Author: AIN Author

ಗೂಗಲ್‌ (Google) ಕಂಪನಿ ತನ್ನ ಸುರಕ್ಷತಾ ನಿಯಮಗಳನ್ನು ಅಪ್‌ಡೇಟ್‌ ಮಾಡಿದ್ದು, ಜಿ-ಮೇಲ್‌ ಖಾತೆ ಹೊಂದಿದ್ದು, ಸಕ್ರಿಯರಾಗಿಲ್ಲದವರಿಗೆ ಶಾಕಿಂಗ್‌ ನ್ಯೂಸ್‌ ಕೊಟ್ಟಿದೆ. 2 ವರ್ಷ ಬಳಸದೇ ಇರುವ ಜಿ-ಮೇಲ್‌ ಖಾತೆಗಳನ್ನು (Gmail Accounts) ಡಿಸೆಂಬರ್‌ನಲ್ಲಿ ಬಂದ್‌ ಮಾಡಲಾಗುವುದು ಎಂದು ತಿಳಿಸಿದೆ. ಹೀಗಾಗಿ ಒಮ್ಮೆ ಲಾಗಿನ್‌ ಆಗಿ ಖಾತೆ ಉಳಿಸಿಕೊಳ್ಳಿ ಎಂಬ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದೆ. ಗೂಗಲ್‌ ಕಂಪನಿಯು ಸುರಕ್ಷತಾ ನಿಯಮಗಳನ್ನು ಕಳೆದ ಮೇ ತಿಂಗಳಲ್ಲಿ ಅಪ್‌ಡೇಟ್‌ ಮಾಡಿತ್ತು. ಆಗಲೇ ಅದರ ಉಪಾಧ್ಯಕ್ಷೆ ರೂತ್‌ ಕ್ರಿಚೇಲ್‌, ಮುಂಬರುವ ಡಿಸೆಂಬರ್‌ನಲ್ಲಿ ಕಳೆದ 2 ವರ್ಷಗಳಿಂದ ಒಮ್ಮೆಯೂ ಲಾಗಿನ್‌ ಮಾಡದ ಅಥವಾ ಬಳಕೆ ಮಾಡದ ವೈಯಕ್ತಿಕ ಗೂಗಲ್‌ ಖಾತೆಗಳನ್ನು ಡಿಲೀಟ್‌ ಮಾಡಲು ಆರಂಭಿಸುತ್ತೇವೆ ಎಂದು ತಿಳಿಸಿದ್ದರು. ಮುಂದಿನ ಎರಡು ವರ್ಷಗಳಲ್ಲಿ ಕನಿಷ್ಠ ಬಳಕೆ ಮಾಡದ ಖಾತೆಗಳನ್ನು ನಿರಂತರವಾಗಿ ರದ್ದುಪಡಿಸುತ್ತೇವೆ ಎಂದು ಸೂಚನೆ ನೀಡಿದ್ದಾರೆ. ನಿಯಮದ ಪ್ರಕಾರ, ವೈಯಕ್ತಿಕ ಗೂಗಲ್‌ ಖಾತೆಗಳು (ಜಿ-ಮೇಲ್‌, ಡಾಕ್ಸ್‌, ಡ್ರೈವ್‌, ಮೀಟ್‌, ಕ್ಯಾಲೆಂಡರ್‌, ಗೂಗಲ್‌ ಫೋಟೋಸ್‌ ಇತ್ಯಾದಿ) ಮಾತ್ರ ಡಿಲೀಟ್‌ ಆಗಲಿವೆ. ಸಾಂಸ್ಥಿಕ…

Read More

ಬೆಂಗಳೂರು:- ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ಈ ಮೊದಲು ಏ.20 ಮತ್ತು 21ರಂದು ಪರೀಕ್ಷೆ ನಡೆಸಲು ವೇಳಾಪಟ್ಟಿ ನಿಗದಿ ಮಾಡಲಾಗಿತ್ತು. ಆದರೆ, ಅದೇ ದಿನ ಎನ್‌ಡಿಎ ಪರೀಕ್ಷೆ ನಿಗದಿಯಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷಾ ದಿನಾಂಕವನ್ನು ಪರಿಷ್ಕರಣೆ ಮಾಡಲಾಗಿದೆ. ಏ.18ರಿಂದ 20ರ ವರೆಗೆ ನಡೆಸಲಾಗುತ್ತಿದೆ. ಏ.18ರ ಬೆಳಗ್ಗೆ 10.30ರಿಂದ ಜೀವಶಾಸ್ತ್ರ, ಮಧ್ಯಾಹ್ನ 2.30ರಿಂದ ಗಣಿತ, 19ರಂದು ಬೆಳಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆ ತಲಾ 60 ಅಂಕಗಳಿಗೆ ನಡೆಯಲಿದೆ. ಹಾಗೆಯೇ, ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಏ.20ರಂದು ಬೆಂಗಳೂರು, ಬೀದರ್, ಬೆಳಗಾವಿ, ಬಳ್ಳಾರಿ, ವಿಜಯಪುರ ಮತ್ತು ಮಂಗಳೂರು ಕೇಂದ್ರಗಳಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ ಎಂದು ಕೆಇಎ ತಿಳಿಸಿದೆ. ಪರೀಕ್ಷೆ ಬರೆಯಲು ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಜ.10ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ನ್ಯಾಚುರೋಪಥಿ ಮತ್ತು ಯೋಗ, ಬಿ.ಫಾರ್ಮಾ, ಫಾರ್ಮಾ-ಡಿ, ದ್ವಿತೀಯ ವರ್ಷದ ಬಿ.ಫಾರ್ಮಾ, ಕೃಷಿ ಕೋರ್ಸುಗಳು, ಪಶು ಸಂಗೋಪನೆ, ಬಿ.ಎಸ್ಸಿ (ನರ್ಸಿಂಗ್),…

Read More

ಬೆಂಗಳೂರು: ಕಾರ್ಯನಿರ್ವಹಣೆಯ ಸಂದರ್ಭದಲ್ಲಿ ಪೈಲಟ್‌ಗಳಿಗೆ ದಿಕ್ಕು ತಪ್ಪಿಸುವುದನ್ನು ತಡೆಯಲು ಫೈಟರ್‌ಜೆಟ್‌ಗಳಿಗೆ ಶೀಘ್ರದಲ್ಲೇ ಡಿಜಿಟಲ್‌ ನಕ್ಷೆ (India Made Digital Maps) ಗಳನ್ನು ಅಳವಡಿಸಲು ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (HAL) ಸಜ್ಜಾಗಿರುವುದಾಗಿ ಹೆಚ್‌ಎಎಲ್‌ನ ಉನ್ನತ ಅಧಿಕಾರಿ ತಿಳಿಸಿದ್ದಾರೆ. ಡಿಜಿಟಲ್‌ ನಕ್ಷೆ (Digital Maps) ಹೊಂದುವುದರಿಂದ ಪೈಲಟ್‌ಗಳು ಅಚಾನಕ್ಕಾಗಿ ಗಡಿ ದಾಟುವುದಿಲ್ಲ. ಗ್ರೂಪ್‌ ಕ್ಯಾಪ್ಟನ್‌ ಅಭಿನಂದನ್‌ ಅವರ ರೀತಿ ಮತ್ತೊಂದು ಘಟನೆ ಸಂಭವಿಸಬಾರದು. ಅದಕ್ಕಾಗಿ ಈ ಡಿಜಿಟಲ್‌ ನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಇನ್ಮುಂದೆ ಅವರು ತಮ್ಮ ಕೈಯಲ್ಲಿ ಮ್ಯಾಪ್‌ ಹಿಡಿದಿಟ್ಟುಕೊಳ್ಳುವ ಅಗತ್ಯವಿರುವುದಿಲ್ಲ ಎಂದು ಹೆಚ್‌ಎಎಲ್‌ನ ಎಂಜಿನಿಯರಿಂಗ್‌ ಮತ್ತು ಆರ್‌&ಡಿ ವಿಭಾಗದ ನಿರ್ದೇಶಕ ಡಿ.ಕೆ ಸುನೀಲ್‌ ಹೇಳಿದ್ದಾರೆ. ಡಿಜಿಟಲ್‌ ನಕ್ಷೆಯಿಂದ ಏನು ಅನುಕೂಲ? ಡಿಜಿಟಲ್‌ ನಕ್ಷೆಯಿಂದ ವಿಮಾನ ಹಾರಾಟ ಸಂದರ್ಭದಲ್ಲಿ ಪೈಲಟ್‌ಗಳು ಕಾಕ್‌ಪಿಟ್ ಡಿಸ್‌ಪ್ಲೇನಲ್ಲಿ (Cockpit Display) ನಕ್ಷೆಯನ್ನು ಪರಿಶೀಲಿಸಬಹುದು. 2ಡಿ ಮತ್ತು 3ಡಿ ರೂಪದಲ್ಲಿ ನಕ್ಷೆ ಲಭ್ಯವಿರಲಿದ್ದು, ಪೈಲಟ್‌ಗಳು ಗುಡ್ಡಗಾಡು ಪ್ರದೇಶದಲ್ಲಿದ್ದರೆ ಮೊದಲೇ ಎಚ್ಚರಿಸುತ್ತದೆ. ಹಾಗಾಗಿ ಎತ್ತರದ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಉಂಟಾಗುವ ಅಪಘಾತಗಳನ್ನು ತಡೆಯಲು…

Read More

ಲಾಹೋರ್: ಕೆಲವೊಮ್ಮೆ ದುರಾದೃಷ್ಟ ಕೈ ಹಿಡಿದಿದ್ದರೆ ಉನ್ನತ ಸ್ಥಾನದಲ್ಲಿದ್ದವರೂ ತಳಮಟ್ಟಕ್ಕೆ ತಲುಪುತ್ತಾರೆ ಎನ್ನುವುದಕ್ಕೆ ಈ ಪಾಕಿಸ್ತಾನಿ ನಟನ ಉದಾಹರಣೆ ಉತ್ತಮವಾಗಿದೆ. ಪ್ರಪಂಚದಾದ್ಯಂತ ಮನರಂಜನಾ ಉದ್ಯಮದಲ್ಲಿ ಮಿಂಚಿ ಸ್ಟಾರ್ ಗಿರಿಯನ್ನು ಪಡೆದುಕೊಂಡಿದ್ದ ಈ ನಟ ಅದನ್ನು ಪಡೆದುಕೊಂಡಿರುವಾಗಲೇ ಕಳೆದುಕೊಂಡ. ಈ ನಟನೇ ಶಾಹಿದ್ ನಸೀಬ್, ಕೆಲಸದ ಕೊರತೆಯಿಂದಾಗಿ ಪೈಂಟರ್ ವೃತ್ತಿಗೆ ಇಳಿದಿದ್ದಾರೆ. ಸಿನಿಮಾ ನಾಟಕ ವಿಸಿಲ್ ನಲ್ಲಿ ಖಳ ನಟನಾಗಿದ್ದ ಇವರು ಹಲವಾರು ದೂರದರ್ಶನ ಧಾರಾವಾಹಿಗಳಾದ ದುಲ್ಲಾರಿ, ಜಬ್ ಉಸೆ ಮೊಹಬ್ಬತ್ ಹುಯಿ ಮತ್ತು ಇಲ್ಟಾಜಾನಲ್ಲಿ ನಟಿಸಿದ್ದಾರೆ. ಆಗ ಅದೃಷ್ಟವಿತ್ತು ಈಗ ದುರಾದೃಷ್ಟ ಕೈ ಹಿಡಿದಿದ್ದರಿಂದ ಕಾರ್ಮಿಕನಾಗಿದ್ದಾರೆ. “ನಾನು ಎರಡು ನಾಟಕ ಧಾರವಾಹಿ ಮತ್ತು ಟೆಲಿಫಿಲ್ಮ್ ಗಳಲ್ಲಿ ಉತ್ತಮ ಪಾತ್ರವನ್ನು ಹೊಂದಿದ್ದೆನೆ. ಆದರೆ ಕಳೆದ ಹತ್ತು ವರ್ಷಗಳು ನನಗೆ ತುಂಬಾ ಕಠಿಣವಾದ ದಿನಗಳಾಗಿವೆ. ದಿ ವಿಸಿಲ್ ನನಗೆ ದೊಡ್ಡ ಅವಕಾಶವನ್ನು ಕೊಟ್ಟಿದೆ ಹಾಗೂ ಅವಕಾಶಗಳ ಬಾಗಿಲನ್ನು ತೆರೆಸಿದೆ. ಆದರೆ ಈಗ ದುರಾದೃಷ್ಟವಶಾತ್ ಯಾವ ಪಾತ್ರಗಳೂ ದೊರಕುತ್ತಿಲ್ಲ. ನಾನು ಹಣ ಗಳಿಸಲು ಪೈಂಟರ್ ಆಗಿದ್ದೇನೆ” ಎಂದು…

Read More

ಸರಕಾರಿ ಸೌಲಭ್ಯ ಪಡೆಯುವ ಉದ್ದೇಶದಿಂದ ತಾವು ಸಣ್ಣ ರೈತರು ಎಂದು ತೋರಿಸಿಕೊಳ್ಳುವ ಭರದಲ್ಲಿ ರಾಜ್ಯದ ಕೃಷಿಕರು ಫ್ರೂಟ್ಸ್ ತಂತ್ರಾಂಶದಲ್ಲಿ ತಮ್ಮ ಒಡೆತನದಲ್ಲಿರುವ ಸಂಪೂರ್ಣ ಕೃಷಿ ಭೂಮಿಯ ಮಾಹಿತಿ ಮರೆಮಾಚಿ, ಕೆಲವೇ ಹೆಕ್ಟೇರ್ ಭೂಮಿ ಮಾಹಿತಿ ನೀಡುತ್ತಿದ್ದಾರೆ.ಇದರಿಂದ ಬರ ಪರಿಹಾರ ಪಡೆಯಲು ರೈತರಿಗೆ ತೊಡಕಾಗುವ ಅಪಾಯ ಎದುರಾಗಿದೆ. ರಾಜ್ಯಾದ್ಯಂತ ಬರ ಎದುರಾಗಿದ್ದು, ಬರ ಪರಿಹಾರ ಪಡೆಯಬೇಕಾದರೆ ರೈತರು ಫ್ರೂಟ್ಸ್ ಐಡಿ (ಎಫ್ಐಡಿ) ಕಡ್ಡಾಯವಾಗಿ ಹೊಂದಿರಬೇಕು ಎಂದಿರುವ ಸರಕಾರ, ಎಫ್ಐಡಿ ನೋಂದಣಿ ಗಡುವನ್ನು ನ.30ರವರೆಗೆ ವಿಸ್ತರಿಸಿದೆ. ಆದರೆ, ನೋಂದಣಿ ನಿರೀಕ್ಷೆಯಂತೆ ಆಗುತ್ತಿಲ್ಲ. ಜತೆಗೆ, ತಾವು ದೊಡ್ಡ ರೈತರೆಂದು ತೋರಿಸಿಕೊಂಡರೆ ಸರಕಾರದಿಂದ ಸಹಾಯಧನ, ಗೌರವಧನ, ಸಾಲ ಮೊದಲಾದ ಸೌಲಭ್ಯಸಿಗುವುದಿಲ್ಲ ಎಂಬ ಕಾರಣಕ್ಕೆ ರೈತರು ಪೂರ್ಣ ಮಾಹಿತಿ ನೀಡುತ್ತಿಲ್ಲ. ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಹೋಗಿ, ತಮ್ಮ ಎಲ್ಲ ಜಮೀನುಗಳ ಪಹಣಿ, ಆಧಾರ್ ಮತ್ತು ಜಾತಿ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್ಬುಕ್ ನೀಡಿ ಎಫ್ಐಡಿ ಮಾಡಿಸಬೇಕು. ಈಗಾಗಲೇ ಎಫ್ಐಡಿ ಹೊಂದಿರುವ ರೈತರು ತಮ್ಮ ಹೆಸರಿನಲ್ಲಿರುವ…

Read More

ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸಾರಥ್ಯದಡಿ ಆಡುವುದಕ್ಕೆ ನಾನು ಅದೃಷ್ಟ ಮಾಡಿದ್ದೆ ಎಂದು ಜೋಬರ್ಗ್ ಸೂಪರ್ ಕಿಂಗ್ಸ್ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಸಂತಸ ವ್ಯಕ್ತಪಡಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಿದ್ದರಿಂದ ನನ್ನಲ್ಲಿ ನಾಯಕತ್ವದ ಗುಣಗಳು ಹೆಚ್ಚಾಗಿದೆ ಎಂದು ಹೇಳಿದ್ದಾರೆ. 2011ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಸಿಎಸ್ ಕೆ ತಂಡ ಸೇರಿದ ಫಾಫ್ ಡುಪ್ಲೆಸಿಸ್, 2021ರವರೆಗೂ ತಂಡದ ಪ್ರಮುಖ ಆಟಗಾರರಾಗಿದ್ದರು. ಕೇವಲ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನದಿಂದ ಅಲ್ಲದೆ ಸೋಲುವ ಎಷ್ಟೋ ಪಂದ್ಯಗಳಲ್ಲಿ ಫಿನಿಷರ್ ಪಾತ್ರ ವಹಿಸಿದ್ದರು. 2021ರ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 59 ಎಸೆತಗಳಲ್ಲಿ 86 ರನ್ ಗಳಿಸಿದ್ದಲ್ಲದೆ ಸಿಎಸ್ ಕೆ 4ನೇ ಬಾರಿ ಟ್ರೋಫಿ ಗೆದ್ದು ಕೊಟ್ಟು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು ಎಂ.ಎಸ್.ಧೋನಿಯೊಂದಿಗೆ ಡ್ರೆಸಿಂಗ್ ರೂಮ್ ಹಂಚಿಕೊಂಡಿದ್ದು ಸಂತಸವಾಗಿತ್ತು: ಫಾಫ್ ಡುಪ್ಲೆಸಿಸ್ ಎಸ್ ಎ20 ಎರಡನೇ ಆವೃತ್ತಿಗೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫಾಫ್…

Read More

ಬೆಂಗಳೂರು:- ನಗರದ 28 ಪಶುವೈದ್ಯ ಕೇಂದ್ರಗಳ ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ. ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.​ದೀಕ್ಷಿತ್​ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ರಾಜ್ಯ ಸರ್ಕಾರವು 1,300 ಪಶುಗಳಿಗಿಂತಲೂ ಕಡಿಮೆ ಸಂಖ್ಯೆಯಲ್ಲಿರುವ ಆಸ್ಪತ್ರೆಗಳ ವ್ಯಾಪ್ತಿಯಲ್ಲಿನ ಪಶು ಆಸ್ಪತ್ರೆಗಳನ್ನು ಸ್ಥಳಾಂತರಿಸುವ ಸಂಬಂಧ ಹೊರಡಿಸಿರುವ ಆದೇಶ ಅಸಂಬದ್ಧವಾಗಿದೆ. ಆದ್ದರಿಂದ, ಸರ್ಕಾರದ ಈ ಆದೇಶವನ್ನು ಹಿಂಪಡೆಯುವಂತೆ ನಿರ್ದೇಶಿಸಬೇಕು’ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಪ್ರತಿವಾದಿ ರಾಜ್ಯ ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ ಆಯುಕ್ತರು ಮತ್ತು ಉಪ ನಿರ್ದೇಶಕರಿಗೆ ನೋಟಿಸ್​ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿದೆ. ಬೆಂಗಳೂರು ನಗರ ಜಿಲ್ಲೆಯ ಯಲಹಂಕ, ಆನೇಕಲ್​, ಬೆಂಗಳೂರು ಈಶಾನ್ಯ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ತಾಲ್ಲೂಕು ಗಳಲ್ಲಿ ಗೋವುಗಳೂ ಸೇರಿದಂತೆ 13 ಲಕ್ಷಕ್ಕೂ ಹೆಚ್ಚಿನ ವಿವಿಧ ಜಾತಿಯ ಪ್ರಾಣಿಗಳು ಮತ್ತು ಸಾಕು ಪ್ರಾಣಿಗಳು ಇವೆ.…

Read More

ಮುಂಬೈ: ಅಫ್ಘಾನಿಸ್ತಾನ (Afghanistan) ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಜನವರಿ 11 ರಿಂದ ಪ್ರಾರಂಭಗೊಳ್ಳಲಿದ್ದು, ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma) ಮಹತ್ವದ ಮೈಲುಗಲ್ಲು ಸ್ಥಾಪಿಸುಲು ಸಜ್ಜಾಗಿದ್ದಾರೆ. ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಆಗಿರುವ ರೋಹಿತ್‌ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ (T20I Cricket) 4,000 ರನ್‌ ಪೂರೈಸುವ ಸನಿಹದಲ್ಲಿದ್ದಾರೆ. ಈ ಮೂರು ಪಂದ್ಯಗಳ ಸರಣಿಯಲ್ಲಿ ರೋಹಿತ್‌ ಶರ್ಮಾ 147 ರನ್‌ ಪೂರೈಸಿದರೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 4,000 ರನ್‌ ಪೂರೈಸಿದ ವಿಶ್ವದ ಹಾಗೂ ಭಾರತದ 2ನೇ ಬ್ಯಾಟರ್‌ ಎನಿಸಿಕೊಳ್ಳಲಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4,000 ರನ್‌ ಪೂರೈಸಿದ ಟಾಪ್‌ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ನಂ.1 ಸ್ಥಾನದಲ್ಲಿದ್ದಾರೆ. T20I ಟಾಪ್‌ ಸ್ಕೋರರ್‌ ಯಾರು? ಕೊಹ್ಲಿ 115 ಪಂದ್ಯಗಳಲ್ಲಿ 1 ಶತಕ, 37 ಅರ್ಧ ಶತಕಗಳೊಂದಿಗೆ 4,008 ರನ್‌ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, 148 ಪಂದ್ಯಗಳಲ್ಲಿ 3853 ರನ್‌ ಗಳಿಸಿರುವ ರೋಹಿತ್‌ ಶರ್ಮಾ (4 ಶತಕ, 29 ಅರ್ಧಶತಕ) 2ನೇ ಸ್ಥಾನದಲ್ಲಿದ್ದಾರೆ. ಇನ್ನೂ…

Read More

ಬೆಂಗಳೂರು:- ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇಂದು ಮುಂಜಾನೆ, ಬೆಳಗ್ಗಿನ ಹೊತ್ತು ಮಂಜು ಮುಸುಕಿದ ವಾತಾವರಣ ಇರಲಿದೆ. ಸಹಜವಾಗಿಯೇ ಕೆಲವು ಕಡೆಗಳಲ್ಲಿ ಸಂಜೆಯಾಗುತ್ತಿದ್ದಂತೆ ಚಳಿ ಆಗಲಿದ್ದು, ತಡರಾತ್ರಿಯಾಗುತ್ತಿದ್ದಂತೆ ಚಳಿಯ ತೀವ್ರತೆ ಹೆಚ್ಚಾಗಬಹುದು. ಬಹುತೇಕ ಕಡೆಗಳಲ್ಲಿ ಮುಂದಿನ 48 ಗಂಟೆ ಅವಧಿಯಲ್ಲಿ ವಾತಾವರಣದ ಉಷ್ಣಾಂಶವು 2 ರಿಂದ 3 ಡಿಗ್ರಿ ಸೆಲ್ಶಿಯಸ್‌ನಷ್ಟು ಹೆಚ್ಚಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಇಂದು ಬೆಳಗ್ಗೆ 8.30ರಿಂದ ಜನವರಿ 12 ರ ಬೆಳಗ್ಗೆ 8.30ರ ತನಕದ ಅವಧಿಯಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಚಳಿ ಮತ್ತು ಒಣ ಹವೆ ಇರಲಿದೆ. ಕೆಲವು ಕಡೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ನಿರೀಕ್ಷಿಸಬಹುದು ಎಂದು ವರದಿ ಹೇಳಿದೆ. ಕರಾವಳಿ ಕರ್ನಾಟಕದ ಭಾಗದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಳೆದ ನಾಲ್ಕಾರು ದಿನಗಳಲ್ಲಿ ಕೆಲವು ಕಡೆ ಸಾಧಾರಣದಿಂದ ಭಾರಿ ಮಳೆಯಾಗಿತ್ತು. ಈ ವಾತಾವರಣದ ನಡುವೆ, ಉಷ್ಣಾಂಶವು ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಶಿಯಸ್‌ನಷ್ಟು ಹೆಚ್ಚಾಗಿತ್ತು. ಈ ಅನುಭವ ಇನ್ನೂ ಎರಡು…

Read More

ಹಾಸನ : ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಡಿ ದೊರೆಯುವ ಎಲ್ಲಾ ಸೌಲಭ್ಯಗಳ ಬಗ್ಗೆ ವ್ಯಾಪಕವಾಗಿ ಪ್ರಚಾರ ನೀಡುವ ಮೂಲಕ ರೈತರಿಗೆ ಜಾಗೃತಿ ಮೂಡಿಸುವಂತೆ ಹಾಸನ ವಿಧಾನ ಸಭೆ ಕ್ಷೇತ್ರದ ಶಾಸಕ ಸ್ವರೂಪ್ ಪ್ರಕಾಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ತಾ. ಪಂ‌ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಅವರು ಇತ್ತೀಚಿಗೆ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದ್ದು ಆರೋಗ್ಯ ಇಲಾಖೆ ಅವರು ಅದರ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕೋರೋನಾ ವೈರಸ್ ತಡೆಗಟ್ಟಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ‌ ಅವರು, ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸುವ ಮೂಲಕ ಕೋವಿಡ್ ತಡೆಗಟ್ಟಲು ಸಹಕರಿಸಬೇಕು ಎಂದು ತಿಳಿಸಿದರು. ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುತ್ತಿದ್ದಾರೆಯೆ ಹಾಗೂ ಅಲ್ಲಿನ ಸ್ವಚ್ಚತೆ, ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಬೇಕು.‌ ಅಧಿಕಾರಿಗಳ ತಂಡದೊಂದಿಗೆ ವಸತಿ ನಿಲಯಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಅಲ್ಲಿನ ಸ್ವಚ್ಚತೆ, ಶೌಚಾಲಯ ವ್ಯವಸ್ಥೆ, ಪೌಷ್ಠಿಕ…

Read More