ಬೆಂಗಳೂರು: ರಾಜ್ಯದೆಲ್ಲೆಡೆ ಇಂದು ಗೌರಿ ಗಣೇಶ ಹಬ್ಬ ಸಂಭ್ರಮ . ಈ ಹಿನ್ನೆಲೆ ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆವ್ಯಾಪ್ತಿಯ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಮತ್ತು ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪಶುಪಾಲನೆ ವಿಭಾಗದ ಜಂಟಿ ನಿದೇರ್ಶಕರು ತಿಳಿಸಿದ್ದಾರೆ. ಅದೇ ರೀತಿಯಾಗಿ ನಗರದಾದ್ಯಂತ ಗಣೇಶ ಪೆಂಡಾಲ್ಗಳನ್ನು ಆಯೋಜಿಸುವವರಿಗೆ ನಾಗರಿಕ ಸಂಸ್ಥೆ ಕೆಲ ನಿಯಮಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ. https://ainlivenews.com/panchmukhi-ganesha-mahapuja-under-the-leadership-of-shri-chandrasekhara-swamiji/ ಪಿಒಪಿ ಗಣೇಶ ವಿಗ್ರಹಗಳ ಮಾರಾಟ ಮತ್ತು ತಯಾರಿಕೆಗೆ ಬಿಬಿಎಂಪಿ ಈಗಾಗಲೇ ಕಟ್ಟುನಿಟ್ಟಿನ ನಿಷೇಧ ಹೇರಿದ್ದು, ನಿಯಮಗಳನ್ನು ಉಲ್ಲಂಘಿಸಿದರೆ ತಯಾರಕರು ಭಾರಿ ದಂಡ ವಿಧಿಸಬೇಕಾಗುತ್ತದೆ. ನಗರದ ವಿವಿಧ ಸ್ಥಳಗಳಲ್ಲಿ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುತ್ತಿರುವುದರಿಂದ ಬೀದಿಗಳಲ್ಲಿ ಯಾರಿಗೂ ತೊಂದರೆಯಾಗದಂತೆ ಆಚರಣೆಗೆ ಬಿಬಿಎಂಪಿ ನಿರ್ದೇಶನ ನೀಡಿದೆ
Author: AIN Author
ಹುಬ್ಬಳ್ಳಿ: ರಾಣಿ ಚೆನ್ನಮ್ಮ ( ಈದ್ಗಾ) ಮೈದಾನದಲ್ಲಿ ಹಾಲಕಂಬ ಪೂಜೆ ನಡೆಸಲಾಯಿತು ಎಂದು ಗಜಾನನ ಉತ್ಸವ ಮೈದಾನ ಸಮಿತಿ ಪ್ರಮುಖ ಸಂಜಯ ಬಡಸ್ಕರ್ ಹೇಳಿದರು. ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಹಿಂದು ಸಂಪ್ರದಾಯದಂತೆ ಪೂಜೆ ಪುರಸ್ಕಾರ ನಡೆಸಲಾಯಿತು ಅನೇಕ ಹಿಂದು ಸಂಘಟನೆಗಳ ಕಾರ್ಯಕರ್ತರು, ಪ್ರಮುಖರು ಭಾಗಿಯಾಗಿದ್ದರು. ಇನ್ನೂ ನಾಳೆ 9 ಕ್ಕೆ ಮೂರುಸಾವಿರ ಮಠದಿಂದ ಗಣೇಶನ, https://ainlivenews.com/do-you-know-the-benefits-of-using-mustard-oil-for-cooking/ ಮೆರವಣಿಗೆ 10.30 ಕ್ಕೆ ರಾಣೆ ಚೆನ್ನಮ್ಮ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗುವುದು, ಮೂರು ದಿನಗಳ ಕಾಲ ಗಣೇಶೋತ್ಸವ ಆಚರಣೆ ವೇಳೆ ಅನ್ನ ಪ್ರಸಾದ್, ಹೋಮ ಹವನ ಮುಂತಾದ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿ̧ದ್ದು, 21 ರಂದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಇಂದಿರಾ ಗಾಂಧಿ ಉದ್ಯಾನವನದ ಆವರಣದಲ್ಲಿಗಣೇಶ ವಿಸರ್ಜನೆ ನಡೆಸಲಾಗುತ್ತದೆ ಎಂದರು.
ಕೊಪ್ಪಳ: ಗಣೇಶ ಚತುರ್ಥಿ ಹಿನ್ನಲೆಯಲ್ಲಿ ಕೊಪ್ಪಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿದೆ. ಮುಂಜಾಗೃತ ಕ್ರಮವಾಗಿ ಪೊಲೀಸ್ ಇಲಾಖೆ ರೂಟ್ ಮಾರ್ಚ್ ನಡೆಸಿತು. https://ainlivenews.com/do-you-know-the-benefits-of-using-mustard-oil-for-cooking/ ನಗರದ ಡಿಎಆರ್ ಕಚೇರಿಯಿಂದ ನಗರಸಭೆ ಕಚೇರಿಯವರೆಗೆ ರೂಟ್ ಮಾರ್ಚ್ ನಡೆಯಿತು. ರೂಟ್ ಮಾರ್ಚ್ನಲ್ಲಿ ಜಿಲ್ಲಾಧಿಕಾರಿ ನಲೀನ್ ಅತುಲ್ ಎಸ್ಪಿ ಯಶೋಧಾ ವಂಟಗೋಡಿ ಸೇರಿದಂತೆ 20 ಕ್ಕೂ ಹೆಚ್ಚು ಇನ್ಸಪೆಕ್ಟರ್, ಪಿಎಸ್, 500 ಪೊಲೀಸ್ ಪೇದೆಗಳು, ಹೋಂ ಗಾರ್ಡ್ಗಳು ರೂಟ್ ಮಾರ್ಚ್ನಲ್ಲಿ ಭಾಗಿಯಾಗಿದ್ದರು.
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ರಾಜ್ಯದಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ದೇವಾಲಯಗಳಲ್ಲಿ, ಗಲ್ಲಿ-ಗಲ್ಲಿಗಳಲ್ಲೂ ಗಣೇಶ ಪ್ರತಿಷ್ಠಾಪನೆ ಮಾಡಿದ್ದಾರೆ. ಮನೆಗಳಲ್ಲೂ ಗೌರಿ-ಗಣೇಶನ ಕೂರಿಸಿ ಪೂಜೆ ಸಲ್ಲಿಸುತ್ತಿದ್ದು, ಸಿಲಿಕಾನ್ ಸಿಟಿಯ ಮನೆಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ವಿಘ್ನನಿವಾರಕ ಗಣೇಶನು ಸರ್ವ ಸಂಕಷ್ಟಗಳನ್ನು ದೂರಮಾಡಿ ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ, ಸೌಹಾರ್ದತೆ ಶಾಶ್ವತವಾಗಿ ನೆಲೆಸುವಂತೆ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ. ಸಂಭ್ರಮದ ಈ ಹಬ್ಬವು ಪರಿಸರಸ್ನೇಹಿಯೂ ಆಗಿರಲಿ.ಎಂದು ಎಲ್ಲರಿಗೂ ಶುಭಾಶಯ ಕೋರಿದ ಸಿಎಂ ಸಿದ್ದರಾಮಯ್ಯ!
ಮೈಸೂರು: ಅಗ್ರಹಾರದ 101 ಗಣಪತಿ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ಒಂದೇ ದೇಗುಲದಲ್ಲಿರುವ 101 ಗಣಪತಿ ವಿಗ್ರಹಗಳಿವೆ. ಅಶ್ವಿನಿ, ಭರಣಿ, ಕೃತ್ತಿಕಾ ರೋಹಿಣಿ, ಮೃಗಶಿರಾ ಸೇರಿದಂತೆ 27 ವಿದಧ ಗಣಪ, ದ್ವಿಜ ಗಣಪತಿ ಸಿದ್ದಿ ಗಣಪತಿ ಸಂಕಷ್ಟಹರ ಗಣಪತಿ ವರ ಗಣಪತಿ ಸೇರಿದಂತೆ 27 ವಿವಿಧ ಗಣಪತಿ ವಿಗ್ರಹಗಳಿವೆ. https://ainlivenews.com/do-you-know-the-benefits-of-using-mustard-oil-for-cooking/
ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ (Dhruva Sarja) ಅವರು ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಗಣೇಶ ಹಬ್ಬದಂದು (Ganesha Festival) ಧ್ರುವ ಪತ್ನಿ ಪ್ರೇರಣಾ(Prerana) ಗಂಡು ಮಗುವಿಗೆ(Baby Boy) ಜನ್ಮ ನೀಡಿದ್ದಾರೆ. ಇದೇ ಖುಷಿಯಲ್ಲಿ ಮಾಧ್ಯಮಕ್ಕೆ ನಟ ಪ್ರತಿಕ್ರಿಯೆ ನೀಡಿದ್ದಾರೆ. ಮಗನ ಆಗಮನದ ಸಂತಸದ ಬಗ್ಗೆ ಧ್ರುವ ಮಾತನಾಡಿ, ಗಣೇಶ ಹಬ್ಬದ ದಿನ ಮನೆಗೆ ಮಗ ಬಂದಿದ್ದಾನೆ. ಮನೆಯಲ್ಲಿ ಎಲ್ಲರೂ ಖುಷಿಯಾಗಿದ್ದಾರೆ. ಮಗ ಹುಟ್ಟಿದ ತಕ್ಷಣ ಫೋನ್ ತೆಗೆದು ಚಿರು ನಂಬರ್‌ಗೆ ಡಯಲ್ ಮಾಡಲು ಹೋಗಿದ್ದೆ, 2 ನಿಮಿಷ ಬೇಕಾಯ್ತು ಸುಧಾರಿಸಿಕೊಳ್ಳಲು ಎಂದು ನಟ ಭಾವುಕರಾಗಿದ್ದಾರೆ ಇವತ್ತು 11 ಕಡೆ ಗಣೇಶನ ದರ್ಶನ ಮಾಡಲು ಹೋಗಬೇಕಿತ್ತು. ಆದರೆ ಮುಂದೆ ಮಾಡ್ತಿನಿ, ಮಗನ ಆಗಮನ ಖುಷಿ ಕೊಟ್ಟಿದೆ. ತಾಯಿ ಮತ್ತು ಮಗ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಧ್ರುವ ಮಾತನಾಡಿದ್ದಾರೆ. ಧ್ರುವ ಸರ್ಜಾ ಪತ್ನಿ ಪ್ರೇರಣಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಬಸವನಗುಡಿಯ ಖಾಸಗಿ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿದೆ. ಮೊನ್ನೆಯಷ್ಟೇ ಪ್ರೇರಣಾ ಅವರ…
ಬೀದರ್: ಜಿಲ್ಲೆಯಲ್ಲಿ ಮೃಗಾಲಯ (ಝೂ) ಆರಂಭಿಸಲು ಸಾಧ್ಯ ವರದಿಯನ್ನು ಸಲ್ಲಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ಈಗಾಗಲೇ ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಾಗಿದೆ ಬೀದರ ಜಿಲ್ಲಾ ಉಸ್ತುವಾರಿ ಸಚಿವರು ಆದ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಹೇಳಿದರು ನಗರದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿ ಮಾಹಿತಿ.ಕಲಬುರ್ಗಿ ಗದಗ ಮೃಗಾಲಯಗಳಿಗೆ ತಲಾ ಎರಡು ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಬೀದರ್ ನ ದೇವ- ದೇವವನ ಅಥವಾ ಹೊನ್ನಿಕೇರೆ ಅರಣ್ಯ ಗಳಲ್ಲಿ ಯಾವುದಾದರೂ ಒಂದು ಕಡೆ ಮೃಗಾಲಯ ಮಾಡಬಹುದಾ ಎಂಬ ಕುರಿತು ಸಾಧಕ ಬಾಧಕ ಅರಿಯಲಾಗುವುದು ಎಂದರು. https://ainlivenews.com/do-you-know-the-benefits-of-using-mustard-oil-for-cooking/ ಮೃಗಾಲಯ ಆರಂಭ ಕಷ್ಟವೇನಲ್ಲ ಆದರೆ ಅದರ ನಿರ್ವಹಣೆಯೇ ಕಷ್ಟವಾಗಲಿದೆ ಪ್ರತಿ ವರ್ಷ ಆನೆ ಒಂದಕ್ಕೆ ೩೦-೪೦ ಲಕ್ಷ ರೂಪಾಯಿ ನಿರ್ವಹಣಾ ವೆಚ್ಚ ತಗುಲುತ್ತದೆ ಎಂದು ಸಚಿವರು ಮಾಹಿತಿ. ಕಲ್ಬುರ್ಗಿ ಜಿಲ್ಲೆಯಲ್ಲಿ ಚಿತ್ತಾಪುರ ರಸ್ತೆಯಲ್ಲಿ 40 ಎಕರೆಯಲ್ಲಿ ನೂತನ ಮೃಗಾಲಯ ಆರಂಭಿಸಲಾಗುತ್ತಿದ್ದೆ. ಅದಕ್ಕೆ ಅಗತ್ಯ ಅನುದಾನ ಸಹ ಬುಡುಗಡೆ ಮಾಡಲಾಗಿದೆ. ಮೈಸೂರು ಝೂ ಹಾಗೂ ಬನ್ನೇರುಘಟ್ಟ…
ಕಳೆದ ವರ್ಷ ಬಿಡುಗಡೆಗೊಂಡ ಕಾಂತಾರ (Kantara) ಸಿನಿಮಾದ ಅಲೆ ಇನ್ನೂ ಕಡಿಮೆಯಾಗಿಲ್ಲ. ದುಬೈನಲ್ಲಿ ನಡೆದ ಸೈಮಾ ಅವಾರ್ಡ್ಸ್ (SIIMA Award) ಕಾರ್ಯಕ್ರಮದಲ್ಲಿ ಕಾಂತಾರ ಸಿನಿಮಾ 10 ಅವಾರ್ಡ್ ಗಳನ್ನು ಬಾಚಿಕೊಂಡಿದೆ. ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರ್ ಅವರು ನಿರ್ಮಿಸಿ, ರಿಷಬ್ ಶೆಟ್ಟಿ (Rishabh Shetty) ನಟಿಸಿ, ನಿರ್ದೇಶಿಸಿದ ಸಿನಿಮಾ “ಕಾಂತಾರ”, ಕಳೆದ ವರ್ಷ ಬಿಡುಗಡೆಯಾಗಿ ದೇಶದೆಲ್ಲೆಡೆ ಉತ್ತಮ ಪ್ರಶಂಸೆಗಳಿಸಿತ್ತು. ಪ್ರಸ್ತುತ ಸೈಮಾ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ನಟನೆಗೆ, ನಿರ್ದೇಶನಕ್ಕೆ ಹಾಗು ಪಾಥ್ ಬ್ರೇಕಿಂಗ್ ಸ್ಟೋರಿಗೆ ಸ್ಪೆಷಲ್ ಅಪ್ರಿಸಿಯೇಷನ್ ಅವಾರ್ಡ್ ಸೇರಿ ಒಟ್ಟು ೩ ಅವಾರ್ಡ್ ಗಳು ರಿಷಬ್ ಶೆಟ್ಟಿಯವರಿಗೆ ದೊರಕಿದೆ. ವಿಶೇಷವಾಗಿ “ಕಾಂತಾರ” ಚಿತ್ರಕ್ಕೆ ಬೆನ್ನೆಲುಬಾಗಿದ್ದಂತಹ ದೈವ ನರ್ತಕರಾದ ಮುಖೇಶ್ ಲಕ್ಷ್ಮಣ್ ಅವರು ದುಬೈನಲ್ಲಿ ಸೈಮಾ ಪ್ರಶಸ್ತಿ ಸ್ವೀಕರಿಸಿದ್ದಾರೆ. ಎಲೆಮರೆಕಾಯಿಯಂತಿದ್ದ ದೈವ ನರ್ತಕರು ಇಂದು ಪ್ರತಿಷ್ಠಿತ “ಸೈಮಾ” ಪ್ರಶಸ್ತಿ ಪಡೆದಿದ್ದಾರೆ. ಇಂತಹ ಜಗಮೆಚ್ಚಿದ ಚಿತ್ರದ ನಿರ್ದೇಶಕರಾದ ರಿಷಭ್ ಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಬೇಕು
ಬೆಂಗಳೂರು: ಇಂದು ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಹೀಗಾಗಿ ನಗರದ ದೊಡ್ಡ ಗಣೇಶ ದೇವಸ್ಥಾನ ಹಾಗೂ ಪುಟ್ಟೇನಹಳ್ಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿದೆ. ಬೆಳ್ಳಗ್ಗೆ 6 ಗಂಟೆಯಿಂದಲೇ ವಿಶೇಷ ಪೂಜೆ ಶುರುವಾಗಿದೆ. https://ainlivenews.com/panchmukhi-ganesha-mahapuja-under-the-leadership-of-shri-chandrasekhara-swamiji/ ಪಂಚಾಭಿಷೇಕ, ಪುಷ್ಪಭಿಷೇಕ ನೆರವೇರಿಸಿ ನಂತರ ಬೆಣ್ಣೆ ಅಲಂಕಾರ ಮಾಡಲಾಗಿದೆ. ಇಂದು ರಾತ್ರಿ 9 ಗಂಟೆಯವರೆಗೂ ವಿಶೇಷ ಪೂಜೆ ಇರಲಿದೆ. ಹೀಗಾಗಿ ದೊಡ್ಡ ಗಣೇಶ ಹಾಗೂ ಪುಟ್ಟೆನಗಳ್ಳಿ ಗಣೇಶ ದೇವಸ್ಥಾನಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.
ರಿಯೊ ಡಿ ಜನೈರೊ: ವಿಮಾನವೊಂದು ಪತನಗೊಂಡು (Plane Crash) 14 ಜನ ಮೃತಪಟ್ಟ ಘಟನೆ ಬ್ರೆಜಿಲ್‍ನ (Brazil) ಜನಪ್ರಿಯ ಪ್ರವಾಸಿ ತಾಣವಾದ ಬಾರ್ಸಿಲೋಸ್‍ನಲ್ಲಿ ನಡೆದಿದೆ. ಭಾರೀ ಮಳೆಯ (Rain) ಹಿನ್ನೆಲೆಯಲ್ಲಿ ಲ್ಯಾಂಡ್ ಆಗಲು ಪ್ರಯತ್ನಿಸಿದ ಕಾರಣ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರಲ್ಲಿ 12 ಮಂದಿ ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿ ಎಂದು ತಿಳಿದು ಬಂದಿದೆ. ಭಾರೀ ಮಳೆ ಹಾಗೂ ಬಿರುಗಾಳಿಯ ನಡುವೆ ಪೈಲೆಟ್ ವಿಮಾನವನ್ನು ಇಳಿಸಲು ಪ್ರಯತ್ನಿಸಿದ್ದಾರೆ. ಇದರಿಂದಾಗಿ ಎದುರಿನ ರನ್ ವೇ ಪೈಲೆಟ್‍ಗೆ ಕಾಣಿಸದೆ ಮಧ್ಯದಲ್ಲಿ ವಿಮಾನ ಇಳಿದಿದೆ. ಈ ವೇಳೆ ವೇಗ ನಿಯಂತ್ರಣಕ್ಕೆ ಬರದೆ ವಿಮಾನ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಬಳಿಕ ಮೃತಪಟ್ಟವರನ್ನು ಅಮೆರಿಕ ಮೂಲದವರು ಎನ್ನಲಾಗಿತ್ತು. ಪರಿಶೀಲನೆಯ ಬಳಿಕ ಅವರೆಲ್ಲರು ಬ್ರೆಜಿಲ್‍ನ ಪ್ರಜೆಗಳು ಎಂದು ತಿಳಿದು ಬಂದಿದೆ. https://ainlivenews.com/do-you-know-the-benefits-of-using-mustard-oil-for-cooking/ ಅವಘಡದ ಬಗ್ಗೆ ಬ್ರೆಜಿಲ್ ವಾಯುಪಡೆ ತನಿಖೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಸಮಯದಲ್ಲಿ ಬಾರ್ಸಿಲೋಸ್‍ಗೆ ಆಗಮಿಸುತ್ತಿದ್ದ ಎರಡು ವಿಮಾನಗಳನ್ನು…