ದಾವಣಗೆರೆ: ದಾವಣಗೆರೆ ಜಿಲ್ಲೆಗೆ ಬಿಜೆಪಿ ಬರ ಅಧ್ಯಯನ ತಂಡ ಭೇಟಿ ನೀಡಿ ಹರಿಹರ ತಾಲೂಕಿನ ಬೆಳ್ಳೂಡಿ ಮತ್ತು ಭಾನುವಳ್ಳಿ ಹಾಗೂ ಹೊನ್ನಾಳಿ ತಾಲೂಕಿನ ಮಾದನಬಾವಿ ಬಳಿ ಮಕ್ಕೆಜೋಳ ಬೆಳೆ ಪರಿಶೀಲನೆ ನಡೆಸಿದ್ದಾರೆ. ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ ತಂಡದಿಂದ ಬರ ಪರಿಶೀಲನೆ ನಡೆದಿದ್ದು, ಸಂಸದ ಜಿ ಎಂ ಸಿದ್ದೇಶ್ವರ್ ಜಿಲ್ಲೆಯ ಬಿಜೆಪಿ ಮುಖಂಡರು ಭಾಗಿಯಾಗಿದ್ದರು. ಇನ್ನೂ ಬೆಳೆ ನಷ್ಟದ ಬಗ್ಗೆ ರೈತರಿಂದ ಮಾಹಿತಿ ಪಡೆದ ನಾಯಕರು ಒಂದೇ ದಿನದಲ್ಲಿ ಹರಿಹರ, ಹೊನ್ನಾಳಿ, ಚನ್ನಗಿರಿ, ಮಾಯಕೊಂಡ ತಾಲೂಕಿನಲ್ಲಿ ಬರ ಪರಿಶೀಲನೆ ನಡೆಸಲಿದ್ದಾರೆ.
Author: AIN Author
ಕಿಚ್ಚ ಸುದೀಪ್ ಜೊತೆ ಹೆಬ್ಬುಲಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಅಮಲಾ ಪೌಲ್ ಸದ್ದಿಲ್ಲದೇ 2ನೇ ಮದುವೆಯಾಗಿದ್ದಾರೆ (Marriage). ಹತ್ತು ದಿನಗಳ ಹಿಂದೆಯಷ್ಟೇ ಅವರಿಗೆ ಪ್ರೀತಿಸುತ್ತಿದ್ದ ಹುಡುಗ ಲವ್ ಪ್ರಪೋಸ್ ಮಾಡಿದ್ದ. ಇದಾದ ಒಂದೂವರೆ ವಾರಗಳ ಅಂತರದಲ್ಲಿ ನೆಚ್ಚಿನ ಹುಡುಗನ ಜೊತೆ ಮದುವೆ ಆಗಿದ್ದಾರೆ. ಅಮಲಾ. ನಿನ್ನೆ ಕೊಚ್ಚಿಯಲ್ಲಿ (Kochi) ಅಮಲಾ ಪೌಲ್ ಅವರ ಜಗತ್ ದೇಸಾಯಿ ಅವರ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಮಲಾ ಪೌಲ್ (Amala Paul) ವಿಭಿನ್ನವಾಗಿ ಮದುವೆಯ ಪ್ರಪೋಸಲ್ ಅನ್ನು ಸ್ವೀಕರಿಸಿದ್ದರು. ಅಮಲಾ ಅವರ ಹುಟ್ಟು ಹಬ್ಬದ ದಿನದಂದೇ ಬಾಯ್ ಫ್ರೆಂಡ್ ವಿಶೇಷವಾದ ಸನ್ನಿವೇಶವೊಂದನ್ನು ಸೃಷ್ಟಿ ಮಾಡಿ ಅಮಲಾ ಕೈಗೆ ಉಂಗುರು ತೊಡಿಸಿದ್ದರು. ದಕ್ಷಿಣ ಭಾರತದ ಖ್ಯಾತಿ ನಟಿ ಆಗಿರುವ ಅಮಲಾ ಪೌಲ್, ಸಿನಿಮಾಗಳಿಗಿಂತ ಹೆಚ್ಚು ವಿವಾದಗಳಿಂದಲೇ ಸುದ್ದಿ ಆದವರು. ಆದರೂ, ಅವರ ಡಿಮಾಂಡ್ ಕಡಿಮೆ ಆಗಿರಲಿಲ್ಲ. ಒಂದಲ್ಲ ಒಂದು ಸಿನಿಮಾಗಳಲ್ಲಿ ನಟಿಸುತ್ತಲೇ ಬಂದರು. 2014ರಲ್ಲಿ ತಮಿಳು ನಿರ್ದೇಶಕ ವಿಜಯ್ ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ, ಆ…
ಮಂಡ್ಯ :- ಮದ್ದೂರು ಪಟ್ಟಣದಲ್ಲಿ ಹಾಡುಹಗಲೇ ವೃದ್ದೆಯೊಬ್ಬರ ಸರಗಳ್ಳತನ ಮಾಡಿರುವ ಪ್ರಕರಣ ಸೋಮವಾರ ಬೆಳಿಗ್ಗೆ ನಡೆದಿದೆ. ಮದ್ದೂರು ಪಟ್ಟಣದ ಕೆನರಾ ಬ್ಯಾಂಕ್ ರಸ್ತೆಯ ಬೆಸ್ತರ ಬೀದಿಯ ಕೆಂಪಮ್ಮ (70) ಎಂಬುವ ವೃದ್ದೆಯೇ ಚಿನ್ನದ ಸರ ಕಳೆದುಕೊಂಡ ವೃದ್ದೆಯಾಗಿದ್ದಾರೆ. ಬೆಳಿಗ್ಗೆ ಮನೆ ಮುಂಭಾಗ ಕೆಂಪಮ್ಮ ಕುಳಿತಿರುವುದನ್ನು ಗಮನಿಸಿದ ಬಂದ ಇಬ್ಬರು ದುಷ್ಕರ್ಮಿಗಳು ವೃದ್ದೆ ಬಳಿ ಬಂದು ಹೊಸದಾಗಿ ಸಾಯಿಬಾಬಾ ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದೆ ನೀವು ಸ್ವಲ್ಪ ದೇವಾಲಯ ನಿರ್ಮಾಣಕ್ಕೆ ಸಹಾಯ ಮಾಡಿ ಎಂದು ಹೇಳಿದ್ದಾರೆ. ಅಜ್ಜಿ ಜೊತೆ ಮಾತನಾಡುತ್ತ ಒಬ್ಬ ಪ್ಯಾಷನ್ ಪ್ರೋ ದ್ವಿಚಕ್ರ ವಾಹನವನ್ನು ಚಾಲನೆ ಇಟ್ಟುಕೊಂಡಿದ್ದಾನೆ. ಮತ್ತೊಬ್ಬ ಮಾತನಾಡುತ್ತಿದ್ದಂತೆ ವೃದ್ದೆ ಕೆಂಪಮ್ಮರ ಕುತ್ತಿಗೆಗೆ ಕೈ ಹಾಕಿ ಅಂದಾಜು 70 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಳ್ಳುತ್ತಿದಂತೆ ವೃದ್ದೆ ಜೋರಾಗಿ ಕಿರುಚಿಕೊಂಡಿದ್ದಾರೆ. ಅಕ್ಕಪಕ್ಕದ ಮನೆಯವರು ಹಾಗೂ ಸಾರ್ವಜನಿಕರು ಸರಗಳ್ಳರನ್ನು ಹಿಡಿಯುವಷ್ಟರಲ್ಲಿ ಇಬ್ಬರು ದುಷ್ಕರ್ಮಿಗಳು ಕ್ಷಣ ಮಾತ್ರದಲ್ಲಿ ಪರಾರಿಯಾಗಿದ್ದಾರೆ. ತಕ್ಷಣವೇ ಸ್ಥಳೀಯರು ಮತ್ತು ವಾಹನ ಸವಾರರು ಸರಗಳ್ಳರನ್ನು ಬೆನ್ನಟ್ಟಿದ್ದರು ಸಹ ಮಿಂಚಿನ ವೇಗದಲ್ಲಿ…
ತುಮಕೂರು: ಮನೆಗಳಿಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ತಂತಿ ಮೇಲೆ ಹೈ ಟೆನ್ಷನ್ ವೈಯರ್ ಬಿದ್ದ ಪರಿಣಾಮ ಶಾರ್ಟ್ ಸರ್ಕ್ಯೂಟ್ ನಿಂದ 60ಕ್ಕೂ ಹೆಚ್ಚು ಮನೆಗಳ ವಿದ್ಯುತ್ ಉಪಕರಣಗಳು ಭಸ್ಮವಾಗಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಗ್ರಾಮದ ಮರಿದಾಸನಹಳ್ಳಿಯಲ್ಲಿ ನಡೆದಿದೆ. ಟಿವಿ, ಫ್ರಿಡ್ಜ್, ಫ್ಯಾನ್ ವಾಷಿಂಗ್ ಮಿಷನ್, ಸೇರಿದಂತೆ ಅನೇಕ ವಸ್ತುಗಳು ಭಸ್ಮವಾಗಿದ್ದು, ಇಂದು ಮುಂಜಾನೆ 5 ಗಂಟೆ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಮನೆಯಿಂದ ಹೊರಗೆ ಓಡಿ ಬಂದು ಜೀವ ಉಳಿಸಿಕೊಂಡ ಗ್ರಾಮಸ್ಥರು. ಮಾಹಿತಿ ತಿಳಿದ ತಕ್ಷಣವೇ ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು.
ಬೆಂಗಳೂರು: ಗಣಿ ಅಧಿಕಾರಿ ಪ್ರತಿಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರು ಚಾಲಕನನ್ನು ಬಂಧಿಸಲಾಗಿದೆ. ಪ್ರತಿಮಾ ಮೇಲಿನ ಸೇಡಿನಿಂದ ಪ್ರಾಣ ತೆಗೆದು ಕಿರಣ್ ಎಸ್ಕೇಪ್ ಆಗಿ ಇವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಅಲ್ಲದೆ ವಿಚಾರಣೆಯ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಚಾಲಕ ಕಿರಣ್ ಸರ್ಕಾರಿ ಕೆಲಸದಲ್ಲಿ ಇದ್ದೀನಿ ಅಂತಾ ಮನೆಯವರು ಮತ್ತು ಸಂಬಂಧಿಗಳಿಗೆ ಹೇಳಿಕೊಂಡಿದ್ದನು. ಪತ್ನಿಗೂ ಸರ್ಕಾರಿ ಕೆಲಸದಲ್ಲಿ ಇದ್ದೀನಿ ಅಂತ ಹೇಳಿಕೊಂಡು ಮದ್ವೆಯಾಗಿದ್ದನು. ಹದಿನೈದು ದಿನಗಳ ಹಿಂದೆ ಪ್ರತಿಮಾ ಆತನನ್ನು ಕೆಲಸದಿಂದ ತೆಗೆದಿದ್ದರು. ಕೆಲಸದಿಂದ ತೆಗೆಯುತ್ತಿದ್ದಂತೆ, ಗಂಡನನ್ನ ತೊರೆದು ಹೋಗಿದ್ದ ಕಿರಣ್ ಹೆಂಡತಿ ಹೋಗಿದ್ದಳು. 4 ವರ್ಷದಿಂದ ಕಾರು ಚಾಲಕನಾಗಿದ್ದ ಕಿರಣ್, ಬೇಜವಾಬ್ದಾರಿಯಿಂದ ಕಾರು ಓಡಿಸುತ್ತಿದ್ದನು. ಗುತ್ತಿಗೆ ಆಧಾರದಲ್ಲಿ ಚಾಲಕ ವೃತ್ತಿ ಮಾಡುತ್ತಿದ್ದ ಕಿರಣ್ ಕಳೆದ ತಿಂಗಳು ಹೊಸ ಸರ್ಕಾರಿ ಕಾರು ಅಪಘಾತ ಮಾಡಿದ್ದನು. ಅಪಘಾತದ ನಂತರ ಕಚೇರಿಯಲ್ಲೇ ಕಾರು ಬಿಟ್ಟು ತೆರಳಿದ್ದನು. ಕಿರಣ್ ನಡವಳಿಕೆಯಿಂದ ಕೋಪಗೊಂಡಿದ್ದ ಪ್ರತಿಮಾ, 10 ದಿನಗಳ ಹಿಂದೆ ಕೆಲಸದಿಂದ ತೆಗೆದು ಹಾಕಿದ್ದರು. ಈ ವೇಳೆ ಪ್ರತಿಮಾ ಕಾಲಿಗೆ ಬಿದ್ದು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಂದು ಗೃಹ ಕಚೇರಿ ಕೃಷ್ಣಾದಲ್ಲಿ ಇಂಧನ ಇಲಾಖೆಯ (Energy Department) ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ಸಭೆಯಲ್ಲಿ ಸರ್ಕಾರದ ಮೇಲೆ ಹೆಚ್ಚಿನ ಹೊರೆಯಾಗದಂತೆ ಕೃಷಿ ಪಂಪ್ ಸೆಟ್‌ಗಳಿಗೆ ಪ್ರತಿದಿನ 7 ತಾಸು ವಿದ್ಯುತ್ ನೀಡಲು ನಿರ್ಧರಿಸಲಾಗಿತು. ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇಂಧನ ಸಚಿವ ಕೆ.ಜೆ ಜಾರ್ಜ್ (K.J George), ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಮಳೆ ಅಭಾವದಿಂದ ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್ ಸಮಸ್ಯೆ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. 2022ಕ್ಕೆ ಹೋಲಿಸಿದ್ರೆ 2023 ರಲ್ಲಿ ವಿದ್ಯುತ್ (Electricity) ಬೇಡಿಕೆ ಸರಾಸರಿ ಶೇ.43 ರಷ್ಟು ಹೆಚ್ಚಿದೆ. ಅಕ್ಟೋಬರ್ ತಿಂಗಳಲ್ಲಿ 15,978 ಮೆಗಾವ್ಯಾಟ್ ಬೇಡಿಕೆ ದಾಖಲಾಗಿದೆ. ವಿದ್ಯುತ್ ಬಳಕೆಯಲ್ಲಿ ಕಳೆದ ವರ್ಷಕ್ಕಿಂತ ಶೇ. 45 ರಷ್ಟು ಹೆಚ್ಚಿದೆ. ಕೃಷಿ ಬಳಕೆಯಲ್ಲಿ ಶೇ. 55ರಿಂದ 119 ರಷ್ಟು ಹೆಚ್ಚಳವಾಗಿದೆ. ಇತರ ವಿಭಾಗಗಳಲ್ಲಿ ಶೇ.9 ರಿಂದ 14…
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ (Delhi) ಗಾಳಿ ಗುಣಮಟ್ಟ (Air Quality) ಕಳವಳಕಾರಿ ರೀತಿಯಲ್ಲಿ ಹದಗೆಟ್ಟಿದ್ದು, ಮಕ್ಕಳ ಆರೋಗ್ಯದ ದೃಷ್ಟಿಯಿಂದ ರಾಷ್ಟ್ರ ರಾಜಧಾನಿಯ ಎಲ್ಲಾ ಪ್ರಾಥಮಿಕ ಶಾಲೆಗಳನ್ನು (Primary Schools) ನವೆಂಬರ್ 10 ರವರೆಗೆ ಮುಚ್ಚುವಂತೆ ದೆಹಲಿ ಸರ್ಕಾರ ಆದೇಶಿಸಿದೆ. ಈ ಬಗ್ಗೆ ದೆಹಲಿ ಶಿಕ್ಷಣ ಸಚಿವೆ ಹಾಗೂ ಆಪ್ ನಾಯಕಿ ಅತಿಶಿ ಭಾನುವಾರ ಎಕ್ಸ್‌ನಲ್ಲಿ ಘೋಷಿಸಿದ್ದಾರೆ. https://ainlivenews.com/suprem-ray-healing-center-reiki/ 6 ರಿಂದ 12 ಗ್ರೇಡ್‌ನ ಶಾಲೆಗಳಿಗೆ ಆನ್‌ಲೈನ್ ತರಗತಿಗಳಿಗೆ ಬದಲಾಯಿಸುವ ಆಯ್ಕೆಯನ್ನು ನೀಡಲಾಗುತ್ತಿದೆ ಎಂದು ಅತಿಶಿ ತಿಳಿಸಿದ್ದಾರೆ. ಇದಕ್ಕೂ ಮೊದಲು ದೆಹಲಿ ಸರ್ಕಾರ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಶಾಲೆಗಳನ್ನು ನವೆಂಬರ್ 2 ರವರೆಗೆ ಮುಚ್ಚಲು ಆದೇಶಿಸಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ್ ಎಕ್ಸ್‌ನಲ್ಲಿ ಬರೆದಿದ್ದು, ಹದಗೆಡುತ್ತಿರುವ ಗಾಳಿಯ ಗುಣಮಟ್ಟದಿಂದಾಗಿ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ಘೋಷಿಸಿದರು
ದೊಡ್ಮನೆಯಲ್ಲಿ ನಮ್ರತಾ-ಸ್ನೇಹಿತ್, ಕಾರ್ತಿಕ್-ಸಂಗೀತಾ, ಇಶಾನಿ-ಮೈಕಲ್ ಜೋಡಿಯ ಲವ್ ಟ್ರ್ಯಾಕ್ ಶುರುವಾಗಿರೋದು ಗೊತ್ತೇ ಇದೆ. ಇದರ ನಡುವೆ ನಿಧಾನವಾಗಿ ತನಿಷಾ ಮತ್ತು ವರ್ತೂರು ಸಂತೋಷ್ ಜೋಡಿಯಾಗುವ ಲಕ್ಷಣ ಕಾಣ್ತಿದೆ. ಇದನ್ನೆಲ್ಲಾ ಗಮನಿಸಿರೋ ಸುದೀಪ್ ಕೂಡ ತನಿಷಾ (Tanisha Kuppanda) ಹೆಸರು ಹೇಳಿ ವರ್ತೂರುಗೆ ಕಾಲೆಳೆದಿದ್ದಾರೆ ಈ ಶನಿವಾರ ದೊಡ್ಮನೆ ಸ್ಪರ್ಧಿಗಳಿಗೆ ಬೆಂಡೆತ್ತಿದ ಮೇಲೆ ‘ಸೂಪರ್ ಸಂಡೇ ವಿತ್ ಸುದೀಪ್’ ಕಾರ್ಯಕ್ರಮದಲ್ಲಿ ಸಖತ್ ಆಗಿ ಕಿಚ್ಚ ಎಲ್ಲರ ಕಾಲೆಳೆದಿದ್ದಾರೆ. ಅದರಲ್ಲಿ ತನಿಷಾ- ವರ್ತೂರುಗೆ (Varthur Santhos) ತಮಾಷೆ ಮಾಡಿರೋದು ಎಲ್ಲರ ಗಮನ ಸೆಳೆದಿದೆ. ಬಿಗ್ ಬಾಸ್ ಸ್ಪರ್ಧಿಗಳು ಮೂವಿ ಮಾಡಿದ್ರೆ ಆ ಚಿತ್ರಕ್ಕೆ ಏನು ಟೈಟಲ್ ಇರುತ್ತೆ ಎಂಬುದರ ಬಗ್ಗೆ ತೋರಿಸಲಾಗಿದೆ. ಸಿರಿ, ಭಾಗ್ಯಶ್ರೀ, ತುಕಾಲಿ ಸಂತೂಗೆ `ಇಬ್ಬರ ಹೆಂಡ್ತಿರ ಮುದ್ದಿನ ಪೊಲೀಸ್ ‘ಎಂದು ಪೋಸ್ಟರ್ ರಿಲೀಸ್ ಮಾಡಿ ರೇಗಿಸಿದ್ರೆ, ಇತ್ತ ತನಿಷಾ- ವರ್ತೂರು ಲವ್ವಿ ಡವ್ವಿ ಬಗ್ಗೆ ಪೋಸ್ಟರ್ ಮೂಲಕ ಪರೋಕ್ಷವಾಗಿ ಕಿಚ್ಚ (Sudeep) ಮಾತಾನಾಡಿದ್ದಾರೆ. ಬಳಿಕ ತನಿಷಾಗೆ ಮೊದಲೇ ಬೆಂಕಿ ಎಂದು…
ಬಾಗಲಕೋಟೆ: ಸಿಎಂ ಬದಲಾವಣೆ ಬಗ್ಗೆ ‘ಕೈ’ ನಾಯಕರ ಗೊಂದಲ ಹೇಳಿಕೆ ವಿಚಾರ ‘ಅಧಿಕಾರ ಹಂಚಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಬಾಗಲಕೋಟೆ ನಗರದಲ್ಲಿ ಮಾತನಾಡಿದ ಅವರು ‘ಅವರು ನಾನೇ ಇರ್ತೀನಿ ಅಂತ ಹೇಳಿದ್ದಾರೆ, ಮ್ಯಾಟರ್ ಕ್ಲೋಜ್ ಆಗಿದೆ. ಆ ಸಂದರ್ಭ ಉದ್ಭವ ಆದಾಗ ನೋಡೋಣ ಎಂದರು. https://ainlivenews.com/suprem-ray-healing-center-reiki/ ಇನ್ನೂ ಸತೀಶ್ ಜಾರಕಿಹೊಳಿ ಅವರಿಗೆ ನಾಡಿನ ದೊರೆ ಆಗುವ ಎಲ್ಲ ಅರ್ಹತೆ ಇದೆ ಎಂದು ವಾಲ್ಮೀಕಿ ಪೀಠದ ಪ್ರಸನ್ನಾನಂದ ಶ್ರೀ ಹೇಳಿದ್ದರು. ಈ ಮಾತಿಗೆ ಪ್ರಕತಿಕ್ರಿಯಿಸಿದ ಸಚಿವರು ‘ ಹಾಗೆ ಹೇಳಿದ್ದಾರೆ, ಅದರ ಜೊತೆಗೆ ಸಮಯ ಕಾಯಬೇಕು ಅಂತಾನು ಹೇಳಿದ್ದಾರೆ. ಕಾಯಬೇಕಾಗುತ್ತದೆ, ಅದಕ್ಕೆ ಪಕ್ಷವಿದೆ, ಶಾಸಕರು ಇದ್ದಾರೆ. ಎಲ್ಲ ಕೂಡಿ ಬಂದಾಗ ಮಾತ್ರ ಅವಕಾಶ ಎಂದರು.
ಟಾಲಿವುಡ್ ನಟಿ ಸಮಂತಾ (Samantha) ಅವರು ನಾಗಚೈತನ್ಯಗೆ (Nagachaitanya) ಡಿವೋರ್ಸ್ (Divorce) ಕೊಟ್ಟು 2 ವರ್ಷ ಕಳೆದರೂ ಕೂಡ ಅವರ ವೈಯಕ್ತಿಕ ವಿಚಾರ ಇನ್ನೂ ಚಾಲ್ತಿಯಲ್ಲಿದೆ. ಮೈ ಮೇಲಿನ ಮಾಜಿ ಗಂಡನ ಹೆಸರಿನ ಟ್ಯಾಟೂ ಅಳಿಸದ ಸಮಂತಾ ಹೊಸ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದೀಗ ಸಮಂತಾ ಹೊಸ ಫೋಟೋಶೂಟ್‌ವೊಂದನ್ನ ಮಾಡಿಸಿದ್ದಾರೆ. ಗ್ಲ್ಯಾಮರಸ್ ಆಗಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. ಈ ಫೋಟೋದಲ್ಲಿ ಮಾಜಿ ಪತಿ ಚೈ ಹೆಸರಿನ ಟ್ಯಾಟೂ ಹೈಲೆಟ್ ಆಗಿದೆ. ನಟಿ ಇನ್ನೂ ಟ್ಯಾಟೂ ಅಳಿಸದೇ ಇರೋದನ್ನ ನೋಡಿ, ಈ ಜೋಡಿ ಮತ್ತೆ ಒಂದಾಗುತ್ತಾರಾ? ಇದು ಮುನ್ಸೂಚನೆ ಎಂದು ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ಹಚ್ಚೆ ಕಾಣಿಸಿದರೂ ಡೋಂಟ್ ಕೇರ್ ಎನ್ನದೇ ಫೋಟೋಗೆ ಸಮಂತಾ ಪೋಸ್ ಕೊಟ್ಟಿರೋದು ನೋಡಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇಬ್ಬರು ಮುನಿಸು ಮರೆತು ಮತ್ತೆ ಒಂದಾದ್ರೆ ಖುಷಿ ಎಂದೆಲ್ಲಾ ಫ್ಯಾನ್ಸ್ ಕಾಮೆಂಟ್ ಮಾಡ್ತಿದ್ದಾರೆ. ‘ಖುಷಿ’ ಚಿತ್ರದ ಬಳಿಕ ಸಮಂತಾ, ಕೆರಿಯರ್ ಬ್ರೇಕ್…