ಯುವ ಕ್ಷೇತ್ರವು ಎಲ್ಲ ರಂಗಗಳಲ್ಲಿಯೂ ಅಭಿವೃದ್ಧಿ ಹೊಂದಲು ಸಾಧ್ಯ. ಅಖಂಡ ಭಾರತ ಬಹುದೊಡ್ಡ ರಾಷ್ಟ್ರವಾಗಿದ್ದು ಯುವಕರಿಂದಲೇ ತುಂಬಿರುವ ಕಾರಣ ಜಗತ್ತಿನ ಬಲಾಢ್ಯ ರಾಷ್ಟ್ರಗಳಿಗೆ ಸಮನಾಗಿ ನಿಲ್ಲುವಲ್ಲಿ ಕಾರಣವಾಗಿದೆ.
ಸುಳ್ಳು, ಮೋಸ ಹಾಗು ಕಳ್ಳತನಗಳಿಗೆ ಬಲಿಯಾಗದೆ ಮಾನವೀಯ ಮೌಲ್ಯಗಳ ಶ್ರೇಷ್ಠತೆಯನ್ನು ಬದುಕಿನಲ್ಲಿ ಅನುಸರಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವೆಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ರಮೇಶ ಹಲಗಲಿ ಹೇಳಿದರು.

ಬಾಗಲಕೋಟೆ ಜಿಲ್ಲೆಯ ರಬಕವಿಯ ಡಾ. ಪದ್ಮಜೀತ ನಾಡಗೌಡ ಫೌಂಡೇಶನ್‌ನಿಂದ ಚಿಕ್ಕೋಡಿ ಮೈದಾನದಲ್ಲಿ ನಡೆದ ಯುವ ಉತ್ಸವ-2021 ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಕಾರ್ಯಗಳನ್ನು ನಡೆಸಬೇಕಾದಲ್ಲಿ ನಾಯಕತ್ವ ಗುಣ ಮೊದಲಿರಬೇಕು.
ಮೆದುಳಿನ ಭಾವನೆಗಳಿಗೆ ತಕ್ಕಂತೆ ಸ್ಪಂದಿಸುವ ಮೂಲಕ ಯುವ ರಾಷ್ಟ್ರದಿಂದ ಕೂಡಿರುವ ಭಾರತಕ್ಕೆ ಯುವಕರೆಲ್ಲರೂ ನಾಯಕತ್ವ ಸ್ಥಾನ ಪಡೆಯಬೇಕೆಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸಾಹಿತಿ ಸಿದ್ಧರಾಜ ಪೂಜಾರಿ, ಬಡವರ ಪಾಲಿಗೆ ರಕ್ಷಕರಾಗಿ, ಸಾವಿರಾರು ರೋಗಿಗಳಿಗೆ ಉಚಿತ ನೇತ್ರ ಚಿಕಿತ್ಸೆ ನೀಡಿ, ಸದಾ ಕೊಡುಗೈ ದಾನಿಯಾಗಿರುವ ಡಾ. ಪದ್ಮಜೀತ ನಾಡಗೌಡಪಾಟೀಲರ ಸಾಧನೆ ಅತ್ಯುತ್ತಮವಾದುದು ಎಂದರು.
ಗುರುವಂದನೆ ಕಾರ್ಯಕ್ರಮದಲ್ಲಿ ಹಲವಾರು ಇಳಿವಯಸ್ಸಿನ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭ ನಮ್ಮ ಹೆಮ್ಮೆ, ನಮ್ಮ ಡಾಕ್ಟರ್ ಎಂಬ 6 ಗೀತೆಗಳನ್ನು ಶಂಕರ ಸೊರಗಾಂವಿ, ಚಿದಾನಂದ ಗಾಳಿ, ನೀಲಕಂಠ ಮುತ್ತೂರ, ರವಿ ಬಾಡಗಿ, ಶ್ರೀಕಾಂತ ಕೆಂಧೂಳಿ ಲೋಕಾರ್ಪಣೆ ಮಾಡಿದರು.
ಅಪ್ಪು-ಯೋಧರ ಹಾಗು ಡಾ. ಈಶ್ವರ ಮಂಟೂರ ಸ್ಮರಣೆ ನಿಮಿತ್ತ ಸುಮಾರು 3 ಗಂಟೆಗಳ ಕಾಲ ಜರುಗಿದ ಎದೆತುಂಬಿ ಹಾಡುವೆನು ಖ್ಯಾತಿಯ ಸೂರ್ಯಕಾಂತ ಹಾಗು ಕನ್ನಡದ ಕೋಗಿಲೆ ಖ್ಯಾತಿಯ ಕಲಾವತಿ ದಯಾನಂದ ಅವರಿಂದ ಸಂಗೀತ ಸಂಭ್ರಮ ಜರುಗಿತು.
ಇದೇ ಸಂದರ್ಭದಲ್ಲಿ
ಡಾ. ಅಪ್ಪಾಸಾಹೇಬ ನಾಡಗೌಡಪಾಟೀಲ, ಪ್ರವೀಣ ನಾಡಗೌಡ, ನೀಲೇಶ ದೇಸಾಯಿ, ಬಸವರಾಜ ದಲಾಲ, ಮಲ್ಲಿಕಾರ್ಜುನ ಹುಲಗಬಾಳಿ, ದುಂಡಪ್ಪ ಕರಿಗಾರ, ಬಸವರಾಜ ತೆಗ್ಗಿ, ಶಂಕರ ಜಾಲಿಗಿಡದ, ಎಂ.ಎಸ್. ಬದಾಮಿ, ಮಹಾದೇವ ಕವಿಶೆಟ್ಟಿ, ಎಸ್. ಎಂ. ದಾಶ್ಯಾಳ, ಅಶೋಕ ಉಳ್ಳಾಗಡ್ಡಿ, ಹರ್ಷವರ್ಧನ ಪಟವರ್ಧನ, ಚಿದಾನಂದ ಮಟ್ಟಿಕಲ್ಲಿ, ರಾಜು ಮನಗೂಳಿ ಸೇರಿದಂತೆ ಅನೇಕರಿದ್ದರು.
ಪ್ರಕಾಶ ಕುಂಬಾರ
Ain ನ್ಯೂಸ್ ಕನ್ನಡ
ಬಾಗಲಕೋಟೆ