Author: AIN Author

ಉತ್ತರ ಪ್ರದೇಶ: ರಾಮಮಂದಿರ (Ram Mandir) ಉದ್ಘಾಟನೆ ದಿನವಾದ ಜ.22 ರಂದು ಪಿಂಕ್‌ ಸಿಟಿ ಜೈಪುರದಲ್ಲಿ (Jaipur) ಎಲ್ಲಾ ಮಾಂಸ ಮತ್ತು ಮದ್ಯದ ಅಂಗಡಿಗಳನ್ನು ಮುಚ್ಚುವ ನಿರ್ಧಾರವನ್ನು ಮುನ್ಸಿಪಲ್‌ ಕಾರ್ಪೊರೇಷನ್‌ ತೆಗೆದುಕೊಂಡಿದೆ. ಅಯೋಧ್ಯೆಯಲ್ಲಿ (Ayodhya) ನಿರ್ಮಾಣವಾಗಿರುವ ರಾಮಮಂದಿರ ಉದ್ಘಾಟನೆಗೆ ಇಡೀ ದೇಶದಲ್ಲಿ ಸಂತಸದ ವಾತಾವರಣವಿದೆ. ಅದೇ ಸಮಯದಲ್ಲಿ ಜೈಪುರ ಹೆರಿಟೇಜ್ ಮುನ್ಸಿಪಲ್ ಕಾರ್ಪೊರೇಷನ್ ಈ ಬಗ್ಗೆ ನಿರ್ಧಾರ ಕೈಗೊಂಡಿದೆ. https://ainlivenews.com/1603-vacancies-in-indian-oil-company-today-is-the-last-day-apply-soon/ ಪಿಂಕ್ ಸಿಟಿ ಜೈಪುರದಲ್ಲಿ ಎಲ್ಲಾ ಮಾಂಸ ಮತ್ತು ಮದ್ಯದ ಅಂಗಡಿಗಳು ಜನವರಿ 22 ರಂದು ಬಂದ್‌ ಆಗಲಿವೆ. ಸಿವಿಲ್ ಲೈನ್ಸ್ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲ್ ಶರ್ಮಾ ಅವರು ಮೇಯರ್ ಮುನೇಶ್ ಗುರ್ಜಾರ್ ಅವರಿಗೆ ಈ ನಿರ್ಧಾರ ಕೈಗೊಳ್ಳಲು ಮನವಿ ಮಾಡಿದ್ದರು. ಇದೇ ವೇಳೆ ಮೇಯರ್ ಅನುಮೋದನೆ ನೀಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜ.22 ರಂದು ಜೈಪುರದಲ್ಲಿ ಮಹಾದೀಪೋತ್ಸವ ಜನವರಿ 22 ರಂದು ಜೈಪುರದಲ್ಲಿ ಮಹಾದೀಪೋತ್ಸವ ಆಯೋಜಿಸಲಾಗಿದೆ. ಶಾಸಕ ಬಲ್ಮುಕುಂದಾಚಾರ್ಯ ಬಳಿಕ ಇದೀಗ ಮತ್ತೊಬ್ಬ ಶಾಸಕ ಜೈಪುರದಲ್ಲಿ ಅಕ್ರಮ ಮಾಂಸದ ಅಂಗಡಿಗಳು…

Read More

ಬೆಳಗಾವಿ: ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಶರ್ಮನ್‌ ಇಂಗ್ಲಿಷ್‌ ಮೀಡಿಯಮ್‌ ಹೈ ಸ್ಕೂಲ್‌ ವಿದ್ಯಾರ್ಥಿಗಳು  ಹಾಗೂ ಬೆಳಗಾವಿ ಪೊಲೀಸ್‌ ಕಮಿಷನರ್‌ ಎಸ್.ಎನ್‌ ಸಿದ್ದರಾಮಪ್ಪ, ಡಿಸಿಪಿ ಸ್ನೇಹ, ಡಿಸಿಪಿ ರೋಹನ್‌ ಜಗದೀಶ್‌ ನೇತೃತ್ವದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಸಿ ಜಾಗೃತಿ ಮೂಡಿಸಲಾಯಿತು. ಈ ವೇಳೆ ಮಾತನಾಡಿದ ಪೊಲೀಸರು,  ಮದ್ಯಪಾನದಿಂದ ಕೌಟುಂಬಿಕ ಮತ್ತು ಸಾಮಾಜಿಕ ಸ್ವಾಸ್ಥ್ಯ ಹದಗೆಡಲಿದೆ. ಹಣ, ಗುಣ ಎರಡೂ ಹಾಳಾಗಲಿದ್ದು, ಕುಟುಂಬಗಳು ಬೀದಿಗೆ ಬರಲಿವೆ. ಕುಡಿತ ಸೇರಿದಂತೆ ನಾನಾ ಚಟಗಳಿಂದ ಅದಷ್ಟೋ ಕುಟುಂಬಗಳು ಹಾಳಾಗಿ ಹೋಗಿರುವ ಉದಾಹರಣೆಗಳು ಬೇಕಷ್ಟಿವೆ. ಮಾದಕ ದ್ರವ್ಯಗಳ ಬಗೆಗೆ ಅರಿವು ಮೂಡಿಸುವಲ್ಲಿ ವಿದ್ಯಾರ್ಥಿಗಳು ಕಾಳಜಿ ತೋರಬೇಕಿದೆ. ಕೇವಲ ವಿದ್ಯಾರ್ಜನೆಗೆ ಸೀಮಿತವಾಗದೇ ಸಾಮಾಜಿಕ ಕಳಕಳಿ ಪ್ರದರ್ಶಿಸುವಂತೆ ಕಿವಿಮಾತು ಹೇಳಿದರು. ಜೊತೆಗೆ ಕೆಲವು ಘೋಷಣಾ ವಾಕ್ಯಗಳೊಂದಿಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಯಿತು.  ಇನ್ನೂ ಈ ಸಂದರ್ಭದಲ್ಲಿ ಬೆಳಗಾವಿ ಪೊಲೀಸ್‌ ಕಮಿಷನರ್‌ ಎಸ್.ಎನ್‌ ಸಿದ್ದರಾಮಪ್ಪ, ಡಿಸಿಪಿ ಸ್ನೇಹ, ಡಿಸಿಪಿ ರೋಹನ್‌ ಜಗದೀಶ್‌, ಪೊಲೀಸ್‌ ಸಿಬ್ಬಂದಿಗಳು ಹಾಗೂ…

Read More

ಕೋಟ್ಯಾಧಿಪತಿ ಗೌತಮ್ ಅದಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಭಾರತದ ಶ್ರೀಮಂತ ವ್ಯಕ್ತಿಯಾಗಿದ್ದಾರೆ, ಅವರ ಸಂಘಟಿತ ಅದಾನಿ ಗ್ರೂಪ್‌ನ ಪಟ್ಟಿಮಾಡಿದ ಷೇರುಗಳಲ್ಲಿ ಬಲವಾದ ರ್ಯಾಲಿಯಿಂದ ಬೆಂಬಲಿತವಾಗಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ಗೌತಮ್ ಅದಾನಿಯವರ ನಿವ್ವಳ ಮೌಲ್ಯವು ಪ್ರಸ್ತುತ $97.6 ಬಿಲಿಯನ್ ಆಗಿದೆ – ಮುಖೇಶ್ ಅಂಬಾನಿಯವರ $97 ಶತಕೋಟಿಗಿಂತ ಸ್ವಲ್ಪ ಹೆಚ್ಚಾಗಿದೆ – ಅವರು ವಿಶ್ವದ 12 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಗೌತಮ್ ಅದಾನಿಯವರ ನಿವ್ವಳ ಮೌಲ್ಯಕ್ಕೆ $7.67 ಶತಕೋಟಿಯನ್ನು ಸೇರಿಸುವ ಮೂಲಕ ಅದಾನಿ ಗ್ರೂಪ್ ಷೇರುಗಳಲ್ಲಿ ಬಲವಾದ ರ್ಯಾಲಿಯ ಒಂದು ದಿನದ ನಂತರ ಈ ಬೆಳವಣಿಗೆ ಬಂದಿದೆ. ವರ್ಷದಿಂದ ಇಲ್ಲಿಯವರೆಗೆ (YTD) ಆಧಾರದ ಮೇಲೆ, ಗೌತಮ್ ಅದಾನಿ ಅವರ ಸಂಪತ್ತು ಈಗಾಗಲೇ $13.3 ಬಿಲಿಯನ್ ಗಳಿಸಿದೆ, ಇದು ವಿಶ್ವದ ಅಗ್ರ 100 ಬಿಲಿಯನೇರ್‌ಗಳಲ್ಲಿ ಹೆಚ್ಚು ಯುಎಸ್ ಮೂಲದ ಕಿರು ಮಾರಾಟಗಾರ ಹಿಂಡೆನ್‌ಬರ್ಗ್ ರಿಸರ್ಚ್‌ನ ಕಟುವಾದ ವರದಿಯಿಂದ ಪ್ರಚೋದಿಸಲ್ಪಟ್ಟ ತನ್ನ ಬಂದರುಗಳಿಂದ ಅಧಿಕಾರದ ಸಾಮ್ರಾಜ್ಯದ ಮೌಲ್ಯಮಾಪನದಲ್ಲಿ ಭಾರಿ…

Read More

ಲಕ್ನೋ: ಅಯೋಧ್ಯೆ ರಾಮಮಂದಿರವನ್ನು (Ayodhya Ram Mandir) ಸ್ಫೋಟಿಸುವುದಾಗಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಇಬ್ಬರು ಕಿಡಿಗೇಡಿಗಳನ್ನು ಉತ್ತರ ಪ್ರದೇಶದ (Uttar Pradesh) ಪೊಲೀಸರು (Police) ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ತಹರ್ ಸಿಂಗ್ ಹಾಗೂ ಓಂಪ್ರಕಾಶ್ ಮಿಶ್ರಾ ಎಂದು ಗುರುತಿಸಲಾಗಿದೆ. ಲಕ್ನೋದ ಗೋಮತಿ ನಗರದ ವಿಭೂತಿ ಖಂಡ್‍ನಿಂದ ಆರೋಪಿಗಳನ್ನು ವಿಶೇಷ ಪೊಲೀಸ್ ಪಡೆ ಬಂಧಿಸಿದೆ. ಆರೋಪಿಗಳು ಗೊಂಡಾ ನಿವಾಸಿಗಳಾಗಿದ್ದು, ಅರೆವೈದ್ಯಕೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಆರೋಪಿಗಳು ಎಕ್ಸ್‌ನಲ್ಲಿ, ಆದಿತ್ಯನಾಥ್ (Yogi Adityanath), ಎಸ್‍ಟಿಎಫ್ ಮುಖ್ಯಸ್ಥ ಅಮಿತಾಬ್ ಯಶ್ ಮತ್ತು ಅಯೋಧ್ಯೆಯ ರಾಮ ಮಂದಿರಕ್ಕೆ ಬೆದರಿಕೆ ಹಾಕಿದ್ದರು. https://ainlivenews.com/1603-vacancies-in-indian-oil-company-today-is-the-last-day-apply-soon/ ಬೆದರಿಕೆ ಬಂದ ಎಕ್ಸ್ ಖಾತೆ ಹಾಗೂ ಇಮೇಲ್ ಐಡಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ ಬಳಿಕ ತಹರ್ ಸಿಂಗ್ ಇಮೇಲ್ ಖಾತೆಗಳನ್ನು ರಚಿಸಿದ್ದಾನೆ ಮತ್ತು ಓಂಪ್ರಕಾಶ್ ಮಿಶ್ರಾ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾನೆ ಎಂಬುದು ತಿಳಿದು ಬಂದಿದೆ. ಎಸ್‍ಟಿಎಫ್ ಅಧಿಕಾರಿಗಳು ಅರೋಪಿಗಳ ವಿರುದ್ಧ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Read More

ನವದೆಹಲಿ: ಅಯೋಧ್ಯೆ (Ayodhya) ಭೇಟಿ ವೇಳೆ ಉಜ್ವಲ ಫಲಾನುಭವಿ ಮೀರಾ ಮಾಂಝಿ (Ujjwala Beneficiary Meera Manjhi) ಮನೆಗೆ ಭೇಟಿ ನೀಡಿ ಟೀ ಕುಡಿದಿದ್ದ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ವಿಶೇಷ ಗಿಫ್ಟ್‌ನೊಂದಿಗೆ ಶುಭಕೋರಿದ್ದಾರೆ. 2024 ರ ಹೊಸ ವರ್ಷಕ್ಕೆ ಮೀರಾ ಮಾಂಝಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಪತ್ರದ ಮೂಲಕ ಪ್ರಧಾನಿ ಶುಭಾಶಯಗಳನ್ನು ತಿಳಿಸಿದ್ದಾರೆ. ಜೊತೆಗೆ ಇಡೀ ಕುಟುಂಬಕ್ಕೆ ಉಡುಗೊರೆಗಳನ್ನು ಕಳುಹಿಸಿದ್ದಾರೆ. https://twitter.com/ANI/status/1742564019305923058?ref_src=twsrc%5Etfw%7Ctwcamp%5Etweetembed%7Ctwterm%5E1742564019305923058%7Ctwgr%5Eb7b570239ed3aa45b90b413a188fae3e394214af%7Ctwcon%5Es1_&ref_url=https%3A%2F%2Fpublictv.in%2Fpm-modi-wrote-a-letter-to-ujjwala-beneficiary-meera-manjhi-and-sent-gifts-for-her-and-her-family%2F ಪತ್ರದಲ್ಲೇನಿದೆ..?: ಮೀರಾ ದೇವಿ ಜೀ, ನಿಮಗೆ ಮತ್ತು ನಿಮ್ಮ ಕುಟುಂಬ ಸದಸ್ಯರಿಗೆ 2024 ರ ಹೊಸ ವರ್ಷದ ಶುಭಾಶಯಗಳು. ಭಗವಾನ್ ಶ್ರೀರಾಮನ ಪವಿತ್ರ ನಗರವಾದ ಅಯೋಧ್ಯೆಯಲ್ಲಿ ನಿಮ್ಮನ್ನು ಮತ್ತು ನಿಮ್ಮ ಕುಟುಂಬದ ಸದಸ್ಯರನ್ನು ಭೇಟಿಯಾಗಿದ್ದು ಹಾಗೂ ನೀವು ತಯಾರಿಸಿದ ಚಹಾವನ್ನು ಸೇವಿಸಿರುವುದು ಸಂತಸ ತಂದಿದೆ. https://ainlivenews.com/1603-vacancies-in-indian-oil-company-today-is-the-last-day-apply-soon/ ಅಯೋಧ್ಯೆಯಿಂದ ಬಂದ ನಂತರ ಹಲವು ಟಿವಿ ಚಾನೆಲ್‌ಗಳಲ್ಲಿ ನಿಮ್ಮ ಸಂದರ್ಶನ ನೋಡಿದೆ. ನಿಮ್ಮ ಮತ್ತು ಕುಟುಂಬ ಸದಸ್ಯರ ವಿಶ್ವಾಸ ಮತ್ತು ನಿಮ್ಮ ಅನುಭವಗಳನ್ನು ನೀವು ಹಂಚಿಕೊಂಡ ಸರಳ ನಡೆ ತುಂಬಾ…

Read More

ಬೆಂಗಳೂರು:  ಪ್ರತಿ ವರ್ಷದಂತೆ ಈ ವರ್ಷವೂ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಇಂದಿನಿಂದ ಜನವರಿ 9 ರವರೆಗೆ 24ನೇ ಆವೃತ್ತಿಯ ‘ಅವರೆ ಬೇಳೆ ಮೇಳ’  ನಡೆಯಲಿದೆ. ಶ್ರೀ ವಾಸವಿ ಕಾಂಡಿಮೆಂಟ್ಸ್ ವತಿಯಿಂದ ಮೇಳವನ್ನು ಆಯೋಜಿಸಲಾಗಿದೆ.  ಈ  ಅವರೆಬೇಳೆ ಮೇಳವನ್ನು ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಟಿ. ಎ. ಶರವಣ ಅವರು ಉದ್ಘಾಟಿಸಿದರು. ಆ ಮೂಲಕ ಉದ್ಯಾನನಗರಿ ಜನರು ವರ್ಷದ ಆರಂಭದಲ್ಲೇ ಅವರೆ ಬೇಳೆ ವಿವಿಧ ಭಕ್ಷ್ಯಗಳನ್ನು ಸವಿಯುವ ಅವಕಾಶ ದೊರೆಯಲಿದೆ  100 ಕ್ಕೂ ಹೆಚ್ಚು ಭಕ್ಷ್ಯಗಳು ಲಭ್ಯವಿರಲಿವೆ, ಅವರೆ ದೋಸೆ, ಪಾಯಸ, ವಡೆ, ಮಂಚೂರಿಯನ್, ಪಫ್, ಹಲ್ವಾ, ಅವರೆ ಐಸ್‌ಕ್ರೀಂ ಮತ್ತು ನೂರಕ್ಕೂ ಹೆಚ್ಚು ತಿನಿಸುಗಳು ಲಭ್ಯವಿರುತ್ತವೆ. ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಪರಮಪೂಜ್ಯ ಶ್ರೀ ನಿ.ಪ್ರ. ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ರವರು, ಕನ್ನಡದ ಖ್ಯಾತ ಚಲನಚಿತ್ರ ನಟಿ ಶ್ರೀಮತಿ ತಾರಾ ಹಾಗು ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಬಸವನಗುಡಿಯ ಕಡಲೆಕಾಯಿ ಪರಿಷೆಯಿಂದ ಪ್ರೇರಿತರಾಗಿ ವಾಸವಿ ಕಾಂಡಿಮೆಂಟ್ಸ್​ ಸಜ್ಜನ್​ರಾವ್ ಸರ್ಕಲ್​ನಲ್ಲಿ ಅವರೆ ಬೇಳೆ…

Read More

ರಾಮನಗರ: ಗೋಧ್ರಾ (Godhra Riots) ಮಾದರಿ ಮತ್ತೊಂದು ದುರಂತ ಸಂಭವಿಸಬಹುದು ಎಂಬ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ (B.K.Hariprasad) ಹೇಳಿಕೆಯನ್ನ ಸಂಸದ ಡಿ.ಕೆ.ಸುರೇಶ್ (D.K.Suresh) ಸಮರ್ಥಿಸಿಕೊಂಡಿದ್ದಾರೆ. ಚನ್ನಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇವತ್ತು ಅಯೋಧ್ಯೆ ವಿವಾದಾತ್ಮಕ ಕ್ಷೇತ್ರ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಆಗಿದೆ. ರಾಮಮಂದಿರಕ್ಕೂ ರಕ್ಷಣೆ ಬೇಕು, ಭಕ್ತರಿಗೂ ರಕ್ಷಣೆ ಕೊಡಬೇಕು. ಏನೇ ಇದ್ರೂ ರಕ್ಷಣೆ ಕೊಡುವುದು ಸರ್ಕಾರದ ಕರ್ತವ್ಯ. ಆ ದೃಷ್ಟಿಯಿಂದ ಹರಿಪ್ರಸಾದ್ ಅವರು ಹೇಳಿದ್ದಾರೆ ಎಂದು ತಿಳಿಸಿದರು. https://ainlivenews.com/1603-vacancies-in-indian-oil-company-today-is-the-last-day-apply-soon/ ಕರಸೇವಕರ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ ವಿಚಾರ ಕುರಿತು ಮಾತನಾಡಿ, ಯಾರನ್ನೂ ಉದ್ದೇಶಪೂರ್ವಕವಾಗಿ ಬಂಧನ ಮಾಡಿಲ್ಲ. ಸರ್ಕಾರ ಕೆಲ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ. ಈಗಾಗಲೇ ಈ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಕೆಲ ದುರ್ಘಟನೆ ನಡೆಯಬಹುದು ಎಂಬ ಗುಮಾನಿ ಮೇಲೆ ಬಂಧನ ಮಾಡಲಾಗಿದೆ. ಇದು ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ಮಾಡಿರುವ ಕ್ರಮ. ಇದರಲ್ಲಿ ರಾಜಕೀಯ ಇಲ್ಲ ಎಂದರು.

Read More

‘ಕೆಜಿಎಫ್’ ನಂತರ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಆಯ್ಕೆಯಲ್ಲಿ ಬಹಳ ಹುಷಾರಾಗಿದ್ದಾರೆ. ಅವಸರ ಮಾಡದೆ ಒಳ್ಳೆಯ ಸಿನಿಮಾಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಯಶ್​​ ಮುಂದಿನ ಸಿನಿಮಾ ಟಾಕ್ಸಿನ್​​​​ನಲ್ಲಿ ನಟಿಸುವಂತೆ ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಖಾನ್ ಅವರನ್ನು ಚಿತ್ರತಂಡ ಸಂಪರ್ಕಿಸಿದೆ. ನಟಿ ಸಕಾರಾತ್ಮಕ ಒಪ್ಪಿಗೆಯೊಂದಿಗೆ ಪ್ರತಿಕ್ರಿಯಿಸಿದ್ದಾರಂತೆ. ಕರೀನಾ ಅವರು ಯಶ್​​​​ಗೆ ಜೋಡಿಯಾಗಿದ್ದಾರೆಯೇ ಅಥವಾ ಟಾಕ್ಸಿಕ್‌ನಲ್ಲಿ ಪ್ರಮುಖ ಪಾತ್ರಕ್ಕಾಗಿ ಅವರನ್ನು ಸಂಪರ್ಕಿಸಲಾಗಿದೆಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಶೀಘ್ರದಲ್ಲೇ ಈ ಬಗ್ಗೆ ನಿರ್ಮಾಪಕರು ಘೋಷಣೆ ಮಾಡಲಿದ್ದಾರೆ. ಸದ್ಯ ಪ್ರಕಟಣೆಯ ಜೊತೆಗೆ, ಚಿತ್ರದ ಥೀಮ್ ಅನ್ನು ಬಹಿರಂಗಪಡಿಸುವ ಕಿರು ವಿಡಿಯೋ ಬೈಟ್ ಅನ್ನು ಅನಾವರಣಗೊಳಿಸಲಾಗಿದೆ.

Read More

ಉಡುಪಿ: ಬಿ.ಕೆ ಹರಿಪ್ರಸಾದ್ (BK Hariprasad) ಹಿಂದೂವೇ ಅಲ್ಲ. ಅವರು ದೇಶದ್ರೋಹಿ. ಕಾಂಗ್ರೆಸ್ ನಲ್ಲಿ ನಿರ್ಲಕ್ಷಕ್ಕೆ ಒಳಪಟ್ಟ ನಾಯಕ ಇದ್ದರೆ ಅದು ಬಿ.ಕೆ ಹರಿಪ್ರಸಾದ್ ಎಂದು ಶಾಸಕ ಯಶ್ ಪಾಲ್ ಸುವರ್ಣ (Yashpal Suvarna) ವಾಗ್ದಾಳಿ ನಡೆಸಿದ್ದಾರೆ. ಅಯೋಧ್ಯೆ ಬಿಜೆಪಿ (BJP) ಪಕ್ಷದ ರಾಜಕೀಯ ಮಂದಿರ. ರಾಮಲಲ್ಲಾ ಪ್ರತಿಷ್ಠಾಪನೆ ಮಾಡುವ ಮೋದಿ, ಅಮಿತ್ ಶಾ ಅವರದ್ದು ಯಾವ ಧರ್ಮ ಎಂದು ಹರಿಪ್ರಸಾದ್ ಪ್ರಶ್ನೆ ಮಾಡಿದ್ದಾರೆ. ಈ ವಿಚಾರಕ್ಕೆ ಯಶ್ ಪಾಲ್ ಸುವರ್ಣ‌ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ನವರೇ ಹರಿಪ್ರಸಾದ್ ಅನ್ನು ಲೆಕ್ಕಿಸುವುದಿಲ್ಲ, ಬದಿಗಿಟ್ಟಿದ್ದಾರೆ. ರಾಮ ಮಂದಿರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ. https://ainlivenews.com/1603-vacancies-in-indian-oil-company-today-is-the-last-day-apply-soon/ ಅಯೋಧ್ಯೆಗೆ ರಾಮಭಕ್ತರು ದೇಶಭಕ್ತರು ಬರಬೇಕು ಎಂದು ಕರೆ ಕೊಟ್ಟಿದ್ದೇವೆ. ದೇಶ ವಿರೋಧಿಗಳು ಬರುವುದು ಬೇಡ. ಬಿಕೆ ಹರಿಪ್ರಸಾದ್ ಒಬ್ಬ ದೇಶದ್ರೋಹಿ. ದೇಶದ್ರೋಹಿಯ ಯಾವ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಗರಂ ಆದರು. 

Read More

ಬೆಂಗಳೂರು: ಈ ದುನಿಯಾ ದಿನೇದಿನೆ ಕಾಸ್ಟ್ಲಿ ಆಗ್ತಿದೆ. ಜನ ಸಾಮಾನ್ಯರಂತೂ ಬದುಕೋಕೆ ಆಗ್ತಿಲ್ಲ. ಏಪ್ರಿಲ್, ಮೇ ತಿಂಗಳು ಬಂದ್ರೆ ಸಾಕು ಟಣ್ ಅಂತ ಕರೆಂಟ್ ಬಿಲ್ ಏರಿಕೆ ಆಗೇ ಬಿಡುತ್ತೆ.ಕಳೆದ ವರ್ಷ ಮೂರು ಬಾರಿ ವಿದ್ಯುತ್ ದರ ಏರಿಕೆ ಮಾಡಿದ್ದ ಎಸ್ಕಾಂಗಳು ಈ ಬಾರಿಯೂ ವಿದ್ಯುತ್ ದರ ಪರಿಷ್ಕರಣೆ ಮಾಡೋಕೆ ಸಿದ್ದತೆ ನಡೆಸಿದೆ.ಈ ಸಂಬಂಧ ಬೆಸ್ಕಾಂ ಸೇರಿ ಇತರೆ ಕಂಪನನಿಗಳು ವಿದ್ಯುತ್ ದರ ಏರಿಸುವಂತೆ ಕೆಇಆರ್ಸಿ ಮುಂದೆ ಪ್ರಸ್ತಾಪ ಇಟ್ಟಿವೆ ಗ್ಯಾರಂಟಿ ಭಾಗ್ಯಗಳನ್ನ ಕೊಟ್ಟ ಕಾಂಗ್ರೆಸ್ ಸರ್ಕಾರ ಜನರಿಗೆ ತೆರಿಗೆ ಹೊರೆ ಹಾಕಲು ಸಿದ್ದತೆ ಮಾಡಿಕೊಳ್ತಿದೆ. ಗ್ಯಾರಂಟಿ ಭಾಗ್ಯಗಳಿಗೆ ಆಗುವ ವೆಚ್ಚ ಸರಿದೂಗಿಸಲು ಬೆಲೆ ಏರಿಕೆ ಮಾಡೋಕೆ ಹೊರಟಿದೆ. ಪರಿಣಾಮ ಎನ್ನುವಂತೆ ವಿದ್ಯುತ್ ದರ ಏರಿಕೆಗೆ ಸನ್ನದ್ದವಾಗ್ತಿದೆ.. ಹೌದು..ಈಗಾಗ್ಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ.ದಿನ ನಿತ್ಯ ಉಪಯೋಗಿಸುವ ದವಸ ಧಾನ್ಯ ,ಪೆಟ್ರೋಲ್, ಡಿಸೇಲ್ ಗ್ಯಾಸ್ ,ಹಾಲು ಮೊಸರು ಗಗನಕ್ಕೇರಿದೆ‌.ಇದರ ನಡುವ ರಾಜ್ಯದ ಜನತೆಗೆ ಮತ್ತೆ ಕರೆಂಟ್ ಶಾಕ್…

Read More