Author: AIN Author

ಕನ್ನಡದ ನಟಿ ರಶ್ಮಿಕಾ ಮಂದಣ್ಣ ಸದ್ಯ ‘ಅನಿಮಲ್’ (Animal) ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಇದರ ನಡುವೆ ಅಭಿಮಾನಿಯೊಬ್ಬ, ನಿಮ್ಮಂತೆಯೇ ಪತ್ನಿ ಸಿಗಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಅಳಲು ತೋಡಿಕೊಂಡಿದ್ದಾರೆ. ಅದಕ್ಕೆ ರಶ್ಮಿಕಾ, ಸ್ವೀಟ್ ಆಗಿ ರಿಪ್ಲೈ ನೀಡಿದ್ದಾರೆ. ‘ಅನಿಮಲ್’ ಚಿತ್ರದ ಸಕ್ಸಸ್‌ನಿಂದ ಬಾಲಿವುಡ್‌ನಲ್ಲಿ ಭದ್ರ ನೆಲೆ ಕಂಡುಕೊಂಡಿದ್ದಾರೆ. ಈ ಖುಷಿಯ ನಡುವೆ ರಶ್ಮಿಕಾ ಮಂದಣ್ಣ ಅಭಿಮಾನಿಗೆ ಮದುವೆ ಬಗ್ಗೆ ರಿಯಾಕ್ಟ್ ಮಾಡಿರೋದು ಸಖತ್ ಸದ್ದು ಮಾಡುತ್ತಿದೆ. ಅಭಿಮಾನಿಯೊಬ್ಬ ರಶ್ಮಿಕಾ (Rashmika Mandanna) ಫೋಟೋ ಶೇರ್ ಮಾಡಿ, ನೀವು ನಮ್ಮ ನ್ಯಾಷನಲ್ ಕ್ರಶ್ ಮೇಡಂ ಎಂದು ಬರೆದುಕೊಂಡಿದ್ದಾರೆ. ಬಳಿಕ ಒಂದು ದಿನ ನಾನು ನಿಮ್ಮ ರೀತಿಯ ಪತ್ನಿಯನ್ನು ಪಡೆಯುತ್ತೇನೆ ಎಂಬ ಭರವಸೆ ಇದೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ರಶ್ಮಿಕಾ ಗಮನಕ್ಕೂ ಬಂದಿದ್ದು, ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಅಹ್ಹಹಾ.. ನಾನು ಮದುವೆಯಾದಾಗ ನನ್ನ ಪತಿ ಕೂಡ ಹೀಗೆ ಭಾವಿಸುತ್ತಾರೆ ಎಂದು ಅಂದುಕೊಂಡಿದ್ದೇನೆ ಎಂದು ರಶ್ಮಿಕಾ ಉತ್ತರಿಸಿದ್ದಾರೆ. ಈ ಪೋಸ್ಟ್ ಸಖತ್ ವೈರಲ್…

Read More

ಬೆಳಗಾವಿ:- ಅಂಗನವಾಡಿ ಸಹಾಯಕಿಗೆ ಥಳಿಸಿ ಕುಡಗೋಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಬೆಳಗಾವಿ ತಾಲೂಕಿನ ಬಸುರ್ತೆ ಗ್ರಾಮದ ಸರ್ಕಾರಿ ಅರಣ್ಯದಲ್ಲಿ ಕಾಕತಿ ಪೊಲೀಸರಿಂದ ಆರೋಪಿಯನ್ನು ಬಂಧಿಸಲಾಗಿದ್ದು, 48 ವರ್ಷದ ಕಲ್ಲಪ್ಪ @ ಕಲ್ಯಾಣಿ ಮೋರೆ ಬಂಧಿತ ಆರೋಪಿ ಎನ್ನಲಾಗಿದೆ. ಸುಗಂಧಾ ಮೋರೆ (50) ಸಾವು ಬದುಕಿನ ಮಧ್ಯೆ ನರಳಾಡುತ್ತಿರುವ ಮಹಿಳೆ ಎನ್ನಲಾಗಿದೆ. ಮಕ್ಕಳು ಅಂದ್ರೆ ತುಂಟಾಟ ಮಾಡೋದು. ತರಲೆ ಮಾಡೋದು ಸಹಜ. ಹಾಗಂತ ಮಕ್ಕಳು ದೊಡ್ಡ ತಪ್ಪೇನು ಮಾಡಿರಲಿಲ್ಲ. ಮನೆ ಮುಂದೆ ಇದ್ದ ಮಲ್ಲಿಗೆ ಹೂವನ್ನು ಕಿತ್ತು ಹಾಕಿದ್ರು. ಅಷ್ಟಕ್ಕೆ ಈ ವ್ಯಕ್ತಿ ಅಂಗನವಾಡಿ ಸಹಾಯಕಿ ಜೊತೆ ಜಗಳ ಮಾಡಿದ್ದಾನೆ. ಕೊನೆಗೆ ಮನೆಯಲ್ಲಿದ್ದ ಕುಡುಗೋಲಿನಿಂದ ಮಹಿಳೆ ಮೂಗಿಗೆ ಹೊಡೆದು ಬಿಟ್ಟಿದ್ದಾನೆ. ಕುಡುಗೋಲಿನಿಂದ ಬಿದ್ದ ಏಟಿಗೆ ಮಹಿಳೆ ಮೂಗು ಕಟ್ ಆಗಿ ರಕ್ತಸ್ರಾವವಾಗಿದೆ. ಪಾಪಿ ಅಟ್ಟಹಾಸಕ್ಕೆ ಇದೀಗ ಬಡಪಾಯಿ ಅಂಗನವಾಡಿ ಸಹಾಯಕಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸ್ತಿದ್ದಾಳೆ. ಜ.1ರಂದು ಅಂಗನವಾಡಿ ಕೇಂದ್ರದ ಮುಂದೆ ಈ ಘಟನೆ ನಡೆದಿತ್ತು.…

Read More

ಹುಬ್ಬಳ್ಳಿ: ಕುಕ್ಕರ್‌ ಬಾಂಬ್‌ ಸ್ಫೋಟಿಸಿದ ಭಯೋತ್ಪಾದಕರನ್ನು ಕಾಂಗ್ರೆಸ್‌ ನಾಯಕರು ಬ್ರದರ್ಸ್‌ ಎಂದು ಹೇಳುತ್ತಾರೆ, ರಾಮಭಕ್ತರನ್ನು ಅಪರಾಧಿ ಎನ್ನುತ್ತಾರೆ. ಆದರೆ ನೂರು ಸಿದ್ದರಾಮಯ್ಯ ಬಂದರೂ ರಾಮಭಕ್ತರು ಎದುರಿಸಲು ಸಿದ್ಧ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್‌ ಸವಾಲೆಸೆದರು‌. ಅವರು ಮಾತನಾಡಿದರು. ಪೊಲೀಸರ ಮೇಲೆ ಹಲ್ಲೆ ಮಾಡಿದವರನ್ನು ಮುಟ್ಟುವುದಿಲ್ಲ. https://ainlivenews.com/stomach-ache-immediately-after-eating-so-try-this-home-remedy/  ಆದರೆ ಪ್ರತಿ ದಿನ ಆಟೋರಿಕ್ಷಾ ಓಡಿಸುವ ಅಮಾಯಕನನ್ನು ತಲೆಮರೆಸಿಕೊಂಡಿದ್ದಾನೆಂದು ಬಂಧಿಸಿದ್ದಾರೆ. ಜೈ ಶ್ರೀರಾಮ್‌ ಎಂದರೆ ಜೈಲಿಗೆ ಹಾಕುತ್ತಾರೆ, ಜೈ ಟಿಪ್ಪು ಎಂದರೆ ಬಿಡುಗಡೆಗೊಳಿಸುತ್ತಾರೆ. ರಾಮಭಕ್ತರನ್ನು ವಿರೋಧಿಸಿದರೆ ಹಾಗೂ ಟಿಪ್ಪು ಸಂಸ್ಕೃತಿಯನ್ನು ವಿಜೃಂಭಿಸಿದರೆ ಕಾಂಗ್ರೆಸ್‌ ಸರ್ಕಾರ ಬಹಳ ಕಾಲ ಉಳಿಯುವುದಿಲ್ಲ. ಟಿಪ್ಪುವಿನ ಹಿಂದೆ ಹೋದವರ ಮನೆಗಳು ಸುಟ್ಟಂತೆಯೇ ಕಾಂಗ್ರೆಸ್‌ ಮನೆಯೂ ಸುಡಲಿದೆ ಎಂದು ಎಚ್ಚರಿಕೆ ನೀಡಿದರು.

Read More

ಈ ವರ್ಷ ಖಗೋಳದಲ್ಲಿ ಎಷ್ಟು ಗ್ರಹಣಗಳು ಸಂಭವಿಸಲಿವೆ. ಅದರಲ್ಲಿ ಎಷ್ಟು ಭಾರತದಲ್ಲಿ ಗೋಚರಿಸಲಿವೆ ಎಂಬುದನ್ನು ವಿಜ್ಞಾನಿಗಳು ವಿವರಿಸಿದ್ದಾರೆ. 2024 ರಲ್ಲಿ ಒಂದು ಸಂಪೂರ್ಣ ಸೂರ್ಯಗ್ರಹಣ ಸೇರಿದಂತೆ ನಾಲ್ಕು ಗ್ರಹಣಗಳು ಸಂಭವಿಸಲಿವೆ. ಅವುಗಳಲ್ಲಿ ಯಾವೊಂದೂ ಭಾರತದಲ್ಲಿ ಗೋಚರಿಸುವುದಿಲ್ಲ. ಈ ಬಗ್ಗೆ ಮಾಹಿತಿ ನೀಡಿರುವ ಮಧ್ಯಪ್ರದೇಶದ ಉಜ್ಜಯಿನಿಯ ಜಿವಾಜಿ ವೀಕ್ಷಣಾಲಯದ ಹಿರಿಯ ಅಧೀಕ್ಷಕ ಡಾ.ರಾಜೇಂದ್ರಪ್ರಕಾಶ್ ಗುಪ್ತಾ, 2024 ರಲ್ಲಿ ಗ್ರಹಣಗಳ ಸರಣಿಯು ಮಾರ್ಚ್ 25 ರಂದು ಪೆನಂಬ್ರಾಲ್ ಚಂದ್ರಗ್ರಹಣದೊಂದಿಗೆ ಪ್ರಾರಂಭವಾಗುತ್ತದೆ. ನಾಲ್ಕು ಖಗೋಳ ಕುತೂಹಲಗಳು ಸಂಭವಿಸಿದರೂ, ಅದರಲ್ಲಿ ಒಂದು ಕೂಡ ಭಾರತದಲ್ಲಿ ನೋಡಲು ಸಾಧ್ಯವಿಲ್ಲ ಎಂದರು. ಮೊದಲ ಸೂರ್ಯಗ್ರಹಣ:ಸೂರ್ಯ, ಭೂಮಿ ಮತ್ತು ಚಂದ್ರ ಬಹುತೇಕ ಸರಳ ರೇಖೆಯಲ್ಲಿ ಒಟ್ಟಾಗಿ ಬಂದಾಗ ಪೆನಂಬ್ರಾಲ್ ಚಂದ್ರಗ್ರಹಣ ಸಂಭವಿಸುತ್ತದೆ. ವರ್ಷದ ಮೊದಲ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಏಕೆಂದರೆ ಈ ಖಗೋಳ ವಿಸ್ಮಯವು ಹಗಲಿನಲ್ಲಿ ನಡೆಯಲಿದೆ. ಹೀಗಾಗಿ ಕಣ್ಣಿಗೆ ಕಾಣುವುದಿಲ್ಲ. ಏಪ್ರಿಲ್ 8 ಮತ್ತು 9 ರ ಮಧ್ಯರಾತ್ರಿಯಲ್ಲಿ ಸಂಪೂರ್ಣ ಸೂರ್ಯಗ್ರಹಣ ಸಂಭವಿಸುತ್ತದೆ. ಇದು ಕೂಡ ಭಾರತದಲ್ಲಿ ಗೋಚರಿಸುವುದಿಲ್ಲ ಎಂದು…

Read More

ಬೆಂಗಳೂರು:- ಸಾಮಾಜಿಕ ಮಾಧ್ಯಮಗಳು ಹಾಗೂ ಇತರೆ ಆನ್‌ಲೈನ್‌ ಖಾತೆಗಳಲ್ಲಿ ಒಂದೇ ರೀತಿಯ ಪಾಸ್‌ವರ್ಡ್ ಬಳಕೆಯಿಂದ ಸೈಂಬರ್ ವಂಚನೆಗೆ ಅವಕಾಶ ಕಲ್ಪಿಸಿದಂತಾಗುತ್ತದೆ. ಹೀಗಾಗಿ ಆನ್‌ಲೈನ್ ವ್ಯವಹಾರದಲ್ಲಿ ಒಂದೇ ರೀತಿಯ ಪಾಸ್‌ವರ್ಡ್ ಬಳಸದಂತೆ ಸಿಐಡಿ ಸೈಬರ್‌ ವಿಭಾಗದ ಪೊಲೀಸರು ಮನವಿ ಮಾಡಿದ್ದಾರೆ. ಹೀಗಾಗಿ ಹುಟ್ಟುಹಬ್ಬದ ದಿನಾಂಕ, ಹೆಸರು ಹಾಗೂ ಸಾಮಾನ್ಯ ಪದಗಳನ್ನು ಪಾಸ್‌ವರ್ಡ್‌ಗೆ ಬಳಸುವಾಗ ಯೋಚಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ನಿಯಮಿತವಾಗಿ ಬಳಸುವ ಪಾಸ್‌ ವರ್ಡ್‌ಗಳನ್ನು ಆಗಾಗ್ಗೆ ಬದಲಾಯಿಸಿ. ಸೈಬರ್‌ ವಂಚನೆಗಳಿಗೆ ಒಂದೇ ರೀತಿಯ ಪಾಸ್‌ ವರ್ಡ್‌ ಬಳಕೆ ಸಹ ಪ್ರಮುಖ ಕಾರಣವಾಗಿದೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.

Read More

ಕನ್ನಡದ ‘ಹೆಬ್ಬುಲಿ’ (Hebbuli) ನಟಿ ಅಮಲಾ ಪೌಲ್ (Amala Paul) ಅವರು ತಮ್ಮ ಅಭಿಮಾನಿಗಳಿಗೆ ಅಮ್ಮನಾಗುತ್ತಿರುವ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸ್ಪೆಷಲ್ ಫೋಟೋ ಮೂಲಕ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ‘ಇಬ್ಬರು ಮೂವರಾಗುತ್ತಿದ್ದೇವೆ’ ಎಂದು ನಟಿ ಅಮಲಾ ಬೇಬಿ ಬಂಪ್ (Baby Bump) ಫೋಟೋ ಶೇರ್ ಮಾಡಿ ಬರೆದುಕೊಂಡಿದ್ದಾರೆ. ನಟಿಯ ಪೋಸ್ಟ್‌ಗೆ ನಟ-ನಟಿಯರು, ಅಭಿಮಾನಿಗಳು ಶುಭಕೋರಿದ್ದಾರೆ ಹೆಬ್ಬುಲಿ’ ನಟಿ ಅಮಲಾ ಪೌಲ್ ಅವರು 2023ರ ನವೆಂಬರ್‌ನಲ್ಲಿ ಜಗತ್ ದೇಸಾಯಿ ಜೊತೆ ಕೊಚ್ಚಿಯಲ್ಲಿ ಮದುವೆಯಾದರು. ಇದು ಅಮಲಾ 2ನೇ ಮದುವೆಯಾಗಿತ್ತು. ನಿರ್ದೇಶಕ ವಿಜಯ್ ಜೊತೆಗಿನ ಡಿವೋರ್ಸ್ ನಂತರ ಜಗತ್ ಜೊತೆ ಹಲವು ವರ್ಷಗಳು ಡೇಟಿಂಗ್ ಮಾಡಿದ್ದರು ಅಮಲಾ. ಕನ್ನಡ, ತಮಿಳು ಸೇರಿದಂತೆ ಬಹುಭಾಷೆಯಲ್ಲಿ ನಾಯಕಿಯಾಗಿ ನಟಿಸುತ್ತಾ ಅಪಾರ ಅಭಿಮಾನಿಗಳ ಗಳಿಸಿದ್ದಾರೆ. ಮದುವೆ ನಂತರವೂ ಮತ್ತೆ ಸಿನಿಮಾ ಮಾಡುತ್ತಾರಾ ಅಮಲಾ ಈ ಬಗ್ಗೆ ಸ್ಪಷ್ಟನೆ ಇಲ್ಲ.

Read More

ದೇಹದಲ್ಲಿ ಕೆಲವೊಂದು ಲಕ್ಷಣಗಳು ಕಂಡುಬಂದರೆ ಕಿಡ್ನಿ ಫೇಲ್ಯೂರ್ ಆಗುವುದು ಖಂಡಿತ ಎಂದು ನೂತನ ಸಂಶೋಧನೆ ಬಹಿರಂಗಪಡಿಸಿದೆ. ದೇಹದ ಪ್ರಮುಖ ಅಂಗವಾದ ಮೂತ್ರಪಿಂಡವು ತನ್ನ ಕೆಲಸ ಮಾಡಲು ವಿಫಲವಾದರೆ ಜೀವಕ್ಕೆ ಅಪಾಯ. ಇಂದು ಅನೇಕರಲ್ಲಿ ಈ ಸಮಸ್ಯೆ ಕಾಡುತ್ತಿರುವುದು ತುಂಬಾ ವಿಷಾದನೀಯವಾಗಿದೆ. ಕಿಡ್ನಿ ವಿಫಲವಾದಾಗ ದೇಹವು ಸರಿಯಾಗಿ ಕೆಲಸ ಮಾಡುವುದಿಲ್ಲ, ತುಂಬಾ ದುರ್ಬಲವಾಗುತ್ತದೆ. ದೇಹದ ವಿವಿಧ ಭಾಗಗಳಲ್ಲಿ ಕೆಂಪು ಬಣ್ಣದ ದದ್ದುಗಳು ಕಾಣಿಸಿಕೊಳ್ಳಬಹುದು. ಇವು ವಿಪರೀತ ತುರಿಕೆ ಉಂಟುಮಾಡುತ್ತವೆ. ಚರ್ಮವು ತುಂಬಾ ಡ್ರೈ ಮತ್ತು ಒರಟಾಗಲು ಪ್ರಾರಂಭಿಸುತ್ತದೆ. ಪದೇ ಪದೇ ಅತಿಯಾಗಿ ಮೂತ್ರ ವಿಸರ್ಜನೆಯಾಗುವುದು ಕೂಡ ಕಿಡ್ನಿ ವೈಫಲ್ಯದ ಸಂಕೇತ. ಜೊತೆಗೆ ಮೂತ್ರ ವಿಸರ್ಜಿಸುವಾಗ ಉರಿ ಇರುತ್ತದೆ. ದೇಹದಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಮುಖದಲ್ಲಿ ಕೂಡ ಊತ ಕಂಡುಬರುತ್ತದೆ. ಕಿಡ್ನಿ ಫೇಲ್‌ ಆಗಿದ್ದರೆ ನಮಗೆ ಹಸಿವಾಗುವುದಿಲ್ಲ. ವಾಂತಿ ಅಥವಾ ವಾಕರಿಕೆ ಬಂದಂತೆ ಅನಿಸುತ್ತದೆಯಾಗಿದೆ. ಹೀಗಾಗಿ ಈ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರನ್ನು ಭೇಟಿ ಆಗುವುದು ಉತ್ತಮ.

Read More

ರಾಮನಗರ: ಗೋಧ್ರಾ ಮಾದರಿ ದುರಂತದ ವಿಚಾರವಾಗಿ ಈ ಹಿಂದೆ ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡಿದ್ದ ಬಿಕೆ ಹರಿಪ್ರಸಾದ್ ಅವರಿಗೆ ಮಾಹಿತಿ ಇರಬಹುದು. ಹಾಗಾಗಿ ಅವರನ್ನೇ ಕೇಳಿ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮಾರ್ಮಿಕವಾಗಿ ಹೇಳಿದ್ದಾರೆ. ಜನವರಿ 22ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ತೆರಳುವವರಿಗೆ ಸರ್ಕಾರ ರಕ್ಷಣೆ ನೀಡಬೇಕು. ಹಿಂದೆ ನಡೆದ ಗೋಧ್ರಾ ದುರಂತದ ರೀತಿ ಮತ್ತೆ ಅಪಾಯ ಸಂಭವಿಸುವ ಮಾಹಿತಿ ಇದೆ. ಎಂದು ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಸ್ಪೋಟಕ ಹೇಳಿಕೆ ನೀಡಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.  ಇದಕ್ಕೆ ಸಂಬಂಧಿಸಿ ಚನ್ನಪಟ್ಟಣದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗಳಿೆಗೆ ಪ್ರತಿಕ್ರಿಯಿಸಿದ ಅವರು ಹರಿಪ್ರಸಾದ್ ರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡಿದವರು. https://ainlivenews.com/stomach-ache-immediately-after-eating-so-try-this-home-remedy/ ಈ ಹಿಂದೆ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ರು. ಹಾಗಾಗಿ ಅವರಿಗೆ ಮಾಹಿತಿ ಇರಬಹುದು. ನೀವು ಅದರ ಬಗ್ಗೆ ಅವರನ್ನೇ ಕೇಳಿ ಎಂದರು. ಇನ್ನು ಸಿದ್ದರಾಮಯ್ಯ 5 ವರ್ಷ ಸಿಎಂ ಆಗಲು ಹೋರಾಟ ಮಾಡಬೇಕು ಎಂಬ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ…

Read More

ಆಗ್ರಾ: ದಲಿತ ಯುವತಿಯ (Dalit Women) ಮೇಲೆ ಪೊಲೀಸ್ ಪೇದೆಯೊಬ್ಬ ಅತ್ಯಾಚಾರ ಮಾಡಿ ಕತ್ತು ಹಿಸುಕಿ ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದೆ. ಯುವತಿಯ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಕಾನ್‌ಸ್ಟೇಬಲ್ ರಾಘವೇಂದ್ರ ಸಿಂಗ್ (27) ನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಆರ್‌ಕೆ ಸಿಂಗ್ ತಿಳಿಸಿದ್ದಾರೆ. 25 ವರ್ಷದ ಮೃತ ಯುವತಿಯ ಗುರುತು ಮುಚ್ಚಿಡಲಾಗಿದ್ದು, ಕಾನ್‌ಸ್ಟೇಬಲ್ ರಾಘವೇಂದ್ರ ಸಿಂಗ್ (27) ಬಾಡಿಗೆ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ನೇಣು ಬಿಗಿದುಕೊಂಡಿರುವುದು ಸಾವಿಗೆ ಕಾರಣ ಎಂದು ದೃಢಪಡಿಸಿದೆ. ಮೂಲಗಳ ಪ್ರಕಾರ ಗುರುಗ್ರಾಮ್‌ನ ಕಿಡ್ನಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಮೃತ ಯುವತಿ ಮತ್ತು ಕಾನ್‌ಸ್ಟೇಬಲ್ ರಾಘವೇಂದ್ರ ಸಿಂಗ್ ಪರಸ್ಪರ ಪರಿಚಯಸ್ಥರು. ಇಬ್ಬರು ಝಾನ್ಸಿಯಲ್ಲಿ ನರ್ಸಿಂಗ್ ತರಬೇತಿ ಪಡೆದಿದ್ದರು ಮತ್ತು ಅಂದಿನಿಂದ ಸಂಪರ್ಕದಲ್ಲಿದ್ದರು. ಕೆಲ ದಿನಗಳ ಹಿಂದೆ ಯುವತಿಯ ಸಹೋದರ ರಾಘವೇಂದ್ರ ಸಿಂಗ್ ಮನೆಗೆ ಭೇಟಿ ನೀಡಿದ್ದರು. ಬಳಿಕ ರಾಘವೇಂದ್ರ ಅವರ ಮದುವೆ ಪ್ರಸ್ತಾಪವನ್ನು ಯುವತಿಯ…

Read More

ನವದೆಹಲಿ:- ಮಣಿಪುರದಿಂದ ರಾಹುಲ್​ ಗಾಂಧಿ ನೇತೃತ್ವದಲ್ಲಿ ನಡೆಸಲು ಉದ್ಧೇಶಿಸಲಾಗಿದ್ದ ಭಾರತ್ ನ್ಯಾಯ್ ಯಾತ್ರೆಯನ್ನು ಮರುನಾಮಕರಣ ಮಾಡಿರುವುದಾಗಿ ಎಐಸಿಸಿ ವಕ್ತಾರ ಜೈರಾಮ್​ ರಮೇಶ್​ ತಿಳಿಸಿದ್ದಾರೆ. 2022-23ರಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಭಾರತ್​ ಜೋಡೋ ಯಾತ್ರೆಯನ್ನು ಮುನ್ನಡೆಸಿದ ರಾಹುಲ್ ಈ ಬಾರಿ ಪೂರ್ವದಿಂದ ಪಶ್ಚಿಮಕ್ಕೆ ಯಾತ್ರೆಯನ್ನು ಮುನ್ನಡೆಸಲಿದ್ದಾರೆ. ಮಣಿಪುರದಿಂದ ಯಾತ್ರೆ ಆರಂಭವಾಗಿ ಗಾಂಧೀಜಿ ಜನ್ಮಸ್ಥಳ ವಾದ ಗುಜರಾತ್‌ನ ಪೋರಬಂದರ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಯಾತ್ರೆ 15 ರಾಜ್ಯಗಳು ಮತ್ತು 100 ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ ಎಂದು ತಿಳಿಸಿದ್ದಾರೆ. ಭಾರತ್ ಜೋಡೋ ನ್ಯಾಯ್ ಯಾತ್ರೆಯು ಜನವರಿ 14ರಂದು ಇಂಫಾಲ್‌ನಿಂದ ಮಧ್ಯಾಹ್ನ 12.30 ಕ್ಕೆ ಪ್ರಾರಂಭವಾಗಲಿದೆ. ಇದು ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಅರುಣಾಂಚಲ್ ಪ್ರದೇಶ, ಮೇಘಾಲಯ ಮೂಲಕ ಹಾದುಹೋಗುತ್ತದೆ. ಇದು ಮಧ್ಯ ಭಾರತವನ್ನು ತಲುಪುವ ಮೊದಲು ಬಂಗಾಳವನ್ನು ತಲುಪುತ್ತದೆ. ಪಕ್ಷದ ಹಿರಿಯ ನಾಯಕರ ಆರೋಗ್ಯದ ಕಾಳಜಿಯಂತೆ ಸಾರ್ವತ್ರಿಕ ಚುನಾವಣೆಯ ಸಮಯದ ನಿರ್ಬಂಧದಿಂದಾಗಿ ಬದಲಾವಣೆಯಾಗಿದೆ. ನಾವು ಇಂಡಿಯಾ ಮೈತ್ರಿಕೂಟದ ಎಲ್ಲಾ ಪಕ್ಷಗಳ ನಾಯಕರು, ಅವರ ಬೆಂಬಲಿಗರು, ಸಾರ್ವಜನಿಕರು ಮತ್ತು ಎನ್‌ಜಿಒಗಳನ್ನು…

Read More