ಬೆಂಗಳೂರು: ದೀಪಾವಳಿ ಹಬ್ಬದ ನಿಮಿತ್ತ ಬೆಂಗಳೂರಿನ ಕೆ ಆರ್ ಮಾರ್ಕೆಟ್ನಲ್ಲಿ ಹಬ್ಬದ ಖರೀದಿ ಜೋರಾಗಿದೆ. ಮುಂಜಾನೆಯೇ ಜನರು ಹಬ್ಬದ ಖರೀದಿಗೆ ಮುಗಿ ಬಿದಿದ್ದಾರೆ. ಹೂ, ಹಣ್ಣು ಖರೀದಿ ಇಂದ ಮಾರುಕಟ್ಟೆ ಜನ ದಟ್ಟಣೆಯಿಂದ ಕಿಕ್ಕಿರಿದಿತ್ತು
ಹೂವು, ಹಣ್ಣುಗಳನ್ನು ಗ್ರಾಹಕರು ಖರೀದಿಸುತ್ತಿದ್ದಾರೆ. ಇನ್ನು ಕೆ.ಆರ್.ಮಾರ್ಕೆಟ್ ಫ್ಲೈಓವರ್ ಮೇಲೆ ಅನಧಿಕೃತವಾಗಿ ಗ್ರಾಹಕರು ವಾಹನಗಳ ಪಾರ್ಕಿಂಗ್ ಮಾಡಿದ್ದಾರೆ. ಹಾಗಾಗಿ ಕಿರಿದಾದ ಮೇಲ್ಸೆತುವೆ ಮೇಲೆ ವಾಹನ ಚಲಾಯಿಸಲು ಸವಾರರು ಹರಸಾಹಸ ಪಟ್ಟಿದ್ದಾರೆ.
ದೀಪಾವಳಿ ಹಬ್ಬದ ಪ್ರಯುಕ್ತ ಕೆ.ಆರ್ ಮಾರುಕಟ್ಟೆಯಲ್ಲಿ ಖರೀದಿ ಬಲು ಜೋರಾಗಿದ್ದು, ಹಣ್ಣು, ಹೂವುಗಳ ದರ ಏರಿಕೆ ಆಗಿದೆ. ಮಾರು ಹೂವಿನ ಬೆಲೆ 50 ರೂ ಏರಿಕೆ ಆಗಿದೆ. ಒಂದು ಕೆಜಿ ಸೇಬಿನ ಬೆಲೆ 120 ರಿಂದಿ 140 ಇದೆ. ದಾಳಿಂಬೆ ಬೆಲೆ 150 ರಿಂದ 170 ರೂ ಇದೆ. ಹೂ, ಹಣ್ಣುಗಳ ಖರೀದಿಗೆ ಗ್ರಾಹಕರು ಆಗಮಿಸುತ್ತಿದ್ದಾರೆ. ನಾಳೆ ದೀಪಾವಳಿ ಅಮವಾಸ್ಯೆ, ಬಲಿಂದ್ರನ ಪೂಜೆ, ಮಂಗಳವಾರ ಬಲಿಪಾಡ್ಯಮಿ ದೀಪಾವಳಿ ಹಬ್ಬದ ಚಂದ್ರದರ್ಶನ ಇದೆ.