ಧಾರವಾಡ: ಪಂಚರಾಜ್ಯ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಜಯ ಸಾಧಿಸಿದ ಹಿನ್ನೆಲೆ ಧಾರವಾಡದ ಬಿಜೆಪಿಯಲ್ಲಿ ಸಂಭ್ರಮ ಮನೆ ಮಾಡಿದೆ. ಪಟಾಕಿ ಸಿಡಿಸಿ ಪರಸ್ಪರ ಸಹಿ ಹಂಚಿಕೊಂಡ ಬಿಜೆಪಿಗರು. ನಗರದ ಸುಭಾಷ್ ರಸ್ತೆಯ ಬಿಜೆಪಿ ಜಿಲ್ಲಾ ಕಚೇರಿ ಮುಂಭಾಗದಲ್ಲಿ ಸಂಭ್ರಮಾಚರಣೆ ಮಾಡಲಾಗಿದ್ದು,
ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೂಗಿದ ಕಾರ್ಯಕರ್ತರು. ಮಧ್ಯಪ್ರದೇಶ,ರಾಜಸ್ಥಾನ ಹಾಗೂ ಛತ್ತೀಸ್ಗಡ್ನಲ್ಲಿ ಬೆಜೆಪಿಗೆ ಅಧಿಕಾರ ಬಂದಿರುವುದರಿಂದ ಮೂರು ರಾಜ್ಯದ ಮತದಾರರಿಗೆ ಜಿಲ್ಲೆಯ ಬಿಜೆಪಿಗರು ಧನ್ಯವಾದ ತಿಳಿಸಿದರು.