Author: AIN Author

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು ಕನ್ನಡಿಗರಿಗೆ ಹೆಜ್ಜೆ ಹೆಜ್ಜೆಗೂ ಅನ್ಯಾಯ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೇಸರಿಸಿದ್ದಾರೆ. ನಗರದಲ್ಲಿ ಮಾತನಾಡಿದ  ಅವರು, ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳಬೇಕಿದ್ದ ರಾಜ್ಯದ ಸ್ಥಬ್ದಚಿತ್ರಕ್ಕೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ. ಈ ಮೂಲಕ ಕೇಂದ್ರ ಸರ್ಕಾರವು ಮತ್ತೊಮ್ಮೆ ಒಕ್ಕೂಟ ವ್ಯವಸ್ಥೆಗೆ ಮಸಿ ಬಳಿದಿದೆ ಎಂದು ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಕನ್ನಡಿಗರಿಗೆ ಹೆಜ್ಜೆ ಹೆಜ್ಜೆಗೂ ಅನ್ಯಾಯ ಮಾಡುತ್ತಿದೆ. ಬರ ಪರಿಹಾರ ನೀಡದೆ ಬರಿಗೈನಲ್ಲಿ ವಾಪಸ್‌ ಕಳಿಸಿದರು. ತೆರಿಗೆ ಪಾಲಿನಲ್ಲೂ ಅನ್ಯಾಯ, ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡದೆ ಅನ್ಯಾಯ. ಇನ್ನೂ ಅದೆಷ್ಟು ಅನ್ಯಾಯವನ್ನು ಕನ್ನಡಿಗರು ಅವಡು ಕಚ್ಚಿಕೊಂಡು ಸಹಿಸಿಕೊಳ್ಳಬೇಕು? ಎಂದು ಪ್ರಶ್ನಿಸಿದ್ದಾರೆ. ನವ ಕರ್ನಾಟಕದ ನಿರ್ಮಾತೃ, ಸಾಮಾಜಿಕ ನ್ಯಾಯದ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರನ್ನು ದೇಶಕ್ಕೆ ಪರಿಚಯಿಸುವ ಉದ್ದೇಶವಿತ್ತು. ಅಲ್ಲದೆ, ಬ್ರ್ಯಾಂಡ್‌ ಬೆಂಗಳೂರನ್ನು ವಿಶ್ವವ್ಯಾಪಿ ಪ್ರಸಿದ್ಧಗೊಳಿಸುವ ಹಾಗೂ ಕಿತ್ತೂರು ಚೆನ್ನಮ್ಮಳ ಕೀರ್ತಿಯನ್ನು ಸ್ಥಬ್ದಚಿತ್ರಗಳ ಮೂಲಕ…

Read More

ಅಯೋಧ್ಯೆ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ರಾಮಮಂದಿರಕ್ಕೆ ಚಿನ್ನ ಲೇಪಿತ ಬಾಗಿಲನ್ನು ಅಳವಡಿಸಲಾಗಿದ್ದು,ಮುಂದಿನ ಮೂರು ದಿನಗಳಲ್ಲಿ ಇನ್ನೂ 13 ಬಾಗಿಲುಗಳನ್ನು ಅಳವಡಿಸಲಾಗುವುದು. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೂ ಮುನ್ನ ದೇವಾಲಯದ ಚಿನ್ನದ ಲೇಪಿತ ಬಾಗಿಲುಗಳ ಮೊದಲ ಚಿತ್ರ ಮಂಗಳವಾರ ಹೊರಬಿದ್ದಿದೆ. ದೇವಾಲಯದ ಗರ್ಭಗುಡಿಯಲ್ಲಿ ಚಿನ್ನದ ಲೇಪಿತ ಬಾಗಿಲುಗಳನ್ನು ಸ್ಥಾಪಿಸಲಾಗಿದೆ. ಅಲ್ಲಿ ದೇವರ ವಿಗ್ರಹವನ್ನು ಜನವರಿ 22 ರಂದು ಪ್ರತಿಷ್ಠಾಪಿಸಲಾಗುವುದು. ಹೈದರಾಬಾದ್ ಮೂಲದ ಕುಶಲಕರ್ಮಿಯೊಬ್ಬರು ಬಾಗಿಲನ್ನು ರೂಪಿಸಿದ್ದಾರೆ. ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ರಾಮಮಂದಿರ ಸಂಕೀರ್ಣವು 380 ಅಡಿ ಉದ್ದ (ಪೂರ್ವ-ಪಶ್ಚಿಮ ದಿಕ್ಕು), 250 ಅಡಿ ಅಗಲ ಮತ್ತು 161 ಅಡಿ ಎತ್ತರ ಇರಲಿದೆ. ದೇವಾಲಯದ ಪ್ರತಿಯೊಂದು ಮಹಡಿಯು 20 ಅಡಿ ಎತ್ತರವಿದ್ದು, ಒಟ್ಟು 392 ಕಂಬಗಳು ಮತ್ತು 44 ದ್ವಾರಗಳನ್ನು ಹೊಂದಿದೆ. ರಾಮಮಂದಿರ ಉದ್ಘಾಟನೆ ಸಮಾರಂಭದಲ್ಲಿ ಸುಮಾರು 7,000 ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

Read More

ಬೆಂಗಳೂರು:  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷ ಪೂರೈಸುತ್ತಾರಾ? ಎಂಬ ಪ್ರಶ್ನೆಗೆ ಸಚಿವ ಕೆ.ಎನ್. ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿಎಂ ಸಿದ್ದರಾಮಯ್ಯ ಯಾಕೆ 5 ವರ್ಷ ಪೂರೈಸಬಾರದು? ಹೈಕಮಾಂಡ್, ಶಾಸಕರ ಬೆಂಬಲ ಇರೋವರೆಗೂ ಅವರು ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಹೇಳಿದ್ದಾರೆ. ಇವತ್ತಿನ ಸಭೆಯಲ್ಲಿ ಮೂವರು ಡಿಸಿಎಂ ವಿಚಾರ ಪ್ರಸ್ತಾಪ ಮಾಡಲ್ಲ. ನಾಳೆ ದೆಹಲಿಯಲ್ಲಿ ಪರಿಸ್ಥಿತಿ ನೋಡಿ ಮುಂದುವರಿಯಲಾಗುವುದು. ಅವರು ಯಾವ ವಿಚಾರಕ್ಕೆ ಸಭೆ ಕರೆದಿದ್ದಾರೆ ಅನ್ನೋದರ ಮೇಲೆ ಡಿಸಿಎಂ ವಿಚಾರ ಪ್ರಸ್ತಾಪ ಮಾಡಬೇಕೋ? ಬೇಡವೋ? ಅನ್ನೋದು ನಿರ್ಧಾರವಾಗುತ್ತದೆ. ಈಗಾಗಲೇ‌ ಸುರ್ಜೆವಾಲರ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದ್ದಾರೆ. ಹೆಚ್ಚುವರಿ‌ ಡಿಸಿಎಂ ಆದಾಕ್ಷಣ ಯಾರೂ ಯಾರ ಪೋರ್ಟ್ ಪೋಲಿಯೋ ಕಿತ್ತುಕೊಳ್ಳಲ್ಲ. ಹೆಚ್ಚುವರಿ ಡಿಸಿಎಂ ಆದರೆ ಡಿಕೆಶಿ ಅವರ ಪೋರ್ಟ್ ಪೋಲಿಯೋ ಯಾರಾದರೂ ಕಿತ್ತುಕೊಳ್ತಾರಾ? ಮೂವರು ಡಿಸಿಎಂಗೆ ಯಾವ ಶಾಸಕರೂ ವಿರೋಧ ಮಾಡಿಲ್ಲ. ತುಂಬಾ ಜನ ಮೌನವಾಗಿದ್ದಾರೆ. ಮೌನಂ ಸಮ್ಮತಿ ಲಕ್ಷಣ ಅಲ್ವಾ? ಎಂದು ಸಚಿವ ರಾಜಣ್ಣ ಪ್ರಶ್ನಿಸಿದ್ದಾರೆ.

Read More

ಬೆಂಗಳೂರು: ನಾನು ಲೋಕಸಭಾ ಚುನಾವಣೆಗೆ  ಸ್ಪರ್ಧಿಸುವುದಿಲ್ಲ ಎಂದು ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ  ಮತ್ತೆ ಮಾಧ್ಯಮಗಳಿಗೆ ಒತ್ತಿ ಒತ್ತಿ ತಿಳಿಸಿದ್ದಾರೆ ಬೆಂಗಳೂರಿನಲ್ಲಿ ಲೋಕಸಭಾ ಚುನಾವಣೆ ವಿಚಾರವಾಗಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಲೋಕಸಭೆಗೆ ನಾನು ಸ್ಪರ್ಧಿಸುವುದಿಲ್ಲ. ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿ ಸಹ ಅಲ್ಲ. ನನ್ನ ಅಭಿಪ್ರಾಯ ಈಗಾಗಲೇ ಸ್ಪಷ್ಟವಾಗಿ ಸಾಕಷ್ಟು ಬಾರಿ ಹೇಳಿದ್ದೇನೆ. ಹೇಳಿಕೆಯನ್ನು ಬದಲಾಯಿಸುವ ವ್ಯಕ್ತಿ ನಾನಲ್ಲ ಎಂದಿದ್ದಾರೆ. https://ainlivenews.com/formation-of-implementation-committees-chief-minister-siddaramaiahs-announcement/ ಮಂಡ್ಯ ಜಿಲ್ಲೆಯಿಂದಲೂ ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿ ಅಲ್ಲ. ಈ ವಿಚಾರವಾಗಿ ಗುರುವಾರ ಮಂಡ್ಯ ಜಿಲ್ಲೆಯಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ನಮ್ಮ ನಾಯಕರು, ಯಾರು ಸ್ಪರ್ಧೆ ಮಾಡಬೇಕು ಎಂಬ ಬಗ್ಗೆ ಚರ್ಚೆ ಮಾಡಲಿದ್ದಾರೆ. ಈಗಾಗಲೇ ಈ ಬಗ್ಗೆ ಚರ್ಚೆಗಳು ಪ್ರಾರಂಭವಾಗಿದೆ. ದೇವೇಗೌಡರು, ಕುಮಾರಸ್ವಾಮಿ (H.D Kumaraswamy) ಹಾಗೂ ನಮ್ಮ ಮಂಡ್ಯ ನಾಯಕರು ಕುಳಿತು ಅಭ್ಯರ್ಥಿಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ನಮ್ಮ ನಾಯಕರ ಜೊತೆಗೆ ಬಿಜೆಪಿ (BJP) ಅಭ್ಯರ್ಥಿಗಳು, ಕಾರ್ಯಕರ್ತ ಭಾವನೆಗಳನ್ನು ಕಲೆ ಹಾಕಿ ಅಂತಿಮವಾಗಿ…

Read More

ಬೆಂಗಳೂರು: ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರಚಿಸಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದರು. ಅವರು ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಮಾತನಾಡಿದರು. ವಿಧಾನಸಭೆಯಲ್ಲಿಯೂ ಒಂದು ಸಮಿತಿ ಇರಲಿದ್ದು, ರಾಜ್ಯಮಟ್ಟದಲ್ಲಿ ಅಧ್ಯಕ್ಷರು, ಐದು ಜನ ಉಪಾಧ್ಯಕ್ಷರು ಇರಲಿದ್ದಾರೆ. ಅಧ್ಯಕ್ಷರಾದವರಿಗೆ ಸಂಪುಟ ದರ್ಜೆ ಸ್ಥಾನಮಾನ ಇರಲಿದೆ. ಉಪಾಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನ ನೀಡಲಾಗುವುದು. ಸುಮಾರು 31 ಜನ ಸದಸ್ಯರು ಇರಲಿದ್ದು ಇವರೆಲ್ಲರೂ ಕಾರ್ಯಕರ್ತರು. 31 ಜಿಲ್ಲಾ ಮಟ್ಟದಲ್ಲಿ ಒಬ್ಬ ಅಧ್ಯಕ್ಷರು ಹಾಗೂ ಉಪಾಧ್ಯಕ್ಷ ರು ಹಾಗೂ ಸದಸ್ಯರು ಇರಲಿದ್ದಾರೆ. ಅವರಿಗೆ ಕಚೇರಿ ವ್ಯವಸ್ಥೆ ಹಾಗೂ ಗೌರವ ಧನ ನೀಡುವ ವ್ಯವಸ್ಥೆ ಆಗಲಿದೆ ಹಾಗೂ 50 ಸಾವಿರ ರೂ.ಗಳನ್ನು ಪ್ರತಿ ತಿಂಗಳು ನೀಡಲಾಗುವುದು. 21 ಸದಸ್ಯರು ಇರಲಿದ್ದು, 224 ಕ್ಷೇತ್ರಗಳಲ್ಲಿ ಅಧ್ಯಕ್ಷರು ಹಾಗೂ 11 ಸದಸ್ಯರು ಇರಲಿದ್ದಾರೆ ಇವರಿಗೆ ಗೌರವ ಧನ…

Read More

ಬೆಂಗಳೂರು: ಪ್ರಧಾನಿ ನರೇಂದ್ರ ಯಾವಾಗ ಯಾರನ್ನು ಬೇಕಾದರೂ ತಬ್ಬಿಕೊಳ್ಳುತ್ತಾರೆ, ಯಾರನ್ನು ಬೇಕಾದರೂ ತೆಗಳುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಕಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ನಮ್ಮ ನೆರೆ ಹೊರೆಯ ದೇಶದವರನ್ನು ಬದಲಾಯಿಸಲಾಗುವುದಿಲ್ಲ. ಹಾಗಾಗಿ ಅವರೊಂದಿಗೆ ಚೆನ್ನಾಗಿರಬೇ ಕು. ನಾವು ಒಂದಾಗಿ ಹೋಗಬೇಕು. ಅವರು ನಮ್ಮ ಮೈಮೇಲೆ ಬಂದಾಗ ದೇಶಕ್ಕಾಗಿ ಹೋರಾಟಕ್ಕೂ ಸಿದ್ಧರಾಗಬೇಕಾಗುತ್ತದೆ ಎಂದು ಹೇಳಿದ್ದಾರೆ. ಅಂತರರಾಷ್ಟ್ರೀಯ ನೀತಿ ವಿಚಾರದಲ್ಲಿ ಮೋದಿಯವರು ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಇಂದಿರಾ ಗಾಂಧಿ ಯಾವ ರೀತಿ ಪಾಕಿಸ್ತಾನವನ್ನು ಬೇರ್ಪಡಿಸಿ ಬಾಂಗ್ಲಾದೇಶ ನಿರ್ಮಾಣ ಮಾಡಿದರೋ ಅಂತಹ ಹೋರಾಟ ಮಾಡಬೇಕಾಗುತ್ತದೆ ಎಂದು ಟೀಕಿಸಿದ್ದಾರೆ.

Read More

ಗಂಗಾವತಿ ತಾಲೂಕು ಕಾನೂನು ಸೇವಾ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ,ಪಂಚಾಯತ್ ಇಲಾಖೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಂಗಮರಕಲ್ಗುಡಿ, ಗ್ರಾಮ ಪಂಚಾಯತ್ ಜಂಗಮರಕಲ್ಗುಡಿ ಇವರ ಸಂಯುಕ್ತ ಆಶ್ರಯದಲ್ಲಿ ಬಾಲ್ಯ ವಿವಾಹ ನಿಷೇದ ಮತ್ತು ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ನಾಗರಾಜ್ ಗುತ್ತೇದಾರ ರವರು ಅತಿಥಿ ಉಪನ್ಯಾಸ ಮಾಡಿದರು. 1) ಬಾಲ್ಯ ವಿವಾಹ ಕಾಯ್ದೆ ಬಗ್ಗೆ. 2) ಪೋಕ್ಸೋ ಕಾಯ್ದೆಯ ಬಗ್ಗೆ. 3) ಬಾಲ ಕಾರ್ಮಿಕ ಪದ್ದತಿಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು.ಮತ್ತು ಬಾಲ್ಯ ವಿವಾಹ ದ ಪ್ರತಿಜ್ಞಾ ವಿಧಿ ಬೋದಿಸಲಾಯಿತು. ಈ ಕಾರ್ಯಕ್ರಮ ದಲ್ಲಿ T ಮಂಜುನಾಥ್ ರವರು ಪ್ಯಾನೆಲ್ ವಕೀಲರು, ಗ್ರಾಮ ಪಂಚಾಯತಿ ಅಧ್ಯಕ್ಷರು ಶ್ರೀಮತಿ ಶೃತಿ ದನoಜಯ್ ಇವರು ಅಧ್ಯಕ್ಷ ಸ್ಥಾನ ವಹಿಸಿಕೊ0ಡಿದ್ದರು, ಮತ್ತು ಶಾಲೆಯ ಮುಖ್ಯೋಪಾದ್ಯಯರು ಮತ್ತು ಸಿಬ್ಬಂದಿಗಳು, PDO ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳು, DCPU unit ದಿಂದ ಸಂಯೋಜಕರು, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಂಗಾವತಿ,ECO…

Read More

ಹುಬ್ಬಳ್ಳಿ: ‘ಧಾರವಾಡ ಜಿಲ್ಲಾ ಮಟ್ಟದ ದೇವಸ್ಥಾನಗಳ ಅಧಿವೇಶನ ಜ. 28ರಂದು ನಗರದ ನಗರದ ಉತ್ತರಾಧಿಮಠದಲ್ಲಿ ನಡೆಯಲಿದೆ’ ಎಂದು ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ರಾಜ್ಯ ಸಮನ್ವಯಕಾರ ಗುರುಪ್ರಸಾದ ಗೌಡಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ 10ಕ್ಕೆ ಅಧಿವೇಶನ ಆರಂಭವಾಗಲಿದ್ದು, ಸಂಜೆ 5ರವರೆಗೂ ನಡೆಯಲಿದೆ. ಧಾರವಾಡ ಜಿಲ್ಲೆಯ ಎಲ್ಲ ದೇವಸ್ಥಾನಗಳ ವಿಶ್ವಸ್ಥ ಮಂಡಳಿಯ ಪದಾಧಿಕಾರಿಗಳು, ಮಠಾಧೀಶರು ಹಾಗೂ ಧಾರ್ಮಿಕ ಮುಖಂಡರು, ಪುರೋಹಿತರು ಪಾಲ್ಗೊಳ್ಳಲಿದ್ದಾರೆ. ಅದಕ್ಕೂ ಮೊದಲು ನಗರದಲ್ಲಿ ‌ಪೂರ್ವಭಾವಿ ಸಭೆ ನಡೆಸಿ, ಕಾರ್ಯಕ್ರಮದ ರೂಪರೇಷೆ ಸಿದ್ಧಪಡಿಸಲಾಗುವುದು’ ಎಂದು ತಿಳಿಸಿದರು. ‘ಕಳೆದ ಡಿಸೆಂಬರ್’ನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಅಧಿವೇಶನ ಯಶಸ್ವಿಯಾಗಿದ್ದು, ರಾಜ್ಯದ ಅನೇಕ ದೇವಸ್ಥಾನಗಳ ವಿಶ್ವಸ್ಥ ಮಂಡಳಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಸರ್ಕಾರದ ಅಧೀನದಲ್ಲಿರುವ ದೇವಸ್ಥಾನಗಳನ್ನು ಖಾಸಗಿತನಕ್ಕೆ ಪಡೆಯುವುದು, ವಸ್ತ್ರಸಂಹಿತೆ ಸೇರಿದಂತೆ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಇದೀಗ ಜಿಲ್ಲಾಮಟ್ಟದಲ್ಲಿ ಅಧಿವೇಶನ ನಡೆಸಿ, ನಿರ್ಣಯ ಹಾಗೂ ಜಾಗೃತಿ ಮೂಡಿಸಲಾಗುವುದು’ ಎಂದು ತಿಳಿಸಿದರು. ವಿನಾಯಕ ಆಕಳವಾಡಿ, ಪ್ರಕಾಶ ಬೆಂಡಿಗೇರಿ, ವಿದುಲಾ ಹಳದಿಪುರ, ಭಾಸ್ಕರ ಜಿತೂರಿ ಇದ್ದರು

Read More

ವಿಜಯನಗರ:  ಹೂವಿನ ಹಡಗಲಿ ತಹಶೀಲ್ದಾರ್  ಶರಣವ್ವ ಅಮಾನತು 29 ಜನ ಅನರ್ಹ ಫಲಾನುಭವಿಗಳಿಗೆ ಬೆಳೆ ಹಾನಿ ಪರಿಹಾರ ನೀಡಿದ ಆರೋಪ  ಹಿನ್ನೆಲೆ ಅಮಾನತು ಮಾಡಲಾಗಿದೆ. 2019 ರಲ್ಲಿ ಹಾವೇರಿ ಜಿಲ್ಲೆಯ ಬ್ಯಾಡಗಿ ತಹಶೀಲ್ದಾರ್ ಆಗಿದ್ದ ವೇಳೆ ಅನರ್ಹ ಫಲಾನುಭವಿಗಳಿಗೆ ಬೆಳೆ ಹಾನಿ ಪರಿಹಾರ ನೀಡಿದ್ದಾರೆ ಅಂತ ಆರೋಪ ಹಾಗೆ  8 ಲಕ್ಷ 57 ಸಾವಿರದ 338 ರೂ. ಬೆಳೆ ಹಾನಿ ಪರಿಹಾರವನ್ನು 29 ಜನ ಅನರ್ಹ ಫಲಾನುಭವಿಗಳಿಗೆ ನೀಡಿದರು, ಈ ಹಿನ್ನೆಲೆಯಲ್ಲಿ ಅಮಾನತು ಮಾಡಲು ಸರ್ಕಾರದ ಅಧೀನ ಕಾರ್ಯದರ್ಶಿ ಮುಕ್ತಾರ್ ಪಾಷಾ ಆದೇಶ ನೀಡಿದರು.

Read More

ಸದ್ಯ ದರ್ಶನ್ ದುಬೈನಲ್ಲಿ ಇದ್ದಾರೆ. ಕಾಟೇರ ಸಿನಿಮಾದ ಪ್ರದರ್ಶನಕ್ಕೆ ಎಂದು ಹೋದವರು, ಅಲ್ಲಿ ಸ್ನೇಹಿತರ ಜೊತೆ ದುಬೈ ಸುತ್ತುತ್ತಿದ್ದಾರೆ. ದರ್ಶನ್ ಅಂದರೆ ಪ್ರಾಣಿಗಳ ಮೇಲೆ ವಿಪರೀತ ಕಾಳಜಿ. ಹಾಗಾಗಿ ದುಬೈನಲ್ಲಿರೋ ಹುಲಿಯೊಂದನ್ನು ದರ್ಶನ್ ಆಟವಾಡಿದ್ದಾರೆ. ಮಲಗಿರುವ ಹುಲಿ (Tiger) ಮೈ ಸವರಿದ್ದಾರೆ. ಈ ದೃಶ್ಯವನ್ನು ನೋಡಿದ ಅಭಿಮಾನಿಗಳು ಹುಷಾರು ಬಾಸ್ ಎಂದು ಕಾಮೆಂಟ್ ಮಾಡಿದ್ದಾರೆ. ಕಾಟೇರ ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ ದುಬೈ ಕನ್ನಡಿಗರು. ಕಾಟೇರ ಸಿನಿಮಾದಲ್ಲಿನ ದರ್ಶನ್ ಪಾತ್ರ ಕಂಡು ಕುಣಿದಿದ್ದಾರೆ. ಹಾಗಾಗಿ ದುಬೈ ಕನ್ನಡಿಗರು ಮತ್ತು ದರ್ಶನ್ ಅಭಿಮಾನಿಗಳು ಒಟ್ಟಾಗಿ ದಾಸನಿಗೆ ಹೊಸ ಬಿರುದು ನೀಡಿದ್ದಾರೆ. ದುಬೈನಲ್ಲಿ ನಡೆದ ಸಮಾರಂಭದಲ್ಲಿ ದರ್ಶನ್ ಗೆ ಕರುನಾಡ ಅಧಿಪತಿ (Karunaada Adhipati) ಎಂಬ ಬಿರುದು ನೀಡಿ ಗೌರವಿಸಲಾಗಿದೆ. ಕಾಟೇರ (Katera) ಸಿನಿಮಾದ ಶೋ ದುಬೈನಲ್ಲಿ ಮೊನ್ನೆ ನಡೆದಿದೆ. ದುಬೈನಲ್ಲೂ (Dubai) ಕಾಟೇರ ಹೌಸ್ ಫುಲ್ ಪ್ರದರ್ಶನ ಕಂಡಿದೆ. ನಟ ದರ್ಶನ್, ನಿರ್ದೇಶಕ ತರುಣ್ ಸುಧೀರ್ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ…

Read More