Author: AIN Author

ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿರುವ ಲೀಲಾವತಿ ಅವರ ಅಂತಿಮ ದರ್ಶನವನ್ನು ನಟ ಉಪೇಂದ್ರ ಪಡೆದಿದ್ದಾರೆ. ಇದೇ ವೇಳೆ ಮಾತನಾಡಿದ ಉಪ್ಪಿ, ದೇವರು ಕೆಲವು ಕೆಲಸ ಮಾಡಲು ಜನರನ್ನು ಸೃಷ್ಣಿಸುತ್ತಾರಂತೆ. ಲೀಲಾವತಿ ಅಮ್ಮನವರ ದರ್ಶನಕ್ಕೆ ಬಂದ ಜನರನ್ನ ನೋಡಿದರೆ ಇವರ ಶಕ್ತಿ ಗೊತ್ತಾಗುತ್ತೆ. ಅಮ್ಮನವರ ಆತ್ಮಕ್ಕೆ ಶಾಂತಿ ಸಿಗಲಿ. ಸಾರ್ವಜನಿಕರು ಅನುಕೂಲವಾಗುವಂತೆ ಹಾಸ್ಪಿಟಲ್ ಅನ್ನು ಮಾಡಲಾಗಿದೆ. ವಿನೋದ್ ಹೇಳಿದರು ಅವರಿಗೆ ತುಂಬಾ ಕನಸುಗಳು ಇದ್ದವು. ಅವರ ಕನಸುಗಳನ್ನು ನಾನು ಈಡೇರಿಸುತ್ತೇನೆ. ಎಲ್ಲ ಮೇಲಿರುವ ಆಟ ಎಂದು ಹೇಳಿದ್ದಾರೆ

Read More

ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ನಟಿಸಿದ್ದ ಹಿರಿಯ ನಟಿ ಲೀಲಾವತಿ ನಿನ್ನೆ ಸಂಜೆ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಹಿರಿಯ ನಟಿ ಲೀಲಾವತಿ ಅಂತಿಮ ದರ್ಶನಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಅಂತಿಮ ದರ್ಶನಕ್ಕೆ ಇಲ್ಲೇ ಅವಕಾಶ ಮಾಡಿರುವ ಹಿನ್ನಲೆ ಸಾಕಷ್ಟು ಗಣ್ಯರು, ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆ ಕಲಾಕ್ಷೇತ್ರ ಸುತ್ತಮುತ್ತ ಬ್ಯಾರಿಕೇಡ್ ಹಾಕಿ ವ್ಯವಸ್ಥೆ ಮಾಡಿರುವ ಪೊಲೀಸ್ ಸಿಬ್ಬಂದಿ. ಗಣ್ಯರಿಗಾಗಿ ಪ್ರತ್ಯೇಕ ವಿಐಪಿ ಗೇಟ್ ವ್ಯವಸ್ಥೆ ಮಾಡಲಾಗಿದೆ ಎಂಟ್ರಿ & ಎಕ್ಸಿಟ್ ಗೇಟ್ ಗಳಿಗೆ ಬ್ಯಾರಿಕೇಡ್ ಹಾಕಲಾಗಿದೆ. ಬೆಳಗ್ಗೆ 11 ಗಂಟೆಗೆ ರವೀಂದ್ರ ಕಲಾಕ್ಷೇತ್ರ ಆವರಣಕ್ಕೆ ಬರಲಿರುವ ಲೀಲಾವತಿ ಪಾರ್ಥಿವ ಶರೀರ. ಮಧ್ಯಾಹ್ನ 2:30 ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ. 2:30 ರ ಬಳಿಕ ಸೋಲದೇವನಹಳ್ಳಿಗೆ ತೆರಳಲಿರುವ ಪಾರ್ಥಿವ, ಹಿಂದು ಸಂಪ್ರಾದಯದಂತೆ ಅಂತ್ಯಕ್ರಿಯೆ ನೆರವೇರಿಸಲಿರುವ ಕುಟುಂಬಸ್ಥರು. ಹಿರಿಯ ನಟಿ ಲೀಲಾವತಿ ನಿಧನರಾಗಿರುವ ಹಿನ್ನೆಲೆ…

Read More

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ಶುಕ್ರವಾರ ಅಪಾರ ಅಭಿಮಾನಗಳನ್ನು ಅಗಲಿದಿದ್ದಾರೆ. ಹೀಗಾಗಿ ಲೀಲಾವತಿ ಅಂತಿಮ ದರ್ಶನಕ್ಕೆ ಸೊಸೆ ಮೊಮ್ಮಗನ ಆಗಮಿಸಿದ್ದಾರೆ. ಅಜ್ಜಿ ಲೀಲಾವತಿ ನೋಡಿ ಮೊಮ್ಮಗ ಮೌನಕ್ಕೆ ಶರಣಾಗಿದ್ದಾರೆ. ಪಾರ್ಥಿವ ಶರೀರದ ಎದುರು ಯುವರಾಜ್ ಕುಳಿತಿದ್ದಾರೆ. ಮೊಮ್ಮಗ ಯುವರಾಜ್ ಅಂದ್ರೆ ಲೀಲಾವತಿಗೆ ಪ್ರಾಣ. ಮೊನ್ನೆಯಷ್ಟೇ ಅಜ್ಜಿ ನೋಡಲು ಬಂದಿದ್ದರು. ಅಜ್ಜಿ ಅಂತ ಕರೆದಾಗ ಲೀಲಾವತಿ ಕಣ್ಣು ಬಿಟ್ಟಿದ್ರಂತೆ. ಇದೀಗ ಅಜ್ಜಿ ಇಲ್ಲದೇ ಮೊಮ್ಮಗ ಮೌನಕ್ಕೆ ಶರಣಾಗಿದ್ದಾರೆ.

Read More

ಬೆಂಗಳೂರು:- ಬಿಜೆಪಿ ಶಾಸಕರ ವಿರುದ್ಧ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಗುಡುಗಿದ್ದಾರೆ. ಈ ಬಾರಿ ಬಿಜೆಪಿ ಶಾಸಕರಿಗೆ ಸವಾಲು ಎಸೆದು, ವಾಟ್ಸಪ್ ನಲ್ಲಿ ಆಡಿಯೋ ಸ್ಟೇಟಸ್ ಹಾಕಿದ್ದಾರೆ. ಕಳೆದ ಬಾರಿ ಹೆಡೆಗೇವಾರ್ ಮ್ಯೂಜಿಮ್ ನಲ್ಲಿ ನನಗೆ ಜಾತಿ ಕೇಳಿ ಒಳಗಡೆ ಬೀಡಲಿಲ್ಲ ಎಂದು ಗೂಳಿಹಟ್ಟಿ ಶೇಖರ್ ಹೇಳಿದ್ದರು. ಅದಕ್ಕೆ ವಿಪಕ್ಷ ನಾಯಕ ಆರ್.ಅಶೋಕ್,ಮಾಜಿ ಶಾಸಕ ಪಿ.ರಾಜೀವ್,ಮಾಜಿ ಸಚಿವ ಅರವಿಂದ್ ಲಿಂಬಾವಳಿ ಹಾಗೂ ಶಾಸಕ ಸುರೇಶ್ ಕುಮಾರ್ ಬೈದು ಬುದ್ದಿ ಹೇಳಿದ್ರು. ಮತ್ತೆ ವಾಯ್ಸ್ SmS ಸ್ಟೇಟಸ್ ಹಾಕುವ ಮೂಲಕ ಬಿಜೆಪಿ ನಾಯಕರ ಮೇಲೆ ಕಿಡಿಕಾರಿದ್ದಾರೆ. ಮ್ಯೂಸಿಯಂ ಸಿಸಿಟಿವಿ ಪುಟೇಜ್ ಬಿಡುಗಡೆ ಮಾಡುವಂತೆ ಗೂಳಿಹಟ್ಟಿ ಶೇಖರ್ ಸವಾಲ್ ಹಾಕಿದ್ದಾರೆ. ನಾನೂ ಒಡ್ಡ, ನಾನೂ ಕುಡಿಯುತ್ತೇನೆ. ಹಾಗಂತ ಸುಳ್ಳು ಹೇಳುವುದಿಲ್ಲ.. ನನ್ನ ಸುಳ್ಳು ಅಥವಾ ಸತ್ಯ ಎಂಬುದನ್ನು ಸಾಬೀತುಪಡಿಸಲು ಒಂದೇ ಒಂದು ಪ್ರಶ್ನೆ ಎಂದಿದ್ದಾರೆ. ಹೆಡಗೇವಾರ್ ‌ಮ್ಯೂಜಿಯಂ ನಲ್ಲಿರುವ ಸಿಸಿಟಿವಿ ವಿಡಿಯೋ ತರಿಸಿ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದ್ದಾರೆ. ನನ್ನನ್ನು ಒಳಗಡೆ ಬಿಡದಿರುವ…

Read More

ಚಾಮರಾಜನಗರ:- ಕರಡಿ ದಾಳಿಯಿಂದ ಭಾರೀ ಅನಾಹುತವೊಂದು ತಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅಜ್ಜಿಪುರ ಗ್ರಾಮದಲ್ಲಿ ಜರುಗಿದೆ. ಹನೂರು ತಾಲೂಕಿನ ಅಜ್ಜೀಪುರ ಗ್ರಾಮದ ಶಿವಶಕ್ತಿ ಬಾರ್ ಪಕ್ಕದಲ್ಲಿ ಅಂಗಡಿ ಮೇಲೆ ತಡ ರಾತ್ರಿ ಕರಡಿ ದಾಳಿ ಮಾಡಿದೆ. ಮನದೇಗೌಡ ಬಿನ್ ಬಚ್ಚೇಗೌಡರ ಅಂಗಡಿ ಮೇಲೆ ಕರಡಿ ದಾಳಿ ಮಾಡಿದ್ದು, ಅಂಗಡಿಯಲ್ಲಿದ್ದ ದಾಸ್ತಾನುಗಳನ್ನು ಕರಡಿ ನಾಶ ಪಡಿಸಿದೆ. ಅದೃಷ್ಟವಶಾತ್ ಯಾರೂ ಇಲ್ಲದ ಕಾರಣ ಅನಾಹುತ ತಪ್ಪಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂಧಿಗಳು ಭೇಟಿ ಪರಿಶೀಲನೆ ಮಾಡಿದ್ದಾರೆ.

Read More

ಚಾಮರಾಜನಗರ:- ತಾಲೂಕಿನ ಕೊತ್ತಲವಾಡಿ ಸಮೀಪದ ಮೇಲೂರು ಗ್ರಾಮದ ಕರಿಕಲ್ಲು ಕ್ವಾರಿ ಬಳಿಯ ಪಾಳು ಬಿದ್ದಿರುವ ಜಮೀನಿನಲ್ಲಿ ಗುರುವಾರ ಸಂಜೆ ಎರಡು ಹುಲಿಗಳ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮೇಲೂರು-ತೆರಕಣಾಂಬಿ ಗ್ರಾಮಗಳ ಗಡಿಭಾಗದಲ್ಲಿರುವ ಮೇಲೂರು ಗ್ರಾಮದ ಸ.ನಂ ೧೦೭ರ ಪಾಳು ಬಿದ್ದಿರುವ ಜಮೀನಿನ ಎರಡು ಕಡೆ ಒಂದು ವಯಸ್ಕ ಹಾಗೂ ಮರಿ ಹುಲಿಗಳ ಕಳೇಬರ ಪತ್ತೆಯಾಗಿದ್ದು ಕಳೆದ ೨೦ ದಿನಗಳ ಹಿಂದೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಶುಕ್ರವಾರ ಮಧ್ಯಾಹ್ನದ ವೇಳೆಗೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಬನ್ನೇರುಘಟ್ಟ ಜೈವಿಕ ಉದ್ಯಾನ ಸಲಹೆಗಾರ ಡಾ.‌ಮಂಜುನಾಥ್ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕಳೇಬರವನ್ನು ಸ್ಥಳದಲ್ಲಿಯೇ ಅರಣ್ಯ ಇಲಾಖೆಯ ನಿಯಮದಂತೆ ಸುಡಲಾಯಿತು. ಗುರುವಾರ ಜಾನುವಾರುಗಳನ್ನು ಮೇಯಿಸುವ ವೇಳೆಯಲ್ಲಿ ಪೊದೆಯ ಕಡೆಯಿಂದ ವಾಸನೆ ಬರುತ್ತಿದ್ದು ಹೋಗಿ ನೋಡಿದಾಗ ಹುಲಿಗಳು ಕೊಳೆತ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು ಸ್ಥಳಕ್ಕೆ ಚಾಮರಾಜನಗರ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಚಾಮರಾಜನಗರ ಪ್ರಾದೇಶಿಕ ವಲಯದ ವಲಯ…

Read More

ಚಾಮರಾಜನಗರ :- ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯ ವ್ಯಾಪ್ತಿಯ ನಾಗಣಾಪುರ ಬ್ಲಾಕ್-02 ಗಸ್ತಿನಲ್ಲಿ ಆನೆ ಮೃತ ದೇಹ ಪತ್ತೆಯಾಗಿದೆ. ಹುಣಸೆತಾಳ ಕಂಡಿ ಅರಣ್ಯ ಪ್ರದೇಶದಲ್ಲಿ ಗಂಡಾನೆಯ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸತ್ತ ಆನೆಗೆ 40 ರಿಂದ 45 ವರ್ಷವಯಸ್ಸಾಗಿದೆ ಎನ್ನಲಾಗಿದೆ. ಸ್ವಾಭಾವಿಕವಾಗಿ ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ದೃಢಪಡಿಸಿದೆ. ಸ್ಥಳಕ್ಕೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌ಕುಮಾರ್, ಗುಂಡ್ಲುಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ, ಓಂಕಾರ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್ ಕುಮಾರ್, ಉಪ ವಲಯ ಅರಣ್ಯಾಧಿಕಾರಿ ಅಮರ್‌ ಕೆ.ಪಿ, ಭೇಟಿ‌ ನೀಡಿ ಕ್ರಮಕೈಗೊಂಡಿದ್ದಾರೆ.

Read More

ಬೆಂಗಳೂರು:- ಬೆಂಗಳೂರಿನಲ್ಲಿ ಇಂದು (ಡಿ.09) ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ದಕ್ಷಿಣ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗಲಿದೆ. ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡಿ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಇನ್ನು ಉಳಿದಂತೆ ಬಾಗಲಕೋಟೆ, ಬೀದರ, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಒಣಹವೆ ಬೀಸಲಿದೆ ಎನ್ನಲಾಗಿದೆ.

Read More

ಬಿಗ್ ಬಾಸ್ ಮನೆಯಿಂದ ಸಂಗೀತಾ-ಪ್ರತಾಪ್ ಹೊರ ಬಂದಿದ್ದಾರೆ ಎಂದು ಹೇಳಲಾಗಿದೆ. ಆಟದಿಂದ ಪ್ರತಾಪ್ ಹಾಗೂ ಸಂಗೀತಾಗೆ ಹಾನಿಯಾಗಿದ್ದು ಚಿಕಿತ್ಸೆಗೆಂದು ಅವರನ್ನು ಮನೆಯಿಂದ ಹೊರಗೆ ಕಳಿಸಲಾಗಿದೆ. ಗಂಧರ್ವರು-ರಾಕ್ಷಸರು ಟಾಸ್ಕ್​ನಲ್ಲಿ ಎರಡೂ ತಂಡಗಳ ಸ್ಪರ್ಧಿಗಳ ವರ್ತನೆ ಮಿತಿ ಮೀರಿದೆ. ಚೇರ್ ಆಫ್ ಥಾನ್ಸ್’ ಆಟದಲ್ಲಿ ಮೊದಲಿಗೆ ಸಂಗೀತ ಮತ್ತು ತಂಡ ವರ್ತೂರು ಸಂತೋಷ್​ರ ತಂಡದ ಮೇಲೆ ನೀರು ಎರಚಿ ಅವರನ್ನು ಕುರ್ಚಿಯಿಂದ ಏಳಿಸುವ ಪ್ರಯತ್ನ ಮಾಡಿದ್ದರು. ಆಟದಲ್ಲಿ ವರ್ತೂರು ಸಂತೋಷ್ ಮೇಲೆದ್ದಿದ್ದರು, ಪವಿ ಚೆನ್ನಾಗಿ ಆಡಿದ್ದರಿಂದ ವರ್ತೂರು ಸಂತೋಷ್​ರ ತಂಡ ಮುನ್ನಡೆ ಪಡೆದುಕೊಂಡಿತ್ತು. ಅದೇ ಟಾಸ್ಕ್​ ಅನ್ನು ಮತ್ತೊಮ್ಮೆ ಆಡಿಸಿ, ಸಂಗೀತಾ ತಂಡವನ್ನು ಕುರ್ಚಿಯಲ್ಲಿ ಕೂರಿಸಲಾಗಿತ್ತು. ಅವರಿಗೆ ನೀರು ಎರಚಿ ಏಳಿಸುವ ಕಾರ್ಯ ವರ್ತೂರು ಸಂತೋಷ್ ತಂಡದ್ದಾಗಿತ್ತು. ತಂಡದ ವಿನಯ್, ಮೈಖಲ್, ನಮ್ರತಾ ಹಾಗೂ ಸ್ವತಃ ವರ್ತೂರು ಸಂತೋಷ್​ ಅವರುಗಳು ತುಸು ಹೆಚ್ಚೇ ಬಲ ಪ್ರದರ್ಶಿಸಿ ಆಡಿದರು. ನೀರಿಗೆ ವಿಪರೀತ ಸೋಪು ಬೆರೆಸಿ, ಕುರ್ಚಿಯ ಮೇಲೆ ಮೂತಿದ್ದ ಸಿರಿ, ಪ್ರತಾಪ್, ಕಾರ್ತಿಕ್ ಹಾಗೂ ಸಂಗೀತಾ…

Read More

ವಯೋಸಹಜ ಕಾಯಿಲೆಯಿಂದ ಹಿರಿಯ ನಟಿ ಲೀಲಾವತಿ ಅವರು ಶುಕ್ರವಾರ ( ಡಿಸೆಂಬರ್ 8) ವಿಧಿವಶರಾಗಿದ್ದಾರೆ. ತಾಯಿಯನ್ನು ಕಳೆದುಕೊಂಡು ವಿನೋದ್ ರಾಜ್ ಅವರು ತೀವ್ರ ದುಃಖಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಪ್ರಸ್ತುತ ಪೀಳಿಗೆಗೆ ಕಿವಿಮಾತು ಹೇಳಿದ್ದಾರೆ. ತಾಯಿಯನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳಿ. ಅಮ್ಮನಿಲ್ಲದೆ ನಾವಿಲ್ಲ, ನಾವು ಎತ್ತರಕ್ಕೆ ಬೆಳೆದಾಗ ನಿನ್ನಿಲ್ಲದೆ ನಾನಿಲ್ಲ ಅಂತ ಯಾಕೆ ಹೇಳೋಕೆ ಆಗಲ್ಲ. ತಾಯಿಯನ್ನ ಬಿಟ್ಟೋರು ಏಳಿಗೆ ಕಾಣಲ್ಲ, ಯಾವ ಸಮಾಜವೂ ಹತ್ರ ಸೇರಿಸಲ್ಲ. ಒಬ್ಬ ತಾಯಿ ಮಗುವನ್ನ ನೋಡಿಕೊಳ್ಳುತ್ತಾಳೆ. ನಂತರ ಅದೇ ಮಗು ತಾಯಿಯನ್ನ ನೋಡ್ಕೋಬೇಕು. ಯಾರು ತಾಯಿಯನ್ನ ಕೇವಲವಾಗಿ ನೋಡಬೇಡಿ. ಯಾರು ತಾಯಿಯನ್ನ ಆಶ್ರಮಗಳಿಗೆ ಸೇರಿಸಬೇಡಿ. ತಾಯಿಯೇ ದೇವರು, ತಾಯಿ ಬಿಟ್ರೆ ಜಗದಲ್ಲಿ ಏನಿಲ್ಲ ಎಂದು ವಿನೋದ್ ರಾಜ್ ಲೀಲಾವತಿ ನೆನಪಿನಲ್ಲಿ ಭಾವುಕ ಸಂದೇಶ ರವಾನಿಸಿದ್ದಾರೆ.

Read More