ಬೇಡಜಂಗಮ ಸಮಾಜವು ಸರ್ವ ಸಮಾಜಗಳನ್ನು ಪ್ರೀತಿಯಿಂದ ಕಂಡು ಅವರ ಧಾರ್ಮಿಕ ಕ್ರಿಯಾ ಕಾರ್ಯಗಳನ್ನು ಮಾಡುತ್ತಾ ಬಾಳಿ ಬೆಳೆದವರು. ಬೇಡ ಜಂಗಮವು ಆರ್ಥಿಕವಾಗಿ ಹಿಂದುಳಿದ ಶರಣರು ಸಂಘಟನಾತ್ಮಕವಾಗಿ ಬೆಳೆಯುತ್ತ ಸಮಾಜವನ್ನು ಮುನ್ನಡೆಸುತ್ತವೆ. ಆ ಹಿನ್ನೆಲೆಯಲ್ಲಿ ಇಂದು ಬೇಡ ಜಂಗಮ ಪತ್ತಿನ ಸಹಕಾರಿ ಸಂಘವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಸಾಮಾಜಿಕ ಶೈಕ್ಷಣಿಕ ಆರ್ಥಿಕವಾಗಿ ಸಂಘಟನಾತ್ಮಕವಾಗಿ ಬೆಳೆಯಲಿ ಎಂದು ಹಾರೈಸುತ್ತೇವೆ ಎಂದು ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಬ್ರಹ್ಮಾನಂದ ಮಠ ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಮಲ್ಲಿಕಾರ್ಜುನ ಸಮುದಾಯಭವನದಲ್ಲಿ “ಬೇಡಜಂಗಮ” ಪತ್ತಿನ ಸಹಕಾರಿ ಸಂಘ ನಿಯಮಿತ ಪೂಜ್ಯರ ಸಮ್ಮುಖದಲ್ಲಿ ಇಂದು ಉದ್ಘಾಟನೆಗೊಂಡಿತು.

ಇದೇ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಸಂಗಮೇಶ್ವರ ಮಹಾಸ್ವಾಮಿಗಳು ರಾಮಪುರ. ತೇರದಾಳ ವಿಧಾನಸಭಾ ಕ್ಷೇತ್ರದ ಶಾಸಕ ಸಿದ್ದು ಸವದಿ. ಮಾಂತೇಶ ಹಿಟ್ಟಿನಮಠ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಮಾಲಿಂಗಪುರ. ರಬಕವಿ ಬನಹಟ್ಟಿ ತಾಲೂಕಿನ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಈಶ್ವರ ಕಾಡದೇವರ. ಉಪಾಧ್ಯಕ್ಷರು ಗಂಗಯ್ಯ ಹಿರೇಮಠ. ರಬಕವಿ ನೇತ್ರ ತಜ್ಞ ಡಾ ಪದ್ಮಜಿತ್ ನಾಡಗೌಡ ಪಾಟೀಲ್ ನ ಮಾಜಿ ಸಚಿವೆ ಶ್ರೀಮತಿ ಉಮಾಶ್ರೀ. ಬಸಯ್ಯ ಹಿರೇಮಠ. ಸಿದ್ದಲಿಂಗಯ್ಯ ಹಿರೇಮಠ. ಶಿವಾನಂದ ಬಾಗಲಕೋಟಮಠ. ಚನ್ನಯ್ಯ ಲಿಂಗದ. ಶಿವಲಿಂಗಯ್ಯ ಮಠದ. ಸೋಮಯ್ಯ ಮಠದ. ಶಂಕರ ಅಂಗಡಿ. ಮಳಯ್ಯಾ ಕಾಡದೇವರ, ಮಹಾದೇ ಮಠದ, ಈರಯ್ಯ ವಿಭೂತಿ, ವಿರಯ್ಯಾ ಮಠಪತಿ, ಶ್ರೀಶೈಲ್ ಹಿರೇಮಠ. ಡಾ ಬಿ ಎಸ್ ಮಠಪತಿ. ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
Ain ನ್ಯೂಸ್ ಕನ್ನಡ
ಬಾಗಲಕೋಟೆ