Author: AIN Author

ಎಸ್ ಆರ್ ಫಿಲಂ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ, ರಾಗಿಣಿ ದ್ವಿವೇದಿ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ತಮಿಳು ಹಾಗೂ ಕನ್ನಡ ಭಾಷೆಗಳಲ್ಲಿ ನಿರ್ಮಾಣವಾಗಿರುವ “ಇಮೇಲ್” ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. “ಇಮೇಲ್” ಚಿತ್ರದ ಫಸ್ಟ್ ಲುಕ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎಸ್ ಆರ್ ರಾಜನ್ ಅವರು “ಇಮೇಲ್” ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಮಾಡಿದ್ದಾರೆ. ಎಸ್ ಆರ್ ಫಿಲಂ ಫ್ಯಾಕ್ಟರಿ ತಮಿಳಿನ ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದೆ. “ಇಮೇಲ್” ಮಹಿಳಾ ಪ್ರಧಾನ ಚಿತ್ರವಾಗಿದ್ದು, ನಾಯಕಿಯಾಗಿ ರಾಗಿಣಿ ದ್ವಿವೇದಿ ನಟಿಸಿದ್ದಾರೆ. ಮುರುಗ ಅಶೋಕ್, ಮನೋಬಲ, “ಜೈಲರ್” ಚಿತ್ರದ ಖ್ಯಾತಿಯ ಬಿಲ್ಲಿ, “ಲೊಳ್ಳುಸಭಾ” ಮನೋಹರ್, ಅಕ್ಷಯ್ ರಾಜ್, ಅರತಿ ಶ್ರೀ, ಆದವ ಬಾಲಾಜಿ, ಮಂಜು ನಂಜನಗೂಡು, ರಾಮ್ ಸನ್ನಿ, ನಯನ ಚೌಹಾನ್, ಶೈಲಜ, ಶ್ವೇತ, ತೇಜಸ್ವಿನಿ, ಕುಮಾರಿ ಸೃಷ್ಟಿ, ಕುಮಾರಿ ಸಿಂಚನ, ಕುಮಾರಿ ಅನನ್ಯ, ಮುಂತಾದವರು “ಇಮೇಲ್”…

Read More

ಕಲಬುರಗಿ:  ದಾಖಲೆ ಇಲ್ಲದೇ ಓಡಾಡುತಿದ್ದ 27 ಆಟೋಗಳನ್ನ ಕಲಬುರಗಿಯ ಟ್ರಾಫಿಕ್ ಪೋಲೀಸರು ಜಪ್ತಿ ಮಾಡಿದ್ದಾರೆ..ನಗರದ ವಿವಿಧೆಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಯಾವುದೇ ದಾಖಲೆ ಇಲ್ಲದಿರೋದು ಬೆಳಕಿಗೆ ಬಂದಿದೆ. ಕೆಲವರು ದಾಖಲೆ ಇಲ್ಲದಿರುವುದು ಮತ್ತೆ ಕೆಲವರು ತಾಲೂಕು ಕೇಂದ್ರ ಅನುಮತಿ ಇದ್ರು ಸಿಟಿಯಲ್ಲಿ ಅಡ್ಡಾಡೋದು ಸಹ ಪತ್ತೆಯಾಗಿದೆ.ಹೀಗೆ ಪೋಲೀಸರ ಕಣ್ತಪ್ಪಿಸಿ ಸಂಚರಿಸುತ್ತಿದ್ದ ಆಟೋಗಳನ್ನ ಜಪ್ತಿ ಮಾಡಿ ಆರ್ ಟಿಓ ಅಧಿಕಾರಿಗಳ ಸುಪರ್ದಿಗೆ ಕೊಟ್ಟಿದ್ದಾರೆ..

Read More

ಬೆಂಗಳೂರು: ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಂತ್ಯವಾಗಲಿದೆ ಎಂಬ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಮಾತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಂತ್ಯವಾಗಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಭವಿಷ್ಯ ನುಡಿದಿದ್ದಾರೆ. ವಯಸ್ಸಿನಲ್ಲಿ ದೊಡ್ಡವರಾದ ದೇವೇಗೌಡರ ಈ ಶಾಪವನ್ನು ಆಶೀರ್ವಾದ ಎಂದೇ ಸ್ವೀಕರಿಸಿದ್ದೇನೆ. ಅವರಿಗೆ ಅವರ ಪಕ್ಷಕ್ಕೆ ದೀರ್ಘ ಕಾಲ ಆಯುರಾರೋಗ್ಯವನ್ನು ಪರಮಾತ್ಮ ಕರುಣಿಸಲಿ ಎಂದು ಹಾರೈಸುತ್ತೇನೆ. ರಾಜಕೀಯ ಭಿನ್ನಾಭಿಪ್ರಾಯ ಏನೇ ಇರಲಿ, ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡಬೇಕು, ಶಾಪ ಕೊಡಬಾರದು. ದಶಕಗಳ ಕಾಲ ಜಾತ್ಯತೀತತೆಯ ಕಿರೀಟ ಧರಿಸಿಕೊಂಡು ಬಂದಿದ್ದ ಗೌಡರು ಇಳಿಗಾಲದಲ್ಲಿ ಅದನ್ನು ಕೆಳಗೆಸೆದು ಕೋಮುವಾದಿ ಕಿರೀಟವನ್ನು ಧರಿಸಿಕೊಳ್ಳಬೇಕಾಗಿ ಬಂದಿರುವುದರಿಂದ ನೊಂದು ಹತಾಶೆಯಿಂದ ಇಂತಹ ಹೇಳಿಕೆ ನೀಡಿರಬಹುದೆಂದು ಭಾವಿಸಿದ್ದೇನೆ. ತಾವು ಹೇಳಿದ್ದು ತಪ್ಪು ಎಂದು ಅವರಿಗೆ ಪ್ರಾಮಾಣಿಕವಾಗಿ ಅನುಸರಿಸಿದರೆ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬಹುದು. ಯಾವ ರಾಜಕೀಯ ಪಕ್ಷ ಕೂಡಾ ಮತ್ತೊಂದು ರಾಜಕೀಯ…

Read More

ಬೆಂಗಳೂರು: ಅವಧಿ ಮುಗಿದ್ರೂ ಜೆಟ್‌ಲ್ಯಾಗ್ ಪಬ್ಬಿನಲ್ಲಿ ಪಾರ್ಟಿಗೆ ಅವಕಾಶ ನೀಡಿದ್ರೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸರು ಯಾಕೆ ನೋಟಿಸ್‌ ಕೊಟ್ಟಿಲ್ಲವೆಂದು ಈಗ ಎಲ್ಲರಲ್ಲೂ ಅನುಮಾನ ಕಾಡುತ್ತಿದೆ. ನಗರದ ಒರಾಯನ್ ಮಾಲ್ ಬಳಿಯಿರುವ ಜೆಟ್‌ಲ್ಯಾಗ್ ಪಬ್ ಕೇಸ್ ದಾಖಲಿಸಿದ ಬೆನ್ನಲ್ಲೇ ಹಿರಿಯ ಅಧಿಕಾರಿಯಿಂದ ನೋಟಿಸ್‌ ಸುಬ್ರಹ್ಮಣ್ಯನಗರ ಪೊಲೀಸರಿಗೆ ನೋಟಿಸ್‌ ಜಾರಿ ಮಾಡಿದ ಅಧಿಕಾರಿ ಘಟನೆ ನಡೆದ ರಾತ್ರಿ ಹಾಳಿಯಲ್ಲಿದ್ದ ಸಿಬ್ಬಂದಿಗೆ ನೋಟಿಸ್‌ ಜಾರಿ ಮುಂಜಾನೆವರೆಗೂ ಹಾರ್ಟಿ ಮಾಡಿದ್ರೂ ಯಾಕೆ ಗಮನಕ್ಕೆ ಬಂದಿಲ್ಲ? ಬೀಟ್‌ನಲ್ಲಿದ್ದ ಸುಬ್ರಹ್ಮಣ್ಯನಗರ ಠಾಣೆ ಸಿಬ್ಬಂದಿ ಏನು ಮಾಡುತ್ತಿದ್ದರು? ರಾತ್ರಿ ಪಾಳಿಯಲ್ಲಿ ಸುಬ್ರಹ್ಮಣ್ಯನಗರ ಠಾಣೆ ಉಸ್ತುವಾರಿ ಯಾರಿದ್ರು? ಎಲ್ಲಾ ಮಾಹಿತಿ ನೀಡುವಂತೆ ಹಿರಿಯ ಅಧಿಕಾರಿಯಿಂದ ನೋಟಿಸ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು

Read More

ಹುಬ್ಬಳ್ಳಿ: ನಿಂತಿದ್ದ ಎರಡು ಕಾರುಗಳಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಜ.6ರ ಶನಿವಾರ ಬೆಳಗಿನ ಜಾವ ಸಂಭವಿಸಿದೆ. https://ainlivenews.com/a-lorry-collided-with-parked-cars-four-died-on-the-spot/ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆಳ್ಳಿಗಟ್ಟಿ ಕ್ರಾಸ್ ನ ಬಳಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಹಾಸನ ಮೂಲದ ಮೂವರು ಹಾಗೂ ಬೆಂಗಳೂರಿನ ಒಬ್ಬರು ಮೃತ ಪಟ್ಟಿದ್ದು, ಇಬ್ಬರಿಗೆ ಗಾಯಗಳಾಗಿವೆ. ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು, ಎರಡು ಕಾರುಗಳು ನಿಂತಿದ್ದಾಗ ಕಾರುಗಳಿಗೆ ಲಾರಿ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದು, ಶವಗಳನ್ನು ಹೊರ ತೆಗೆಯದ ಸ್ಥಿತಿಯಲ್ಲಿದೆ. ಹೆದ್ದಾರಿ ಪೆಟ್ರೋಲಿಂಗ್ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಇಬ್ಬರನ್ನು ಕಿಮ್ಸ್ ಆಸ್ಪತ್ರೆಗೆ ಸೇರಿಸಿದ್ದಾರೆ.

Read More

ದೆಹಲಿ: ಸೊಮಾಲಿಯಾದ ಕರಾವಳಿ ಬಳಿ ಅಪಹರಣವಾಗಿದ್ದ 15 ಭಾರತೀಯರಿದ್ದ ಸರಕು ಸಾಗಣೆ ಹಡಗು ‘ಎಂವಿ ಲೀಲಾ ನಾರ್ಫೋಕ್’ (MV LILA NORFOLK) ರಕ್ಷಿಸುವಲ್ಲಿ ಭಾರತೀಯ ನೌಕಾಪಡೆ ಯಶಸ್ವಿಯಾಗಿದೆ. 15 ಭಾರತೀಯರು ಸೇರಿದಂತೆ ಒಟ್ಟು 21 ಮಂದಿಯನ್ನು ರಕ್ಷಿಸಲಾಗಿದ್ದು, ಎಲ್ಲರೂ ಸುರಕ್ಷಿತವಾಗಿದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮಾಲಿಯಾ ಕರಾವಳಿಯ ಬಳಿ ಗುರುವಾರ ಸಂಜೆ 88,000 ಟನ್‌ಗಳಷ್ಟು ತೂಕದ ‘MV LILA NORFOLK’ ಎಂಬ ಸರಕು ಸಾಗಣೆ ಹಡಗನ್ನು ಅಪಹರಿಸಲಾಗಿತ್ತು. ಲೈಬೀರಿಯನ್‌ಗೆ ಸೇರಿದ ಈ ಹಡಗು ಬ್ರೆಜಿಲ್‌ನಿಂದ ಬಹ್ರೇನ್‌ ಕಡೆಗೆ ಹೊರಟ್ಟಿತ್ತು. ಹಡಗು ಅಪಹರಣ ಸುದ್ದಿ ತಿಳಿಯುತ್ತಲೇ ಭಾರತೀಯ ನೌಕಾಪಡೆ ಕಾರ್ಯಚರಣೆಗೆ ಇಳಿದಿತ್ತು ಭಾರತೀಯ ನೌಕಾಪಡೆಯು ಕಡಲ್ಗಳ್ಳರನ್ನು ಪತ್ತೆಹಚ್ಚಲು ಯುದ್ಧನೌಕೆಯನ್ನು (INS ಚೆನ್ನೈ) ಕಳುಹಿಸಿ ಸೂಕ್ಷ್ಮವಾಗಿ ನಿಗಾವಹಿಸಿತ್ತು. ಅಷ್ಟೇ ಅಲ್ಲದೇ ಕಡಲ ಗಸ್ತು ವಿಮಾನ, ಹೆಲಿಕಾಪ್ಟರ್‌ಗಳು ಹಾಗೂ P-81 ದೀರ್ಘಶ್ರೇಣಿಯ ವಿಮಾನಗಳು ಹಾಗೂ ಪ್ರಿಡೆಕ್ಟರ್‌ MQ9B ಡ್ರೋನ್‌ಗಳನ್ನು ನಿಯೋಜನೆ ಮಾಡಿತ್ತು

Read More

ಲಂಡನ್‌: ಇಲ್ಲಿನ ಅಂಡರ್‌ಗ್ರೌಂಡ್ ರೈಲಿನಲ್ಲಿ (Underground Train) ಒಂಟಿ ಮಹಿಳೆಯ ಮುಂದೆ ಹಸ್ತಮೈಥುನ ಮಾಡಿಕೊಂಡ ಆರೋಪದ ಮೇಲೆ 43 ವರ್ಷದ ಭಾರತೀಯ ಮೂಲದ ವ್ಯಕ್ತಿಗೆ ಯುಕೆಯಲ್ಲಿ 9 ತಿಂಗಳು ಜೈಲು ಶಿಕ್ಷೆ ವಿಧಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉತ್ತರ ಲಂಡನ್‌ನ ವೆಂಬ್ಲಿಯಲ್ಲಿ ನೆಲೆಸಿದ್ದ ಮುಖೇಶ್ ಷಾ (43) ಅವರು ಕಳೆದ ತಿಂಗಳು ಲಂಡನ್ ಇನ್ನರ್ ಕ್ರೌನ್ ಕೋರ್ಟ್‌ನಲ್ಲಿ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಜೊತೆಗೆ 10 ವರ್ಷಗಳ ಕಾಲ ಲೈಂಗಿಕ ಅಪರಾಧಿಗಳ ನೋಂದಣಿಗೆ ಸಹಿ ಹಾಕುವಂತೆ ಕೋರ್ಟ್‌ (London Crown Court) ಆದೇಶಿಸಿದೆ ಎಂದು ಬ್ರಿಟಿಷ್ ಸಾರಿಗೆ ಪೊಲೀಸ್ (BTP) ಹೇಳಿದೆ. ಇದು ಶಿಕ್ಷೆಗೆ ಗುರಿಯಾದ ಬಲಿಪಶುವಿಗೆ ಅತೀವ ನೋವಾಗಿದೆ. ಆರೋಪಿಗೆ ಶಿಕ್ಷೆ ವಿಧಿಸುವುದು ಮಾತ್ರವಲ್ಲದೇ ಭವಿಷ್ಯದಲ್ಲಿ ಆತನ ಕ್ರಿಯೆಗಳನ್ನು ಮುಂದಿವರಿಸದಂತೆ ತಡೆಯಲು ಬಿಡುಗಡೆಯ ನಂತರವೂ ನಿರ್ಬಂಧಗಳನ್ನ ವಿಧಿಸಿದೆ. ಅಲ್ಲದೇ ಅಂತಹ ವಿಕೃತ ಸಂದರ್ಭದಲ್ಲಿ ಅಪರಾಧಿಯನ್ನು ಎದುರಿಸುವಲ್ಲಿ ಮಹಿಳೆ ತೋರಿದ ಧೈರ್ಯವನ್ನು ಶ್ಲಾಘಿಸಿರುವುದಾಗಿ ಬಿಟಿಪಿ ತನಿಖಾ ಅಧಿಕಾರಿ ಮಾರ್ಕ್…

Read More

ಟೆಹ್ರಾನ್‌: ಇರಾನ್‌ನಲ್ಲಿ ಅವಳಿ ಬಾಂಬ್‌ ಸ್ಫೋಟಗೊಂಡು 103 ಮಂದಿ ಸಾವನ್ನಪ್ಪಿ, 141 ಮಂದಿ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ. ಇರಾನ್‌ನ ದಕ್ಷಿಣ ನಗರಿ ಕೆರ್ಮಾನ್‌ನಲ್ಲಿ ಕಮಾಂಡರ್‌ ಕಾಸ್ಸೇಮ್‌ ಸೋಲೈಮನಿ (Iranian general Qasem Soleimani) ಅವರ ಸ್ಮರಣೆಯ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ದುರ್ಘಟನೆ ನಡೆದಿದ್ದು, ಭಾರೀ ಆತಂಕವನ್ನೂ ಸೃಷ್ಟಿ ಮಾಡಿದೆ. 2020ರಲ್ಲಿ ಅಮೆರಿಕಾವು ಬಾಗ್ದಾದ್‌ದ ವಿಮಾನ ನಿಲ್ದಾಣದ ಮೇಲೆ ಡ್ರೋಣ್‌ ದಾಳಿ (US drone strike in Iraq) ನಡೆಸಿತ್ತು. ಈ ದಾಳಿಯಲ್ಲಿ ಕಮಾಂಡರ್‌ ಕಾಸ್ಸೇಮ್‌ ಸೋಲೈಮನಿ ಹತರಾಗಿದ್ದರು. ಇವರ ಸ್ಮರಣಾರ್ಥ ಕಾರ್ಯಕ್ರಮವನ್ನು ಪ್ರತಿ ವರ್ಷ ಇರಾನ್‌ನಲ್ಲಿ ಆಯೋಜಿಸಲಾಗುತ್ತಿದೆ. ಕೆರ್ಮಾನ್‌ನಲ್ಲಿರುವ ಕಾಸ್ಸೇಮ್‌ ಸೋಲೈಮನಿ ಅವರ ಸ್ಮಾರಕದ ಬಳಿಯೇ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷದ ಕಾರ್ಯಕ್ರಮವನ್ನು ಇಂದು ಆಯೋಜನೆ ಮಾಡಲಾಗಿದ್ದು, ಇದೇ ಸಂದರ್ಭ ಅವಳಿ ಬಾಂಬ್‌ ಸ್ಫೋಟ (Bomb Blast) ನಡೆದಿದೆ. ಘಟನೆಯ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದರು. ಈ ವೇಳೆ ಮೊದಲು ಅನಿಲ…

Read More

ದೆಹಲಿ: ಭೂಮಿಯಿಂದ ಸೂರ್ಯನತ್ತ (Sun) ಹೊರಟು ನಾಲ್ಕು ತಿಂಗಳ ಪೂರೈಸಿ, 15 ಲಕ್ಷ ಕಿ.ಮೀ ಕ್ರಮಿಸಿರುವ ಆದಿತ್ಯ ಎಲ್1 (Aditya-L1) ನೌಕೆಯನ್ನು ಇಂದು ಅದರ ನಿಗದಿತ ಕಕ್ಷೆಗೆ ಸೇರಿಸಲು ಇಸ್ರೋ (ISRO) ವಿಜ್ಞಾನಿಗಳು ಸಜ್ಜಾಗಿದ್ದಾರೆ. ಕಳೆದ ವರ್ಷ ಸೆ.2ರಂದು ಆದಿತ್ಯ ಎಲ್1 ನೌಕೆಯನ್ನು ಇಸ್ರೋ ಉಡಾವಣೆ ಮಾಡಿತ್ತು. ಇದೀಗ 15 ಲಕ್ಷ ಕಿ.ಮೀ ಸಂಚರಿಸಿ ನಿಗದಿತ ಕಕ್ಷೆಯ ಬಳಿ ಸಮೀಪಿಸಿರುವ ಅದನ್ನು ಎಲ್1 ಪಾಯಿಂಟ್ ಎಂಬ ನಿರ್ವಾತ ಪ್ರದೇಶಕ್ಕೆ ಸೇರಿಸಲಾಗುತ್ತದೆ. ಉಪಗ್ರಹವನ್ನು ಸುಮಾರು ಸಂಜೆ 4 ಗಂಟೆಗೆ ಲ್ಯಾಗ್ರೇಂಜ್ ಪಾಯಿಂಟ್ 1 (L1) ಗೆ ಸೇರಿಸುವ ನಿರೀಕ್ಷೆಯಿದೆ. ಅಕಸ್ಮಾತ್ ಅದನ್ನು ಆ ಪ್ರದೇಶಕ್ಕೆ ಸೇರಿಸದೇ ಇದ್ದರೆ ಅದು ಸೂರ್ಯನೆಡೆಗೆ ಸಂಚರಿಸಿ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಇಂದು (ಶನಿವಾರ) ಇಸ್ರೋಗೆ ಮಹತ್ವದ ದಿನವಾಗಿದೆ ಸೂರ್ಯನ ವಿವರವಾದ ಅಧ್ಯಯನಕ್ಕಾಗಿ ಆದಿತ್ಯ ಎಲ್ -1 ಏಳು ವಿಭಿನ್ನ ಪೇಲೋಡ್‌ಗಳನ್ನು ಹೊಂದಿದೆ. ಅವುಗಳ ಪೈಕಿ ನಾಲ್ಕು ಸೂರ್ಯನ ಬೆಳಕನ್ನು ಪರಿಶೀಲಿಸಲಿವೆ ಮತ್ತು ಇತರ ಮೂರು…

Read More

ದೆಹಲಿ: ಭಾರತ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂಬ ಗರಿಮೆಗೆ ಪಾತ್ರವಾಗಿದೆ. ವಿಶ್ವಸಂಸ್ಥೆಯ ಎಕಾನಾಮಿಕ್ಸ್ & ಸೋಷಿಯಲ್ ವೆಲ್‍ಫೇರ್ ರಿಪೋರ್ಟ್ ಪ್ರಕಾರ, ಈ ವರ್ಷ ದೇಶದ ಬೆಳವಣಿಗೆ ದರ 6.2 ಪರ್ಸೆಂಟ್ ಇರಲಿದೆ. ಉತ್ಪತ್ತಿ, ತಯಾರಿ ವಲಯದಲ್ಲಿ ಭಾರತ (India) ವೇಗವಾಗಿ ಮುನ್ನುಗ್ಗುತ್ತಿದೆ. ಇದೇ ಹೊತ್ತಲ್ಲಿ ದೇಶದ ಆರ್ಥಿಕತೆ 7.3ರಷ್ಟು ಬೆಳವಣಿಗೆ ಕಾಣಲಿದೆ ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ. ವಿಶೇಷ ಅಂದ್ರೆ ಮೋದಿ (Narendra Modi) ನಾಯಕತ್ವದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿಸಿ ಸಾಧಿಸಿದೆ ಎಂದು ಚೀನಾ (China) ಪತ್ರಿಕೆಗಳು ಹೊಗಳಿವೆ. ಮೋದಿ ಆಡಳಿತದಲ್ಲಿ ಭಾರತ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜತಾಂತ್ರಿಕವಾಗಿ ಸಾಕಷ್ಟು ಅಭಿವೃದ್ಧಿಸಿ ಸಾಧಿಸಿದೆ ಎಂದು ಚೀನಾ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಭಾರತ ವಸಾಹತು ನೆರಳಿನಿಂದ ಹೊರಬಂದಿದೆ. ವಿದೇಶಾಂಗ ನೀತಿ ಚನ್ನಾಗಿದೆ. ಅಮೆರಿಕಾ, ರಷ್ಯಾ, ಜಪಾನ್‍ನಂತಹ ದೇಶಗಳ ಜೊತೆ ಭಾರತದ ವೈಖರಿ ಶ್ಲಾಘನಾರ್ಹ ಎಂದು ಚೀನಾದ ಪತ್ರಿಕೆ ಹೊಗಳಿದೆ. ಇನ್ನು ಹಿಂಡನ್‍ಬರ್ಗ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ರಿಲೀಫ್ ನೀಡುತ್ತಲೇ…

Read More