ಆನೇಕಲ್:- ಬೆಂಗಳೂರು ಹೊರವಲಯದ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿರುವ ಸಾಯಿ ಪ್ಯಾಕೇಜಿಂಗ್ ಕಾರ್ಖಾನೆಯಲ್ಲಿ ಅವಘಡ ಒಂದು ಸಂಭವಿಸಿದೆ. ಕೆಲಸ ಮಾಡುತ್ತಿದ್ದ ವೇಳೆ ಬಾಲ ಕಾರ್ಮಿಕನ ಬಲಗೈ ನಜ್ಜುಗುಜ್ಜಾಗಿದೆ. ಘಟನೆ ಬಳಿಕ ಕಾರ್ಖಾನೆ ಮಾಲೀಕರು ಎಸ್ಕೇಪ್ ಆಗಿದ್ದಾರೆ. https://ainlivenews.com/flag-hoisting-by-minister-k-h-muniyappa-at-devanahalli-government-ground/ ಗಂಭೀರವಾಗಿ ಗಾಯಗೊಂಡ ಬಾಲ ಕಾರ್ಮಿಕನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 17 ವರ್ಷದ ಬಾಲಕಾರ್ಮಿಕನನ್ನು ಅಸ್ಸಾಂ ಮೂಲದವ ಎನ್ನಲಾಗಿದೆ. ಕಳೆದ 18ನೇ ತಾರೀಖು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪಂಚಿಂಗ್ ಮಷಿನ್ ನಲ್ಲಿ ಕೈ ಸಿಲುಕಿದ ಹಿನ್ನೆಲೆ ಬಲಗೈ ಸಂಪೂರ್ಣ ನಜ್ಜುಗುಜ್ಜಾಗಿದೆ. ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಇನ್ನೂ ಘಟನೆ ಬಳಿಕ ಕಂಪನಿ ಮಾಲೀಕರಾದ ಹೇಮಂತ್ ಅಗರ್ವಾಲ್ ಮತ್ತು ಪ್ರೀತಿ ಎಂಬುವವರು ಕೇವಲ 30 ಸಾವಿರ ಆಸ್ಪತ್ರೆಗೆ ದಾಖಲಿಸಿ ಎಸ್ಕೇಪ್ ಆಗಿದ್ದಾರೆ. ಇನ್ನೂ ಈ ಬಾಲಕನಿಗೆ ಸರ್ಜರಿ ಮಾಡದಿದ್ದರೆ ಪೂರ್ಣ ಕೈ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ.
Author: AIN Author
ದೇವನಹಳ್ಳಿ:- 76ನೇ ಗಣರಾಜ್ಯೋತ್ಸವ ದಿನಾಚರಣೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಸರ್ಕಾರಿ ಮೈದಾನದಲ್ಲಿ ಅದ್ಧೂರಿಯಾಗಿ ನಡೆದಿದೆ. https://ainlivenews.com/bajpes-businessman-received-a-threatening-call-from-an-underworld-criminal/ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಧ್ವಜಾರೋಹಣ ಮಾಡಿಲಾಯ್ತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಸನ್ಮಾನಿಸಿ ಗೌರವಿಸಲಾಯ್ತು. ಕಾರ್ಯಕ್ರಮದಲ್ಲಿ ಪ್ರಭಾರ ಜಿಲ್ಲಾಧಿಕಾರಿಗಳಾದ ಅನುರಾಧ, ಎಸ್.ಪಿ. ಸಿ.ಕೆ.ಬಾಬಾ ಮತ್ತಿತರ ಗಣ್ಯರು ಭಾಗವಹಿಸಿದ್ರು.
ಸಾಮಾನ್ಯವಾಗಿ ಎಲ್ಲರಿಗೂ ಒಂದಲ್ಲಾ ಒಂದು ಕಾರಣದಿಂದ ಹೋಟೆಲ್ನಲ್ಲಿ ಉಳಿಯುವ ಸಂದರ್ಭ ಬಂದೇ ಬರುತ್ತದೆ. ಎಲ್ಲಾದರೂ ಟ್ರಿಪ್ಗೆ ಹೋಗುವಾಗ, ಒಂದು ದಿನ ಔಟಿಂಗ್ ಹೋಗಲು ಪ್ಲ್ಯಾನ್ ಮಾಡಿದ್ದರೆ ನೀವು ಹೋಟೆಲ್ನಲ್ಲಿ ಉಳಿದುಕೊಳ್ಳುತ್ತೀರಿ, ಹಾಗೆ ನೀವು ಹೋಟೆಲ್ಗೆ ಹೋದಾಗ ರೂಂನಲ್ಲಿ ಗಮನಿಸಬೇಕಾದ ಕೆಲವು ವಿಷಯಗಳ ಕುರಿತು ನಾವಿಲ್ಲಿ ಮಾಹಿತಿ ನೀಡುತ್ತಿದ್ದೇವೆ. https://ainlivenews.com/should-you-not-apply-aloe-vera-gel-to-your-head-in-winter-stop-the-confusion-and-know-the-answer/ ನೀವು ಹೋಟೆಲ್ಗೆ ಹೋದರೆ ಮೊದಲು ಬೆಡ್, ಬೆಡ್ಶೀಟ್ ಸರಿ ಇದೆಯೇ, ಬಾತ್ರೂಂ ನೀಟ್ ಆಗಿದೆಯೇ, ಕೋಣೆಯ ಡೋರ್ಗಳ ಬಗ್ಗೆ ಯೋಚನೆ ಮಾಡ್ತೀರಿ ಆದರೆ ಇವೆಲ್ಲವನ್ನೂ ಹೊರತುಪಡಿಸಿ ನೀವು ಸೂಕ್ಷ್ಮವಾಗಿ ಗಮನಿಸಬೇಕಾದ ಕೆಲವು ವಸ್ತುಗಳಿವೆ ಇತ್ತೀಚೆಗೆ ಲಾಡ್ಜ್, ಹೋಟೆಲ್‌ಗಳಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿರೋ ಸುದ್ದಿಯನ್ನು ನಾವೆಲ್ಲಾ ನೋಡಿರುತ್ತೇವೆ. ಈ ಬಗ್ಗೆ ಹಲವಾರು ವಿಡಿಯೋಗಳು, ಫೋಟೋಗಳು ವೈರಲ್ ಆಗಿತ್ತು. ಇದೀಗ ಇಂತಹದ್ದೇ ಬೆಚ್ಚಿಬೀಳಿಸುವ ಸುದ್ದಿಯೊಂದು ವೈರಲ್ ಆಗುತ್ತಿದೆ ನೋಡಿ. ಗಗನಸಖಿಯೊಬ್ಬರುಲಾಡ್ಜ್ ಎಸಿ ಬಗ್ಗೆ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ಗಗನಸಖಿಯೊಬ್ಬರು ಇದೀಗ ಲಾಡ್ಜ್‌ವೊಂದರ ಸೀಕ್ರೆಟ್ ಅನ್ನು ರಿವೀಲ್ ಮಾಡಿದ್ದಾರೆ. ಇದರಲ್ಲಿ ಲಾಡ್ಜ್, ಹೋಟೆಲ್‌ಗಳಿಗೆ ಹೋಗಿ ಎಸಿ ಆನ್…
ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿರತೆ ಕಾಟದಿಂದ ಜನರು ಆತಂಕಗೊಂಡಿದ್ದಾರೆ. https://ainlivenews.com/accused-arrested-for-raping-a-married-hindu-woman-and-attempting-to-convert-her-to-islam/ ಪದೇ ಪದೇ ಚಿರತೆ ಪ್ರತ್ಯಕ್ಷದಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಕಳೆದ ದಿನಗಳ ಹಿಂದೆಯಷ್ಟೇ ನಾಯಿಗಳ ಮೇಲೆ ಚಿರತೆ ದಾಳಿ ನಡೆಸಿತ್ತು.ಈಗ ಚಿರತೆಯ ಓಡಾಟ ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರು ಓಡಾಡಲು ಭಯ ಪಡುತ್ತಿದ್ದಾರೆ. ಯಲಹಂಕ ಸುತ್ತಮುತ್ತಲಿನ ಶಿವಕೋಟೆ, ಮಾವಳಿಪುರ, ಕಾಳೇನಹಳ್ಳಿ ಲಿಂಗನಹಳ್ಳಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಯಲಹಂಕ ತಾಲೂಕಿನ ಹೆಸರಘಟ್ಟ ಸುತ್ತಮುತ್ತ ಚಿರತೆಗಳ ಹಿಂಡು ವಾಸವಾಗಿದೆ ಅಂತ ಗ್ರಾಮಸ್ಥರು ಆತಂಕ ಹೊರ ಹಾಕುತ್ತಿದ್ದಾರೆ. ಕೆರೆಗಳಲ್ಲಿ ಜಾಲಿ ಮರಗಳ ಮರೆಯಲ್ಲಿ ಚರತೆಗಳು ವಾಸಿಸುತ್ತಿವೆ ಅನ್ನೋ ಶಂಕೆ ವ್ಯಕ್ತವಾಗಿದೆ. ಮುಂಜಾನೆ ವೇಳೆ ಕುರಿ ಶೆಡ್ ಹಾಗೂ ನಾಯಿಗಳ ಮೇಲೆ ಚಿರತೆ ದಾಳಿ ಮಾಡಿತ್ತಿದೆ ಅಂತ ಗ್ರಾಮಸ್ಥರು ದೂರು ಕೊಟ್ಟಿದ್ದಾರೆ. ಬೆಂಗಳೂರು ಉತ್ತರ ಯಲಹಂಕ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಆತಂಕ ಗ್ರಾಮಸ್ಥರಲ್ಲಿ ಕಾಡುತ್ತಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಹಿಂದೂ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ, ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ. https://ainlivenews.com/ipl-2025-this-is-the-next-captain-of-rcb-fans-are-surprised/ ಇಮ್ರಾನ್ ಬಂಧಿತ ಆರೋಪಿ. ವಿವಾಹಿತ ಮಹಿಳೆ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದ. ಅನ್ಯ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದ. ಆರೋಪಿಯು ಜನವರಿ 9 ರಂದು ತನ್ನೊಂದಿಗೆ ಬರಲು ಮಹಿಳೆಗೆ ಆಮಿಷವೊಡ್ಡಿದ್ದ, ಪತಿಯ ದೂರಿನ ಮೇರೆಗೆ ಪೊಲೀಸರು ಕ್ಷಿಪ್ರ ಕ್ರಮ ಕೈಗೊಂಡು ಇಮ್ರಾನ್‌ನನ್ನು ಬಂಧಿಸಿದ್ದಾರೆ. ಮಹಿಳೆಯನ್ನು ರಕ್ಷಿಸಲಾಗಿದೆ. ಸಂತ್ರಸ್ತೆಯ ಪತಿ ನೀಡಿದ ದೂರಿನ ಆಧಾರದ ಮೇಲೆ ಇಮ್ರಾನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ . ಪತಿ ತನ್ನ ದೂರಿನಲ್ಲಿ ಇಮ್ರಾನ್ ತನ್ನ ಹೆಂಡತಿಯನ್ನು ಮನೆಯಿಂದ ಹೊರಹೋಗುವಂತೆ ಆಮಿಷವೊಡ್ಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಜನವರಿ 24 ರಂದು ಸೆಕ್ಷನ್ 87 ಮತ್ತು ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಖೋಡಾ ನಿವಾಸಿಯಾಗಿರುವ ಇಮ್ರಾನ್ ತನ್ನ ಹೆಂಡತಿಗೆ ತಮ್ಮ…
ವಿಜಯನಗರ:- ದೇಶ, ರಾಜ್ಯದಲ್ಲಿ ಇಂದು 76ನೇ ಗಣರಾಜ್ಯೋತ್ಸವದ ಸಂಭ್ರಮ ಜೋರಾಗಿದೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಕೇಂದ್ರಗಳಲ್ಲಿ ಉಸ್ತುವಾರಿ ಸಚಿವರುಗಳು ಧ್ವಜಾರೋಹಣ ನೆರವೇರಿಸಿದ್ದಾರೆ. https://ainlivenews.com/ipl2025-rcb-has-a-new-worry-salt-stone-is-a-mess-uff-whats-next/ ಆದರೆ, ವಿಜಯನಗರದಲ್ಲಿರುವ ದೇಶದ 2ನೇ ಅತಿ ದೊಡ್ಡ ಧ್ವಜಸ್ತಂಭದಿಂದ ತ್ರಿವರ್ಣ ಧ್ವಜ ಕುಸಿದು ಬಿದ್ದಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಈ ಧ್ವಜವನ್ನು ಸಾಂಕೇತಿಕವಾಗಿ ಏರಿಸಿ ವೇದಿಕೆಗೆ ಬಂದು ಸಂಪ್ರದಾಯಿಕ ಧ್ವಜಾರೋಹಣ ನೆರವೇರಿಸಿದ್ದರು. ನಂತರ ಪರೇಡ್ ನಡೆಯುತ್ತಿದ್ದಾಗ ತ್ರಿವರ್ಣ ಧ್ವಜ ಕುಸಿದು ಬಿತ್ತು. ಅದೃಷ್ಟವಶಾತ್ ಆ ವೇಳೆ ಕೆಳಗೆ ಯಾರೂ ಇಲ್ಲದ ಕಾರಣ ಅನಾಹುತ ತಪ್ಪಿತು. ವಿಜಯನಗರ ಜಿಲ್ಲಾ ಕ್ರೀಡಾಂಗಣದಲ್ಲಿ ದೇಶದ ಅತೀ ಎತ್ತರದ ಎರಡನೇ ಅತಿದೊಡ್ಡ ರಾಷ್ಟ್ರಧ್ವಜ ಇದ್ದು, ಇಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಧ್ವಜಾರೋಹಣ ಮಾಡಿದ್ದಾರೆ. ಧ್ವಜಾರೋಹಣ ಮಾಡಿದ ಬಳಿಕ ರಾಷ್ಟ್ರಧ್ವಜವು ಮೇಲೆರುತ್ತಿರುವಾಗ ವೈರ್ ಗಳು ಕಟ್ ಆಗಿ ಕೆಳಗೆ ಬಿದ್ದವೆ. 408…
ಕಳೆದ 17 ಆವೃತ್ತಿಗಳಲ್ಲಿ ಐಪಿಎಲ್ ಕಪ್ ಎತ್ತಿ ಹಿಡಿಯುವಲ್ಲಿ ವಿಫಲವಾಗಿರುವ ಆರ್ಸಿಬಿ ಈ ಬಾರಿ ಹೇಗಾದರೂ ಮಾಡಿ ಕಪ್ ಜಯಿಸಬೇಕೆಂದು ಪಣ ತೊಟ್ಟಿದೆ. ಇದಕ್ಕಾಗಿ ಜೆಡ್ಡಾದಲ್ಲಿ ಇತ್ತೀಚೆಗೆ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ ಅಳೆದು ತೂಗಿ ಆಟಗಾರರನ್ನು ಖರೀದಿ ಮಾಡಿ ಬಲಿಷ್ಠ ತಂಡವನ್ನು ಕಟ್ಟಿದೆ. 8 ವಿದೇಶಿ ಆಟಗಾರರು ಸೇರಿ ಒಟ್ಟು 22 ಪ್ಲೇಯರ್ಸ್ ಆರ್ಸಿಬಿ ತಂಡದಲ್ಲಿದ್ದಾರೆ. ಆದರೆ ಹರಾಜಿನಲ್ಲಿ ಆರ್ಸಿಬಿ ಖರೀದಿಸಿದವರ ಪೈಕಿ ಮೂವರು ಸ್ಟಾರ್ ಆಟಗಾರರು ಇತ್ತೀಚಿನ ಟಿ20 ಪಂದ್ಯಗಳಲ್ಲಿ ಫ್ಲಾಪ್ ಆಗಿದ್ದು, ಆರ್ಸಿಬಿಗರ ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ. https://ainlivenews.com/pm-modis-attire-on-republic-day-drew-attention-netizens-said-wow/ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಐಪಿಎಲ್ ಸೀಸನ್-18 ಕ್ಕಾಗಿ ಬಲಿಷ್ಠ ಪಡೆಯನ್ನೇ ರೂಪಿಸಿದೆ. ಮೆಗಾ ಹರಾಜಿಗೂ ಮುನ್ನ ಮೂವರನ್ನು ಉಳಿಸಿಕೊಂಡಿದ್ದ ಆರ್ಸಿಬಿ, ಆಕ್ಷನ್ ಮೂಲಕ 19 ಆಟಗಾರರನ್ನು ಖರೀದಿಸಿದೆ. ಈ ಹತ್ತೊಂಬತ್ತು ಆಟಗಾರರಲ್ಲಿ ಇಂಗ್ಲೆಂಡ್ನ ಇಬ್ಬರು ಸ್ಪೋಟಕ ದಾಂಡಿಗರು ಕೂಡ ಇದ್ದಾರೆ. ಹೀಗಾಗಿಯೇ ಈ ಬಾರಿ ಆರ್ಸಿಬಿ ಪರ ಆಂಗ್ಲರ ಆರ್ಭಟವನ್ನು ನಿರೀಕ್ಷಿಸಲಾಗುತ್ತಿದೆ. ಆದರೆ ಐಪಿಎಲ್ ಆರಂಭಕ್ಕೂ…
ನವದೆಹಲಿ:- ನವದೆಹಲಿಯಲ್ಲಿ 76ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ವೇಳೆ ಪ್ರಧಾನಿ ಮೋದಿ ಅವರು ಧರಿಸಿದ್ದ ಉಡುಗೆ ಗಮನ ಸೆಳೆದಿದೆ. ಇಂದು 76ನೇ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ವಿಶೇಷ ಶೈಲಿಯಲ್ಲಿ ಕಾಣಿಸಿಕೊಂಡರು, ಬಿಳಿ ಬಣ್ಣದ ಕುರ್ತಾ, ಪೈಜಾ, ಕಾಫಿ ಬಣ್ಣದ ಜಾಕೆಟ್, ಹಳಸಿ, ಕೇಸರಿ ಮಿಶ್ರಿತ ಪೇಟದಲ್ಲಿ ಸುಂದರವಾಗಿ ಕಂಡರು. ವರ್ಣರಂಜಿತ ಪೇಟವನ್ನು ಧರಿಸುವ ತಮ್ಮ ಸಂಪ್ರದಾಯವನ್ನು ಮುಂದುವರೆಸಿದರು. https://ainlivenews.com/i-will-be-participating-in-shooting-again-after-30-days-shivanna/ ಈ ಹಿಂದೆ 75ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ಮೋದಿ ಬಹುವರ್ಣದ ಬಾಂಧನಿ ಪ್ರಿಂಟ್ ಪೇಟವನ್ನು ಧರಿಸಿದ್ದರು. ಬಾಂಧನಿ ಒಂದು ರೀತಿಯ ಟೈ-ಡೈ ಬಟ್ಟೆಯಾಗಿದೆ, ಇದು ಗುಜರಾತ್ ಮತ್ತು ರಾಜಸ್ಥಾನದಲ್ಲಿ ಜನಪ್ರಿಯವಾಗಿದೆ. ಬಟ್ಟೆಯನ್ನು ಕಟ್ಟಿ ಗಂಟು ಹಾಕುವ ಮೂಲಕ ಬಣ್ಣ ಹಾಕುವ ವಿಧಾನ ಇದಾಗಿದೆ. ಜಾರ್ಜೆಟ್, ಶಿಫಾನ್, ರೇಷ್ಮೆ ಮತ್ತು ಹತ್ತಿ ಬಟ್ಟೆಯನ್ನು ಕಲರ್ ಪೂಲ್‌ಗೆ ಹಾಕುವ ಮೊದಲು ದಾರದಿಂದ ಬಿಗಿಯಾಗಿ ಕಟ್ಟಲಾಗುತ್ತದೆ ಮತ್ತು ಈ ದಾರವನ್ನು ತೆರೆದಾಗ, ಕಟ್ಟಿದ ಭಾಗವು ಬಣ್ಣವಾಗುತ್ತದೆ. ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಭಾನುವಾರ…
ಬೆಂಗಳೂರು:- 30 ದಿನಗಳ ಬಳಿಕ ಮತ್ತೆ ಶೂಟಿಂಗ್ ನಲ್ಲಿ ಭಾಗಿಯಾಗುತ್ತೇನೆ ಎಂದು ಶಿವಣ್ಣ ಹೇಳಿದ್ದಾರೆ. https://ainlivenews.com/garlic-prices-are-high-would-you-be-shocked-if-you-heard-the-price-per-kg-oh-my-what-if-its-too-late/ ಯಶಸ್ವಿ ಶಸ್ತ್ರಚಿಕಿತ್ಸೆಗೊಳಗಾಗಿ ಬೆಂಗಳೂರಿಗೆ ಆಗಮಿಸಿದ ಬಳಿಕ ತಮ್ಮ ನಿವಾಸದ ಬಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದು ತಿಂಗಳ ರೆಸ್ಟ್ ಬಳಿಕ ಸಂಪೂರ್ಣ ಚಿತ್ರೀಕರಣದಲ್ಲಿ ಭಾಗಿಯಾಗುತ್ತೇನೆ ಎಂದರು. ಹೋಗಬೇಕಿದ್ದರೆ ಬಹಳ ಎಮೋಷನ್ ಆಗಿದ್ದೆ. ಏನೇ ಇದ್ದರೂ ಫೇಸ್ ಮಾಡಬೇಕಿತ್ತು. ಧೈರ್ಯವಾಗಿ ಹೋಗಬೇಕಿತ್ತು, ಹೋಗಿ ಬಂದೆ. ಹೋಗಬೇಕಿದ್ದರೆ ಸ್ವಲ್ಪ ಭಯ ಇತ್ತು. ಅಭಿಮಾನಿಗಳ ಆಶೀರ್ವಾದದಿಂದ ಹೋಗಿಬಂದೆ. ಏರ್ಪೋಟ್ ಇಳಿದು ಆಸ್ಪತ್ರೆ ಮುಂದೆ ಹೋಗಬೇಕಿದ್ದಾಗಲೇ ಧೈರ್ಯ ಬಂತು. ಆಪರೇಷನ್ ಮುಗಿದ ಮೇಲೆ ಬಂದು ಹೇಳಿದ ಮೇಲೆ ಎಲ್ಲವೂ ಆಗಿದೆ ಅಂತ ಗೊತ್ತಾಯ್ತು ಎಂದರು. ಫ್ಲೈಟ್‌ನಲ್ಲಿ 20 ಗಂಟೆಯಾಯಿತು. ಆರು ಗಂಟೆ ಕಾಲ ಸರ್ಜರಿ ನಡೆಯಿತು. ಎರಡನೇ ದಿನದಿಂದಲೇ ವಾಕ್ ಶುರು ಮಾಡಿದೆ. ಆ ಎನರ್ಜಿ ಎಲ್ಲಿಂದ ಬಂತೋ ಗೊತ್ತಿಲ್ಲ. ಅಭಿಮಾನಿಗಳಷ್ಟೇ ಅಲ್ಲ, ಇಂಡಸ್ಟ್ರಿ ಅವರು ಧೈರ್ಯ ತುಂಬಿದರು. ಗೀತನ ಬಗ್ಗೆ ಮಾತಾಡಲ್ಲ. ಗೀತಾ ಹೆಂಡತಿನೂ ಹೌದು, ತಾಯಿನೂ…
ಬೆಂಗಳೂರು, ಜನವರಿ 26: ಜನರಿಗೆ ಖಾಸಗಿ ಹಣಕಾಸು ಸಂಸ್ಥೆಗಳ ಕಿರುಕುಳ ಹೆಚ್ಚುತ್ತಿದ್ದು, ಜನರು ಅಂತಹವರ ವಿರುದ್ಧ ದೂರು ನೀಡಿದ್ದಲ್ಲಿ ತಕ್ಷಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. https://ainlivenews.com/without-the-constitution-our-democracy-would-not-exist-dk/ ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡಿದರು. ಜನರಿಗೆ ಖಾಸಗಿ ಹಣಕಾಸು ಸಂಸ್ಥೆಗಳ ಕಿರುಕುಳ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಮೈಕ್ರೋಫೈನಾನ್ಸ್ ಸಂಸ್ಥೆ ಅಥವಾ ಲೇವಾದೇವಿಗಾರರ ನೀಡು ತೊಂದರೆಗಳ ವಿರುದ್ಧ ದೂರು ನೀಡಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿವನ್ನು ತೆರೆಯಲಾಗಿದೆ ಎಂದರು.