Author: AIN Author

ಬೆಂಗಳೂರು :- ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹಿರಿಯ ನಟಿ ಲೀಲಾವತಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ನಮ್ ರಾಜ್ಯಕ್ಕೆ ತುಂಬಾ ನೋವಾಗಿದೆ. 600 ಚಿತ್ರಗಳಲ್ಲಿ ಮಹಾತಾಯಿ ಲೀಲಾವತಿ ನಟಿಸಿದ್ದಾರೆ. ನಾನು 40 ವರ್ಷದಿಂದ ನೋಡಿದ್ದೀನಿ. ಥಿಯೇಟರ್ ಬಗ್ಗೆ ಚರ್ಚೆ ಮಾಡ್ತಿದ್ವಿ. ಕೊನೆ ಭೇಟಿಯಲ್ಲಿ ನನ್ ಮನೆಗೆ ಬಂದಿದ್ರು. ಪಶುವೈದ್ಯಶಾಲೆ ಕಟ್ಟಿ ನನ್ನನ್ನ ಕರೆದ್ರು. ಅದೃಷ್ಟ ಬದಲಾಗುತ್ತೆ, ನಿರ್ಧಾರ ಅಲ್ಲ..! ಅವರು ನನ್ನನ್ನ ಕರೆದ್ದಿದ್ದೆ ನನ್ ಅದೃಷ್ಟ. ಪಶುವೈದ್ಯಶಾಲೆ ಉದ್ಘಾಟನೆ ನನ್ ಭಾಗ್ಯ. ಅವರೇ ವ್ಯವಸಾಯ ಮಾಡ್ತಿದ್ರು. ಮನೆ ನಾಯಿ ಊಟ ಮಾಡಿಲ್ಲ ಅಂತ ಕೇಳಿ ಬೇಜಾರಾಯ್ತು. ಅವರ ಆದರ್ಶಗಳನ್ನ ನಾವು ಅನುಸರಿಸ್ಬೇಕು. ಸ್ಮಾರಕ ಬಗ್ಗೆ ನಾನು,ಸಿಎಂ ಚರ್ಚೆ ಮಾಡ್ತೀವಿ ಎಂದು ಹೇಳಿದ್ದಾರೆ.

Read More

ಅಂಬೇಡ್ಕರ್​​ ಮೈದಾನದಿಂದ ‌ಲೀಲಾವತಿ ಅವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ನಾಲ್ಕುವರೆ ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಮಿಂಚಿದ್ದ ಹಿರಿಯ ನಟಿ ಲೀಲಾವತಿ ಅವರು ಬರೋಬ್ಬರಿ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಅಮೋಘ ಅಭಿನಯಕ್ಕೆ ಅಪಾರ ಸಂಖ್ಯೆಯ ಸಿನಿಪ್ರೇಮಿಗಳು ಮನಸೋತಿದ್ದರು. ಆದ್ರೆ ಕೆಲ ದಿನಗಳಿಂದ ತೀವ್ರ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಮನೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿತ್ತು. ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಲೀಲಾವತಿ ಅವ ನಿವಾಸಕ್ಕೆ ಆಗಮಿಸಿ, ಆರೋಗ್ಯ ವಿಚಾರಿಸಿದ್ದರು. ಆದ್ರೆ ಶುಕ್ರವಾರ ಸಂಜೆ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ರವೀಂದ್ರ ಕಲಾಕ್ಷೇತ್ರಕ್ಕೂ ಮುನ್ನ ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ನಟಿ ಪಾರ್ಥೀವ ಶರೀರ ಇರಿಸಲಾಗಿತ್ತು. ಮುಂಜಾನೆ 5:30 ರಿಂದ 10:30ರ ವರೆಗೂ ಸಾರ್ವಜನಿಕರು ಆಗಮಿಸಿ ನಟಿಯ ಅಂತಿಮ ದರ್ಶನ ಪಡೆದರು. ಬಳಿಕ ಅಲ್ಲಿಂದ ರವೀಂದ್ರ ಕಲಾಕ್ಷೇತ್ರಕ್ಕೆ ಪಾರ್ಥೀವ ಶರೀರವನ್ನು ತರಲಾಯಿತು. ರವೀಂದ್ರ ಕಲಾಕ್ಷೇತ್ರದ ಬಯಲು ರಂಗಮಂದಿರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು,…

Read More

ಧಾರವಾಡ :- ಪೊಲೀಸ್ ಠಾಣೆಯ ಕೂಗಳತೆ ದೂರಲ್ಲಿಯೇ ಪುಡಾರಿಗಳು ಬಡಿದಾಡಿಕೊಂಡ ಜರುಗಿದೆ. ಧಾರವಾಡ ಸಿಬಿಟಿ ನಿಲ್ದಾಣದ ಬಳಿ ತಡ ರಾತ್ರಿ ನಡೆದ ಘಟನೆಯಲ್ಲಿ ಎರಡು ಗುಂಪುಗಳ ನಡುವೆ ಫೈಟ್ ನಡೆದಿದೆ. ಘಟನೆ ನಡೆದ ಸ್ಥಳದಿಂದ 350 ಮೀಟರ್ ಅಂತರದಲ್ಲಿ ಶಹರ ಪೊಲೀಸ್ ಠಾಣೆ ಇದ್ದು, ಪುಡಾರಿಗಳ ಬಡಿದಾಟ ನೋಡಿ ಸ್ಥಳೀಯ ವ್ಯಾಪಾರಸ್ಥರು ಬೆಚ್ಚಿ ಬಿದ್ದಿದ್ದಾರೆ. ಹಿರಿಯ ನಾಗರಿಕರು ಜಗಳ ಬೀಡಿಸಲು ಹೋದರು ಪುಡಾರಿಗಳು ಕ್ಯಾರೆ ಎನ್ನುತ್ತಿಲ್ಲ. ಬಡಿದಾಟದ ದೃಶ್ಯ ಸ್ಥಳೀಯರ ಮೊಬೈಲ ಕ್ಯಾಮೆರದಲ್ಲಿ ಸೆರೆಯಾಗಿದೆ. ಪೊಲೀಸ್ ಠಾಣೆ ಹತ್ತಿರದಲ್ಲೇ ಇದ್ದರು ಯುವಕರು ಭಯವಿಲ್ಲದೆ ಬಡಿದಾಡಿದ್ದಾರೆ. ಯಾವುದೇ ಪ್ರಾಣ ಹಾನಿ ವರದಿಯಾಗಿಲ್ಲ.ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯವಾಗಿರುವ ಶಂಕೆ ವ್ಯಕ್ತವಾಗಿದೆ. ಧಾರವಾಡ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಜರುಗಿದೆ. ಬಡಿದಾಡಿಕೊಂಡ ಪುಡಾರಿಗಳು ಯಾರು ಎಂಬುವುದ ಪೊಲೀಸರ ತನಿಖೆ ಬಳಿಕ ತಿಳಿಬೇಕಾಗಿದೆ.

Read More

ವಿಜಯಪುರ:- ಚಾಲಕನ ನಿಯಂತ್ರಣ ತಪ್ಪಿ ಆಂಬ್ಯುಲೆನ್ಸ್ ಪಲ್ಟಿ ಹೊಡೆದಿದ್ದು, ಡ್ರೈವರಿಗೆ & ಸಿಬ್ಬಂದಿಗೆ ಗಾಯವಾಗಿದೆ. ವಿಜಯಪೂರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ ರಸ್ತೆಯ ಮಧ್ಯೆ ಘಟನೆ ಜರುಗಿದೆ. ಆಂಬ್ಯುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ. ಗರ್ಭಿಣಿಯನ್ನು ತಾಳಿಕೋಟಿಯಿಂದ ವಿಜಯಪುರಕ್ಕೆ ಕರೆದು ಕೊಂಡು ಬರುವ ವೇಳೆ ಅಪಘಾತ ಸಂಭವಿಸಿದೆ. ಗರ್ಭಿಣಿಗೆ ಯಾವುದೇ ತೊಂದರೆ ಆಗಿಲ್ಲ. ಆಂಬ್ಯುಲೆನ್ಸ್ ಡ್ರೈವರ್‌ & ಸಿಬ್ಬಂದಿಗೆ ಸಣ್ಣಪುಟ್ಟ ಗಾಯವಾಗಿದೆ. ಜಿಲ್ಲಾಸ್ಪತ್ರೆಗೆ ಗಾಯಾಳುಗಳು ದಾಖಲಾಗಿದೆ. ಬಸವನಬಾಗೇವಾಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Read More

ಕನ್ನಡ ಹಿರಿಯ ನಟಿ ಲೀಲಾವತಿಯವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಶುಕ್ರವಾರ ನಿಧನರಾಗಿದ್ದಾರೆ. ಅವರ ಅಂತ್ಯಕಗ್ರಿಯೆ ಇಂದು, ಡಿಸೆಂಬರ್-9 ರಂದು ಸೋಲದೇವನಹಳ್ಳಿ ತೋಟದ ಮನೆಯಲ್ಲಿಯೇ ನಡೆಯಲಿದೆ. ಇನ್ನೂ ಲೀಲಾವತಿ ನಿಧನ ಹಿನ್ನೆಲೆ, ಲೀಲಾವತಿ ನೆನೆದು ಶ್ವಾನ‌ ಕಣ್ಣೀರು ಹಾಕಿದೆ. ಬ್ಲಾಕಿ ಹೆಸರಿನ ನಾಯಿ ಲೀಲಾವತಿ ಫೋಟೋ ಮುಂದೆ ಕಣೀರು ಹಾಕಿರುವುದು ಮನಕಲುಕುವಂತಿದೆ. ಇನ್ನು ನಟಿ ಲೀಲಾವತಿಯ ಅಂತ್ಯಕ್ರಿಯೆ ಬಗ್ಗೆ ಮಗ ವಿನೋದ್ ರಾಜ್ ಮಾಹಿತಿ ನೀಡಿದ್ದು, ಈ ವೇಳೆ ತಾಯಿಯನ್ನು ನೆನೆದು ಭಾವುಕರಾಗಿದ್ದಾರೆ. ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ವಿನೋದ್ ರಾಜ್ ಅಂಬೇಡ್ಕರ್ ಮೈದಾನದಕ್ಕೆ ಪಾರ್ಥೀವ ಶರೀರ ಕೊಂಡೊಯ್ಯಲಾಗುತ್ತದೆ. ನಂತ್ರ ಅಲ್ಲಿಂದ 11 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಇರಿಸಲಾಗುತ್ತೆ. ತೋಟದ ಮನೆಯಲ್ಲಿ ಕಾರ್ಯ ನಡೆಸಲಾಗುತ್ತೆ ಎಂದಿದ್ದಾರೆ.

Read More

ಕಲಬುರ್ಗಿ:- ಪಿಎಸ್​ಐ ಹಗರಣಕ್ಕೆ ಆರ್‌.ಡಿ. ಪಾಟೀಲ್ ವಿರುದ್ಧದ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು ಮಾಡಲಾಗಿದೆ. ಕಲಬುರಗಿ ಹೈಕೋರ್ಟ್ ಪೀಠ ಕಿಂಗ್‌ಪಿನ್ ಆರ್‌.ಡಿ. ಪಾಟೀಲ್ (RD Patil) ವಿರುದ್ಧ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದೆ. ರಾಜ್ಯದೆಲ್ಲೆಡೆ ತನ್ನ ವಿರುದ್ಧ ದಾಖಲಾದ ಪ್ರಕರಣಗಳನ್ನ ವೀಲಿನಗೊಳಿಸಿ ಒಂದೇ ಕಡೆ ವಿಚಾರಣೆ ನಡೆಸಲು ಆರ್‌.ಡಿ. ಪಾಟೀಲ್ ಮನವಿ ಮಾಡಿದ್ದರು. ಅಲ್ಲಿವರೆಗೆ ತನ್ನ ವಿರುದ್ಧ ದಾಖಲಾದ ಪ್ರಕರಣಗಳ ತನಿಖೆಗೆ ತಡೆಯಾಜ್ಞೆ ಪಡೆದಿದ್ದರು. ಇದೀಗ ಆರ್‌.ಡಿ. ಪಾಟೀಲ್‌ಗೆ ನೀಡಲಾಗಿದ್ದ ತಡೆಯಾಜ್ಞೆಯನ್ನ ಹೈಕೋರ್ಟ್ ತೆರವುಗೊಳಿಸಿದೆ. ಎಲ್ಲಾ ಎಫ್‌ಐಆರ್‌ಗಳಿಗೆ ದಾಖಲಾದ ಪ್ರಕರಣಗಳನ್ನ ಒಂದೇ ಕಡೆ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಕಿಂಗ್‌ಪಿನ್ ಆರ್‌.ಡಿ. ಪಾಟೀಲ್ ಮೇಲ್ಮನವಿಗೆ ಹೈಕೋರ್ಟ್ ಪೀಠ ಪ್ರತಿಕ್ರಿಯೆ ನೀಡಿದೆ. ಸದ್ಯ ತಡೆಯಾಜ್ಞೆ ತೆರವು ಹಿನ್ನಲೆ ಪಿಎಸ್​ಐ ಕೇಸ್ ನಲ್ಲೂ ವಿಚಾರಣೆ ಸಾಧ್ಯತೆ ಇದೆ.

Read More

ಬೆಂಗಳೂರು:- ಭಾರತದಲ್ಲಿ ದುಷ್ಕೃತ್ಯಕ್ಕೆ ಐಸಿಸ್ ಸಂಚು ಹಿನ್ನೆಲೆ ಬೆಂಗಳೂರು ಸೇರಿದಂತೆ ದೇಶಾದ್ಯಂತ 41 ಕಡೆ ಎನ್‌ಐಎ ದಾಳಿ ನಡೆಸಿದೆ. ಬೆಂಗಳೂರಿನಲ್ಲಿ 1 ಕಡೆ, ಪುಣೆಯಲ್ಲಿ 2 ಕಡೆ, ಥಾಣೆಯ ಗ್ರಾಮಿಣ ಭಾಗದಲ್ಲಿ 31 ಹಾಗೂ ಹಲವೆಡೆ ದಾಳಿ ನಡೆಸಿರುವ ಎನ್‌ಐಎ ಅಧಿಕಾರಿಗಳು. ಪ್ರಮುಖವಾಗಿ ಭಿವಂಡಿಯ ಪಾದ್ಘಾ ಗ್ರಾಮದಲ್ಲಿ ಎನ್ಐಎ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿದೆ. ದಾಳಿ ವೇಳೆ ಹಲವು ಶಂಕಿತ ಉಗ್ರರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿರುವ ಎನ್‌ಐಎ ಅಧಿಕಾರಿಗಳು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿ ಓರ್ವ ಶಂಕಿತನನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು. ನಗರದ ಟ್ಯಾನರಿ ರಸ್ತೆಯಲ್ಲಿರುವ ಶಂಕಿತ ಉಗ್ರನ ಮನೆ. ಐಸಿಸ್ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಆರೋಪ ಹಿನ್ನೆಲೆ ಅಪಾರ್ಟ್‌ಮೆಂಟ್‌ನ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು. ದಾಳಿ ವೇಳೆ ಅಪಾರ್ಟ್‌ಮೆಂಟ್‌ನಲ್ಲೇ ಇದ್ದ ಅಲಿ ಅಬ್ಬಾಸ್ ವಶಕ್ಕೆ ಪಡೆದುಕೊಂಡ ಎನ್‌ಐಎ ಅಧಿಕಾರಿಗಳು. ಶಂಕಿತರ ವಿಚಾರಣೆಯನ್ನು ಎನ್‌ಐಎ ಅಧಿಕಾರಿಗಳು ಮುಂದುವರಿಸಿದ್ದಾರೆ. ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿರುವ ಶಂಕಿತ…

Read More

ವಿಜಯನಗರ:- ಬೆಳೆಯಲ್ಲಿ ಬೆಳೆದಿದ್ದ ಗಾಂಜಾ ವಶಕ್ಕೆ ಪಡೆದಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೆಕೋಟೆಯ AC ಹಳ್ಳಿಯಲ್ಲಿ ಜರುಗಿದೆ. 7 ಕೆಜಿ 50 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. 30 ಸಾವಿರ ಮೌಲ್ಯದ 6 ಗಾಂಜಾಗಿಡಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಚಾಮರಾಜನಗರ:- ಮಾದಪ್ಪನ ಬೆಟ್ಟಕ್ಕೆ ತಿರುಪತಿ ಮಾದರಿ ಮೆಟ್ಟಿಲು ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಪವಾಡ ಪುರುಷ ಮಲೇಮಹದೇಶ್ವರಬೆಟ್ಟಕ್ಕೆ ಭರದಿಂದ ಮೆಟ್ಟಿಲು ಕಾಮಗಾರಿ ನಡೆಯುತ್ತಿದೆ. ತಾಳಬೆಟ್ಟದಿಂದ ಮಾದಪ್ಪನ ಬೆಟ್ಟಕ್ಕೆ ನಿರ್ಮಾಣಗೊಳ್ಳುತ್ತಿರುವ ಮಾದರಿ ಮೆಟ್ಟಿಲು , ಈ ಮೆಟ್ಟಿಲು ಕಾಮಗಾರಿಯನ್ನು ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಪರಿಶೀಲನೆ ನಡೆಸಿದ್ದಾರೆ. ಬೆಟ್ಟದ ಪಾದಚಾರಿ ಮಾರ್ಗದ ಮೆಟ್ಟಿಲುಗಳ ಕಾಮಗಾರಿಯನ್ನು ವೀಕ್ಷಣೆ ಮಾಡಿದ್ದಾರೆ.

Read More

ಹುಬ್ಬಳ್ಳಿ: ಕಲಬುರ್ಗಿಯ ವಕೀಲ ವೀರನಗೌಡ ಪಾಟೀಲ ಅವರ ಕೊಲೆ ಖಂಡಿಸಿ ಹುಬ್ಬಳ್ಳಿ ವಕೀಲರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಹೊಸೂರು ಕೋರ್ಟ್‌ನಿಂದ ವಿದ್ಯಾನಗರ ಹೊಸೂರು ಪ್ರಾದೇಶಿಕ ಬಸ್‌ ನಿಲ್ದಾಣದ ಮುಖ್ಯ ರಸ್ತೆವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದ ಅವರು, ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಎರಡೂ ಬದಿ ವಾಹನಗಳ ಸಂಚಾರ ತಡೆದು, ಟೈರ್‌ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಮಾನವ ಸರಪಳಿ ನಿರ್ಮಿಸಿ, ಧರಣಿ ನಡೆಸಿದರು. ‘ವಾರದ ಹಿಂದಷ್ಟೇ ಚಿಕ್ಕಮಗಳೂರಿನ ವಕೀಲರ ಸಂಘದ ಸದಸ್ಯ ಪ್ರೀತಮ್‌ ಅವರ ಮೇಲೆ ಹಲ್ಲೆ ನಡೆದಿತ್ತು. ಇದೀಗ ಕಲಬುರ್ಗಿಯ ವಕೀಲ ವೀರನಗೌಡ ಪಾಟೀಲರ ಕೊಲೆಯಾಗಿದೆ. ವಕೀಲರ ಮೇಲೆ ನಡೆಯುತ್ತಿರುವ ಇಂತಹ ಪ್ರಕರಣಗಳು ತೀವ್ರ ಆಘಾತವನ್ನುಂಟು ಮಾಡುತ್ತಿದೆ. ಕಾನೂನು ಕಾಪಾಡುವವರಿಗೆ ರಕ್ಷಣೆಯೇ ಇಲ್ಲವಾಗಿದೆ. ಪದೇಪದೇ ಇಂತಹ ಪ್ರಕರಣಗಳು ಮರುಕಳಿಸುತ್ತಿವೆ. ಈ ಕುರಿತು ಸರ್ಕಾರ ತುರ್ತಾಗಿ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು ವಕೀಲರ ಸುರಕ್ಷತೆಗೆ ಸರ್ಕಾರ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕು. ಈ ಕುರಿತು ಅಧಿವೇಶನದಲ್ಲಿ…

Read More