Author: AIN Author

ನವದೆಹಲಿ: ಆಸ್ಪತ್ರೆಗಳಲ್ಲಿ ರೋಗಿಗಳನ್ನು ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸುವ ಕುರಿತು ಕೇಂದ್ರ ಸರ್ಕಾರವು (Central Government) ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸಾಮಾನ್ಯವಾಗಿ ರೋಗಿಯ ಸ್ಥಿತಿ ಗಂಭಿರ ಇದ್ದರೆ ವೈದ್ಯರು ಐಸಿಯುನಲಿ ಚಿಕಿತ್ಸೆ ಕೊಡಿಸುತ್ತಾರೆ. ಆದರೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯಲ್ಲಿ ಇನ್ನು ಮುಂದೆ ಈ ರೀತಿ ಮಾಡುವಂತಿಲ್ಲ. ರೋಗಿ ಅಥವಾ ಆತನ ಕುಟುಂಬಸ್ಥರು ಒಪ್ಪಿಗೆ ನೀಡಿದರೆ ಮಾತ್ರ ಆತನಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಬಹುದಾಗಿದೆ. ಬಲವಂತವಾಗಿ ಯಾವುದೇ ರೋಗಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡುವಂತಿಲ್ಲ. ಕೇಂದ್ರದ ಆರೋಗ್ಯ ಸಚಿವಾಲಯ ಹೊರಡಿಸಿರುವ ಈ ಮಾರ್ಗಸೂಚಿಗಳನ್ನು 24 ಮಂದಿ ತಜ್ಞರು ಚರ್ಚಿಸಿ ಬಿಡುಗಡೆ ಮಾಡಿದ್ದಾರೆ. ರೋಗಿಗೆ ಹೆಚ್ಚಿನ ಚಿಕಿತ್ಸೆ ಪ್ರಯೋಜನವಿಲ್ಲದಿದ್ದಲ್ಲಿ ಅಥವಾ ಯಾವುದೇ ಚಿಕಿತ್ಸೆಯಿಂದ ರೋಗಿಯ ಆರೋಗ್ಯದಲ್ಲಿ ಚೇತರಿಕೆ ಕಾಣಲು ಸಾಧ್ಯವಾಗದಿದ್ದಲ್ಲಿ ಆತ ಅಥವಾ ಆಕೆಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸುವುದು ವ್ಯರ್ಥ ಎಂದು ಹೇಳಲಾಗಿದೆ. https://ainlivenews.com/do-you-know-the-benefits-of-eating-cashews-every-day-2/ ಸಾಂಕ್ರಾಮಿಕ ರೋಗಗಳು, ವಿಪತ್ತು ಸಂದರ್ಭಗಳಲ್ಲಿ ರೋಗಿಯನ್ನು ಐಸಿಯುಗೆ ದಾಖಲಿಸಬಹುದು. ರೋಗಿಯ ಅಂಗಾಂಗ ವೈಫಲ್ಯ, ಅಂಗಾಂಗ ಕಸಿ…

Read More

ಮಂಡ್ಯ: ಇದೇ ತಿಂಗಳ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಹ್ವಾನ ನೀಡದ ಕುರಿತಂತೆ ಕೃಷಿ ಸಚಿವ ಚೆಲುವರಾಯ ಸ್ವಾಮಿ ಕಿಡಿಕಾರಿದ್ದಾರೆ. ನಮ್ಮ ನಾಡಿನ ಮುಖ್ಯಮಂತ್ರಿಯನ್ನೇ ಅವರು ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸುತ್ತಿಲ್ಲ ಎಂದರೆ ಅವರು (ಬಿಜೆಪಿಗರು) ಎಷ್ಟು ರಾಜಕೀಯ ಮಾಡುತ್ತಾರೆ ನೋಡಿ ಎಂದು ಅವರು ಹೇಳಿದ್ದಾರೆ. https://ainlivenews.com/do-you-know-the-benefits-of-eating-cashews-every-day-2/ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರದ ಉದ್ಘಾಟನಾ ಸಮಾರಂಭಕ್ಕೆ ರಾಜಕೀಯ, ಸಾಮಾಜಿಕ, ಸಿನಿಮಾ, ಕ್ರೀಡೆ ಸೇರಿದಂತೆ ಆಯಾ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಲಾಗಿದೆ. ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗಿದೆ. ಆದರೆ, ನಮ್ಮ ರಾಜ್ಯದ ಮುಖ್ಯಮಂತ್ರಿಯನ್ನು ರಾಮಮಂದಿರ ಉದ್ಘಾಟನೆಗೆ ಆಹ್ವಾನಿಸಿಲ್ಲ. ಈ ಮೂಲಕ ಬಿಜೆಪಿಗರು ಶಿಷ್ಟಾಚಾರದ ಉಲ್ಲಂಘನೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಬಿಜೆಪಿಯವರ ನಡುವಳಿಕೆ ಖಂಡನೀಯ ಎಂದು ತಿಳಿಸಿದ ಅವರು, ರಾಮ ಎಲ್ಲರಿಗೂ ಸೇರಿದ ದೇವರು. ರಾಮಮಂದಿರ ಕಟ್ಟಿರೋದಕ್ಕೆ ಬಿಜೆಪಿಯವರಿಗಿಂತ ನಾವೇ ಹೆಚ್ಚು ಖುಷಿಪಡುತ್ತೇವೆ. ಆದರೆ, ಬಿಜೆಪಿ ಮಾತ್ರ ರಾಮಮಂದಿರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಸಾಧಾರಣ ಮಳೆಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಬಹುತೇಕ ಪ್ರದೇಶಗಳಲ್ಲಿ ಸಾಧಾರಣ ಮಳೆಯನ್ನು ನಿರೀಕ್ಷಿಸಬಹುದು. ಬೆಂಗಳೂರ ಹವಾಮಾನ ಕೇಂದ್ರದ ಮೂಲಗಳ ಪ್ರಕಾರ, ಬೆಂಗಳೂರು ಮಹಾನಗರದ ಕೆಲವು ಪ್ರದೇಶಗಳಲ್ಲಿ ಮುಂಜಾನೆ ಹೊತ್ತು ಮಂಜು ಮುಸುಕಿದ ವಾತಾವರಣದ ಜತೆಗೆ ಸಾಧಾರಣ ಮಳೆ ಬೀಳಬಹುದು. ವಾತಾವರಣದಲ್ಲಿ ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಶಿಯಸ್ ಮತ್ತು ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಶಿಯಸ್ ನಡುವೆ ಇರಲಿದೆ. ಇನ್ನುಳಿದ ಹಾಗೆ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜ ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರಗಳಲ್ಲಿ ಜಿಲ್ಲೆಗಳಲ್ಲಿ ಚಳಿಯ ಜೊತೆಗೆ ಸಾಧಾರಣ ಮಳೆಯೂ ಬೀಳಬಹುದು

Read More

ಸ್ಯಾಮ್‌ಸಂಗ್ ತನ್ನ ಮೊದಲ ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್ ಅನ್ನು  ಜನವರಿ 17 ರಂದು ಆಯೋಜಿಸಿದೆ ಎಂದು ದಕ್ಷಿಣ ಕೊರಿಯಾದ ಟೆಕ್ ದೈತ್ಯ ಬುಧವಾರ ದೃಢಪಡಿಸಿದೆ. ಇದು ವೈಯಕ್ತಿಕ ಈವೆಂಟ್ ಆಗಿರುತ್ತದೆ ಮತ್ತು ಸ್ಯಾನ್ ಜೋಸ್‌ನಲ್ಲಿರುವ SAP ಕೇಂದ್ರದಲ್ಲಿ ನಡೆಯುತ್ತದೆ, ಆದರೆ ಎಲ್ಲಾ Samsung ಅಧಿಕೃತ ಚಾನಲ್‌ಗಳಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಮುಂದಿನ ಪೀಳಿಗೆಯ Galaxy S ಫೋನ್‌ಗಳನ್ನು Galaxy S24 ಎಂದು ಕರೆಯಬಹುದು, ಈವೆಂಟ್‌ನ ಭಾಗವಾಗಿ ನಿರೀಕ್ಷಿಸಲಾಗಿದೆ. ಬ್ರ್ಯಾಂಡ್ ಹೊಸ ಹ್ಯಾಂಡ್‌ಸೆಟ್‌ಗಳಿಗೆ ಪೂರ್ವ ಕಾಯ್ದಿರಿಸುವಿಕೆಯನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಸ್ಯಾಮ್‌ಸಂಗ್‌ನ ಅನ್‌ಪ್ಯಾಕ್ ಮಾಡಲಾದ ಈವೆಂಟ್ ಈ ವರ್ಷದ ಆರಂಭದಲ್ಲಿ ಬರುತ್ತಿದೆ ಏಕೆಂದರೆ ಅದರ ಕೊನೆಯ ಎರಡು ಮಡಿಸಲಾಗದ ಫ್ಲ್ಯಾಗ್‌ಶಿಪ್‌ಗಳನ್ನು ಫೆಬ್ರವರಿಯಲ್ಲಿ ಪ್ರಾರಂಭಿಸಲಾಯಿತು. Galaxy S23 ಸರಣಿಯನ್ನು ಫೆಬ್ರವರಿ 1, 2023 ರಂದು ಬಿಡುಗಡೆ ಮಾಡಲಾಯಿತು ಮತ್ತು Galaxy S22 ಶ್ರೇಣಿಯು ಫೆಬ್ರವರಿ 9 2022 ರಂದು ಪ್ರಾರಂಭವಾಯಿತು. Samsung Galaxy ಅನ್ಪ್ಯಾಕ್ ಮಾಡಲಾದ ಸಮಯ, ಲೈವ್‌ಸ್ಟ್ರೀಮ್ ವಿವರಗಳು Samsung Galaxy Unpacked 2024…

Read More

ಪ್ರವಾಸಿ ಆಸ್ಟ್ರೇಲಿಯಾ ಎದುರು ನಡೆಯುತ್ತಿರುವ 3 ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಾಗಲೇ 2-0 ಅಂತರದಲ್ಲಿ ಗೆದ್ದುಕೊಂಡಿರುವ ಆಸ್ಟ್ರೇಲಿಯಾ ತಂಡ, ಇದೀಗ ಜನವರಿ 3ರಿಂದ 7ರವರೆಗೆ ನಡೆಯಲಿರುವ 3ನೇ ಹಾಗೂ ಅಂತಿಮ ಟೆಸ್ಟ್‌ನಲ್ಲೂ ಪ್ರವಾಸಿಗರ ಸದ್ದಡಗಿಸಿ ಸರಣಿ ವೈಟ್‌ವಾಶ್‌ ಮಾಡುವ ಲೆಕ್ಕಾಚಾರ ಹಾಕಿಕೊಂಡಿದೆ. ಅಂದಹಾಗೆ ಈ ಮೂರನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯ ಆಸೀಸ್‌ ಓಪನರ್‌ ಡೇವಿಡ್‌ ವಾರ್ನರ್‌ ಅವರ ಟೆಸ್ಟ್‌ ಕ್ರಿಕೆಟ್‌ ವೃತ್ತಿಬದುಕಿನ ಕಟ್ಟ ಕಡೆಯ ಪಂದ್ಯವಾಗಿದೆ. ಸರಣಿಗೂ ಮೊದಲೇ ನಿವೃತ್ತಿ ಘೋಷಿಸಿದ್ದ ವಾರ್ನರ್‌ ಎಸ್‌ಸಿಜಿ ಕ್ರೀಡಾಂಗಣದಲ್ಲಿ ಕೊನೇ ಬಾರಿ ರೆಡ್‌ ಬಾಲ್‌ ಕ್ರಿಕೆಟ್‌ ಆಡಲಿದ್ದಾರೆ. ಅಂದಹಾಗೆ ಈ ಮಹತ್ವದ ಪಂದ್ಯಕ್ಕೂ ಮುನ್ನ ಡ್ಯಾಷಿಂಗ್‌ ಓಪನರ್‌ ತಮ್ಮ ಅತ್ಯಮೂಲ್ಯ ಬ್ಯಾಗಿ ಗ್ರೀನ್‌ ಕ್ಯಾಪ್‌ ಕಳೆದುಕೊಂಡಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್‌ ಮೀಡಿಯಾ ವೇದಿಕೆಗಳಲ್ಲಿ ವಾರ್ನರ್‌ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿಮಾನ ಪ್ರಯಾಣದ ವೇಳೆ ಲಗೇಜ್‌ನಲ್ಲಿ ಇರಿಸಲಾಗಿದ್ದ ತಮ್ಮ ಬ್ಯಾಗಿ ಗ್ರೀನ್‌ (ಆಸ್ಟ್ರೇಲಿಯಾ ಟೆಸ್ಟ್‌ ತಂಡದಲ್ಲಿ ಆಡುವ…

Read More

ಚಳಿಗಾಲದ ತಿಂಡಿ ಕಡಲೆಕಾಯಿಯಾಗಿದೆ. ಹುರಿದ ಕಡಲೆಕಾಯಿಯನ್ನು ಚಳಿಗಾಲದಲ್ಲಿ ವ್ಯಾಪಕವಾಗಿ ಸೇವಿಸಲಾಗುತ್ತದೆ. ಇವುಗಳು ನಿಮ್ಮ ರುಚಿಗೆ  ಇಷ್ಟವಾಗುವುದಿಲ್ಲ ಆದರೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡಬಹುದು. ಕಡಲೆಕಾಯಿ ತೂಕ ನಷ್ಟಕ್ಕೆ ಸ್ನೇಹಿಯಾಗಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಕಡಲೆಕಾಯಿಯ ಪ್ರಯೋಜನಗಳ ಬಗ್ಗೆ ನೀವು ಆಶ್ಚರ್ಯ ಪಡುತ್ತಿದ್ದರೆ, ನೀವು ಎಷ್ಟು ಸೇವಿಸಬೇಕು, ಕಡಲೆಕಾಯಿಯನ್ನು ತಿನ್ನಲು ಉತ್ತಮ ಸಮಯ ಮತ್ತು ಹೆಚ್ಚಿನದನ್ನು ನಾವು ನಿಮಗೆ ತಿಳಿಸುತ್ತೇವೆ. ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಶೇಂಗಾವನ್ನು ನೆನೆಸಿ ತಿನ್ನುವುದರಿಂದಾಗುವ ಪ್ರಯೋಜನಗಳನ್ನು ತಿಳಿಯಿರಿ. ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ: ಕಡಲೆಕಾಯಿಯು ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದ್ದು, ಅನೇಕ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ. ಅವು ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ಫೈಬರ್ ಮತ್ತು ವಿವಿಧ ಜೀವಸತ್ವಗಳು ಮತ್ತು ಖನಿಜಗಳ ಅತ್ಯುತ್ತಮ ಮೂಲವಾಗಿದೆ. ಪ್ರತಿದಿನ ಕಡಲೆಕಾಯಿಯನ್ನು ಸೇವಿಸುವುದರಿಂದ ನಿಮ್ಮ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಗಮನಾರ್ಹವಾಗಿ ಕೊಡುಗೆ ನೀಡಬಹುದು, ವಿಶೇಷವಾಗಿ ಚಳಿಗಾಲದ ತಿಂಗಳುಗಳಲ್ಲಿ ಸಮತೋಲಿತ ಆಹಾರವನ್ನು ನಿರ್ವಹಿಸುವುದು ಒಟ್ಟಾರೆ ಯೋಗಕ್ಷೇಮಕ್ಕೆ ನಿರ್ಣಾಯಕವಾಗಿದೆ. ಚಳಿಗಾಲದ ಚಟುವಟಿಕೆಗಳಿಗೆ ಎನರ್ಜಿ ಬೂಸ್ಟ್: ಚಳಿಗಾಲವು ಆಗಾಗ್ಗೆ ಶಕ್ತಿಯ…

Read More

ಬೆಂಗಳೂರು:- ಬೆಂಗಳೂರಿನ ವೈಟ್‌ಫೀಲ್ಡ್‌ ನಲ್ಲಿ ಬೈಕ್‌ ಸವಾರಿ ಮಾಡುವಾಗ ಪ್ಯಾಂಟ್‌ ಜೇಬಿನಲ್ಲಿದ್ದ ಮೊಬೈಲ್‌ ಸ್ಫೋಟವಾಗಿ ಯುವಕನೊಬ್ಬ ತೀವ್ರವಾಗಿ ಗಾಯಗೊಂಡ ಘಟನೆ ಜರುಗಿದೆ. ಯುವಕನನ್ನು ಪ್ರಸಾದ್‌ ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಪ್ರಸಾದ್ ಬುಧವಾರ ಬೈಕ್ ರೈಡ್ ಮಾಡುವಾಗ ಮೊಬೈಲ್ ಅನ್ನು ಪ್ಯಾಂಟ್ ಜೇಬಿನಲ್ಲಿರಿಸಿದ್ದರು. ಆಗ ಅಕಸ್ಮಾತ್ ಆಗಿ ಅದು ಸ್ಫೋಟವಾಗಿದೆ. ಸ್ಫೋಟದ ತೀವ್ರತೆಗೆ ಸೊಂಟದ ಕೆಳಭಾಗ ಸುಟ್ಟು ಹೋಗಿದ್ದು, ಗಂಭೀರ ಗಾಯಗಳಾಗಿವೆ. ಕೂಡಲೇ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ವೈಟ್‌ಫೀಲ್ಡ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ನಡುವೆ, ಮೊಬೈಲ್ ಸ್ಫೋಟವಾಗಿ ಪ್ರಸಾದ್ ಗಾಯಗೊಂಡ ಘಟನೆ ಅವರು ಮೊಬೈಲ್ ಖರೀದಿಸಿದ್ದ ಶೋರೂಂ ಸಿಬ್ಬಂದಿ ಗಮನಕ್ಕೆ ಬಂದಿದೆ. ಕೂಡಲೇ ಅವರು ಸ್ಪಂದಿಸಿದ್ದು, ಪ್ರಸಾದ್ ಅವರ ಅಲ್ಪ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಮತ್ತು ಮೊಬೈಲ್‌ನ ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Read More

ಹೊಸ ವರ್ಷದಂದು ಯುಐ (UI) ಕುರಿತಂತೆ ಹೊಸ ಅಪ್ ಡೇಟ್ ನೀಡುವುದಾಗಿ ಉಪ್ಪಿ (Upendra) ಹೇಳಿಕೊಂಡಿದ್ದರು. ಅದರಂತೆ ಇವತ್ತು ಸಣ್ಣದೊಂದು ವಿಡಿಯೋ ರಿಲೀಸ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಓಡುತ್ತಿರುವ ಕುದುರೆ, ಕುದುರೆ ಕಾಲಿನ ಲಾಳದಿಂದ ಹೊರಬರುವ ಬೆಂಕಿ, ಆ ನಂತರ ದಿನಾಂಕವೊಂದು ರಿವೀಲ್ ಆಗುತ್ತದೆ. ಅಲ್ಲಿ ದಿನಾಂಕ ಬಿಟ್ಟು, ತಿಂಗಳು ಮತ್ತು ವರ್ಷವನ್ನು ಹಾಕಿದ್ದಾರೆ. ದಿನಾಂಕ ಗುರುತಿಸಿ, ಇವೆಂಟ್ ನಲ್ಲಿ ಭಾಗಿಯಾಗಲು ಪಾಸ್ ಪಡೆಯಿರಿ ಎಂದಿದ್ದಾರೆ. ದಿನಾಂಕ ಗ್ಯಾಪ್ ಬಿಟ್ಟಿರೋದು ಸಿನಿಮಾ ರಿಲೀಸ್ (Release) ದಿನಾಂಕ ಇರಬಹುದಾ ಅಥವಾ ಇವೆಂಟ್ ದಿನಾಂಕ ಇರಬಹುದಾ ಗೊತ್ತಿಲ್ಲ. ಒಟ್ಟಿನಲ್ಲಿ ದಿನಾಂಕ ಡಿಕೋಡ್ ಮಾಡಿ ಎಂದಷ್ಟೇ ಹೇಳಿದ್ದಾರೆ. ಅದು ರಿಲೀಸ್ ದಿನಾಂಕ ಆಗಿದ್ದರೆ, ಇದೇ ತಿಂಗಳು ಯುಐ ಸಿನಿಮಾ ರಿಲೀಸ್ ಆಗಲಿದೆ. ಯಾವ ದಿನದಂದು ಅನ್ನೋದು ಮಾತ್ರ ರಹಸ್ಯವಾಗಿ ಉಳಿದುಕೊಂಡಿದೆ. ಉಪ್ಪಿಇದೊಂದು ಹೆಸರು ಕನ್ನಡಿಗರಿಗೆ ಮಾತ್ರ ಅಲ್ಲ, ದಕ್ಷಿಣ ಭಾರತದ ಜನರಲ್ಲಿ ಕಿಚ್ಚು ಮೂಡಿಸುತ್ತದೆ. ಹುಚ್ಚು ಹಿಡಿಸುತ್ತದೆ. ಅದರಲ್ಲೂ ಇವರೇ ನಿರ್ದೇಶಕ ಅದರಂತೂ ಕೇಳಬೇಕೆ? ಇಲ್ಲಿವರೆಗೆ…

Read More

ನಿನ್ನೆಗೆ ಹೋಲಿಸಿದರೆ ಇಂದು ಚಿನ್ನ ದರ ಕಡಿಮೆಯಾಗಿದೆ. ಬೆಳ್ಳಿ ದರ ಕಳೆದ 5 ದಿನಗಳಿಂದಲೂ ಸ್ಥಿರವಾಗಿಯೇ ಇದೆ. ಮೊನ್ನೆ ಕೊಂಚ ಏರಿಕೆ ಕಂಡಿದ್ದರೂ ಬಾರಿ ವ್ಯತ್ಯಾಸವಾಗಿರಲಿಲ್ಲ. ಹಾಗಾದರೆ ಇಂದು ದೇಶದಲ್ಲಿ ಚಿನ್ನದ ದರ ಎಷ್ಟಿದೆ ಎಂಬುದನ್ನು ನೋಡೋಣ. ಇಂದು 1 ಗ್ರಾಂ ಚಿನ್ನದ ಬೆಲೆ 5,850 ರೂ. ಆಗಿದೆ. ನಿನ್ನೆ 5,875 ರೂ. ಇದ್ದು ಇಂದು 25 ರೂ ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 46,800 ರೂ. ನೀಡಬೇಕು. ನಿನ್ನೆ 47,000 ರೂ ಇದ್ದು ಈ ದರಕ್ಕೆ ಹೋಲಿಸಿದೆ ಇವತ್ತು 200 ರೂ ಇಳಿಕೆಯಾಗಿದೆ. ಇಂದಿನ 10 ಗ್ರಾಂ ಚಿನ್ನದ ಬೆಲೆ 58,500 ಆಗಿದ್ದರೆ, ನಿನ್ನೆ 58,750 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 250 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 5,85,000 ರೂ. ಇದೆ. ನಿನ್ನೆ 5,87,500 ರೂ. ಇದ್ದು ಈ ದರಕ್ಕೆ ಹೋಲಿಸಿದರೆ ಇಂದು 2,500 ರೂ ಕಡಿಮೆಯಾಗಿದೆ. 1 ಗ್ರಾಂ 24…

Read More

ಇಸ್ಲಾಮಾಬಾದ್: ಮುಂಬೈ ಭಯೋತ್ಪಾದನಾ ದಾಳಿಯ (Mumbai Terror Attack) ಮಾಸ್ಟರ್ ಮೈಂಡ್ ಹಫೀಜ್ ಸಯೀದ್ (Hafiz Saeed) ಬೆಂಬಲಿತ ಪಕ್ಷ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಲಷ್ಕರ್-ಎ-ತೈಬಾದ ಸಂಸ್ಥಾಪಕ ಹಫೀಜ್ ಮೊಹಮ್ಮದ್ ಸಯೀದ್‌ನ ರಾಜಕೀಯ ಘಟಕವಾದ ಪಾಕಿಸ್ತಾನ್ ಮಾರ್ಕಾಜಿ ಮುಸ್ಲಿಂ ಲೀಗ್ (PMML) ಮುಂಬರುವ ಚುನಾವಣೆಗೆ ಪಾಕಿಸ್ತಾನದಾದ್ಯಂತ ಪ್ರತಿಯೊಂದು ರಾಷ್ಟ್ರೀಯ ಮತ್ತು ಪ್ರಾಂತೀಯ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 2024 ರ ಫೆಬ್ರವರಿ 8 ರಂದು ಚುನಾವಣೆ (Pakistan Election) ನಡೆಯಲಿದೆ.  ಹಫೀಜ್ ಸಯೀದ್‌ನ ಪುತ್ರ ತಲ್ಹಾ ಸಯೀದ್, ಲಾಹೋರ್‌ನ ನ್ಯಾಷನಲ್ ಅಸೆಂಬ್ಲಿಯ NA-127 ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾನೆ. ಆದರೆ PMML ನ ಕೇಂದ್ರ ಅಧ್ಯಕ್ಷ ಖಾಲಿದ್ ಮಸೂದ್ ಸಿಂಧು NA-130 ನಿಂದ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ಮುಖ್ಯಸ್ಥ ಹಾಗೂ ಮಾಜಿ ಪ್ರಧಾನಿ ನವಾಜ್ ಷರೀಫ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. https://ainlivenews.com/do-you-know-the-benefits-of-eating-cashews-every-day-2/ 2019 ರಿಂದ ಜೈಲಿನಲ್ಲಿರುವ ಮೊಹಮ್ಮದ್‌ ಹಫೀಜ್‌ಗೆ 2022 ರಲ್ಲಿ ಪಾಕಿಸ್ತಾನದ ಲಾಹೋರ್‌ನಲ್ಲಿರುವ ವಿಶೇಷ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು,…

Read More