Author: AIN Author

ಮೆಂತ್ಯ ಎಲೆಗಳು ಸ್ವಲ್ಪ ಕಹಿ ಮತ್ತು ಮಣ್ಣಿನ ರುಚಿಗೆ ಹೆಸರುವಾಸಿಯಾಗಿದೆ. ನೈಸರ್ಗಿಕವಾಗಿ ನಿಮ್ಮನ್ನು ಬೆಚ್ಚಗಾಗಿಸುವ ಭಕ್ಷ್ಯಗಳಲ್ಲಿ ಅವುಗಳನ್ನು ಸೇರಿಸಲಾಗುತ್ತದೆ, ಶೀತ ಹವಾಮಾನದ ಸಮಯದಲ್ಲಿ ಆರಾಮದಾಯಕ ಸ್ಪರ್ಶವನ್ನು ನೀಡುತ್ತದೆ. ಮೆಂತ್ಯ-ಆಧಾರಿತ ಪಾಕವಿಧಾನಗಳಾದ ಮೇಥಿ ಲಡೂಸ್ ಮತ್ತು ಮೇಥಿ ಪರಂಥಸ್ ನಿಮ್ಮ ದೇಹದ ಮೇಲೆ ಬೆಚ್ಚಗಾಗುವ ಪರಿಣಾಮವನ್ನು ನೀಡುತ್ತದೆ.  ಶೀತ ವಾತಾವರಣದಲ್ಲಿ ಅವುಗಳನ್ನು ಆದ್ಯತೆಯ ಆಯ್ಕೆಯನ್ನಾಗಿ ಮಾಡುತ್ತದೆ, ಏಕೆಂದರೆ ಅವು ನಿಮ್ಮ ರುಚಿ ಮೊಗ್ಗುಗಳನ್ನು ಪೂರೈಸುವುದು ಮಾತ್ರವಲ್ಲದೆ ನಿಮ್ಮ ದೇಹಕ್ಕೆ ಉಷ್ಣತೆ ಮತ್ತು ಸೌಕರ್ಯವನ್ನು ನೀಡುತ್ತದೆ. ಚಳಿಗಾಲದಲ್ಲಿ ಮೆಂತ್ಯ ಸೊಪ್ಪು ಹೆಚ್ಚಿಗೆ ಸಿಗುವುದರಿಂದ ಇದನ್ನೂ ಬೇರೆ ಬೇರೆ ವಿಧದ ಆಹಾರಗಳಲ್ಲಿ ಬಳಸಬಹುದು. ಮೆಂತ್ಯೆ ಪಲ್ಯ, ಸೊಪ್ಪು ಸಾರು, ಚಪಾತಿ ಹೀಗೆ ನಾನಾ ರೀತಿಯಲ್ಲಿ ಮೆಂತ್ಯೆ ಸೊಪ್ಪನ್ನು ಬಳಸಬಹುದು. ಹೈ ಬ್ಲಡ್ ಶುಗರ್ ಇರುವವರು ಮೆಂತ್ಯೆ ಸೊಪ್ಪನ್ನು ಸೇವಿಸಬೇಕು. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮೆಂತ್ಯ ಸೊಪ್ಪನ್ನು ಸೇವಿಸುವುದರಿಂದ ದೇಹವು ಅನೇಕ ರೀತಿಯ ಪೌಷ್ಟಿಕಾಂಶಗಳನ್ನು ಪಡೆಯುತ್ತದೆ. ಇದನ್ನು ತಿನ್ನುವುದರಿಂದ…

Read More

ಬೆಂಗಳೂರು:- ಬೆಂಗಳೂರು ವಿಮಾನ ನಿಲ್ದಾಣದ ಕ್ಯಾಬ್ ಸಂಸ್ಥೆಯ ಮಹಿಳಾ ಉದ್ಯೋಗಿ ನಾಪತ್ತೆ ಆಗಿದ್ದು, ಇದು ತಿಂಗಳಲ್ಲಿ ಎರಡನೇ ಪ್ರಕರಣವಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ರಲ್ಲಿ ಕ್ಯಾಬ್ ಕಂಪನಿಯೊಂದರಲ್ಲಿ ಬುಕಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾರೆ. ಈ ಕುರಿತು ಆಕೆಯ ಸಹೋದರ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನೇತ್ರಾ ಅವರು WIT ಕ್ಯಾಬ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ವಿಮಾನ ನಿಲ್ದಾಣದ ಸಮೀಪದ ಹುಣಸಮಾರನಹಳ್ಳಿಯ ‘ಯಮುನಾ’ ಪಿಜಿಯಲ್ಲಿ ವಾಸಿಸುತ್ತಿದ್ದರು. ಆಕೆ ಪ್ರತಿದಿನ ತನ್ನ ಕುಟುಂಬದವರಿಗೆ ದೂರವಾಣಿ ಕರೆ ಮಾಡಿ ಮಾತನಾಡುತ್ತಿದ್ದರು. ಡಿಸೆಂಬರ್ 29 ರಂದು ಮಧ್ಯಾಹ್ನ ಕರೆ ಮಾಡಿ, ಆ ದಿನ ರಾತ್ರಿ ಡ್ಯೂಟಿಯಲ್ಲಿರುವುದಾಗಿ ತಿಳಿಸಿದ್ದರು. ಡಿಸೆಂಬರ್ 30 ರಿಂದ, ಕುಟುಂಬದವರು ಆಕೆಯಿಂದ ಯಾವುದೇ ಕರೆಗಳನ್ನು ಸ್ವೀಕರಿಸಲಿಲ್ಲ. ಮನೆಯವರು ಕರೆ ಮಾಡಿದಾಗ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು. ಚಾರ್ಜ್ ಮುಗಿದಿರಬಹುದು ಎಂದು ಅವರು ಭಾವಿಸಿದ್ದರು. ಅವರು ಡಿಸೆಂಬರ್ 31…

Read More

ಸ್ಯಾಂಡಲ್‌ವುಡ್ ನಟಿ ಚೈತ್ರಾ ಆಚಾರ್ (Chaithra Achar) ಮತ್ತೆ ಹೊಸ ಫೋಟೋಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ. ಬೋಲ್ಡ್ ಆಗಿ ‘ಟೋಬಿ’ (Toby) ಸುಂದರಿ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ನ್ಯೂ ಲುಕ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಬಿಳಿ ಬಣ್ಣದ ಶರ್ಟ್‌- ಲೈಟ್ ಕಲರ್ ಸ್ಕರ್ಟ್ ಧರಿಸಿದ್ದಾರೆ ಚೈತ್ರಾ. ಮಾದಕ ನೋಟ ಬೀರುವ ಮೂಲಕ ಸಖತ್ ಬೋಲ್ಡ್ & ಬ್ಯೂಟಿಫುಲ್ ಆಗಿ ಚೈತ್ರಾ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಚೈತ್ರಾ ಫೋಟೋ ನೋಡ್ತಿದ್ದಂತೆ ಬಾಲಿವುಡ್ ನಟಿ ಆಲಿಯಾ ಭಟ್‌ಗೆ ಹೋಲಿಸಿ ಹೊಗಳಿದ್ದಾರೆ ಫ್ಯಾನ್ಸ್. ಕನ್ನಡದ ಆಲಿಯಾ ಭಟ್ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಇತ್ತೀಚೆಗೆ ಫೋಟೋಶೂಟ್‌ವೊಂದಕ್ಕೆ ನೆಗೆಟಿವ್ ಕಾಮೆಂಟ್ ಮತ್ತು ಟ್ರೋಲ್ ಆಗಿತ್ತು. ಅದಕ್ಕೆ ಖಡಕ್ ಆಗಿ ಚೈತ್ರಾ ರಿಯಾಕ್ಟ್ ಮಾಡಿದ್ದರು. ದೇವರ ಹಾಡು ಹಾಡ್ತಾರೆ ಆದರೆ ಹಾಕುವ ಬಟ್ಟೆ ಈ ತರಹ ಎಂದು ಕಾಮೆಂಟ್ ಮಾಡುವವರಿಗೆ ನಟಿ ತಕ್ಕ ಉತ್ತರ ನೀಡಿದ್ದರು. ಬೇರೇ ಮನೆ ಹೆಣ್ಣು ಮಗಳ ಮರ್ಯಾದೆ ತೆಗೆಯಬೇಕು ಎಂದು ಪಣ ತೊಟ್ಟವರಿಗೆ ಏನು ಹೇಳೋದು…

Read More

ಬೆಂಗಳೂರು:- ಐಟಿ ಸಿಟಿ ಬೆಂಗಳೂರು ಈಗ ಕ್ರೈಂ ಸಿಟಿ ಆಗಿದ್ದು, ಒಂದೇ ವರ್ಷದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾರೀ ಹೆಚ್ಚಳವಾಗಿದೆ. 2023ನೇ ಸಾಲಿನ ವಾರ್ಷಿಕ ಅಪರಾಧ ವರದಿಯನ್ನು ಪೊಲೀಸರು ಬಿಡುಗಡೆಗೊಳಿಸಿದ್ದು, ಇದರಲ್ಲಿ ಕೊಲೆಗಳು ಶೇ.31, ದರೋಡೆ ಶೇ.41 ಹಾಗೂ ಸೈಬರ್‌ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿದೆ. ಅಲ್ಲದೆ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕೃತ್ಯಗಳಿಗೆ ಕಡಿವಾಣ ಬೀಳದೆ ಏರಿಕೆಯಾಗಿದ್ದು ವರದಿಯಾಗಿದೆ. 2021ರಲ್ಲಿ 7566 ಹಾಗೂ 2022ರಲ್ಲಿ 9254 ಪ್ರಕರಣಗಳು ವರದಿಯಾದರೆ 2023ರಲ್ಲಿ 12627 ಪ್ರಕರಣಗಳು ದಾಖಲಾಗಿವೆ. ಆದರೆ ಅಪರಾಧ ಪತ್ತೆದಾರಿಕೆ ಕುಂಠಿತವಾಗಿದೆ. ಕಳೆದ ವರ್ಷ 12 ಸಾವಿರ ಪೈಕಿ ಕೇವಲ 3603 ಪ್ರಕರಣಗಳು ಪತ್ತೆಯಾಗಿವೆ. 3 ವರ್ಷಗಳಲ್ಲಿ 533 ಹತ್ಯೆಗಳು ನಡೆದಿವೆ. ಅವುಗಳಲ್ಲಿ ತಕ್ಷಣ ಪ್ರಚೋದನೆಗೊಳಗಾಗಿ (49), ಅನೈತಿಕ ಸಂಬಂಧ (32), ಕೌಟುಂಬಿಕ ಕಲಹ (31), ವೈರತ್ವ (31) ಹಾಗೂ ಹಣಕಾಸು ವಿವಾದ (17)ಗಳಿಗೆ ಅಧಿಕ ಹತ್ಯೆಗಳಾಗಿವೆ. ಆದರೆ ಲಾಭಕ್ಕಾಗಿ ಹಾಗೂ ಭೂ ವಿವಾದಗಳಿಗೆ ಹತ್ಯೆಗಳಲ್ಲಿ ಇಳಿಕೆ ಕಂಡು ಬಂದಿದೆ. 2021ರಲ್ಲಿ 153,…

Read More

ಜನವರಿ  7ರವರೆಗೆ ನಡೆಯಲಿರುವ ಎರಡನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಗೆದ್ದು ಸರಣಿಯನ್ನು 1-1 ಅಂತರದಲ್ಲಿ ಸಮಬಲ ಮಾಡಿಕೊಳ್ಳಲು ರೋಹಿತ್‌ ಶರ್ಮಾ ಸಾರಥ್ಯದ ಭಾರತ ತಂಡ ಎದುರು ನೋಡುತ್ತಿದೆ. ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್, ಟೀಮ್ ಇಂಡಿಯಾ ತನ್ನ ಆಡುವ 11ರ ಬಳಗದಲ್ಲಿ 2 ಮಹತ್ವದ ಬದಲಾವಣೆಗಳನ್ನು ತಂದುಕೊಳ್ಳಬೇಕು ಎಂದಿದ್ದಾರೆ. ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಎರಡೂ ಇನಿಂಗ್ಸ್‌ಗಳಲ್ಲಿ ಎದುರಿಸಿದ ಬ್ಯಾಟಿಂಗ್‌ ವೈಫಲ್ಯ ಕಾರಣ ಮೂರು ದಿನಗಳ ಒಳಗೆ ಇನಿಂಗ್ಸ್‌ ಮತ್ತು 32 ರನ್‌ಗಳ ಅಂತರದ ಹೀನಾಯ ಸೋಲನುಭವಿಸಿತು. ಇದು 3ನೇ ಆವೃತ್ತಿಯ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಟೂರ್ನಿಯ ಫೈನಲ್‌ ರೇಸ್‌ನಲ್ಲಿ ಭಾರತ ತಂಡಕ್ಕೆ ದೊಡ್ಡ ಅಡಚಣೆ ಆಗಲಿದೆ. ಹೀಗಾಗಿ ಎರಡನೇ ಟೆಸ್ಟ್‌ ಗೆದ್ದು ಹಾನಿ ತಗ್ಗಿಸಿಕೊಳ್ಳಲು ಭಾರತ ತಂಡ ಶತಾಯ ಗತಾಯ ಪ್ರಯತ್ನ ಮಾಡಲಿದೆ. “ಸಂಪೂರ್ಣ ಫಿಟ್ನೆಸ್‌ಗೆ ಮರಳಿದ್ದರೆ ರವೀಂದ್ರ ಜಡೇಜಾ ಎರಡನೇ ಟೆಸ್ಟ್‌ ಆಡಬೇಕು. ಬ್ಯಾಟರ್‌ಗಳಿಗೆ ನೆರವಾಗುತ್ತಿದ್ದ ಪಿಚ್‌ನಲ್ಲಿ…

Read More

ವಾಟ್ಸಪ್‌ (Whatssap) ಇಲ್ಲಿಯವರೆಗೆ ನೀಡುತ್ತಿದ್ದ ಫ್ರೀ ಗೂಗಲ್‌ ಡ್ರೈವ್‌ (Google Drive) ಸ್ಟೋರೇಜ್‌ ಅನ್ನು 2024ರ ಮಧ್ಯದಲ್ಲಿ ನಿಲ್ಲಿಸಲಿದೆ. ಈಗಾಗಲೇ ವಾಟ್ಸಪ್‌ ಬೀಟಾ ಅವೃತ್ತಿ ಬಳಸುತ್ತಿರುವ ಬಳಕೆದಾರರಿಗೆ ಸೆಟ್ಟಿಂಗ್ಸ್‌ನಲ್ಲಿ ಗೂಗಲ್‌ ಡ್ರೈವ್‌ ಬ್ಯಾಕಪ್‌ ಆಯ್ಕೆಯನ್ನು ತೋರಿಸುತ್ತಿದೆ. ವಾಟ್ಸಪ್‌ನಲ್ಲಿ ಇಲ್ಲಿಯವರೆಗೆ ಚಾಟ್‌, ಫೋಟೋ, ವಿಡಿಯೋಗಳು ಗೂಗಲ್‌ ಡ್ರೈವ್‌ನಲ್ಲಿ ಸೇವ್‌ ಆಗುತ್ತಿತ್ತು. ಇದಕ್ಕೆ ಯಾವುದೇ ಮಿತಿ ಇರುತ್ತಿರಲಿಲ್ಲ. ಯಾಕೆ ಈ ಬದಲಾವಣೆ? ಯಾವ ಕಾರಣಕ್ಕೆ ಈ ಬದಲಾವಣೆ ಮಾಡುತ್ತಿದ್ದೇವೆ ಎಂಬುದರ ಬಗ್ಗೆ ವಾಟ್ಸಪ್‌ ಮತ್ತು ಗೂಗಲ್‌ ಇಲ್ಲಿಯವರೆಗೆ ಹೇಳಿಲ್ಲ. ಎಲ್ಲರಿಗೂ ಫ್ರೀ ಕ್ಲೌಡ್‌ ಸ್ಟೋರೇಜ್‌ ನೀಡುವುದು ಕಾರ್ಯಸಾಧ್ಯವಲ್ಲ ಎಂಬ ಕಾರಣಕ್ಕೆ ವಾಟ್ಸಪ್‌ ನಿರ್ಧಾರಕ್ಕೆ ಬಂದಿದೆ ಎಂದು ವರದಿಯಾಗಿದೆ. ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಮಾಲೀಕತ್ವವನ್ನು ಹೊಂದಿರುವ ಗೂಗಲ್‌ ಉಚಿತ 15 ಜಿಬಿ ಮಿತಿ ಮಗಿದ ಬಳಿಕ ಮತ್ತೆ ಡ್ರೈವ್‌ನಲ್ಲಿ ಸ್ಟೋರ್‌ ಮಾಡಿದರೆ ಶುಲ್ಕ ವಿಧಿಸುತ್ತದೆ. ಆದರೆ ಇಲ್ಲಿಯವರೆಗೆ ವಾಟ್ಸಪ್‌ ಡೇಟಾಗಳು ಸ್ಟೋರ್‌ ಆಗಿದ್ದಕ್ಕೆ ಯಾವುದೇ ಶುಲ್ಕ ವಿಧಿಸುತ್ತಿರಲಿಲ್ಲ. ಪ್ರಸ್ತುತ ಗೂಗಲ್‌ ಡ್ರೈವ್‌ನಲ್ಲಿ ಗರಿಷ್ಠ 15 ಜಿಬಿವರೆಗಿನ…

Read More

ಪಾಟ್ನಾ: ಬಿಹಾರದಲ್ಲಿ ವಿಚಿತ್ರ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪೊಲೀಸರನ್ನೇ ಬೆಚ್ಚಿಬೀಳುವಂತೆ ಮಾಡಿದೆ. ಮಕ್ಕಳಾಗದ ಮಹಿಳೆಯರನ್ನ (Impregnating Women) ಗರ್ಭಧರಿಸುವಂತೆ ಮಾಡಿದ್ರೆ ಪುರುಷರಿಗೆ 13 ಲಕ್ಷ ರೂ. ಬಹುಮಾನ ನೀಡುವುದಾಗಿ ಆಫರ್‌ ಕೊಟ್ಟಿದ್ದ 8 ಮಂದಿಯನ್ನ ಪೊಲೀಸರು ಬಿಹಾರದ ನವಾಡದಲ್ಲಿ ಬಂಧಿಸಿದ್ದಾರೆ. ಖತರ್ನಾಕ್‌ಗಳು ʻಆಲ್‌ ಇಂಡಿಯಾ ಪ್ರೆಗ್ನೆಂಟ್‌ ಜಾಬ್‌ ಸರ್ವೀಸ್‌ʼ (All India Pregnant Job Service) ಎಂಬ ಹೆಸರಿನಲ್ಲಿ ದಂಧೆ ನಡೆಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ. ಮೊದಲಿಗೆ ಈ ಗ್ಯಾಂಗ್‌ ಬಿಹಾರ (Bihar) ರಾಜ್ಯದ ನವಾಡ ಜಿಲ್ಲೆಯಲ್ಲಿ ಆಲ್ ಇಂಡಿಯಾ ಪ್ರೆಗ್ನೆಂಟ್ ಜಾಬ್ ಏಜೆನ್ಸಿ ಅನ್ನೋ ಸಂಸ್ಥೆಯ ಹೆಸರಲ್ಲಿ ಜಾಹೀರಾತು ನೀಡಿತ್ತು. ಆಗ ವಾಟ್ಸಪ್‌, ಫೇಸ್‌ಬುಕ್‌ ಸೇರಿದಂತೆ ಎಲ್ಲಾ ಜಾಲತಾಣಗಳಲ್ಲೂ ಜಾಹೀರಾತು ಪ್ರಸಾರವಾಗಿತ್ತು. ಈ ಜಾಹಿರಾತನ್ನು ನೋಡಿದ ಪುರುಷರು ಜಾಹೀರಾತಿನ ಜೊತೆಗೆ ಇದ್ದ ವಾಟ್ಸಪ್ ನಂಬರ್‌ ಸಂಪರ್ಕಿಸಿದರು. ಮಕ್ಕಳಾಗದ ಸ್ತ್ರೀಯರಿಗೆ (Womens) ಸಂತಾನ ಭಾಗ್ಯ ಕೊಡುವ ಸಾಮರ್ಥ್ಯ ನಮಗಿದೆ. ಅವಕಾಶ ಕೊಡಿ ಅಂತಾ ಹಕ್ಕೊತ್ತಾಯ ಮಾಡಿದ್ದರು. ಆ ನಂತರ ವಂಚಕರ ಅಸಲಿ…

Read More

ದೇಶದ ಕೃಷಿ ಕ್ಷೇತ್ರದಲ್ಲಿ ಸೌರ ಶಕ್ತಿಯ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಾರಿಗೆ ತರಲಾಗಿದ್ದ, ಪಿಎಂ ಕುಸಮ್‌ ಯೋಜನೆಗೆ ಈ ಬಾರಿ ಬಜೆಟ್‌ನಲ್ಲಿ ಹಣ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ. ಇನ್ನು ಪ್ರಧಾನಮಂತ್ರಿ ಕುಸುಮ್‌ ಯೋಜನೆಯ ಹೆಸರಲ್ಲಿ ಸಾಕಷ್ಟು ವಂಚನೆಯ ಪ್ರಕರಣಗಳು ಕೂಡ ಬೆಳಕಿಗೆ ಬಂದವು. ಅನೇಕ ಖದೀಮರು ಪಿಎಂ ಕುಸುಮ್‌ ಯೋಜನೆಯ ಹೆಸರಲ್ಲಿ ನಕಲಿ ವೆಬ್‌ಸೈಟ್‌ ಗಳನ್ನು ಸೃಷ್ಟಿ ರೈತರಿಂದ ಅಪಾರ ಹಣವನ್ನು ಪಡೆದು ವಂಚಿಸದ ಘಟನೆಗಳು ಬೆಳಕಿಗೆ ಬಂದವು. ಹೀಗೆ ಈ ಯೋಜನೆಯ ಹೆಸರಿನ ಮೇಲೆ ಸಾಕಷ್ಟು ರೈತರು ತಮ್ಮ ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಸಾಂಕ್ರಾಮಿಕ ರೋಗ, ಹಣದ ಕೊರತೆಯಿಂದ ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಮ್ ಉತ್ಥಾನ್ ಮಹಾಭಿಯಾನ್ ಯೋಜನೆ (PM-KUSUM) ಪ್ರಗತಿಯು ನಿಧಾನವಾಗಿ ಸಾಗಿದೆ. ಇತ್ತ ಅಗತ್ಯವಿರುವ ಅನುದಾನದ ಕೊರತೆ ಮತ್ತು ಜಾಗೃತಿ ಕೊರತೆಯಿಂ ಈ ಯೋಜನೆಯು ಈ ವರ್ಷ ಬಜೆಟ್ ಅನುದಾನವನ್ನು ಪಡೆಯುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿದೆ. ಅನ್ನದಾತರಿಗೆ ಬೇಸಾಯಕ್ಕಾಗಿ ನೀರು ಮತ್ತು ವಿದ್ಯುತ್ ಒದಗಿಸುವ…

Read More

ನಮಗೆ ದಿನವೀಡಿ ಕೆಲಸ ಮಾಡಲು ಉತ್ಸಾಹ ಇರಬೇಕು ಎಂದು ಅದಕ್ಕೆ ಸೇವಿಸುವ ಆಹಾರ ಆಗಿರುತ್ತದೆ. ಆದರೆ ಕೆಲವೊಮ್ಮೆ ಮಲಬದ್ಧತೆ, ಅಜೀರ್ಣತೆ, ಎದೆಯುರಿ, ಗ್ಯಾಸ್ಟ್ರಿಕ್, ವಿಪರೀತ ಉಷ್ಣ ಹೀಗೆ ಹತ್ತು ಹಲವು ಕಾರಣದಿಂದಾಗಿ ಹೊಟ್ಟೆ ನೋವು ಬರುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಯಾವುದೇ ಅಡ್ಡ ಪರಿಣಾಮ ಬಿರದೇ ಕೆಲವು ಮನೆಮದ್ದುಗಳನ್ನು ಅನುಸರಿಸಿ. ನಿಂಬೆ ಚಹಾ: ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿ ಇರುತ್ತದೆ. ಇದರಿಂದಾಗಿ ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಹೊರ ಹಾಕುವಲ್ಲಿ ನಿಂಬೆ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚಾಗಿ ಊಟ ಮಾಡಿ ಜೀರ್ಣ ಆಗದೆ ಹೊಟ್ಟೆ ನೋವಿನಿಂದ ಬಳಲುತ್ತಿರುವವರು ನಿಂಬೆ ಚಹಾ ಮಾಡಿಕೊಂಡು ಕುಡಿಯಬೇಕು. ಆ ಸಂದರ್ಭದಲ್ಲಿ ನಿಂಬೆ ಹಣ್ಣಿನ ರಸ ನಮ್ಮ ಹೊಟ್ಟೆ ಸೇರಿದಾಗ ಬಹುಬೇಗನೆ ಜೀರ್ಣವಾಗುವಂತೆ ಮಾಡುತ್ತದೆ. ಇದರ ಜೊತೆಗೆ ಯಾವುದೇ ರೀತಿಯ ಹೊಟ್ಟೆಗೆ ಸಂಬಂಧಿತ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳುತ್ತದೆ. ಪುದೀನ ಎಲೆ: ತಾಜಾ ಪುದೀನ ಎಲೆಗಳು ಸಹ ಅಜೀರ್ಣತೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಒಳ್ಳೆಯ ಮನೆಮದ್ದು ಆಗಿದೆ. ಕೆಲವೊಮ್ಮೆ ನಮ್ಮ…

Read More

ಮಹಮ್ಮದ್ ಸಿರಾಜ್​ ಮಾರಕ ದಾಳಿಗೆ ಭಾರತ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಸೌತ್ ಆಫ್ರಿಕಾ ತಂಡ 55 ರನ್​ಗಳಿಗೆ ತನ್ನೆಲ್ಲ ವಿಕೆಟ್​ ಕಳೆದುಕೊಂಡಿದೆ. ಮೊದಲು ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡು ಡೀನ್‌ ಎಲ್ಗರ್ ನಾಯತ್ವದ ದಕ್ಷಿಣ ಆಫ್ರಿಕಾ ತಂಡ 23.2 ಓವರ್‌ಗಳಲ್ಲಿ ಕೇವಲ 55 ರನ್‌ಗಳಿಗೆ ಆಲೌಟ್‌ ಆಗಿ ಮೊದಲ ಇನ್ನಿಂಗ್ಸ್‌ ಮುಗಿಸಿದೆ. ಇನ್ಸಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಪರ ಡೇವಿಡ್‌ ಬೆಡಿಂಗ್‌ಹ್ಯಾಮ್‌ (12) ಮತ್ತು ಕೈಲ್‌ ವೆರೆನ್ನೆ (15) ಹೊರತುಪಡಿಸಿ ಉಳಿದ ಯಾವ ಬ್ಯಾಟ್ಸ್​ಮನ್​ಗಳು ಯಾರೂ ಎರಡಂಕಿ ದಾಟಲಿಲ್ಲ. 6 ವಿಕೆಟ್‌ಗಳನ್ನು ಕಬಳಿಸಿದ ಸಿರಾಜ್‌, ಮತ್ತೊಮ್ಮೆ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಸಿರಾಜ್‌ ವೇಗಕ್ಕೆ ಜೊತೆಯಾದ ಜಸ್ಪ್ರೀತ್ ಬೂಮ್ರಾ ಮತ್ತು ಮುಖೇಶ್‌ ಕುಮಾರ್‌ ಕೂಡಾ ತಲಾ ಎರಡು ವಿಕೆಟ್‌ ಪಡೆದರು. 9 ಓವರ್‌ ಬೌಲಿಂಗ್‌ ಮಾಡಿದ ಸಿರಾಜ್‌ 6 ವಿಕೆಟ್‌ ಕಬಳಿಸಿ 15 ರನ್‌ ಮಾತ್ರ ಕೊಟ್ಟುರು.

Read More