ಪ್ರತಿದಿನ ವಾಕಿಂಗ್ ಮಾಡುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎನ್ನಲಾಗುತ್ತದೆ. ನೀವು ವ್ಯಾಯಾಮ ಮಾಡದಿದ್ದರೂ ವಾಕಿಂಗ್ ಮಾಡಿದರೂ ಪ್ರಯೋಜನಗಳನ್ನು ಪಡೆಯಬಹುದು. ಚಳಿಗಾಲದಲ್ಲಿ ತಣ್ಣನೆಯ ಗಾಳಿಯಿಂದ ವ್ಯಾಯಾಮ ಅಥವಾ ಯೋಗ ಮಾಡಲು ಸ್ವಲ್ಪ ತೊಂದರೆಯಾಗುತ್ತದೆ, ಹಾಗಾಗಿ ಹೆಚ್ಚಿನವರು ಮನೆಯಿಂದ ಹೊರಬರಲು ಇಷ್ಟಪಡುವುದಿಲ್ಲ. ಆದರೆ ನೀವು ಚಳಿಗಾಲದ ಬಟ್ಟೆಗಳನ್ನು ಧರಿಸಿ ಸರಿಯಾಗಿ ನಡೆದರೆ, ಅದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಬೆಳಗಿನ ನಡಿಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ಹೃದಯ-ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದು ನಿಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಆದರೆ, ಚಳಿಗಾಲದ ಚಳಿಯು ಅನೇಕ ಆರೋಗ್ಯ ಸಮಸ್ಯೆಗಳನ್ನು ಕೂಡ ಹೆಚ್ಚಿಸುವುದರಿಂದ ವಯಸ್ಸಾದವರು, ಮಕ್ಕಳು, ರೋಗಿಗಳು ಬೆಳಗಿನ ಚಳಿಯಲ್ಲಿ ವಾಕಿಂಗ್ ಮಾಡುವಾಗ ಎಚ್ಚರ ವಹಿಸುವುದು ಅಗತ್ಯ. ಅಧ್ಯಯನದ ಪ್ರಕಾರ, ಚಳಿಗಾಲದ ಶೀತ ತಿಂಗಳು ACSನ ಅಪಾಯವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ವಯಸ್ಸಾದ ರೋಗಿಗಳಲ್ಲಿ ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ಹೆಚ್ಚು. ಚಳಿಗಾಲದಲ್ಲಿ ಹೆಚ್ಚು ಹೃದಯ ವೈಫಲ್ಯ ಮತ್ತು ಎಸಿಎಸ್‌ನಿಂದ ಸಾವುಗಳು ಸಂಭವಿಸುತ್ತವೆ. ಆದ್ದರಿಂದ,…
Author: AIN
ಮನೆಯ ಹಿತ್ತಲಿನಲ್ಲಿದ್ದ ಗಿಡವನ್ನೇ ಜ್ವರ, ಶೀತ ಸೇರಿದಂತೆ ಹಲವು ಕಾಯಿಲೆಗಳಿಗೆ ಮದ್ದಾಗಿ ಬಳಸಿಕೊಳ್ಳಬಹುದು. ಇಂತಹ ಔಷಧೀಯ ಸಸ್ಯಗಳಲ್ಲಿ ದೊಡ್ಡಪತ್ರೆಗೆ ಮಹತ್ವದ ಸ್ಥಾನ. ದೊಡ್ಡ ಪತ್ರೆಯಲ್ಲಿ ವಿಟಮಿನ್ ʼಸಿʼ, ಫೈಬರ್ ಮತ್ತು ಕ್ಯಾಲ್ಸಿಯಂ ಹೇರಳವಾಗಿದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸಲು ಸಹಾಯ ಮಾಡುತ್ತದೆ. ದೊಡ್ಡಪತ್ರೆಯ ಮತ್ತಷ್ಟು ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ. ಚರ್ಮದ ಸೋಂಕು ಕಡಿಮೆ ಮಾಡಲು: ದೊಡ್ಡಪತ್ರೆ ಎಲೆಯನ್ನು ಕಿವುಚಿ ರಸ ತೆಗೆದು, ಚರ್ಮದ ಸೋಂಕು ಅಥವಾ ಕೀಟ ಕಡಿತದ ಜಾಗಕ್ಕೆ ಲೇಪಿಸಿ. ಇದರಿಂದ ಉರಿ, ಬಾವು ಮತ್ತು ತುರಿಕೆ ಕೂಡಲೇ ಕಡಿಮೆಯಾಗುವುದು. ಜೀರ್ಣ ಶಕ್ತಿ ಹೆಚ್ಚಳ:ಬಹುತೇಕರಲ್ಲಿ ಜೀರ್ಣ ಶಕ್ತಿಯ ಸಮಸ್ಯೆ ಕಾಡುತ್ತಿರುತ್ತದೆ. ಹೀಗಾಗಿ ಸುಲಭವಾಗಿ ಜೀರ್ಣ ಶಕ್ತಿ ಹೆಚ್ಚಳ ಮಾಡಿಕೊಳ್ಳಲು ಪ್ರತಿನಿತ್ಯ ದೊಡ್ಡಪತ್ರೆಯ ಎಲೆಯನ್ನು ಉಪ್ಪಿನೊಂದಿಗೆ ನೆಂಚಿಕೊಂಡು ತಿಂದರೆ ಜೀರ್ಣಶಕ್ತಿ ಹೆಚ್ಚುತ್ತದೆ. ಕಟ್ಟಿದ ಮೂಗಿನಿಂದ ನಿವಾರಣೆ:ಒಮ್ಮೆ ಮೂಗು ಕಟ್ಟಿದ್ದು ಅಂದರೆ ಬಹುತೇಕರಿಗೆ ಉಸಿರಾಡಲು ಕಷ್ಟ.. ಇಂತಹ ಸಂದರ್ಭದಲ್ಲಿ ದೊಡ್ಡಪತ್ರೆ ಎಲೆಯನ್ನು ಜಜ್ಜಿ ಆದರ ವಾಸನೆ ಸೇವಿಸಿದರೆ ಕಟ್ಟಿದ…
ಗದಗ: ಇಲ್ಲಿನ ಬಿಂಕದಕಟ್ಟಿಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಕಾಣಿಸಿಕೊಂಡ ನಂತರ ಸ್ಥಳೀಯ ಜನತೆ ಆತಂಕಕ್ಕೀಡಾದ ಘಟನೆ ಜರುಗಿದೆ. ಗದಗ ತಾಲೂಕಿನ ಬಿಂಕದಕಟ್ಟಿ, ನಾಗಾವಿ, ಅಸುಂಡಿ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಮನೆಯೊಂದರ ಸಿಸಿಟಿವಿಯಲ್ಲಿ ಚಿರತೆ ಓಡಾಟದ ದೃಶ್ಯ ಸೆರೆಯಾಗಿದೆ. ಚಿರತೆ ಓಡಾಟದಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇಂದು ವ್ಯಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ 4ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಗೆಲುವಿನ ನಗಾರಿ ಬಾರಿಸಲು ಸಜ್ಜಾಗಿದೆ. ರಿಂಕು ಸಿಂಗ್ ಬ್ಯಾಟಿಂಗ್ ಕ್ರಮಾಂಕ ಹಾಗೂ ಅವರ ಪಾತ್ರದ ಬಗ್ಗೆ ಹೆಚ್ಚು ಸ್ಪಷ್ಟನೆ ಸಿಗಬೇಕಿದೆ. ಭಾರತ ಟಿ20 ತಂಡದಲ್ಲಿ ಬಹುಕಾಲ ಉಳಿಯಬಲ್ಲ ಆಟಗಾರ ಎಂದು ಗುರುತಿಸಿಕೊಂಡಿರುವ ರಿಂಕು, ಮೊದಲೆರಡು ಪಂದ್ಯಗಳಲ್ಲಿ 6ನೇ ಹಾಗೂ ಕಳೆದ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಆಡಿದ್ದರು. 3 ಇನ್ನಿಂಗ್ಸ್‌ಗಳಿಂದ ಕೇವಲ 28 ರನ್ ಗಳಿಸಲು ರಿಂಕು, 34 ಎಸೆತಗಳನ್ನು ತೆಗೆದುಕೊಂಡಿದ್ದಾರೆ ಎನ್ನುವ ಅಂಶ ತಂಡದ ಆಡಳಿತವನ್ನು ಗೊಂದಲಕ್ಕೆ ಸಿಲುಕಿಸಬಹುದು. ಜೊತೆಗೆ ರಿಂಕುರ ಮನದಲ್ಲೂ ಆತಂಕ ಮೂಡಿಸಿರಬಹುದು. ಈ ಪಂದ್ಯದಲ್ಲಿ ಅವರ ಬ್ಯಾಟ್‌ನಿಂದ ಸ್ಫೋಟಕ ಇನ್ನಿಂಗ್ಸ್ ಮೂಡಿಬರಬಹುದೇ ಎನ್ನುವ ಕುತೂಹಲವಿದೆ. https://ainlivenews.com/attention-farmers-less-capital-more-profit-lakhs-can-be-profited-from-this-crop/ ಮತ್ತೊಂದೆಡೆ, ಬೌಲರ್‌ಗಳು ಸುಧಾರಿತ ಪ್ರದರ್ಶನ ತೋರಿದರೆ ಸರಣಿ ಗೆಲುವಿನ ಹಾದಿ ಸುಗಮಗೊಳ್ಳಬಹುದು. ಅರ್ಶದೀಪ್ ಸಿಂಗ್ ಹಾಗೂ ವರುಣ್ ಚಕ್ರವರ್ತಿ ಮೇಲೆ ಹೆಚ್ಚಿನ ಜವಾಬ್ದಾರಿ ಇರಲಿದೆ. ಇನ್ನು, ಅವಕಾಶಕ್ಕಾಗಿ ಕಾಯುತ್ತಿರುವ ವೇಗಿಗಳಾದ ವೈಶಾಖ್ ವಿಜಯ್ ಕುಮಾರ್ ಹಾಗೂ ಯಶ್…
ಮೈಸೂರು: ನಾನು ಜಮೀರ್ ಅಹ್ಮದ್ರನ್ನು ಎಂದೂ ಕುಳ್ಳ ಎಂದು ಕರೆದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಜಮೀರ್ ಅಹ್ಮದ್ರನ್ನು ಎಂದೂ ಕುಳ್ಳ ಎಂದು ಕರೆದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ತಾಯಿ ಚಾಮುಂಡೇಶ್ವರಿ ಮುಂದೆ ನಿಂತಿದ್ದೇನೆ ಸತ್ಯವನ್ನೇ ಹೇಳುತ್ತಿದ್ದೇನೆ ಎಂದರು. ಚನ್ನಪಟ್ಟಣದಲ್ಲಿ ಜನತೆಯ ಆಶೀರ್ವಾದವಿದೆ, ಉತ್ತಮವಾದ ರೀತಿಯಲ್ಲಿ ಗೆಲುವು ಸಾಧಿಸುತ್ತೇವೆ. ಜಮೀರ್ ಹೇಳಿಕೆಯಿಂದ ಯಾವ ವ್ಯತ್ಯಾಸವೂ ಆಗುವುದಿಲ್ಲ, ನಾವು ಚನ್ನಪಟ್ಟಣದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. https://ainlivenews.com/attention-farmers-less-capital-more-profit-lakhs-can-be-profited-from-this-crop/ ನನ್ನ ಮತ್ತು ಜಮೀರ್ ಆತ್ಮೀಯತೆ ರಾಜಕೀಯವಾಗಿ ಮಾತ್ರ. ನಾನು ಅವರನ್ನು ಕುಳ್ಳ ಎಂದು ಕರೆದೇ ಇಲ್ಲ. ಅವರ ಮಾತುಗಳು ಅವರ ಸಂಸ್ಕೃತಿ ತೋರಿಸುತ್ತದೆ. ಸಿಎಂ ಹಾಗೂ ಡಿಸಿಎಂ ಅವರ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಈ ಸರ್ಕಾರ ಅನಾಗರೀಕ ಸರ್ಕಾರ. ದುಡ್ಡಿನ ಮದದಿಂದ ಈ ರೀತಿ ಕೊಳ್ಳತ್ತಿದ್ದಾರೆ ಎಂದರು.
ಬೆಳಗಾವಿ: ಬೆಂಗಳೂರಿಗೆ ನೀಡಿದಷ್ಟು ಬೆಳಗಾವಿಗೂ ಹೆಚ್ಚಿನ ಆದ್ಯತೆ ಕೊಡುತ್ತೇವೆ. ಬೆಳಗಾವಿ ಸೇರಿ ರಾಜ್ಯಾದ್ಯಂತ 39 ಸಾವಿರ ಕೋಟಿ ರೂ. ಅನುದಾನದಲ್ಲಿ ರೈಲ್ವೆ ಕಾಮಗಾರಿಗಳ ಕೆಲಸ ಆರಂಭಿಸಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ತಿಳಿಸಿದರು. ಬೆಳಗಾವಿ-ಧಾರವಾಡ ನೇರ ರೈಲ್ವೆ ಮಾರ್ಗ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿ-ಧಾರವಾಡ ಹೊಸ ರೈಲು ಮಾರ್ಗ ದಿ. ಸುರೇಶ್ ಅಂಗಡಿ ಅವರ ಕನಸಾಗಿದೆ. ರೈಲು ಹಳಿ ನಿರ್ಮಾಣಕ್ಕೆ ಒಟ್ಟು 888 ಎಕರೆ ಜಮೀನು ಬೇಕಾಗುತ್ತದೆ. ಬೆಳಗಾವಿ ಜಿಲ್ಲೆಯಲ್ಲಿ 660 ಎಕರೆ, ಧಾರವಾಡದಲ್ಲಿ 228 ಎಕರೆ ಜಮೀನು ಬೇಕು. https://ainlivenews.com/attention-farmers-less-capital-more-profit-lakhs-can-be-profited-from-this-crop/ 446 ಎಕರೆ ಜಮೀನನ್ನು ಮುಂದಿನ ತಿಂಗಳು ಹಸ್ತಾಂತರ ಮಾಡುವ ಬಗ್ಗೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ಮಾರ್ಗ ಸುಮಾರು 73 ಕಿ.ಮೀ. ವ್ಯಾಪ್ತಿ ಹೊಂದಿದ್ದು, ಧಾರವಾಡದ ಕ್ಯಾರಕೊಪ್ಪದಿಂದ ಬೆಳಗಾವಿ ದೇಸೂರದವರೆಗೆ ರೈಲು ಹಳಿ ಮಾಡುವ ಗುರಿ ಇದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಗ್ಗಟ್ಟಿನಿಂದ…
ಹುಬ್ಬಳ್ಳಿ: ಭಾರತ ನವೀಕರಿಸಬಹುದಾದ ಇಂಧನ ವಲಯದಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಿದ್ದು, ಒಂದೇ ವರ್ಷದಲ್ಲಿ 24.2 GW (13.5%) ರಷ್ಟು ಸಾಮರ್ಥ್ಯ ವೃದ್ಧಿಸಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ನವೀಕರಿಸಬಹುದಾದ ಇಂಧನ ಸಾಮರ್ಥ್ಯವು 24 GW, ಸೌರಶಕ್ತಿ 20 GW ಹೆಚ್ಚಿದೆ. 2023ರ ಅಕ್ಟೋಬರ್ ನಿಂದ 2024ರ ಅಕ್ಟೋಬರ್ ವರೆಗೆ ಭಾರತ ಗಣನೀಯ ಬೆಳವಣಿಗೆ ಕಂಡಿದೆ ಎಂದು ಹೇಳಿದ್ದಾರೆ. https://ainlivenews.com/attention-farmers-less-capital-more-profit-lakhs-can-be-profited-from-this-crop/ 2023ರ ಅಕ್ಟೋಬರ್‌ನಲ್ಲಿ 178.98 GW ಇದ್ದ ಸೌರಶಕ್ತಿ ಸಾಮರ್ಥ್ಯ ಪ್ರಸ್ತುತ 203.18 GW ತಲುಪಿದೆ. ಈ ಗಮನಾರ್ಹ ಏರಿಕೆ RE ವಲಯದ ಕ್ಷೇತ್ರದಲ್ಲಿ ಭಾರತದ ಮಹತ್ವಾಕಾಂಕ್ಷೆಯ ಗುರಿ ಸಾಧನೆಗೆ ಪೂರಕವಾಗಿದೆ ಎಂದು ಹೇಳಿದ್ದಾರೆ.ಪರಮಾಣು ಶಕ್ತಿ ಒಳಗೊಂಡಂತೆ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ 2023 ರಲ್ಲಿ 186.46 GW ಇತ್ತು. ಅದೀಗ 211.36 GWಗೆ ಏರಿದೆ ಎಂದಿದ್ದಾರೆ. ಸೌರ ಮತ್ತು ಪವನ ವಿದ್ಯುತ್ ಹೆಚ್ಚಳ: ಸೌರಶಕ್ತಿ ವಲಯ 20.1 GW ( 27.9%) ಗಮನಾರ್ಹ ಏರಿಕೆ ಕಂಡಿದೆ. 2023ರ ಅಕ್ಟೋಬರ್…
ಹಾವೇರಿ: ಪ್ರತಿಯೊಂದು ಇಲಾಖೆಯಲ್ಲಿ ಕಲೆಕ್ಷನ್ ಸೆಂಟರ್ʼಗಳು ಆಗಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಬ್ಬ ರಾಜಕಾರಣಿ ತನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಾಗ, ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಆಪಾದನೆಯ ದಿಕ್ಕನ್ನ ಬೇರೆ ಕಡೆ ತಿರುಗಿಸಲು ಹೀಗೆ ಹೇಳುತ್ತಿದ್ದಾರೆ. ಅವರು ಬಹಳ ಗೊಂದಲದಿಂದ ಹತಾಶೆರಾಗಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಮೂರುವರೆ ವರ್ಷ ನಾನೇ ಸಿ.ಎಂ ಅಂತಾರೆ. ಮತ್ತೊಂದು ಕಡೆ ನನಗೆ ಶಕ್ತಿ ಕೊಡಿ ಐದು ವರ್ಷ ಅಧಿಕಾರ ಪೂರ್ಣ ಮಾಡಬೇಕು ಅಂತಾರೆ. ಮಳೆ ಹಾನಿಗೆ ಸಾಕಷ್ಟು ಬೆಳೆಗಳು ಹಾನಿಯಾಗಿದೆ. ಒಂದೇ ಒಂದು ಪರಿಹಾರ ಬರುತ್ತಿಲ್ಲ, ಸರ್ಕಾರ ಗೊಂದಲದಲ್ಲಿದೆ. ಮುಸ್ಲಿಂ ಗುತ್ತಿಗೆದಾರರಿಗೆ ನಾಲ್ಕು ರಿಯಾಯಿತಿ ನೀಡುತ್ತೇವೆ ಎನ್ನುತ್ತಿದ್ದಾರೆ. ಆದರೆ ವಾಲ್ಮೀಕಿ ಹಗರಣ ಮತ್ತು ಮುಡಾ ಹಗರಣದಲ್ಲಿ ಕೂಡ ಸೈಟ್ ತೆಗೆದುಕೊಂಡಿಲ್ಲ ಎಂದು ಹೇಳಿ ವಾಪಸ್ ಕೊಡುತ್ತೇವೆ ಎನ್ನುತ್ತಾರೆ ಇದು ಯೂಟರ್ನ್ ಸರ್ಕಾರ ಎಂದು ಗುಡುಗಿದರು. https://ainlivenews.com/attention-farmers-less-capital-more-profit-lakhs-can-be-profited-from-this-crop/ ಅಧಿಕಾರಿಗಳು ಬೇಸತ್ತು ಹೋಗಿದ್ದಾರೆ. ಅಧಿಕಾರಿ…
ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಐಪಿಎಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಗಳನ್ನು ಸೃಷ್ಟಿಸಿ ವಂಚಿಸುತ್ತಿದ್ದ ರಾಜಸ್ಥಾನ ಮೂಲದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅರ್ಬಾಜ್ ಖಾನ್ ಬಂಧಿತ ಆರೋಪಿಯಾಗಿದ್ದು, ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಯನ್ನು ತೆರೆದು ಜನರನ್ನು ವಂಚಿಸುತ್ತಿದ್ದ. https://ainlivenews.com/attention-farmers-less-capital-more-profit-lakhs-can-be-profited-from-this-crop/ ಕೇವಲ ಬೆಳಗಾವಿ ಮಾತ್ರವಲ್ಲದೇ ಗದಗ ಮತ್ತು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಹೆಸರಿನಲ್ಲೂ ನಕಲಿ ಖಾತೆಯನ್ನು ವಂಚಿಸಿದ್ದ. https://youtu.be/LWO7hU9GBWc ನಕಲಿ ಫೇಸ್‌ಬುಕ್ ಖಾತೆಯನ್ನು ತೆರೆದು ವಂಚಿಸುತ್ತಿರುವ ಮಾಹಿತಿ ತಿಳಿದ ಬೆನ್ನಲ್ಲೇ ಆತನ ವಿರುದ್ಧ ಬೆಳಗಾವಿ ಎಸ್ಪಿ ಎಫ್‌ಐಆರ್ ದಾಖಲಿಸಿದ್ದಾರೆ. ದಾಖಲಿಸಿದ ಬಳಿಕ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಎಚ್.ಡಿ.ಬಿ.ಆರ್.ಟಿ.ಎಸ್. ಘಟಕದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 27ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉದ್ಘಾಟಿಸಿದರು. ಈ ವೇಳೆ ನೂತನ ೧೨೭ ಬಸ್‌ಗಳಿಗೆ ಸಚಿವ ರಾಮಲಿಂಗಾರೆಡ್ಡಿ ಲೋಕಾರ್ಪಣೆ ಮಾಡಿದರು. ಈ ಬಸ್‌ಗಳು ಭಾರತ್ ಸ್ಟೇಜ್ 6 ಮಾದರಿ ಬಸ್ಗಳಾಗಿದ್ದು ಇದರಲ್ಲಿ ಸಿಸಿ ಕ್ಯಾಮರಾಗಳು, ಎಲ್‌ಇಡಿ ಸ್ಕ್ರೀನ್ಗಳು ಮತ್ತು ಸುರಕ್ಷತಾ ಬಟನ್‌ಗಳು ಒಳಗೊಂಡಿವೆ. ರಾಜ್ಯದ ಜನರಿಗೆ ಅತ್ಯುತ್ತಮ ಸಾರಿಗೆ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ. https://ainlivenews.com/attention-farmers-less-capital-more-profit-lakhs-can-be-profited-from-this-crop/ ಅವಧಿ ಮೀರಿದ ಬಸ್ಗಳನ್ನು ಸ್ಥಗಿತಗೊಳಿಸಿ ಹೊಸ ಬಸ್ಗಳನ್ನು ಖರೀದಿಸಲಾಗುತ್ತದೆ. ಈ ವರ್ಷವು ಹಳೇ ಬಸ್ಗಳನ್ನು ಸ್ಕ್ರಾಪ್ಗೆ ಹಾಕಿ, ಬೇಡಿಕೆ ಮತ್ತು ಸಂಚಾರ ದಟ್ಟಣೆಗೆ ಅನುಗುಣವಾಗಿ ಹೊಸ ಬಸ್‌ಗಳು ಸಂಚರಿಸಲಿವೆ. ಶಾಸಕ ಪ್ರಸಾದ ಅಬ್ಬಯ್ಯ, ಭರಮಗೌಡ ಕಾಗೆ, ಡಿಸಿ ದಿವ್ಯ ಪ್ರಭು ಜೆಆರ್ ಜೆ, ಇತರರು ಇದ್ದರು.