Author: AIN

ಆನೇಕಲ್:‌ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಎಎಸ್ಬಿ ಕಾಲೇಜು ಕ್ರೀಡಾಂಗಣದ ಬಳಿ ಕೌಟುಂಬಿಕ ಕಲಹ ಹಿನ್ನೆಲೆ ಕೀಟನಾಶಕ  ಸೇವಿಸಿ ವ್ಯಕ್ತಿ ಆತ್ಮಹತ್ಯೆಗೆ ಯತ್ನಸಿರುವ ಘಟನೆ ನಡೆದಿದೆ. ಮಂಜುನಾಥ್ (35) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದು, https://ainlivenews.com/if-you-send-money-to-someone-elses-account-by-mistake-no-need-to-stress-money-will-be-refunded-by-doing-this/ ಆನೇಕಲ್ ಪಟ್ಟಣದ ಬಹದ್ದೂರ್ ಪುರ ನಿವಾಸಿಯಾಗಿರುವ ಮಂಜುನಾಥ್, ಕೌಟುಂಬಿಕ ಕಲಹದ ಹಿನ್ನೆಲೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಸ್ಥಳೀಯರು ಆನೇಕಲ್ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೊರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಆಸ್ಪತ್ರೆಗೆ ಆನೇಕಲ್ ಪೊಲೀಸರು ಭೇಟಿ ನೀಡಿದ್ದಾರೆ.

Read More

ಉಡುಪಿ:  ಒಂದು ಬಿಡಿಗಾಸು ಅನುದಾನ ಬಿಡುಗಡೆ ಮಾಡದೆ ಹಗರಣದ ಆರೋಪ ಮಾಡುವುದರಲ್ಲಿ ಅರ್ಥ ಇಲ್ಲ ಎಂದು ಮಾಜಿ ಸಚಿವ, ಶಾಸಕ ಸುನಿಲ್ ಕುಮಾರ್ ದಾಖಲೆಗಳ ಜೊತೆ ತಿರುಗೇಟು ಕೊಟ್ಟಿದ್ದಾರೆ. ಉಡುಪಿ ಜಿಲ್ಲೆಯ ಪರಶುರಾಮ ಥೀಮ್ ಪಾರ್ಕ್ ಗಲಾಟೆ ತಾರಕಕ್ಕೇರಿದೆ. ಮೂರ್ತಿಯ ಶಿಲ್ಪಿ ಕೃಷ್ಣ ನಾಯ್ಕ್ ಬಂಧನ ಬೆನ್ನಲ್ಲೇ ಮತ್ತೊಮ್ಮೆ ವಿವಾದ ಸ್ಫೋಟವಾಗಿದೆ. ಕಾಂಗ್ರೆಸ್ ಬಿಜೆಪಿ ರಾಜಕೀಯ ಕಚ್ಚಾಟಕ್ಕೆ ಬಲಿಯಾದ ಕಲಾವಿದನ ಪರವಾಗಿ ಸುನಿಲ್ ಕುಮಾರ್ ಮಾತನಾಡಿದ್ದಾರೆ. ಮೊದಲ ಬಾರಿಗೆ ಸಂಪೂರ್ಣ ದಾಖಲೆಯೊಂದಿಗೆ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಕಲಾವಿದ ಕೃಷ್ಣ ನಾಯ್ಕ್‌ರನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದು ರಾಜಕೀಯ ದ್ವೇಷ ಮತ್ತು ಸೋಲಿನ ಹತಾಶೆಯೇ ಕಾರಣ ಎಂದಿದ್ದಾರೆ. https://ainlivenews.com/if-you-send-money-to-someone-elses-account-by-mistake-no-need-to-stress-money-will-be-refunded-by-doing-this/ ಒಟ್ಟು 14 ಕೋಟಿ ರೂ. ವೆಚ್ಚದ ಕಾರ್ಕಳ ಥೀಂ ಪಾರ್ಕ್‌ಗೆ 4.50 ಕೋಟಿ ರೂ. ಹಣ ಮಂಜೂರಾದರೂ ಸರಕಾರ ಬಿಡುಗಡೆ ಮಾಡಲಿಲ್ಲ. ಶಿಲ್ಪಿ ಮೂರ್ತಿಯ ವಿನ್ಯಾಸ ಬದಲಿಸಲು ಅನುಮತಿ ಪಡೆದು ಮೂರ್ತಿ ತೆರವು ಪ್ರಕ್ರಿಯೆ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು, ಕೋರ್ಟ್ ಸೂಚನೆ ಕೊಟ್ಟರು ಕಾಮಗಾರಿ ಬಿಡುತ್ತಿಲ್ಲವಂತೆ.…

Read More

ಚಿಕ್ಕಮಗಳೂರು: ಸಿದ್ದರಾಮಯ್ಯ ಸರ್ಕಾರ ಕೆಡವಲು ಬಿಗ್​​ ಆಪರೇಷನ್ ​ನಡೆಯುತ್ತಿದೆ ಎಂಬ ಹೇಳಿಕೆ ರಾಜ್ಯ ರಾಜಕೀಯದಲ್ಲಿ ದಂಗು ಬಡಿಸುತ್ತಿದೆ. ಇದರ ಬೆನ್ನಲ್ಲೇ  ನಿಮ್ಮ ಶಾಸಕರನ್ನು ಖರೀದಿ ಮಾಡೋಕೆ ಅವ್ರೇನು ಕತ್ತೇನಾ? ಕುದುರೇನಾ? ದನನಾ? ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಎಂಎಲ್‍ಸಿ ಸಿ.ಟಿ ರವಿ ಕಿಡಿಕಾರಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಆರೋಪದ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ನಿಮ್ಮ ಪಕ್ಷದ ಶಾಸಕರು ಅಷ್ಟು ದುರ್ಬಲರಾ? ಬದ್ಧತೆ ಇರುವ ಯಾವುದೇ ಶಾಸಕರನ್ನ ಖರೀದಿ ಮಾಡಲು ಸಾಧ್ಯವಿಲ್ಲ. ನಿಮ್ಮ ಆರೋಪ ಆಧಾರ ರಹಿತ ಎಂದು ಹೇಳಿದ್ದಾರೆ. https://ainlivenews.com/as-soon-as-the-bpl-ration-card-is-cancelled-the-grilakshmi-yojana-money-will-stop/ ಯಾರು, ಯಾವಾಗ, ಯಾರನ್ನ ಖರೀದಿ ಮಾಡಲು ಪ್ರಯತ್ನ ಪಟ್ಟಿದ್ದಾರೆ? ಆಧಾರ ಇದ್ದರೆ ದೂರು ನೀಡಿ. ಸಾಕ್ಷಿ ಇದ್ದರೆ ಆಧಾರ ಸಹಿತವಾಗಿ ನ್ಯಾಯಾಲಯದಲ್ಲಿ ನಿರೂಪಿಸಿ. ಸಿಎಂ ಸ್ಥಾನದಲ್ಲಿ ಇದ್ದು, ಆ ಸ್ಥಾನದ ಜವಾಬ್ದಾರಿ ಮರೆತು ಕೇವಲ ಆರೋಪ ಮಾಡೋದು ರಾಜಕೀಯ ಪ್ರೇರಿತ. ಬಿಜೆಪಿ ವಿರುದ್ಧ ತಪ್ಪು ಅಭಿಪ್ರಾಯ ಮೂಡಿಸಲು ಮಾಡುತ್ತಿರುವ ಆರೋಪ ಎಂದು…

Read More

ತುಮಕೂರು :ಕರ್ನಾಟಕ ಸರ್ಕಾರದ  ಮಹತ್ವದ ಯೋಜನೆಗಳಾದ ಗ್ಯಾರಂಟಿ ಯೋಜನೆಗಳ  ಅನುಷ್ಠಾನ ನೂತನ ಕಛೇರಿ ಯನ್ನು ತುಮಕೂರು ಗ್ರಾಮಾಂತರ  ಮಾಜಿ ಶಾಸಕರಾದ ಶ್ರೀ ಗೌರಿಶಂಕರ್ ರವರು ಉದ್ಘಾಟನೆ ಮಾಡಿದರು. ನಂತರ ಅವರು ಮಾತನಾಡಿ ಸರ್ಕಾರದ ಈ ಮಹತ್ವದ ಯೋಜನೆಗಳು ಎಲ್ಲಾ ವರ್ಗದ ಜನರಿಗೆ ತಲುಪುವ ಸಲುವಾಗಿ ಸರ್ಕಾರದ  ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಮತ್ತು ಸನ್ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ರವರ ಆಶಯ ದಂತೆ  ಎಲ್ಲಾ ವರ್ಗದ ಜನರಿಗೆ ಈ ಯೋಜನೆ ಗಳು ತಲುಪುವಂತೆ ಮಾಡುವ ಸಲುವಾಗಿ ಈ ಗ್ಯಾರಂಟಿ  ಯೋಜನೆಗಳ ಅನುಷ್ಠಾನ  ಕಚೇರಿ ಯು ಕಾರ್ಯ ಯೋಜನೆ ಯನ್ನು ರೂಪಿಸಲಾಗಿದೆ ಎಂದು ಹೇಳಿದರು. https://ainlivenews.com/as-soon-as-the-bpl-ration-card-is-cancelled-the-grilakshmi-yojana-money-will-stop/ ಈ ಗ್ಯಾರಂಟಿ  ಯೋಜನೆಯ ಅನುಷ್ಠಾನ ಸಮಿತಿಯ ನೂತನ ಅಧ್ಯಕ್ಷ ಉಪಾಧ್ಯಕ್ಷ ಮತ್ತು ಸದಸ್ಯರುಗಳಿಗೆ ಸನ್ಮಾನಿಸಿಲಾಯಿತು. ಈ ಸಂದರ್ಭದಲ್ಲಿ ಗ್ಯಾರಂಟಿ  ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ L ರಮೇಶ್ ಮತ್ತು ಉಪಾಧ್ಯಕ್ಷರಾದ HN ಮಂಜುನಾಥ್ ಸದಸ್ಯರುಗಳಾದ ರಾಮಸ್ವಾಮಿ ಮಂಜುನಾಥ್ ವಿರೂಪಾಕ್ಷ BN  ಮಂಜುಳಾ K…

Read More

ನವದೆಹಲಿ: ST, SC ಮೀಸಲಾತಿಯನ್ನು ತೆಗೆದು ಮುಸ್ಲಿಂ ಸಮುದಾಯಕ್ಕೆ ನೀಡಲು ಸರ್ಕಾರ ಚಿಂತಿಸಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ನವದೆಹಲಿ ಮಾತನಾಡಿದ ಅವರು, ಪೊಲೀಸ್ ಠಾಣೆಗೆ ಬೆಂಕಿ ಹಾಕಿದ್ದ ಆರೋಪಿಗಳನ್ನು ಖುಲಾಸೆ ಮಾಡಿದರು, ದೇವಸ್ಥಾನಕ್ಕೆ ಮಠಗಳಿಗೆ ನೀಡಿದ ಜಾಗಕ್ಕೆ ಈಗ ವಕ್ಫ್ ನೋಟಿಸ್ ನೀಡುತ್ತಿದೆ. ಸಂಗೊಳ್ಳಿ ಇಡೀ ಊರು ಈಗ ವಕ್ಫ್ ಆಗಿದೆ ಈಗ ಟೆಂಡರ್‌ಗಳಲ್ಲೂ 4% ಮೀಸಲಾತಿ ನೀಡಲು ಹೊರಟಿದೆ. ಎಸ್ಸಿ,ಎಸ್ಟಿ ಸಿಗುತ್ತಿದ್ದ ಮೀಸಲಾತಿಯನ್ನು ತೆಗೆದು ಮುಸ್ಲಿಂ ಸಮುದಾಯಕ್ಕೆ ನೀಡಲು ಸರ್ಕಾರ ಚಿಂತಿಸಿದೆ ಎಂದರು. https://ainlivenews.com/as-soon-as-the-bpl-ration-card-is-cancelled-the-grilakshmi-yojana-money-will-stop/ ಪ್ರಕರಣ ಬಹಿರಂಗವಾದ ಬಳಿಕ ಸುಳ್ಳು ಆರೋಪ ಎಂದು ಸಿದ್ದರಾಮಯ್ಯ (Siddaramaiah) ಅವರು ಹೇಳುತ್ತಾರೆ. ಆದರೆ ಆಗಸ್ಟ್‌ನಲ್ಲಿ ಮುಸ್ಲಿಂ ನಾಯಕರು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಅದರ ಮೇಲೆ ಇವರು ಕಾನೂನು ಮಾಡಲು ಹೊರಟಿದ್ದಾರೆ. ಕಾನೂನು ಇಲಾಖೆಯ ಇ-ಫೈಲ್‌ನಲ್ಲಿ ಈ ದಾಖಲೆ ಇದೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಿ ನಮ್ಮದೇನು ಆಕ್ಷೇಪ ಇಲ್ಲ. ಆದರೆ ಒಂದು ವರ್ಗಕ್ಕೆ ಯಾಕೆ ತುಷ್ಠೀಕರಣ ಮಾಡುವುದು…

Read More

ಮಧುಮೇಹ ಯಾರಿಗೆ ಬೇಕಾದರೂ ಬರಬಹುದು. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿಯೂ ಸಹ ಮಧುಮೇಹ ಬರುವುದನ್ನು ಕಾಣಬಹುದು. ಸಕ್ಕರೆ ಕಾಯಿಲೆಯಲ್ಲಿ ಎರಡು ವಿಧ. ಟೈಪ್‌ 1 ಡಯಾಬಿಟೀಸ್‌ ಮತ್ತು ಟೈಪ್‌ 2 ಡಯಾಬಿಟೀಸ್‌. ಕಳಪೆ ಮತ್ತು ಜಡ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ,  ನಿದ್ರೆಯ ಕೊರತೆ, ಒತ್ತಡ, ಅನುವಂಶಿಕ (ವಂಶವಾಹಿ) ಕಾರಣ ಸೇರಿದಂತೆ  ಇತ್ಯಾದಿ ಕಾರಣಗಳಿಂದ ಮಧುಮೇಹ ಕಾಯಿಲೆ ಬಾಧಿಸಬಹುದು. ದೇಹದಲ್ಲಿ ಇನ್ಸುಲಿನ್ ಅಸಮತೋಲನದಿಂದ  ಮಧುಮೇಹ ಕಾಯಿಲೆ ಸಂಭವಿಸುತ್ತದೆ. ಮತ್ತು ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ವಿಶ್ವ ಮಧುಮೇಹ ದಿನದ ಇತಿಹಾಸ: ಮಧುಮೇಹ ದಿನವನ್ನು  ಇಂಟರ್ನ್ಯಾಷನಲ್ ಡಯಾಬಿಟಿಸ್ ಫೌಂಡೇಶನ್  (IDF) ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ  (WHO) ಜಂಟಿ ಆಶ್ರಯದಲ್ಲಿ ಪ್ರಾರಂಭಿಸಲಾಯಿತು.  1991 ರಿಂದ ಇದನ್ನು ಪ್ರಪಂಚದಾದ್ಯಂತ ಆಚರಿಸಲು ವಿಶ್ವಸಂಸ್ಥೆ ಘೋಷಿಸಿತು. ವಿಶ್ವ ಮಧುಮೇಹ ದಿನವನ್ನು ನವೆಂಬರ್ 14 ರಂದು ಆಚರಿಸುವ ಮುಖ್ಯ ಕಾರಣವೆಂದರೆ, ಇನ್ಸುಲಿನ್  ಕಂಡುಹಿಡಿದ ವಿಜ್ಞಾನಿಯಾದ  ಸರ್ ಫ್ರೆಡಿಕ್ ಬ್ಯಾಂಟಿಂಗ್  ಅವರ ಜನ್ಮ ದಿನದ ನೆನಪಿಗಾಗಿ ನವೆಂಬರ್ 14 ರಂದು…

Read More

ಬೆಂಗಳೂರು ನ 14. ಆಧುನಿಕ ತಂತ್ರಜ್ಞಾನ ದೊಂದಿಗಿನ ಸಮಗ್ರ ಬೇಸಾಯ ಅಳವಡಿಕೆ ಸುಸ್ಥಿರ ಹಾಗೂ ಲಾಭದಾಯಕ ಕೃಷಿಗೆ ದಾರಿಯಾಗಿದೆ ರೈತರು ಈ ನಿಟ್ಟಿನಲ್ಲಿ ಗಮನ ಹರಿಸುವ ಅಗತ್ಯವಿದೆ ಎಂದು ಕೃಷಿ ಸಚಿವರಾದ ಶ್ರೀ ಎನ್.ಚಲುವರಾಯಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಜಿ.ಕೆ.ವಿ.ಕೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಮೂರು ದಿನಗಳ ಕೃಷಿ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ರೈತರು ಕೃಷಿ ವಿಶ್ವವಿದ್ಯಾಲಯಗಳು ನಡೆಸುವ ಸಂಶೋಧನೆಗಳು ಹಾಗೂ ತಂತ್ರಜ್ಞಾನಗಳನ್ನು ಬಳಸಿ ಮಿಶ್ರ ಬೇಸಾಯ ಪದ್ದತಿ ಮಾಡಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯಲು ಸಾಧ್ಯ ಎಂದರು. ರಾಷ್ಟ್ರದಲ್ಲಿ 75% ಜನರು ಕೃಷಿಯನ್ನು ಅವಲಂಭಿಸಿದ್ದು 60ರ ದಶಕದಲ್ಲಿ ದೇಶದಲ್ಲಿ ನಡೆದ ಹಸಿರು ಕ್ರಾಂತಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಭನೆ ಸಾಧಿಸಲು ಸಾಧ್ಯವಾಯಿತು. 1964-65ರಲ್ಲಿ ಆಹಾರ ಉತ್ಪಾದನೆ ರಾಷ್ಟ್ರಮಟ್ಟದಲ್ಲಿ 45.4 ಮಿಲಿಯನ್ ಟನ್‌ಗಳಷ್ಟಿದ್ದು, 2023-24ರ ಸಾಲಿಗೆ 332.22 ಮಿಲಿಯನ್ ಟನ್‌ಗಳಿಗೆ ಏರಿಕೆಯಾಗಿದೆ. 2047ರ ವೇಳೆಗೆ 437 ಮಿಲಿಯನ್ ಟನ್‌ಗೆ ಯೋಜನೆಯನ್ನು ರೂಪಿಸಿದೆ ಎಂದ ಅವರು…

Read More

ಧಾರವಾಡದ ಇನ್ಸ್‌ಟಿಟ್ಯೂಟ್ ಆಫ್ ಎಂಜಿನಯರ್ಸ್‌ ಕಚೇರಿಯ ಆವರಣದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಹಾತ್‌ಕರ್ಗಾ ಕೈಮಗ್ಗ ಮೇಳ ಹಾಗೂ ಕೈಮಗ್ಗಗಳ ಉತ್ಪನ್ನಗಳ  ಮಾರಾಟ ಮಳಿಗೆಗಳಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಭೇಟಿ ನೀಡಿದರು. ಕೈಮಗ್ಗ ಉತ್ಪನ್ನಗಳು ನಶಿಸಿ ಹೋಗುತ್ತಿರುವ ಈ ಸಂದರ್ಭದಲ್ಲಿ ಇಲ್ಲಿ ಆಯೋಜನೆ ಮಾಡಿರುವ ಕೈಮಗ್ಗ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನಕ್ಕೆ ನಿತ್ಯ ಸಾವಿರಾರು ಜನ ಭೇಟಿ ನೀಡುತ್ತಿದ್ದಾರೆ. ನ.4 ರಿಂದ ಆರಂಭವಾಗಿರುವ ಈ ಮೇಳದಲ್ಲಿ ಇಲ್ಲಿಯವರೆಗೂ 62 ಲಕ್ಷ ರೂಪಾಯಿಯಷ್ಟು ವ್ಯಾಪಾರವಾಗಿದೆ. https://ainlivenews.com/as-soon-as-the-bpl-ration-card-is-cancelled-the-grilakshmi-yojana-money-will-stop/ ರಾಜ್ಯದ ಬೇರೆ ಬೇರೆ ಜಿಲ್ಲೆ ಹಾಗೂ ಇತರ ರಾಜ್ಯಗಳಿಂದಲೂ ಕೈಮಗ್ಗ ಉತ್ಪನ್ನಗಳು ಇಲ್ಲಿ ಮಾರಾಟಕ್ಕೆ ಬಂದಿವೆ. ಮಂಗಳವಾರ ಜಿಲ್ಲಾಧಿಕಾರಿ ದಿವ್ಯ ಪ್ರಭು ಕೂಡ ಮಾರಾಟ ಮೇಳಕ್ಕೆ ಭೇಟಿ ಕೊಟ್ಟು ಕೈಮಗ್ಗ ಉತ್ಪನ್ನಗಳನ್ನು ಕುತೂಹಲದಿಂದ ವೀಕ್ಷಿಸುವುದರ ಜೊತೆಗೆ ತಾವೂ ಕೂಡ ಕೆಲ ಉತ್ಪನ್ನಗಳನ್ನು ಖರೀದಿ ಮಾಡಿದರು. ಕೈಮಗ್ಗ ಉತ್ಪನ್ನಗಳನ್ನೇ ಹೆಚ್ಚು ಖರೀದಿ ಮಾಡುವ ಮೂಲಕ ನೇಕಾರರ ಬದುಕು ಸುಧಾರಿಸುವ ಕೆಲಸವನ್ನು ಜನ ಮಾಡಬೇಕಿದೆ ಎಂದರು.…

Read More