ವಿಜಯಪುರ:- ಸರ್ಕಾರದಿಂದ ಕೊಡುವ ದವಸ ಧಾನ್ಯವನ್ನು ಅಡುಗೆ ಸಹಾಯಕಿರು ಕಳ್ಳತನ ಮಾಡುತ್ತಿರುವ ಪ್ರಕರಣ ಜಿಲ್ಲೆಯ ಚಡಚಣ ತಾಲೂಕಿನ ಬರಡೊಲ ಗ್ರಾಮದಲ್ಲಿ ಜರುಗಿದೆ. https://ainlivenews.com/im-a-d-boss-fan-wherever-i-am-im-not-afraid-to-say-it-rajat/ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಗೆ ಸರ್ಕಾರದಿಂದ ಬರುವ ಬಿಸಿ ಊಟದ ದವಸ, ಧಾನ್ಯ, ಬೆಳೆ, ಮೊಟ್ಟೆ, ಹಾಲು, ತರಕಾರಿ, ಸೇರಿದಂತೆ ಎಲ್ಲವನ್ನೂ ಕಳ್ಳತನ ಮಾಡಿ ಅಡುಗೆ ಸಹಾಯಕಿ ಮೂಲಕ ಮಾರಾಟ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಶಾಲೆಯ ಮುಖ್ಯ ಶಿಕ್ಷಕನ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿದೆ. ಮಕ್ಕಳಿಗೆ ಅನ್ನ ಟೊಮಾಟೊ ಸಾರು ಮಿತಿಯಾಗಿ ಕೋಡುತ್ತಿದ್ದು, ಅರೆ ಹೊಟ್ಟಿ ಯಲ್ಲಿ ಊಟ ಮಾಡಿ ಬೇಸತ್ತು ಮಕ್ಕಳು ಗ್ರಾಮದ ಮುಖಂಡರ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಬರಡೊಲ ಗ್ರಾಮ ಪಂಚಾಯಿತಿ ಅಧ್ಯಕ್ಷ. ಅಭಿವೃದ್ಧಿ ಅಧಿಕಾರಿಗಳು ಹಾಗೂ ಸದಸ್ಯರು ಶಾಲೆಗೆ ಬೇಟಿ ಕೊಟ್ಟು ಮಕ್ಕಳಿಂದ ಹೇಳಿಕೆ ಪಡೆದು ಶಾಲಾ ಶಿಕ್ಷಕರನ್ನು ತರಾಟೆ ತೆಗೆದುಕೊಂಡರು.
Author: AIN Author
ಬೆಂಗಳೂರು:- ವೈಲ್ ಕಾರ್ಡ್ ಮೂಲಕ ಬಿಗ್ ಮನೆಗೆ ಎಂಟ್ರಿ ಕೊಟ್ಟು ತಮ್ಮನೆ ಅಪಾರ ಅಭಿಮಾನಿ ಬಳಗ ಹೊಂದಿರುವ ರಜತ್ ಅವರು 2ನೇ ರನ್ನರಪ್ ಆಗಿರೋದು ವಿಶೇಷ. https://ainlivenews.com/ed-notice-to-cm-siddaramaiah-what-did-dcm-dikeshi-say/ ಇನ್ನೂ DBOSS ಅಭಿಮಾನಿಯೂ ಆಗಿರುವ ರಜತ್ ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ ತಮ್ಮ ಬಿಗ್ ಬಾಸ್ ಜರ್ನಿ ಬಗ್ಗೆ ಮಾತನಾಡಿದ್ದಾರೆ. ನಾನು ಬಿಗ್ ಬಾಸ್‌ನಲ್ಲಿದ್ರೂ ಎಂದಿಗೂ ಡಿಬಾಸ್ ಅಭಿಮಾನಿ, ಅದನ್ನು ಹೇಳಿಕೊಳ್ಳೋಕೆ ಭಯವಿಲ್ಲ. ನನಗೆ ದರ್ಶನ್ ಅವರನ್ನು 3-4 ಬಾರಿ ಭೇಟಿಯಾಗಿದ್ದೇನೆ. ಅವರೊಂದಿಗೆ ಉತ್ತಮ ಒಡನಾಟವಿದೆ ಎಂದರು. ಇನ್ನೂ ಸುದೀಪ್ ಸರ್ ಹೇಳಿದ ಹಾಗೆ ಇತಿಹಾಸದಲ್ಲೇ ಫಸ್ಟ್ ಟೈಮ್ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದು ಟಾಪ್ 3 ಆಗೋದು ದೊಡ್ಡ ವಿಚಾರ. ನಾನು ಕೂಡ ಗೆಲ್ತೀನಿ ಅಂತಲೇ ಬಂದೆ ಆದರೆ ಕರ್ನಾಟಕದಲ್ಲಿ ಗಾಂಧೀಜಿ ಬಂದು ನಿಂತರೂ ಹನುಮಂತನ ಮುಂದೆ ಗೆಲ್ಲೋಕೆ ಆಗಲ್ಲ. ಹಾಗಾಗಿ ಮತ್ತೆ ಏನು ಅಂತ ಹೊಡೆದಾಡೋಣ, ಹಾಗಾಗಿ ಗೆದ್ದಿಲ್ಲ ಅನ್ನೋ ಬೇಸರವಿಲ್ಲ ಎಂದಿದ್ದಾರೆ. ಬಿಗ್ ಬಾಸ್ ಮನೆ ಮತ್ತು…
ಬೆಂಗಳೂರು:- ಸಿಎಂ ಪತ್ನಿಗೆ ಇಡಿ ನೋಟಿಸ್ ನೀಡಿರುವುದು ರಾಜಕೀಯ ಪ್ರೇರಿತ ಎಂದು DCM ಡಿಕೆಶಿ ಹೇಳಿದ್ದಾರೆ. https://ainlivenews.com/ed-notice-to-siddaramaiah-this-is-tense-for-siddu-but-happy-for-dk/ ಈ ಸಂಬಂಧ ಮಾತನಾಡಿದ ಅವರು, ಪಾರ್ವತಿ ಸಿದ್ದರಾಮಯ್ಯ ಅವರಿಗೆ ಇಡಿ ನೋಟಿಸ್ ನೀಡಿರುವುದು ರಾಜಕೀಯ ಪ್ರೇರಿತ. ಸಿಎಂ ಪತ್ನಿ, ಬೈರತಿ ಸುರೇಶ್‌ಗೆ ನೋಟಿಸ್ ವಿಚಾರವಾಗಿ ಇದೆಲ್ಲಾ ರಾಜಕೀಯ ಪ್ರೇರಿತ. ನನ್ನ ಕೇಸ್‌ನಲ್ಲಿಯೂ ಇದೇ ರೀತಿ ಆಗಿತ್ತು. ಎರಡು ಘಟನೆಗಳು ಒಂದೇ ಸಲ ನಡೆಯಲ್ಲ. ಈಗಾಗಲೇ ಲೋಕಾಯುಕ್ತದಲ್ಲಿ ತನಿಖೆ ನಡೀತಿದೆ. ಈ ವೇಳೆ ಬೇರೆ ಸಂಸ್ಥೆಯವರು ತನಿಖೆ ಮಾಡೋದಕ್ಕೆ ಆಗಲ್ಲ ಎಂದು ಅನೇಕ ತೀರ್ಪಿನಲ್ಲಿದೆ. ಅದೇನು ಎಂದು ಮಾಹಿತಿ ತಿಳಿದುಕೊಂಡು ಮಾತನಾಡುತ್ತೇನೆ. ನನ್ನ ಕೇಸ್‌ನಲ್ಲಿ ಸಿಬಿಐ ಮತ್ತು ಇಡಿಯವರು ತನಿಖೆ ಮಾಡುತ್ತಿದ್ದರು. ಈ ರೀತಿ ಮಾಡೋದಕ್ಕೆ ಬರಲ್ಲ ಎಂದು ಕೆಲವು ಜಡ್ಜ್ಮೆಂಟ್ ಇದೆ. ನಮ್ಮ ಸ್ಟ್ಯಾಂಡ್ ಕ್ಲಿಯರ್ ಇದೆ. ಇದೆಲ್ಲ ರಾಜಕೀಯ ಪ್ರೇರಿತ ಎಂದರು.
ಬೆಂಗಳೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯಗೆ ಇಡಿ ನೋಟಿಸ್ ಜಾರಿ ಮಾಡಿರುವ ವಿಚಾರವಾಗಿ BY ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ. https://ainlivenews.com/what-happened-to-coconut-oil-on-an-empty-stomach-this-problem-is-not-a-vortex-to-you/ ನಗರದಲ್ಲಿ ಮಾತನಾಡಿದ ಅವರು, ಇಡಿ ನೋಟಿಸ್ ಸಿದ್ದರಾಮಯ್ಯಗೆ ದೊಡ್ಡ ಆಘಾತ ತಂದಿದೆ. ಲೋಕಾಯುಕ್ತದಿಂದ `ಬಿ’ ರಿಪೋರ್ಟ್ ತೆಗೆದುಕೊಂಡು ಬರುವ ಲೆಕ್ಕಾಚಾರದಲ್ಲಿ ಸಿಎಂ ಇರುವಾಗ ಇಡಿಯಿಂದ ನೋಟಿಸ್ ಕೊಡಲಾಗಿದೆ. ಅವರ ಧರ್ಮಪತ್ನಿಯವರಿಗೆ ಹಾಗೂ ಬೈರತಿ ಸುರೇಶ್ ಅವರಿಗೆ ಇಡಿ ನೋಟಿಸ್ ಕೊಡಲಾಗಿದೆ. ಇವರಿಬ್ಬರು ತನಿಖೆಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಇಡಿ ನೋಟಿಸ್ ಸಿದ್ದರಾಮಯ್ಯರಿಗೆ ದೊಡ್ಡ ಆಘಾತ ತಂದಿದೆ. ಆದರೆ ಡಿಕೆ ಶಿವಕುಮಾರ್‌ಗೆ ಸಂತಸ ತಂದಿದೆ ಎಂದರು. ಇನ್ನೂ ಇಡಿ ನೋಟಿಸ್ ಕೊಟ್ಟಿರೋದು ಡಿಕೆಶಿಗೆ ಒಳಗೊಳಗೇ ಸಂತೋಷ ತಂದಿರುತ್ತದೆ. ಇದರಲ್ಲಿ ಅಚ್ಚರಿ ಏನಿಲ್ಲ. ನಾನು ಡಿಕೆಶಿ ಅವರ ಹೇಳಿಕೆಯನ್ನು ಗಮನಿಸಿದೆ ಎಂದು ಟೀಕೆ ಮಾಡಿದರು.
ತೆಂಗಿನ ಎಣ್ಣೆಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ಅದು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಸರ್ವೌಷಧದಂತೆ ಕೆಲಸ ಮಾಡುತ್ತದೆ. https://ainlivenews.com/fire-electric-scooter-showroom/ ತೆಂಗಿನ ಎಣ್ಣೆಯಲ್ಲಿ ಉತ್ತಮ ಕೊಬ್ಬುಗಳು ಕಂಡುಬರುತ್ತವೆ. ಇದು ದೇಹಕ್ಕೆ ಬಹಳ ಮುಖ್ಯ ಖಾಲಿ ಹೊಟ್ಟೆಯಲ್ಲಿ ತೆಂಗಿನ ಎಣ್ಣೆ ಸೇವಿಸುವುದರಿಂದ ತೂಕ ಇಳಿಕೆಗೆ ತುಂಬಾ ಸಹಾಯವಾಗುತ್ತದೆ. ಇದರಲ್ಲಿ ಉತ್ತಮ ಕೊಬ್ಬುಗಳು ಕಂಡುಬರುತ್ತವೆ. ಇದು ದೇಹದಲ್ಲಿ ನಿಧಾನವಾಗಿ ಜೀರ್ಣವಾಗುತ್ತದೆ. ಪಿಸಿಓಎಸ್ ಅಥವಾ ಪಿಸಿಒಡಿ ಸಮಸ್ಯೆ ಇದ್ದರೂ ಸಹ, ಖಾಲಿ ಹೊಟ್ಟೆಯಲ್ಲಿ ವರ್ಜಿನ್ ತೆಂಗಿನ ಎಣ್ಣೆಯನ್ನು ಸೇವಿಸಬೇಕು. ಇದು ಪರಿಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಒಬ್ಬರಿಗೆ ಪಿಸಿಒಡಿ ಸಮಸ್ಯೆ ಇದ್ದರೆ, ಅವರು ಇನ್ಸುಲಿನ್ ಪ್ರತಿರೋಧದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ವರ್ಜಿನ್ ತೆಂಗಿನ ಎಣ್ಣೆಯನ್ನು ಸೇವಿಸಿದಾಗ, ಅದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಕೊಬ್ಬಿನ ಶೇಖರಣೆಯಿಂದಾಗಿ ದೇಹದಲ್ಲಿನ ಸಕ್ಕರೆಯ ಸ್ಪೈಕ್‌ಗಳನ್ನು ಕಡಿಮೆ ಮಾಡುತ್ತದೆ. ಇದು ಇನ್ಸುಲಿನ್ ಪ್ರತಿರೋಧದ ಸ್ಥಗಿತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೂಲವ್ಯಾಧಿ ನೋವಿನಿಂದ ಬಳಲುತ್ತಿದ್ದರೆ, ಖಾಲಿ ಹೊಟ್ಟೆಯಲ್ಲಿ ವರ್ಜಿನ್ ತೆಂಗಿನ ಎಣ್ಣೆಯನ್ನು ಸೇವಿಸುವುದರಿಂದ…
ಬೆಂಗಳೂರು:- ಎಲೆಕ್ಟ್ರಿಕ್ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಬೈಕ್‌ಗಳು ಬೆಂಕಿಗಾಹುತಿಯಾಗಿರುವ ಘಟನೆ ರಾಜಾಜಿನಗರದ ರಾಜ್‌ಕುಮಾರ್ ರಸ್ತೆಯಲ್ಲಿ ಜರುಗಿದೆ. https://ainlivenews.com/muda-scam-cm-high-court-issued-big-relief-to-his-wife/ ಬ್ಯಾಟರಿ ಓವರ್ ಚಾರ್ಜ್ ಆಗಿ ಸ್ಫೋಟಿಸಿದ ಹಿನ್ನೆಲೆ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಶೋರೂಮ್ನಲ್ಲಿದ್ದ ಸಿಬ್ಬಂದಿ ಹೊರಗೆ ಓಡಿ ಬಂದಿದ್ದಾರೆ. ಇದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ. ಆದ್ರೆ, ಕಟ್ಟಡ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ರಾಜಾಜಿನಗರದ ರಾಜ್‌ಕುಮಾರ್ ರಸ್ತೆಯಲ್ಲಿರುವ ಎಲೆಕ್ಟ್ರಿಕ್ ಬೈಕ್ ಶೋರೂಮ್‌ನಲ್ಲಿ ಒಟ್ಟು 74 ಬೈಕ್‌ಗಳು ಇದ್ದವು. ಈ ಪೈಕಿ 19 ಬೈಕ್‌ಗಳು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, 9 ಬೈಕ್ಗಳಿಗೆ ಸ್ವಲ್ಪ ಹಾನಿಯಾಗಿದೆ.
ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹೈಕೋರ್ಟ್ ಪೀಠವು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಇಂದು ಆದೇಶ ಹೊರಡಿಸಿದೆ. https://ainlivenews.com/do-you-know-how-man-minutes-to-bathe-in-the-winter/ ವಿಚಾರಣೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮ್ಯಯ ಹಾಗೂ ಅವರ ಪತ್ನಿ ಪಾರ್ವತಿ ಅವರಿಗೆ ಇಡಿ ನೋಟಿಸ್ ನೀಡಿತ್ತು. ಇದಕ್ಕೆ ತಡೆ ನೀಡುವಂತೆ ಸಿಎಂ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಪಾರ್ವತಿ ಅವರಿಗೆ ತಾತ್ಕಾಲಿಕ ರಿಲೀಫ್ ನೀಡಿದೆ. ಇವರ ಜೊತೆಗೆ ಸಚಿವ ಭೈರತಿ ಸುರೇಶ್ ಅವರಿಗೂ ನೀಡಲಾಗಿದ್ದ ಇಡಿ ಸಮನ್ಸ್‌ಗೂ ಸಹ ಕೋರ್ಟ್ ತಡೆಯಾಜ್ಞೆ ನೀಡಿದೆ. ಮುಡಾ ಹಗರಣದ ಕೇಸ್‌ನಲ್ಲಿ ಸಚಿವ ಭೈರತಿ ಸುರೇಶ್ ಆರೋಪಿಯಾಗಿಲ್ಲವೆಂದು ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಭೈರತಿ ಸುರೇಶ್ ವಿರುದ್ಧದ ಇಡಿ ಸಮನ್ಸ್‌ಗೂ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಫೆಬ್ರವರಿ 10ರವರೆಗೆ ಇಡಿ ಸಮನ್ಸ್‌ಗೆ ತಡೆ ನೀಡಿ ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 10ಕ್ಕೆ ಮುಂದೂಡಿದೆ.
ನಿಮ್ಮನ್ನು ತಾಜಾ ಆಗಿಡಲು ಮತ್ತು ದಿನದ ಕೆಲಸಕ್ಕೆ ಸಿದ್ಧವಾಗಲು ನೆರವಾಗುವ ಬೆಳಗಿನ ನಿತ್ಯಕರ್ಮವೆಂದರೆ, ಅದು ಸ್ನಾನ. ಸ್ನಾನ ವೈಯಕ್ತಿಕ ನೈರ್ಮಲ್ಯಕ್ಕೆ ಅಗತ್ಯವಾಗಿದ್ದು, ಇದನ್ನು ಭಾರತವೂ ಸೇರಿ, ವಿಶ್ವಾದ್ಯಂತ ಪ್ರತಿದಿನ ಮಾಡುತ್ತಾರೆ. ಅಧ್ಯಯನಗಳ ಪ್ರಕಾರ ಸ್ನಾನ ಅತ್ಯುತ್ತಮ ದೈಹಿಕ ಸ್ವಚ್ಛತೆ ನೀಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅಧ್ಯಯನದ ಪ್ರಕಾರ,ಅನೇಕ ಅಧ್ಯಯನಗಳು ಬಿಸಿನೀರಿನ ಸ್ನಾನ ನಿಮ್ಮ ಶರೀರದ ತೂಕ ಕಡಿಮೆ ಮಾಡಲು ನೆರವಾಗುವುದಷ್ಟೇ ಅಲ್ಲದೇ, ಬಾಡಿ ಮಾಸ್ ಇಂಡೆಕ್ಸ್ ಮತ್ತು ಸೊಂಟದ ಸುತ್ತಳತೆಯನ್ನು ಉತ್ತಮವಾಗಿ ನಿಯಂತ್ರಿಸುತ್ತದೆ. https://ainlivenews.com/dharwad-tension-for-cm-sidhu-tension-verdict-could-come-out-anytime/ ಸ್ನಾನ ಮಾಡುವುದರಿಂದ ಅನೇಕ ಪ್ರಯೋಜನಗಳಿದ್ದರೂ, ಅನೇಕ ಜನ ಚಳಿಗಾಲದಲ್ಲಿ ಸ್ನಾನ ಮಾಡಲು ಬಯಸುವುದಿಲ್ಲ. ಈ ಅಭ್ಯಾಸ ನೈರ್ಮಲ್ಯರಹಿತವಾಗಿದ್ದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿಯೂ ಆಗಿದೆ. ಚಳಿಗಾಲದಲ್ಲೂ ಸ್ನಾನ ಮಾಡುವ ಅಭ್ಯಾಸ ಅನುಸರಿಸುವುದು ಉತ್ತಮ. ಚಳಿಗಾಲದಲ್ಲಿ ಎಷ್ಟು ಸಮಯ ಸ್ನಾನ ಮಾಡಬೇಕು ಎಂದು ವೈದ್ಯರೊಬ್ಬರು ಸಲಹೆ ನೀಡಿದ್ದಾರೆ. ಇದರೊಂದಿಗೆ ನೀರು ಎಷ್ಟು ಬಿಸಿಯಾಗಿರಬೇಕು, ದೇಹದ ಯಾವ ಭಾಗಕ್ಕೆ ಬಿಸಿನೀರನ್ನು ಮೊದಲು ಹಚ್ಚಬೇಕು, ಯಾವ ಸಮಯದಲ್ಲಿ ಸ್ನಾನ ಮಾಡಬೇಕು,…
ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನಮ್ಮ ಮೆಟ್ರೋ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಜನವರಿ 28 ಕೊನೆಯ ದಿನಾಂಕ ಆಗಿದೆ. ಹಾಗಾಗಿ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬಹುದು. https://ainlivenews.com/people-love-sympathy-more-than-games-trivikram-fans-are-bored/ ಯಾವ್ಯಾವ ಹುದ್ದೆಗಳು? ಸಿಸ್ಟಮ್ ಸೂಪರ್‌ವೈಸರ್, ಸಿಸ್ಟಮ್ ಟೆಕ್ನಿಷಿಯನ್ ಹುದ್ದೆಗಳು ಎಷ್ಟು? ಒಟ್ಟು 13 ಹುದ್ದೆಗಳಿಗೆ ನೇಮಕಾತಿ ಗರಿಷ್ಠ ವಯಸ್ಸು ಎಷ್ಟು? 40 ವರ್ಷಗಳು ಅರ್ಜಿ ಸಲ್ಲಿಕೆ ಹೇಗೆ? ಅಂಚೆ ಅಥವಾ ಇ-ಮೇಲ್ ಮಾಡಬಹುದು ಸ್ಯಾಲರಿ ಎಷ್ಟು? ತಿಂಗಳಿಗೆ 46,000 ರೂ.ನಿಂದ 65,000 ರೂ. ವೇತನ ವಿದ್ಯಾರ್ಹತೆ ಏನು? ಐಟಿಐ, ಡಿಪ್ಲೊಮಾ, ಬಿಇ/ಬಿ.ಟೆಕ್ ಆಗಿರಬೇಕು ನೇಮಕಾತಿ ಪ್ರಕ್ರಿಯೆ ಹೇಗೆ? ಅರ್ಜಿ ಸಲ್ಲಿಸಿದವರಿಗೆ ನೇರ ಸಂದರ್ಶನ ಇರಲಿದೆ. ಸಂದರ್ಶನದಲ್ಲಿ ಆಯ್ಕೆ ಆದವರಿಗೆ ಉದ್ಯೋಗಕ್ಕೆ ಹಾಜರಾಗಬಹುದು. ಇದಕ್ಕೂ ಮುನ್ನ ಅಭ್ಯರ್ಥಿಗಳಿಗೆ ವೈದ್ಯಕೀಯ ಫಿಟ್ನೆಸ್ ಪರೀಕ್ಷೆ ನಡೆಸಲಾಗುವುದು.
ಹಾಸನ:- ಸಿದ್ದರಾಮಯ್ಯಗೆ ಮೂರ‍್ನಾಲ್ಕು ಸೈಟ್ ಯಾವ ಲೆಕ್ಕ ಎಂದು ಸಚಿವ ಎನ್ ರಾಜಣ್ಣ ಹೇಳಿದ್ದಾರೆ. https://ainlivenews.com/siddaramaiah-is-sure-to-become-cm-for-5-years-zamir/ ಹಾಸನದಲ್ಲಿ ಮಾತನಾಡಿದ ಅವರು,ಮುಡಾ ಪ್ರಕರಣ ಬಿಜೆಪಿಯ ಸೃಷ್ಟಿ ಅಷ್ಟೇ. ಸಿಎಂ ಆಗಿರೋರಿಗೆ ಮೂರ‍್ನಾಲ್ಕು ಸೈಟ್ ಯಾವ ಲೆಕ್ಕ ಹೇಳಿ ಎಂದರು. ಯಾರು ದೂರು ಕೊಟ್ಟು ಹೇಳಿಕೆ ಕೊಡ್ತಿದ್ದಾರೋ ಅವರದ್ದೇ ಪಾತ್ರ ಇದ್ದಂತಿದೆ. ಇನ್ನು ಸ್ವಲ್ಪದಿನ, ಎಲ್ಲವೂ ಆಚೆ ಬರುತ್ತದೆ. ಯಾರದ್ದು ಎಷ್ಟು ಸೈಟು ಇದೆ, ಎಲ್ಲವೂ ಆಚೆ ಬರುತ್ತೆ. ಮುಡಾ ಇರಲಿ, ಬಿಡಿಎ ಇರಲಿ, ಎಲ್ಲೇ ಕಾನೂನು ಬಾಹಿರ ಚಟುವಟಿಕೆ ಆಗಿದ್ದರೂ ಶಿಕ್ಷೆ ಆಗಬೇಕು. ಸಾರ್ವಜನಿಕ ಆಸ್ತಿಯನ್ನು ಯಾರೇ ಲಪಟಾಯಿಸಿದ್ರೂ ಅದು ಮೋಸದ ಕೆಲಸ. ಹಾಗೆ ಮಾಡಿದವರಿಗೆ ಶಿಕ್ಷೆಯಾಗಬೇಕು ಅನ್ನುವವನು ಅಂತ ಸಚಿವರು ಹೇಳಿದ್ದಾರೆ.