Author: AIN Author

ಭಾನುವಾರ ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರು ಗೆಲುವು ಸಾಧಿಸಿದ್ದಾರೆ. ಮಾಗುರಾ -1 ಕ್ಷೇತ್ರದಿಂದ ಅವಾಮಿ ಲೀಗ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಕೀಬ್ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಶಕೀಬ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಜಿ ರೆಜೌಲ್ ಹುಸೇನ್ ವಿರುದ್ಧ 1,50,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಹುಸೇನ್ 45,993 ಮತಗಳನ್ನು ಪಡೆದರು. ಚುನಾವಣಾ ಪ್ರಚಾರಕ್ಕಾಗಿ ಅವರು ಕ್ರಿಕೆಟ್​ನಿಂದ ವಿರಾಮ ತೆಗೆದುಕೊಂಡಿದ್ದರು. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಭರ್ಜರಿ ಗೆಲುವಿನ ಮೂಲಕ ಐದನೇ ಅವಧಿಗೆ ಆಯ್ಕೆಯಾಗಿದ್ದಾರೆ. ಭಾನುವಾರದ ಮತದಾನ ಮುಗಿದ ತಕ್ಷಣ ನಡೆದ ಮತ ಎಣಿಕೆ ಕಾರ್ಯದಲ್ಲಿ ಅವರ ಪಕ್ಷವು ಸಂಸತ್ತಿನ 300 ಸ್ಥಾನಗಳಲ್ಲಿ 200 ಸ್ಥಾನಗಳನ್ನು ಗೆದ್ದಿದೆ. ಅವಾಮಿ ಲೀಗ್ ಅನ್ನು ವಿಜೇತರೆಂದು ಕರೆಯಬಹುದು ಎಂದು ಚುನಾವಣಾ ಆಯೋಗದ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ. “ಈಗಾಗಲೇ ಲಭ್ಯವಿರುವ ಫಲಿತಾಂಶಗಳೊಂದಿಗೆ ನಾವು ಅವಾಮಿ ಲೀಗ್ ವಿಜೇತರನ್ನು ಕರೆಯಬಹುದು ಆದರೆ ಉಳಿದ ಕ್ಷೇತ್ರಗಳಲ್ಲಿ ಮತ ಎಣಿಕೆ…

Read More

ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಅಫ್ಘಾನಿಸ್ತಾನ ವಿರುದ್ಧದ ಮೊದಲನೇ ಟಿ-20 ಪಂದ್ಯದಿಂದ ಹೊರಗುಳಿಯಲಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಭಾರತ ತಂಡದ ಕೋಚ್​ ರಾಹುಲ್​ ದ್ರಾವಿಡ್, ವೈಯಕ್ತಿಕ ಕಾರಣಗಳಿಂದ ವಿರಾಟ್ ಕೊಹ್ಲಿ ಅವರು ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ನಾಯಕ ರೋಹಿತ್ ಶರ್ಮಾ ಅವರು 14 ತಿಂಗಳ ಬಳಿಕ ಟಿ-20 ಸರಣಿಗೆ ತಂಡಕ್ಕೆ ಮರಳಿದ್ದಾರೆ. ಆದರೆ, ಸದ್ಯ ವಿರಾಟ್ ಕೊಹ್ಲಿ ಗೈರು ಹಾಜರಿಗೆ ಕಾರಣ ತಿಳಿದುಬಂದಿಲ್ಲ. ಭಾರತ ತಂಡವು ಜನವರಿ 11ರಿಂದ (ನಾಳೆ) ಅಫ್ಘಾನಿಸ್ತಾನ ವಿರುದ್ಧ 3 ಪಂದ್ಯಗಳ ಟಿ-20 ಸರಣಿಯನ್ನು ಆಡಲಿದೆ. ಅಫ್ಘಾನ್ ವಿರುದ್ಧ ಭಾರತ ಮೇಲುಗೈ ಮೊದಲ ಪಂದ್ಯ ನಾಳೆ ಮೊಹಾಲಿಯಲ್ಲಿ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಟಿ-20ಯಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ದಾಖಲೆಗಳನ್ನು ನೋಡಿದರೆ ಭಾರತ ಮೇಲುಗೈ ಸಾಧಿಸಿದೆ. ಈ ಎರಡು ತಂಡಗಳು ಈವರೆಗೆ 5 ಟಿ-20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 4 ಪಂದ್ಯ ಗೆದ್ದು 1 ಪಂದ್ಯ ಸೋತಿದೆ.…

Read More

ಲಕ್ನೋ: ರಾಮಜನ್ಮಭೂಮಿಯಲ್ಲಿ ರಾಮಮಂದಿರ (Ram Mandir) ಉದ್ಘಾಟನೆಗೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಈಗಾಗಲೇ ಅಯೋಧ್ಯೆಗೆ ಸಾಕಷ್ಟು ಕೊಡುಗೆಗಳು ಬಂದಿವೆ. ಅವುಗಳಲ್ಲಿ ದೇಶದ ಅತೀ ಗೊಡ್ಡ ಘಂಟೆಯೂ ಸೇರಿದೆ. ಹೌದು. 2,400 ಕೆ.ಜಿ ತೂಕದ ಬೃಹತ್ ಘಂಟೆ ಎಟಾಹ್ (Etah) ಜಿಲ್ಲೆಯ ಜಲೇಸರ್ ಪಟ್ಟಣದಿಂದ ಈಗಾಗಲೇ ಅಯೋಧ್ಯೆ ತಲುಪಿದೆ. ಜಿಲ್ಲೆಯ ಉಪವಿಭಾಗಗಳಲ್ಲಿ ವಾಹನದ ಮೇಲೆ ಈ ಬೃಹತ್‌ ಘಂಟೆಯನ್ನು ಪ್ರದರ್ಶಿಸಿದ ನಂತರ ರೈಲಿನ ಮೂಲಕ ಸಾಗಿಸಲಾಗಿದ್ದು, ಮಂಗಳವಾರ ಅಯೋಧ್ಯೆಗೆ ತಲುಪಿದೆ. https://ainlivenews.com/do-you-know-the-must-see-tourist-spots-in-lakshadweep/ ಸುಮಾರು 30 ಕಾರ್ಮಿಕರ ತಂಡದಿಂದ ಈ ಘಂಟೆ ತಯಾರಾಗಿದೆ. ಚಿನ್ನ, ಬೆಳ್ಳಿ, ತಾಮ್ರ, ಸತು, ಸೀಸ, ತವರ, ಕಬ್ಬಿಣ ಮತ್ತು ಪಾದರಸ ಹೀಗೆ ಒಟ್ಟು 8 ಲೋಹಗಳಿಂದ ತಯಾರಿಸಲಾಗಿದೆ. ಘಂಟೆಯ ಅಗಲ 15 ಅಡಿ ಮತ್ತು ಒಳಭಾಗದ ಅಗಲ 5 ಅಡಿ ಇದ್ದು, ಇದನ್ನು ತಯಾರಿಸಲು ಒಂದು ವರ್ಷ ಬೇಕಾಗಿದೆ.  ಲೋಹದ ಉದ್ಯಮಿ ಆದಿತ್ಯ ಮಿತ್ತಲ್ ಮಾತನಾಡಿ, ಸಹೋದರನಾಗಿದ್ದ ಜಲೇಸರ್ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿಕಾಸ್…

Read More

ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಅಫ್ಘಾನಿಸ್ತಾನ ವಿರುದ್ಧದ ಮೊದಲನೇ ಟಿ-20 ಪಂದ್ಯದಿಂದ ಹೊರಗುಳಿಯಲಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಭಾರತ ತಂಡದ ಕೋಚ್​ ರಾಹುಲ್​ ದ್ರಾವಿಡ್, ವೈಯಕ್ತಿಕ ಕಾರಣಗಳಿಂದ ವಿರಾಟ್ ಕೊಹ್ಲಿ ಅವರು ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ ವಿರಾಟ್ ಕೊಹ್ಲಿ ಹಾಗೂ ನಾಯಕ ರೋಹಿತ್ ಶರ್ಮಾ ಅವರು 14 ತಿಂಗಳ ಬಳಿಕ ಟಿ-20 ಸರಣಿಗೆ ತಂಡಕ್ಕೆ ಮರಳಿದ್ದಾರೆ. ಆದರೆ, ಸದ್ಯ ವಿರಾಟ್ ಕೊಹ್ಲಿ ಗೈರು ಹಾಜರಿಗೆ ಕಾರಣ ತಿಳಿದುಬಂದಿಲ್ಲ. ಭಾರತ ತಂಡವು ಜನವರಿ 11ರಿಂದ (ನಾಳೆ) ಅಫ್ಘಾನಿಸ್ತಾನ ವಿರುದ್ಧ 3 ಪಂದ್ಯಗಳ ಟಿ-20 ಸರಣಿಯನ್ನು ಆಡಲಿದೆ. ಅಫ್ಘಾನ್ ವಿರುದ್ಧ ಭಾರತ ಮೇಲುಗೈ ಮೊದಲ ಪಂದ್ಯ ನಾಳೆ ಮೊಹಾಲಿಯಲ್ಲಿ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಟಿ-20ಯಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ದಾಖಲೆಗಳನ್ನು ನೋಡಿದರೆ ಭಾರತ ಮೇಲುಗೈ ಸಾಧಿಸಿದೆ. ಈ ಎರಡು ತಂಡಗಳು ಈವರೆಗೆ 5 ಟಿ-20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 4 ಪಂದ್ಯ ಗೆದ್ದು 1 ಪಂದ್ಯ ಸೋತಿದೆ.…

Read More

ಹಾವೇರಿ: ಖಾಸಗಿ ಲಾಡ್ಜ್ ನಲ್ಲಿ ತಂಗಿದ್ದ ಅನ್ಯ ಕೋಮಿನ ವ್ಯಕ್ತಿ ಮತ್ತು ಮಹಿಳೆ ಮೇಲೆ ಮುಸ್ಲಿಂ ಯುವಕರು ದಾಳಿ ಮಾಡಿ ಹಿಗ್ಗಾ-ಮುಗ್ಗಾ ಥಳಿಸಿ ನೈತಿಕ ಪೊಲೀಸ್‌ಗಿರಿ ನಡೆಸಿರುವ ಘಟನೆ ಹಾನಗಲ್ಲ ತಾಲೂಕಿನ ನಾಲ್ಕರ ಕ್ರಾಸ್‌ನಲ್ಲಿ ನಡೆದಿದೆ. ಹಾನಗಲ್ಲ ಸಮೀಪದ ನಾಲ್ಕರ ಕ್ರಾಸ್‌ನಲ್ಲಿರುವ ಲಾಡ್ಜ್‌ನಲ್ಲಿ ಶಿರಸಿ ಮೂಲದ ಹಿಂದು ವ್ಯಕ್ತಿ ಹಾಗೂ ವಿವಾಹಿತ ಮುಸ್ಲಿಂ ಮಹಿಳೆ ಮಧ್ಯಾಹ್ನದ ವೇಳೆಗೆ ರೂಮ್‌ ಪಡೆದು ವಾಸವಾಗಿದ್ದಾರೆ.   ಬುರ್ಕಾ ಹಾಕಿಕೊಂಡು ಅನ್ಯಕೋಮಿನ ಪುರುಷನ ಜತೆ ಲಾಡ್ಜ್‌ನಲ್ಲಿ ಕಾಣಿಸಿಕೊಂಡಿದ್ದ ಮಹಿಳೆಯನ್ನು ಗಮನಿಸಿದ್ದ ಆಟೋ ಚಾಲಕ ಮುಸ್ಲಿಂ ಸಮುದಾಯದ ಯುವಕರಿಗೆ ಮಾಹಿತಿ ನೀಡಿದ್ದಾನೆ.  ಬಳಿಕ ಅರ್ಧಗಂಟೆಯಲ್ಲೇ ಜಮಾಯಿಸಿದ ಅಕ್ಕಿ ಆಲೂರಿನ ನಾಲ್ಕೈದು ಮುಸ್ಲಿಂ ಯುವಕರ ತಂಡ ಲಾಡ್ಜ್‌ನ ಕೊಠಡಿಗೆ ತೆರಳಿ ರೂಮ್‌ನಲ್ಲಿ ನೀರಿನ ಸಮಸ್ಯೆ ಇದೆ. https://ainlivenews.com/do-you-know-the-must-see-tourist-spots-in-lakshadweep/ ಸರಿಪಡಿಸಬೇಕು ಬಾಗಿಲು ತೆಗೆಯಿರಿ ಎಂದಿದ್ದಾರೆ. ಆಗ ಒಳಗಿದ್ದವರು ನೀರು ಬರುತ್ತಿದೆ ಎಂದರೂ ಪದೆಪದೇ ಬಾಗಿಲು ತಟ್ಟಿದ್ದಾರೆ. ಬಾಗಿಲು ತೆಗೆದ ತಕ್ಷಣ ಇಬ್ಬರನ್ನೂ ಹಿಡಿದು ಥಳಿಸಿದ್ದಾರೆ. ಅಲ್ಲದೇ ಮಹಿಳೆಯನ್ನು ಎಳದಾಡಿ ಬಟ್ಟೆ…

Read More

ಬೆಂಗಳೂರು: ರಾಜ್ಯದ ಖಾಸಗಿ ಆಡಳಿತದ ದೇವಾಲಯಗಳಲ್ಲಿ ಇನ್ಮುಂದೆ ಡ್ರೆಸ್ ಕೋಡ್  ಕಡ್ಡಾಯ ಮಾಡಲಾಗಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿರುವ 800 ದೇವಾಲಯಗಳ ಪೈಕಿ 500ಕ್ಕೂ ಹೆಚ್ಚು ದೇವಾಲಯಗಳಲ್ಲಿ ಮುಂದಿನ ಒಂದು ತಿಂಗಳು, ದೇಗುಲದ ಆಡಳಿತ ಮಂಡಳಿಯೇ ಈ ಬಗ್ಗೆ ಜಾಗೃತಿ ಮೂಡಿಸಲಿದೆ. ಆದರೆ ಮತ್ತೆ ಹಿಂದಿನ ರೀತಿಯೇ ಸಾರ್ವಜನಿಕರು ನಡೆದುಕೊಂಡರೆ, ಅಂತವರಿಗೆ ದೇವಾಲಯದ ಕೆಲ ಆಚರಣೆಗಳನ್ನ ನೀಡದಿರಲು ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಭಾ ಚಿಂತನೆ ನಡೆಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಉಡುಪುಗಳನ್ನ ಧರಿಸಿ ಬರುವುದನ್ನ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ಈ ಅಭಿಯಾನ ನಡೆಸಲಾಗುತ್ತಿದೆ. ನಿಯಮ ಮೀರಿದ್ರೆ ಮಂಗಳಾರತಿ ಮತ್ತು ಪ್ರಸಾದ ನೀಡದಿರಲು ಪ್ಲ್ಯಾನ್ ಮಾಡಲಾಗ್ತಿದೆ. ಎಲ್ಲಾ ದೇವಾಲಯಗಳಲ್ಲೂ ಬೋರ್ಡ್‍ಗಳನ್ನ ಹಾಕಿ ಜಾಗೃತಿ ಮೂಡಿಸೋದಲ್ಲದೆ ಮೌಖಿಕವಾಗಿ ತಿಳಿ ಹೇಳುವ ಕೆಲಸಕ್ಕೆ ಮುಂದಾಗ್ತಿದೆ. ಈ ಹಿಂದೆ ವೈಕುಂಠ ಏಕಾದಶಿ ವೇಳೆ ಇದೇ ರೀತಿಯ ನಿಯಮಗಳನ್ನ ಕೆಲ ದೇವಾಲಯಗಳಲ್ಲಿ ಜಾರಿಗೆ ತರಲಾಗಿತ್ತು. ಈಗ ಎಲ್ಲಾ ದೇವಾಲಯದಲ್ಲೂ ಅಭಿಯಾನ ಆರಂಭಿಸಲಾಗಿದೆ. ಹೊರ ದೇಶ…

Read More

ಬೆಂಗಳೂರು: ಕನ್ನಡ ನಾಮಫಲಕ ಹೋರಾಟದಲ್ಲಿ ಜೈಲು ಸೇರಿದ್ದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಬಿಡುಗಡೆಯಾಗಿ ಮತ್ತೆ ಜೈಲು ಸೇರಿ ಇದೀಗ ಮತ್ತೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಜೈಲಿನಿಂದ (Jail) ರಿಲೀಸ್ ಆದ ಬಳಿಕ ನಾರಾಯಣ ಗೌಡರು  ತಮ್ಮ ಕಾರ್ಯಕರ್ತರ ಬಳಿ ಕ್ಷಮೆ ಕೇಳಿದ್ದಾರೆ. ಬಿಡುಗಡೆಯ ಬಳಿಕ ಫೇಸ್ ಬುಕ್ ಮೂಲಕ ಲೈವ್ ಬಂದ ಕರವೇ ಅಧ್ಯಕ್ಷ, ಆರೋಗ್ಯದ ಸಮಸ್ಯೆಯಿಂದ ಇಂದು ಯಾರ ಜೊತೆಯೂ ಮಾತನಾಡೋಕೆ ಆಗ್ಲಿಲ್ಲ. ಅದಕ್ಕಾಗಿ ಕ್ಷಮೆ ಕೇಳುತ್ತೇನೆ. ನನ್ನ ದೇಹದ ಕೊನೆಯ ಹನಿ ರಕ್ತ ಇರುವವರೆಗೂ ಕನ್ನಡದ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ. ಕನ್ನಡ ನಾಮಫಲಕ ಆಂದೋಲನ ಯಶಸ್ವಿಯಾಗಿದೆ. ಸರ್ಕಾರ ಈ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿದೆ. ಇದು ಕನ್ನಡಿಗರ ಜಯ, ಕರವೇಯ ಜಯ. ಕಾನೂನಿನ ಚೌಕಟ್ಟಿನೊಳಗೆ ಈ ಹೋರಾಟ ಮುಂದುವರಿಸಿಕೊಂಡು ಹೋಗಬೇಕೆನ್ನುವುದು ನಮ್ಮ ಉದ್ದೇಶವಾಗಿತ್ತು ಎಂದು ತಿಳಿಸಿದರು. ಇದೇ ವೇಳೆ ನಾರಾಯಣ ಗೌಡರು ಕನ್ನಡ ಪರ ಚಳುವಳಿಗಾರರು, ಕರವೇ ಮುಖಂಡರು ಹಾಗೂ ಮಾಧ್ಯಮದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

Read More

ಬೆಂಗಳೂರು: ಅವರೆಲ್ಲರೂ ಮೀಸೆ ಚಿಗುರಿದ್ದ ಚಿಕ್ಕ ವಯಸ್ಸಿನ ಯುವಕರು.. ಹೊಸವರ್ಷಕ್ಕೆ ಪಾರ್ಟಿ ಮಾಡ್ಬೇಕು ಎಂದೆಲ್ಲಾ ಅಂದುಕೊಂಡಿದ್ದರು.. ಆದರೆ ಅವರ ಬಳಿ ಖರ್ಚು ಮಾಡೋಕೆ ಹಣವಿರಲಿಲ್ಲ.. ಹಣಕ್ಕಾಗಿ ಎರಡೆರಡು ಕಿಡ್ನಾಪ್ ಮಾಡಿದ್ರು.. ಒಂದು ಕೇಸ್ ಫೆಲ್ಯೂರ್ ಮತ್ತೊಂದ್ರಲ್ಲಿ ಸಕ್ಸಸ್ ಆದವರು ಸಿಕ್ಕಿಬೀಳುವ ಭಯದಲ್ಲಿ ಮಾಡಿದ್ದು‌ ಮಾತ್ರ ಭೀಕರ ಕೃತ್ಯ.. ಈತನೇ ನೋಡಿ ಕೊಲೆಯಾಗಿ ಪ್ರಾಣಿಗಳಿಗೆ ಆಹಾರವಾದ ಗುರುಸಿದ್ದಪ್ಪ.. ಈತನಿಗೆ ಪರಿಚಯವಿದ್ದ ಸಂಜಯ್ ಎಂಬಾತ ಕಾಫಿಗಾಗಿ ಡಿ. 30 ರಂದು ಕರೆದಿದ್ದಾರೆ.‌ ಈತ ಹೋಗಿದ್ದೆ ತಡ ಸಂಜಯ್ , ಆನಂದ , ಹನುಮಂತ , ತಿಮ್ಮ ಸೇರಿಕೊಂಡು ಗುರುಸಿದ್ದಪ್ಪನನ್ನು ಕಿಡ್ನಾಪ್ ಮಾಡಿದ್ದಾರೆ. ಕಿಡ್ನಾಪ್ ಮಾಡಿದವರೇ ಗುರುಸಿದ್ದಪ್ಪನ ಬಳಿ ಪತ್ನಿಗೆ ಫೋನ್ ಮಾಡಿಸಿ ತಾನೂ ಸೂಚಿಸೋ ವ್ಯಕ್ತಿಗೆ ಹಣ ನೀಡುವಂತೆ ತಿಳಿಸಿದ್ದಾನೆ. ಅದರಂತೆ ಗುರುಸಿದ್ದಪ್ಪನ ಪತ್ನಿ 4.5 ಲಕ್ಷ ಹಣ ನೀಡಿದ್ದಾಳೆ.. ಆರೋಪಿಗಳಿಗೆ ಹಣ ತಲುಪುತ್ತಿದ್ದಂತೆ ಎಣ್ಣೆ ಹೊಡಯೋ ಪ್ಲಾನ್ ಮಾಡಿ ಮಂಚನಬೆಲೆ ಡ್ಯಾಂ ಬಳಿ ಹೋಗಿದ್ದಾರೆ.. ಅಷ್ಟೇ ಗುರುಸಿದ್ದಪ್ಪನಿಗೂ ಕುಡಿಸಿ ತಾವೂ ಕುಡಿದ ಆರೋಪಿಗಳು…

Read More

ಬೆಂಗಳೂರು:  ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಸಿಲಿಕಾನ್ ಸಿಟಿ ಪೊಲೀಸರ ಸಮರ ಮುಂದುವರೆದಿದೆ. ಕ್ಯಾಬ್ ಚಾಲಕರ ಸೋಗಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿಗಳು ಬಂಧಿಸಿದ್ದಾರೆ‌. ವಿಜಯ್ ಕುಮಾರ್, ವಿಜಯ್ ಕುಮಾರ್ ಬಂಧಿತ ಆರೋಪಿಗಳು. ಇಬ್ಬರು ಮೂಲತ: ಯಾದಗಿರಿ, ವಿಜಯಪುರ ಜಿಲ್ಲೆಯವರಾಗಿದ್ದು, ಬೆಂಗಳೂರಿಗೆ ಬಂದು ಕ್ಯಾಬ್ ಓಡಿಸುತ್ತಿದ್ದರು. ಆದರೆ ಹೆಚ್ಚಿನ ಹಣ ಗಳಿಸಬೇಕು, ಐಷಾರಾಮಿ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ಪರಿಚಯಸ್ಥರಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಕಾಲೇಜು ವಿದ್ಯಾರ್ಥಿಗಳು ಐಟಿ/ಬಿಟಿ ಉದ್ಯೋಗಿಗಳಿಗೆ ಟಾರ್ಗೆಟ್ ಮಾಡಿ ಹಣ ಗಳಿಸುತ್ತಿದ್ದರು. ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಹೊಸಕೆರೆ ಹಳ್ಳಿ ಬಳಿ ಕಾರಿನಲ್ಲಿ ಗಾಂಜಾ ಮಾರುತ್ತಿದ್ದಾಗ ದಾಳಿ ನಡೆಸಿ ಈ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 25 ಲಕ್ಷ ಮೌಲ್ಯದ 15 ಕೆಜಿ ಗಾಂಜಾ, ಒಂದು ತೂಕದ ಮೆಶಿನ್, ಎರಡು ಮೊಬೈಲ್, ಒಂದು ಕಾರು ಸೀಜ್ ಮಾಡಿದ್ದಾರೆ.ಈ ಸಂಬಂಧ…

Read More

ಮೈಸೂರು: ಪ್ರತಾಪ್ ಸಿಂಹ ನ್ಯಾಷನಲ್ ಲೀಡರಾ ಎಂಬ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಖಂಡಿತ ನಾನು ನ್ಯಾಷನಲ್ ಲೀಡರ್ ಅಲ್ಲ, ಬಡ ಕುಟುಂಬದಿಂದ ಬಂದವನು. ಸಾಮಾನ್ಯ ಕುಟುಂಬದಿಂದ ಬಂದು ಬರವಣಿಗೆ ಮೂಲಕ ಮುಂದೆ ಬಂದೆ. ಅಪ್ಪ ಸಿಎಂ ಆಗಿದ್ರೆ ತನ್ನ ಲ್ಯಾಬ್ ಗೆ ಗುತ್ತಿಗೆ ಪಡೆಯೋರು ನ್ಯಾಷನಲ್ ಲೀಡರ್, https://ainlivenews.com/do-you-know-how-much-narayan-murthys-daughter-akshata-earned-in-2-years/ ಅಪ್ಪನ ವರುಣ ಬಿಡಿಸಿ ಬಾದಾಮಿ ಕ್ಷೇತ್ರಕ್ಕೆ ಓಡಿಸುವವರು ನ್ಯಾಷನಲ್ ಲೀಡರ್, ತಾನು ಹೇಳಿದ ವರ್ಗಾವಣೆ ಲಿಸ್ಟ್ ಗೆ ಸಹಿ ಮಾಡಿ ಅನ್ನೋದು ನ್ಯಾಷನಲ್ ಲೀಡರ್, ಮೈಸೂರು ಭಾಗದ ನಿಜವಾದ ನ್ಯಾಷನಲ್ ಲೀಡರ್ ಯತೀಂದ್ರ ಸಿದ್ದರಾಮಯ್ಯ ಎಂದು ಮೈಸೂರಿನಲ್ಲಿ ಯತೀಂದ್ರ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

Read More