ರಾಮನಗರ: ಎದುರು ಬಂದ ಕಾರು ತಪ್ಪಿಸಲು ಹೋಗಿ ಹಳ್ಳಕ್ಕೆ ಬಸ್ ನುಗ್ಗಿದ ಘಟನೆ ರಾಮನಗರ ತಾಲೂಕಿನ ಮೇಳೇಹಳ್ಳಿ ಗೇಟ್ ಬಳಿ ಜರುಗಿದೆ.
ಮಾಗಡಿಯಿಂದ ರಾಮನಗರಕ್ಕೆ ಬಾರುವಾಗ ಘಟನೆ ಜರುಗಿದೆ. ಬಸ್ನಲ್ಲಿದ್ದ 50 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ನಲ್ಲಿದ್ದ ಪ್ರಯಾಣಿಕರನ್ನ ಬೇರೆ ಬಸ್ನಲ್ಲಿ ಕೆಎಸ್ಆರ್ಟಿಸಿ ಸಿಬ್ಬಂದಿ ರಾಮನಗರಕ್ಕೆ ತಲುಪಿಸಿದ್ದಾರೆ.
ಸ್ಥಳಕ್ಕೆ ರಾಮನಗರ ಕೆಎಸ್ಆರ್ಟಿಸಿ ಡಿಸಿ ಭೇಟಿ ಪರಿಶೀಲನೆ ಮಾಡಿದ್ದಾರೆ. ಬಸ್ ಹಳ್ಳಕ್ಕೆ ನುಗ್ಗಿದ ಪರಿಣಾಮ ಬಸ್ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.