Author: AIN Author

ಬೀದರ್:- ಪ್ರಿಯಕರನ ಜೊತೆ ಮದುವೆ ಮಾಡಿಕೊಂಡಿದ್ದಕ್ಕೆ, ಕುಟುಂಬಸ್ಥರಿಂದ ಜೀವಭಯವಿದೆ ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮೆಟ್ಟಿಲೇರಿ ರಕ್ಷಣೆ ಕೋರಿದ್ದ ನವಜೋಡಿಗಳ ಪ್ರಕರಣ ತಿರುವು ಪಡೆದುಕೊಂಡಿದ್ದು, ಯುವತಿಗೆ ಈಗಾಗಲೇ ಮೊದಲ ಮದುವೆ ಆಗಿರುವ ವಿಚಾರ ಬಹಿರಂಗವಾಗಿದೆ. ಆದ್ರೆ ಮದುವೆ ಒತ್ತಾಯವಾಗಿ ಮಾಡಲಾಗದೆ, ನನಗೆ ಮದುವೆ ಆಗಿದ್ದೆ ಗೊತ್ತಿಲ್ಲಾ ಎಂದು ಯುವತಿ ಹೇಳುತ್ತಿದ್ದಾಳೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ…… ಬೀದರ್‌ ಜಿಲ್ಲೆಯ ಔರಾದ್ ತಾಲೂಕಿನ ಕೌಡಗಾಂವ್ ಗ್ರಾಮದ ಲೊಕೇಶ್ ಹಾಗೂ ಭಾಲ್ಕಿ ತಾಲುಕಿನ ಕುರ್ನಳ್ಳಿ ನಿರ್ಮಲಾ ಪರಸ್ಪರ ಪ್ರೀತಿಸಿದ್ದಾರೆ. ಪ್ರೀತಿ ಬಳಿಕ ಅಕ್ಟೋಬರ್ 23 ರಂದು ಮದುವೆ ಆಗಿ, ಡಿಸೆಂಬರ್ 18 ರಂದು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯನ್ನು ಮಾಡಿಕೊಂಡಿದ್ದಾರೆ‌. ಬಳಿಕ ಹೈದರಾಬಾದ್‌ನಲ್ಲಿದ್ದು, ಜೀವನ ನಡೆಸಲು ಮುಂದಾಗಿದ್ದಾರೆ. ಆದ್ರೆ ಯುವತಿ ಕುಟುಂಬಸ್ಥರು ಜಿಲ್ಲೆಯ ಜನವಾಡ ಪೊಲೀಸ್ ಠಾಣೆಯಲ್ಲಿ ನೀಡಿದ ನಾಪತ್ತೆ ಪ್ರಕರಣ ಸಂಬಂಧ ಯುವತಿಯನ್ನ ಠಾಣೆಗೆ ಕರೆಸಿ ವಿಚಾರಣೆ ಮಾಡಿದಾಗ ಪರಸ್ಪರ ಒಪ್ಪಿ ಮದುವೆ ಮಾಡಿಕೊಂಡಿದ್ದೇವೆ ಎಂದು ಸ್ಪಷ್ಟಣೆ…

Read More

ಹಾವೇರಿ:- ಜಿಲ್ಲೆಯ ರಾಣೇಬೆನ್ನೂರು ತಾಲೂಕಿನಲ್ಲಿ ಅರೇಮಲ್ಲಾಪುರ ಗ್ರಾಮದಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹಿನ್ನೆಲೆ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಗ್ರಾಮಸ್ಥರಿಂದ ಹಿಗ್ಗಾಮುಗ್ಗ ಥಳಿಸಿರುವಂತಹ ಘಟನೆ ಜರುಗಿದೆ. ಮಂಜುನಾಥನಿಗೆ ಎಂಬ ಆರೋಪಿಗೆ ಗ್ರಾಮದ ಮಹಿಳೆಯರು ಮತ್ತು ಪುರಷುರು ಗೂಸಾ ನೀಡಿದ್ದಾರೆ. ಪೋಕ್ಸೊ ಕಾಯ್ದೆ ಅಡಿ ಆರೋಪಿಯನ್ನ ಬಂಧಿಸಲು ಆಗ್ರಹಿಸಲಾಗಿದ್ದು, ಸ್ಥಳಕ್ಕೆ ರಾಣೇಬೆನ್ನೂರು ಪೋಲಿಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ರಾಮನಗರ:- ಕೋಟ್ಯಾಧೀಶ ವ್ಯಕ್ತಿಯೊಬ್ಬ ಜಸ್ಟ್ ಜೀಬ್ರಾ ಲೈನ್ ಕ್ರಾಸ್ ಮಾಡಿದ್ದಕ್ಕೆ ಕಾರಿನಿಂದ ಇಳಿದುಬಂದು ಟ್ರಾಫಿಕ್​ ಪೊಲೀಸ್ ಬಳಿ ಕ್ಷಮೆಯಾಗಿಸಿದ್ದಾರೆ. ಕೋಟ್ಯಾಧೀಶ್ವರನ ಈ ಸೌಮ್ಯತೆ ಟ್ರಾಫಿಕ್​ ಪೊಲೀಸ್​ ಮನಸೋತು ಬಿಟ್ಟು ಕಳುಹಿಸಿದ್ದಾರೆ. ಈ ಒಂದು ಅಪರೂಪದ ಘಟನೆ ರಾಮನಗರದಲ್ಲಿ ನಡೆದಿದೆ. ವೇಗವಾಗಿ ಹೋಗುತ್ತಿದ್ದಾಗ ದಿಢೀರ್ ಸಿಗ್ನಲ್ ಬಿದ್ದಿದೆ. ಕೂಡಲೇ ಫೇರಾರಿ ಕಾರು ಚಾಲನ ಬ್ರೇಕ್ ಹಾಕಿದ್ದಾನೆ. ಆದರೂ ಸಹ ಸಹ ಕಾರು ಜೀಬ್ರಾ ಲೈನ್​ ಕ್ರಾಸ್​ ಆಗಿದೆ. ಇದರಿಂದ ಎಚ್ಚೆತ್ತ ಚಾಲಕ, ಕಾರಿನಿಂದ ಇಳಿದು ಸ್ಥಳದಲ್ಲಿದ್ದ ಟ್ರಾಫಿಕ್​ ಪೊಲೀಸ್ ಬಳಿ ಹೋಗಿ ಕ್ಷಮೆ ಕೋರಿದ್ದಾರೆ. ಕೋಟ್ಯಾಧೀಶ್ವರನ ಸೌಮ್ಯತೆ ಕಂಡು ಟ್ರಾಫಿಕ್ ಪೊಲೀಸ್, ಕಾರಿಗೆ ಯಾವುದೇ ದಂಡ ಹಾಕದೇ ಬಿಟ್ಟು ಕಳುಹಿಸಿದ್ದಾರೆ. ವೇಗದಲ್ಲಿದ್ದ ಕಾರನ್ನು ಚಾಲಕ ಕಂಟ್ರೋಲ್ ಮಾಡಿದ್ದಾರೆ. ಆದರೂ ಸಹ ಸಿಗ್ನಲ್ ದಿಢೀರ್ ಬಿದ್ದಿದ್ದರಿಂದ ಕಾರು ಜೀಬ್ರಾ ಲೈನ್ ಕ್ರಾಸ್ ಆಗಿದೆ. ಬಳಿಕ ಪೊಲೀಸರು ಸ್ಥಳಕ್ಕೆ ಬರುವ ಮುಂಚೆಯೇ ಕಾರು ಮಾಲೀಕ ಸ್ವತಃ ತಾವೇ ಕಾರನಿಂದ ಕೆಳಗಿಳಿದು ಹೋಗಿ ಕ್ಷಮೆಯಾಚಿಸಿದ್ದಾರೆ. ಒಮ್ಮೆಲೆ ಸಿಗ್ನಲ್…

Read More

ಬೆಂಗಳೂರು:- ಸಿಎಂ ಸ್ಥಾನ ಉಳಿಸಿಕೊಳ್ಳುವಲ್ಲೇ ಸಿದ್ದರಾಮಯ್ಯ ಮಗ್ನರಾಗಿದ್ದೇವೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರೈತರಿಗೆ ಬರ ಪರಿಹಾರ ನೀಡಿಲ್ಲ. ಅಭಿವೃದ್ಧಿಗೆ ನಯಾ ಪೈಸೆ ಹಣ ಬಿಡುಗಡೆ ಆಗಿಲ್ಲ. ಬಂಡವಾಳ ಹೂಡಿಕೆಗೆ ಯಾರೂ ಬರುತ್ತಿಲ್ಲ. ಮುಖ್ಯಮಂತ್ರಿಗಳು ತಮ್ಮ ಸ್ಥಾನ ಉಳಿಸಿಕೊಳ್ಳುವ ರಾಜಕಾರಣದಲ್ಲಿ ಮಗ್ನರಾಗಿದ್ದಾರೆ ಎಂದರು. ಈ ಸರ್ಕಾರ ಬಂದ ಕೂಡಲೇ ಬಂಡವಾಳ ಹೂಡಿಕೆದಾರರು ಹೊರಗೆ ಹೋಗುವಂತ ವಾತಾವರಣ ಸೃಷ್ಟಿ ಮಾಡಿದ್ದಾರೆ. ನಮ್ಮ ಕಾಲದಲ್ಲಿ ಹೂಡಿಕೆ ಮಾಡಲು ಬಂದವರು ವಾಪಸ್ ಹೋಗುತ್ತಿದ್ದಾರೆ. ಬಂಡವಾಳ ಹೂಡಿಕೆ ಆಕರ್ಷಣೆ ಆಗುತ್ತಿಲ್ಲ. FDI ನಲ್ಲಿ ಶೇ. 30% ಕಡಿತ ಆಗಿದೆ. ಸಿಎಂ ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು. ಅಲ್ಲದೇ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ರಚಿಸಿರುವ ಸಮಿತಿಗೆ ಕ್ಯಾಬಿನೆಟ್ ದರ್ಜೆ ನೀಡುವ ವಿಚಾರಕ್ಕೆ ಪ್ರತಿಕ್ರಿಯಸಿದ ಅವರು, ಸಿಎಂ ಸಲಹೆಗಾರರನ್ನು ತೆಗೆದುಕೊಳ್ಳಬೇಕು ನಿಜ. ಅದು ಸದಸ್ಯರ ಶೇ 15% ಮೀರದಂತೆ ಕ್ಯಾಬಿನೆಟ್ ದರ್ಜೆ ಕೊಡಬೇಕು. ಅದಕ್ಕಿಂತ ಹೆಚ್ಚು ಕ್ಯಾಬಿನೆಟ್ ದರ್ಜೆ ಕೊಡುವಂತಿಲ್ಲ. ಹಿಂದೆ ಸಿಎಂ…

Read More

ಬಹುಭಾಷಾ ನಟಿ ಪ್ರಣೀತಾ ಸುಭಾಷ್(Pranitha Subhash), ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. 1 ಲಕ್ಷ ದೇಣಿಗೆ ನೀಡುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ನಟಿ  ಪಾತ್ರರಾಗಿದ್ದಾರೆ. ಅಯೋಧ್ಯೆಯ ಶ್ರೀ ರಾಮಮಂದಿರ (Ram Mandir) ನಿಧಿ ಸಮರ್ಪಣ ಅಭಿಯಾನಕ್ಕೆ ಬೆಂಬಲಿಸಿ 1 ಲಕ್ಷ ರೂ. ನಟಿ ನೀಡಿದ್ದಾರೆ. ಈ ಕುರಿತು ಪ್ರಣೀತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೊಂದು ಐತಿಹಾಸಿಕ ಚಳುವಳಿ ಎಂದು ಬರೆದು ನಟಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ನೀವೆಲ್ಲರೂ ಕೈಜೋಡಿಸಿ ಇದರ ಭಾಗವಾಗಬೇಕೆಂದು ನಾನು ವಿನಂತಿಸುತ್ತೇನೆ ಎಂದು ಪ್ರಣೀತಾ ಮನವಿ ಮಾಡಿದ್ದಾರೆ. ಪ್ರಣೀತಾ ಫೌಂಡೇಶನ್‌ ಮೂಲಕ ನಟಿ ಪ್ರಣೀತಾ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಸಂಕಷ್ಟದಲ್ಲಿರುವವರಿಗೆ ನಟಿ ನೆರವಾಗಿದ್ದಾರೆ. ಅದರಲ್ಲೂ ಕೊವೀಡ್‌ ಸಮಯದಲ್ಲಿ ಅನೇಕ ಕುಟುಂಬಗಳಿಗೆ ರೇಷನ್‌, ವ್ಯಾಕ್ಸಿನ್‌ ಸೇರಿದಂತೆ ನಟಿ ಸಹಾಯ ಮಾಡಿದ್ದಾರೆ.

Read More

ಬೆಂಗಳೂರು:- ಬಿಜೆಪಿಯವರಿಗೆ ಆಪರೇಷನ್ ಕಮಲದ ರುಚಿ ಹತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬಿಜೆಪಿಯವರಿಗೆ ಜನಾದೇಶದ ಸರ್ಕಾರವನ್ನು ಉರುಳಿಸಿ ಅಧಿಕಾರಕ್ಕೆ ಬಂದು ಹಣ ತಿನ್ನುವ ರುಚಿ ಹತ್ತಿದೆ. ಹೀಗಾಗಿ ಮತ್ತೆ ಮತ್ತೆ ಸರ್ಕಾರ ಬೀಳಿಸುವ ಪ್ರಯತ್ನಕ್ಕೆ ಕೈ ಹಾಕುತ್ತಲೇ ಇರುತ್ತಾರೆ ಎಂದರು. ನಮ್ಮ ಗ್ಯಾರಂಟಿಗಳನ್ನು ಅಣಕಿಸಿ ಈಗ ನಮ್ಮ ಗ್ಯಾರಂಟಿಗಳನ್ನೇ ಕಾಪಿ ಮಾಡಿ ಅದಕ್ಕೆ ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. ಬಿಜೆಪಿ ಯವರು ಅಷ್ಟು ನಿರ್ಲಜ್ಜರಾಗಿದ್ದಾರೆ. ದಯವಿಟ್ಟು ನಿಮ್ಮ ಹೃದಯದ ಮಾತು ಕೇಳಿ. ಸರ್ಕಾರದ ಕೆಲಸಗಳನ್ನು ಪ್ರತಿ ಮನೆಗೆ ತಲುಪಿಸಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರ ಸುಳ್ಳನ್ನು ಸೋಲಿಸಿ ನಮ್ಮ ಸಾಧನೆಗಳನ್ನು ಎತ್ತಿ ಹಿಡಿಯುವ ಮೂಲಕ 28 ಲೋಕಸಭಾ ಸ್ಥಾನಗಳಲ್ಲಿ ಗೆಲ್ಲಿಸಿ ಎಂದು ಕಾರ್ಯಕರ್ತರಿಗೆ ಮುಖ್ಯಮಂತ್ರಿಗಳು ಕೈ ಮುಗಿದು ಕರೆ ನೀಡಿದರು ರಾಜ್ಯದ 4 ಕೋಟಿ 30 ಲಕ್ಷ ಕನ್ನಡಿಗರಿಗೆ ಸರ್ಕಾರದ ಗ್ಯಾರಂಟಿಯ ಫಲ ಪ್ರತೀ ದಿನ-ಪ್ರತೀ ತಿಂಗಳು ತಲುಪುತ್ತಿದೆ. ಈ ಫಲಾನುಭವಿಗಳಲ್ಲಿ ಬಿಜೆಪಿಯವರೇ ಹೆಚ್ಚಿದ್ದಾರೆ ಪಕ್ಷದ ಕಾರ್ಯಕರ್ತರೇ ನಮ್ಮ ಬೆನ್ನೆಲುಬು.…

Read More

ತಲೆಗೂದಲು ತುಂಬಾ ನಯವಾಗಿರಬೇಕು ಅನ್ನೋದು ಎಲ್ಲಾ ಹುಡುಗಿಯರ ಆಸೆಯಾಗಿರುತ್ತೆ. ಹೀರೋಯಿನ್ಗಳ ಸಾಫ್ಟ್&ಸ್ಲೀಕ್ ಕೂದಲು ನೋಡಿದಾಗ ಅಯ್ಯೋ ಅಂಥ ಕೂದಲು ನಮಗಿಲ್ವಲ್ಲಾ ಅಂತಾನೂ ಅನ್ನಿಸುತ್ತೆ. ಅದಕ್ಕೆಲ್ಲಾ ಹಣ ಖರ್ಚು ಮಾಡ್ಬೇಕು ಅಂತ ವರಿ ಮಾಡ್ಬೇಡಿ. ಮನೆಯಲ್ಲೇ ಸುಲಭವಾಗಿ ಸಿಗೋ ಕೆಲವು ಸಾಮಗ್ರಿಗಳಿಂದ ಸಾಫ್ಟ್ ಕೂದಲು ನಿಮ್ಮದಾಗಿಸಿಕೊಳ್ಳಬಹುದು. ಇದಕ್ಕೆ ಸ್ವಲ್ಪ ಸಮಯ ಮೀಸಲಿಡಬೇಕು ಅಷ್ಟೇ. ಆ ಟಿಪ್ಸ್ ಇಲ್ಲಿದೆ ನೋಡಿ 1. ಗುಲಾಬಿ ದಳ- ಕೊಬ್ಬರಿ ಎಣ್ಣೆ ಗುಲಾಬಿಯನ್ನ ಅಲಂಕಾರಕ್ಕೆ, ಮುಡಿದುಕೊಳ್ಳೋಕೆ ಬಳಸೋ ಜೊತೆಗೆ ಅದರಿಂದ ನಿಮ್ಮ ಕೂದಲ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಇದಕ್ಕೆ ನೀವು ಕಷ್ಟನೂ ಪಡಬೇಕಿಲ್ಲ. ತಲೆಗೆ ಎಣ್ಣೆ ಹಚ್ಚುವಾಗೆಲ್ಲಾ ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು. ಕೊಬ್ಬರಿ ಎಣ್ಣೆಯನ್ನ ಸ್ವಲ್ಪ ಬಿಸಿ ಮಾಡಿ(ಸ್ವಲ್ಪ ಬಿಸಿಯಾದ್ರೆ ಸಾಕು, ಹೊಗೆ ಬರುವಂತೆ ಕಾಯಿಸಬಾರದು) ಅದಕ್ಕೆ ಗುಲಾಬಿ ದಳಗಳನ್ನ ಹಾಕಿ. ಹೀಗೆ ಮಾಡಿದಾಗ ನೊರೆ ಬರುತ್ತದೆ. ಎಣ್ಣೆ ತಣ್ಣಗಾದ ನಂತರ ಗುಲಾಬಿ ದಳಗಳನ್ನ ಕಿವುಚಿ ತೆಗೆಯಿರಿ. ನಂತರ ಎಣ್ಣೆಯನ್ನ ತಲೆಗೆ ಸಂಪೂರ್ಣವಾಗಿ ಹಚ್ಚಿ ಮಸಾಜ್ ಮಾಡಿ.…

Read More

ಮುಂಬೈ: ನೀನು ನೋಡಲು ಹಾಟ್ ಆ್ಯಂಡ್ ಸೆಕ್ಸಿಯಾಗಿದ್ದೀಯಾ, ಒಂದು ದಿನ ರಾತ್ರಿ ನನ್ನ ಜೊತೆ ಕಳೆದ್ರೆ ನಾನು ನಿನ್ನ ಎಲ್ಲ ಕನಸುಗಳನ್ನು ಪೂರ್ಣ ಮಾಡುತ್ತೇನೆ ಎಂದು ಹೇಳುವ ಮೂಲಕ ಮ್ಯಾನೇಜರ್ ಒರ್ವ ತನ್ನ ಸಹದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ನಗರದ ಅಂಧೇರಿಯ ಮಲ್ಟಿ-ಕ್ರೋರ್ ಡೈಮಂಡ್ ಫರ್ಮ್‍ನ ಮ್ಯಾನೇಜರ್ ಕಂಪನಿಯಲ್ಲಿ ಕೆಲಸ ಮಾಡುವ 19 ವರ್ಷದ ಯುವತಿಗೆ ಸೆಕ್ಸ್ ಗೆ ಆಹ್ವಾನ ನೀಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದ್ದು, ನಗರದ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ಫರ್ಮ್ ಮಾಲೀಕ ಮತ್ತು ಮ್ಯಾನೇಜರ್ ವಿರುದ್ಧ ದೂರು ದಾಖಲಾಗಿದೆ. ಓವರ್ ಟೈಮ್ ವರ್ಕ್:  ನಾನು ಓವರ್ ಟೈಮ್ ವರ್ಕ್ ಮಾಡುತ್ತಿದ್ದೆ. ಈ ವೇಳೆ ಆಫೀಸ್‍ನಲ್ಲಿ ಮ್ಯಾನೇಜರ್ ಮತ್ತು ಕೆಲ ಸಿಬ್ಬಂದಿ ಮಾತ್ರ ಕೆಲಸ ಮಾಡುತ್ತಿದ್ದರು. ಸಂಜೆ ಸುಮಾರು 5.45ರ ವೇಳೆಗೆ ಸೆಕ್ಯೂರಿಟಿ ಗಾರ್ಡ್ ನನ್ನ ಬಳಿ ಬಂದು ನಿಮ್ಮನ್ನು ಮ್ಯಾನೇಜರ್ ಕರೆದಿದ್ದಾರೆ ಎಂದು ತಿಳಿಸಿದ. ಸ್ಟೋರ್ ರೂಮ್‍ನಲ್ಲಿದ್ದ ಮ್ಯಾನೇಜರ್ ಬಳಿ ನಾನು ತೆರಳಿ, ಕರೆಸಿರುವ ಕಾರಣ ಕೇಳಿದೆ. ಮೊದಲಿಗೆ…

Read More

ಅನೇಕ ಜನರು ತೂಕ ಇಳಿಸಿಕೊಳ್ಳಲು ವಿವಿಧ ವಿಧಾನಗಳನ್ನು ಪ್ರಯತ್ನಿಸುತ್ತಾರೆ. ಆದರೆ, ಯಾವುದೇ ಫಲಿತಾಂಶ ಸಿಗ್ತಾ ಇಲ್ಲ ಅಂತ ಚಿಂತಿಸುತ್ತಾರೆ. ಆದ್ದರಿಂದ ತೂಕ ಇಳಿಸುವ ಯೋಚನೆ ನಿಮ್ಮಲ್ಲಿದ್ದರೆ ಒಮ್ಮೆ ಈ ಕೆಳಗಿನ ವಿಧಾನದಲ್ಲಿ ಆಯಪಲ್​ ಜ್ಯೂಸ್​ ಮಾಡಲು ಪ್ರಯತ್ನಿಸಿ. ತೂಕ ಇಳಿಸುವ ಈ ಆಯಪಲ್​ ಜ್ಯೂಸ್ ಅನ್ನು ಬೆಳಗ್ಗೆ ಮತ್ತು ಸಂಜೆ ಕುಡಿದರೆ ಒಂದೇ ವಾರದಲ್ಲಿ ನಿಮ್ಮ ದೇಹದಲ್ಲಿ ವ್ಯತ್ಯಾಸ ಕಾಣುವುದು. ತೂಕ ನಷ್ಟಕ್ಕೆ ಆಯಪಲ್​ ಜ್ಯೂಸ್​ ತಯಾರಿಸುವುದು ತುಂಬಾ ಸುಲಭ. ಒಂದು ಗ್ರೀನ್ ಟೀ ಪ್ಯಾಕೆಟ್, ಒಂದು ಕಪ್​ ಕತ್ತರಿಸಿದ ಸೇಬು, 1/4 ಕಪ್​ ಶುಂಠಿ, 2 ಚಮಚ ಆಯಪಲ್ ಸೈಡರ್ ವಿನೆಗರ್ ಮತ್ತು ಮೂರು ಚಮಚ ನಿಂಬೆ ರಸ ತೆಗೆದುಕೊಳ್ಳಿ. ಮೊದಲು ಗ್ರೀನ್ ಟೀ ಬ್ಯಾಗ್ ತೆಗೆದುಕೊಂಡು ಅದನ್ನು 200 ಮಿಲಿ ಬಿಸಿ ನೀರಿನಲ್ಲಿ ಚೆನ್ನಾಗಿ ನೆನೆಸಿ. ನಂತರ ಮಿಕ್ಸಿಂಗ್ ಜಾರ್ ತೆಗೆದುಕೊಂಡು ಅದಕ್ಕೆ 1 ಕಪ್ ಮಧ್ಯಮ ಗಾತ್ರದ ಸೇಬನ್ನು ಸೇರಿಸಿ. ಇದಕ್ಕೆ ತುರಿದ ಶುಂಠಿ, ಆಪಲ್ ಸೈಡರ್…

Read More

ಇಂದು ಮಧುಮೇಹವು ಯಾವುದೇ ವಯೋಮಾನದವರನ್ನು ಗುರಿಯಾಗಿಸುತ್ತಿದೆ. ನಮ್ಮ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚುವುದನ್ನು ಮಧುಮೇಹ ಎನ್ನುತ್ತಾರೆ. ರಕ್ತದಲ್ಲಿನ ಸಕ್ಕರೆಯನ್ನು ಸಮಯಕ್ಕೆ ನಿಯಂತ್ರಿಸದಿದ್ದರೆ, ಅದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸಕ್ಕರೆ ರೋಗಿಗಳು ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಯಲ್ಲಿನ ಸಮಸ್ಯೆಗಳಂತಹ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದಾಗ್ಯೂ, ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದರಿಂದ, ಮಧುಮೇಹ ರೋಗಿಗಳು ತಮ್ಮ ಹೆಚ್ಚಿದ ರಕ್ತದಲ್ಲಿನ ಸಕ್ಕರೆಯನ್ನು ಸುಲಭವಾಗಿ ನಿಯಂತ್ರಿಸಬಹುದು ಮಧುಮೇಹ ರೋಗಿಗಳು ಮಧ್ಯಾಹ್ನ ಅಥವಾ ರಾತ್ರಿ ಊಟದ ನಂತರ 5 ನಿಮಿಷಗಳ ಕಾಲ ವಾಕ್ ಮಾಡಿದರೆ, ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ ಎಂದು ಬಹಿರಂಗಪಡಿಸಿದೆ. ಆಹಾರ ಸೇವಿಸಿದ ನಂತರ ಹೆಚ್ಚು ಹೊತ್ತು ಕುಳಿತುಕೊಳ್ಳುವ ಬದಲು ನಿಂತುಕೊಳುವುದು, ನಡೆದಾಡುವಂತಹ ಹಗುರವಾದ ದೈಹಿಕ ಚಟುವಟಿಕೆಗಳನ್ನು ಮಾಡಿದರೆ, ದೇಹದಲ್ಲಿ ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆ ಹೇಳಿದೆ, ಇದರಿಂದಾಗಿ ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು ಯಾವಾಗಲೂ ನಿಯಂತ್ರಣದಲ್ಲಿರುತ್ತದೆ. ಇದರ ಹೊರತಾಗಿ, ಊಟದ ನಂತರ ನಡೆಯುವುದು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದು ಮಾತ್ರವಲ್ಲದೆ ನಮ್ಮ…

Read More