಚಿಸುತ್ತದೆ. ಜೊತೆಗೆ ಆತ್ಮಬಲ ಕೂಡ ವೃದ್ಧಿಸುತ್ತದೆ. ಸತತ ಅಧ್ಯಯನದಿಂದ ವ್ಯಕ್ತಿ ಜ್ಞಾನ ವಿಕಸನಗೊಳ್ಳುವದೆಂದರು.
ಇದೇ ಸಂದರ್ಭ ದೀಪೋತ್ಸವ ಕಾರ್ಯಕ್ರಮ ಜರುಗಿತು.
ಮಲ್ಲಿಕಾರ್ಜುನ ಹೊಸಮನಿ, ರುದ್ರಪ್ಪ ಅರಳಿಕಟ್ಟಿ, ರಾಚಪ್ಪ ಸಂಕಾನಟ್ಟಿ, ಮಹಾದೇವ ಆರಗಿ, ಈರಪ್ಪ ಮನ್ಮಿ, ಅಲ್ಲಪ್ಪ ಗೊಲಬಾಂವಿ, ಗಜಾನಂದ ಹುಲಕುಂದ, ಬಸವರಾಜ ಚಿಂಚಕಂಡಿ, ಶಿವಲೀಲಾ ಆರಗಿ, ಶೈಲಾ ಜಯನ್ನವರ, ಗೌರವ್ವ ಅರ್ಜುನಗಿ ಸೇರಿದಂತೆ ಅನೇಕರಿದ್ದರು.
ಪ್ರಕಾಶ ಕುಂಬಾರ
Ain ನ್ಯೂಸ್ ಕನ್ನಡ
ಬಾಗಲಕೋಟೆ