Author: AIN Author

ಬೆಂಗಳೂರು :  ಅವರು, ಜೆಡಿಎಸ್ ಹಾಗೂ ಬಿಜೆಪಿ ಜಂಟಿ ಪ್ರಚಾರ ಕೈಗೊಳ್ಳುತ್ತೇವೆ. ಒಗ್ಗಟ್ಟಾಗಿ ಇಬ್ಬರು ಕೂಡ ಮಾತನಾಡಿಕೊಂಡು ಕೆಲಸ ಮಾಡ್ತಿವಿ ಹಾಗೆ 28 ಕ್ಷೇತ್ರಗಳಲ್ಲೂ ಬಿಜೆಪಿ ಹಾಗೂ ಜೆಡಿಎಸ್ ಅಣ್ಣ-ತಮ್ಮಂದಿರಂತೆ ದುಡಿದು ಗೆಲ್ಲಬೇಕು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜೆಡಿಎಸ್ ಹಾಗೂ ಬಿಜೆಪಿ ಜಂಟಿ ಪ್ರಚಾರ ಕೈಗೊಳ್ಳುತ್ತೇವೆ. ಒಗ್ಗಟ್ಟಾಗಿ ಇಬ್ಬರು ಕೂಡ ಮಾತನಾಡಿಕೊಂಡು ಕೆಲಸ ಮಾಡ್ತಿವಿ ಎಂದು ತಿಳಿಸಿದ್ದಾರೆ. ಜೆಡಿಎಸ್​​ಗೆ ಎಷ್ಟು ಕ್ಷೇತ್ರ ಸಿಗಲಿದೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ತಿಂಗಳು ಕುಮಾರಸ್ವಾಮಿ ಹಾಗೂ ನಮ್ಮ ನಾಯಕರು ದೆಹಲಿಗೆ ಹೋಗ್ತಾರೆ. ಅದಕ್ಕೆ ಒಂದು ದಿನಾಂಕ‌ ನಿಗದಿಯಾಗುತ್ತದೆ. ಅತೀ ಶೀಘ್ರದಲ್ಲಿ ನಿಮ್ಮೆಲ್ಲರಿಗೂ ಸಿಹಿ ಸುದ್ದಿ ಕೊಡ್ತಿವಿ ಎಂದು ಹೇಳಿದ್ದಾರೆ. ನಮಗೆ ಸಿಗುವ ಸ್ಥಾನಗಳಲ್ಲಿ ಎಲ್ಲಾ ಗೆಲ್ಲಬೇಕು. ದೇವೇಗೌಡರು ತೆಗದುಕೊಂಡ ಎನ್​ಡಿಎ ಜೊತೆಗಿನ ಮೈತ್ರಿ ಒಳ್ಳೆಯ ಉದ್ದೇಶದಿಂದ ತೆಗದುಕೊಂಡಿರುವ ನಿರ್ಧಾರ. ಪ್ರಧಾನಿ ನರೇಂದ್ರ ಮೋದಿಯವರು ದೇವೇಗೌಡರಿಗೆ ಕೊಡುವ ಗೌರವವನ್ನ ನಾವೆಲ್ಲಾ…

Read More

ಚೆನ್ನೈ: ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಎರಡು ಗುಂಪುಗಳ ನಡುವೆ ಧಾರ್ಮಿಕ ದ್ವೇಷಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಧರ್ಮಪುರಿಯ ಬೊಮ್ಮಿಡಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಜನವರಿ 8 ರಂದು ಪಾಪ್ಪಿರೆಡ್ಡಿಪಟ್ಟಿ ಬಳಿಯ ಬೊಮ್ಮಿಡಿಯ ಸೇಂಟ್ ಲೂಡ್ರ್ಸ್ ಚರ್ಚ್‍ನ ಹೊರಗೆ ನಡೆದ ರ‍್ಯಾಲಿಯಲ್ಲಿ ಚರ್ಚ್‍ಗೆ ಅವರು ಪ್ರವೇಶಿಸುವುದನ್ನು ವಿರೋಧಿಸಿದ ಕ್ರಿಶ್ಚಿಯನ್ ಯುವಕರ ಗುಂಪಿನೊಂದಿಗೆ ಅಣ್ಣಾಮಲೈ ವಾಗ್ವಾದ ನಡೆಸಿದ್ದರು. ಈ ವೇಳೆ ಚರ್ಚ್ ಪ್ರವೇಶಿಸದಂತೆ ತಡೆದ ಪ್ರತಿಭಟನಾಕಾರರು ಮತ್ತು ಬಿಜೆಪಿ ಮುಖಂಡರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಈ ಗದ್ದಲದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಸಹ ಆಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.   ಈ ವೀಡಿಯೋ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆಗಿದ್ದು, https://ainlivenews.com/cancellation-of-dog-meat-consumption-bill-passed-in-the-south-korean-parliament/ ಅದರಲ್ಲಿ ಅಣ್ಣಾಮಲೈ ಪ್ರತಿಭಟನಾಕಾರರ ಭುಜದ ಮೇಲೆ ಕೈಯಿಟ್ಟು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರತಿಭಟನಾ ನಿರತ ಯುವಕರನ್ನು ಅಲ್ಲಿಂದ…

Read More

ಬೆಂಗಳೂರು: ನಾವೆಲ್ಲ ಶ್ರೀರಾಮಚಂದ್ರನ ಭಕ್ತರೇ ಕೇಂದ್ರ ಸಚಿವರುಗಳು ರಾಜಕೀಯ ಮಾತನಾಡ್ತಿದ್ದಾರೆ ಅಷ್ಟೇ ಅದನ್ನು ನಾವು ಖಂಡಿಸುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾವು ಶ್ರೀರಾಮಚಂದ್ರನ ಭಕ್ತರು, ನಾವು ಶ್ರೀರಾಮಚಂದ್ರನ ಪೂಜೆ ಮಾಡುತ್ತೇವೆ. ಕೇದ್ರ ಸಚಿವರುಗಳು ರಾಜಕೀಯ ಮಾತನಾಡುತ್ತಿದ್ದಾರೆ ಅಷ್ಟೇ. ರಾಜಕೀಯ ಮಾತನಾಡೋರಿಗೆ ಔಷಧವಿಲ್ಲ ಎಂದು ಕಿಡಿಕಾರಿದರು ನಾವು ಶ್ರೀರಾಮಚಂದ್ರನ ವಿರುದ್ಧವಿಲ್ಲ. ಶ್ರೀರಾಮಚಂದ್ರನನ್ನ ನಾವು ಗೌರವಿಸುತ್ತೇವೆ, ಪೂಜೆ ಮಾಡುತ್ತೇವೆ. ಭಜನೆ ಮಾಡುತ್ತೇವೆ. ರಾಮಮಂದಿರಕ್ಕೆ ನಮ್ಮದು ವಿರೋಧವಿಲ್ಲ. ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಅದಕ್ಕೆ ನಮ್ಮ ವಿರೋಧ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಯಡಿಯೂರಪ್ಪನವರು ಆರೋಪಕ್ಕೆ ಕಿಡಿಕಾರಿದ ಅವರು, ಈಗ ಯಾಕೆ ಇವರು ಅಯೋಧ್ಯೆಗೆ ಹೋಗುತ್ತಿದ್ದಾರೆ. ಶ್ರೀರಾಮಚಂದ್ರ ಇಲ್ಲಿ ಇಲ್ವಾ? ಇಲ್ಲೂ ಎಲ್ಲಾ ಪೂಜೆ ಮಾಡುತ್ತಿದ್ದಾರೆ. ಅಷ್ಟೇ ಎಂದು ಸಿಎಂ ತಿರುಗೇಟು ಕೊಟ್ಟರು.

Read More

ಬೆಂಗಳೂರು:  ಜನವರಿ 17 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಸಂಬಂಧ ಇಂದು ನಗರದಲ್ಲಿ ಲಾರಿ ಮಾಲೀಕರು ಸಭೆ ನಡೆದಿದ್ದು  ಕೇಂದ್ರ ಸರ್ಕಾರ ಕಾಯ್ದೆ ವಿರೋಧಿಸಿ ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ ದಕ್ಷಿಣ ಭಾರತ ಲಾರಿ ಮಾಲೀಕರು/_ಚಾಲಕರು ಕೇರಳ,ತಮಿಳುನಾಡು,ಮುಂಬಯಿ ,ಮಹಾರಾಷ್ಟ್ರ ಹೈದರಾಬಾದ್ ಚೆನ್ನೈ ಸೇರಿ ಇತರೆ ರಾಜ್ಯದ ಲಾರಿ ಮಾಲೀಕರು ಭಾಗಿಯಾಗಿದ್ದಾರೆ. ಲಾರಿ ಮಾಲೀಕರ ಬೇಡಿಕೆಗಳು ಏನು?: ಕೇಂದ್ರ ಸರ್ಕಾರದ ಮುಂದಿರುವ ಬೇಡಿಕೆ – ಕೇಂದ್ರ ಸರ್ಕಾರದ ಭಾರತೀಯ ನ್ಯಾಯ ಸಂಹಿತೆ ಕಲಂ 106ರ ಉಪವಿಧಿ 1ಮತ್ತು 2 ಅನ್ನು ಕೈ ಬಿಡಬೇಕು ಕರ್ನಾಟಕ ಸರ್ಕಾರದ ಮುಂದಿರುವ ಬೇಡಿಕೆಗಳು:- – ರಾಜ್ಯದ ಗಡಿ ಭಾಗಗಳಲ್ಲಿರುವ ಎಲ್ಲಾ ಸಾರಿಗೆ ಇಲಾಖೆ ತಪಾಸಣೆ ಠಾಣೆಗಳನ್ನು ತೆಗೆದುಹಾಕುವುದು – EXCESS PROJECTION ವಿಧಿಸುತ್ತಿರುವ 20 ಸಾವಿರ ದಂಡವನ್ನು ಕಡಿಮೆಗೊಳಿಸಬೇಕು – ಕಪ್ಪು ಪಟ್ಟಿ ಹೆಸರಿನಲ್ಲಿ ವಾಣಿಜ್ಯ ವಾಹನಗಳಿಗೆ FC ಮತ್ತು ಪರ್ಮಿಟ್ ನವೀಕರಣ ಮಾಡಿಕೊಡಲು ನಿರಾಕರಿಸುವುದನ್ನು ನಿಲ್ಲಿಸಬೇಕು – DSA ಕೇಸುಗಳು ಎಲ್ಲೇ ಇದ್ದರು ಸಹ ಅದನ್ನು ವಾಹನ ಮಾಲೀಕರು ತಮ್ಮ…

Read More

ಬಾಲಿವುಡ್ ನಟಿ ಬಿಪಾಶಾ ಬಸು ಮಾಲ್ಡೀವ್ಸ್ ನಲ್ಲಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸುಂದರ ತಾಣದಲ್ಲಿ ಹುಟ್ಟು ಹಬ್ಬ ಎಂದು ಫೋಟೋ ಹಂಚಿಕೊಂಡಿದ್ದಾರೆ. ಜನವರಿ 7 ರಂದು ಬಿಪಾಶಾ ಮಾಲ್ಡೀವ್ಸ್ ನಲ್ಲಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.  ಆ ಫೋಟೋಗಳು ಸಾಕಷ್ಟು ನೆಗೆಟಿವ್ ಕಾಮೆಂಟ್ ಬಂದಿದೆ. ನಿಮಗೆ ಮಾಲ್ಡೀವ್ಸ್ ಮತ್ತು ಭಾರತದ ನಡುವಿನ ಕಿತ್ತಾಟ ಗೊತ್ತಿಲ್ಲವಾ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳು ಬೈಕಾಟ್ ಮಾಲ್ಡೀವ್ಸ್ ಅಭಿಯಾನಕ್ಕೆ ಸಖತ್ ಬೆಂಬಲ ನೀಡುತ್ತಿದ್ದಾರೆ

Read More

ಇದೇ ಮೊದಲ ಬಾರಿಗೆ ಸಂಕ್ರಾಂತಿ (Sankranti) ಹಬ್ಬದ ದಿನದಂದು ಕನ್ನಡದ (Kannada movie) ಯಾವುದೇ ಚಿತ್ರ ಬಿಡುಗಡೆ ಆಗುತ್ತಿಲ್ಲ. ಅಂದುಕೊಂಡಂತೆ ಆಗಿದ್ದರೆ, ಕನ್ನಡದ ರಂಗ ಸಮುದ್ರ ಸಿನಿಮಾ ರಿಲೀಸ್ ಆಗಬೇಕಿತ್ತು. ಪರಭಾಷೆಯ ಸಿನಿಮಾ ಹಾವಳಿಗೆ ತತ್ತರಿಸಿ ಈ ಸಿನಿಮಾ ಕೂಡ ರಿಲೀಸ್ ಆಗುತ್ತಿಲ್ಲ ಸಂಕ್ರಾಂತಿ ಹಬ್ಬದ ದಿನದಂದು ಅಷ್ಟಕ್ಕೂ ಯಾಕೆ ಕನ್ನಡ ಸಿನಿಮಾ ರಿಲೀಸ್ ಆಗುತ್ತಿಲ್ಲ ಎನ್ನುವ ಪ್ರಶ್ನೆಗೆ ಸಿಕ್ಕ ಉತ್ತರ ಪರಭಾಷೆಯ ಎಂಟು ಅದ್ಧೂರಿ ಚಿತ್ರಗಳು ಬಿಡುಗಡೆ ಆಗುತ್ತಿವೆ. ಜೊತೆಗೆ ಕನ್ನಡದ ಕಾಟೇರ ಸಿನಿಮಾ ಕೂಡ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಸುನಾಮಿಗೆ ಅಪ್ಪಚ್ಚಿ ಆಗಬಾರದು ಎನ್ನುವ ಕಾರಣಕ್ಕಾಗಿ ಯಾವುದೇ ಚಿತ್ರವನ್ನು ರಿಲೀಸ್ ಮಾಡದೇ ಹಿಂದಕ್ಕೆ ಸರಿದಿದ್ದಾರೆ ನಿರ್ಮಾಪಕರು. ಈ ಸಂಕ್ರಾಂತಿ ದಿನದಂದು ಶಿವರಾಜ್ ಕುಮಾರ್ ಮತ್ತು ಧನುಷ್ ಕಾಂಬಿನೇಷನ್ ನ ಕ್ಯಾಪ್ಟನ್ ಮಿಲ್ಲರ್, ಮಹೇಶ್‍ ಬಾಬು ಅಭಿನಯದ ‘ಗುಂಟೂರು ಖಾರಂ’, ವೆಂಕಟೇಶ್‍ ಅಭಿನಯದ ‘ಸೈಂಧವ’, ನಾಗಾರ್ಜುನ ಅಭಿನಯದ ‘ನಾ ಸಾಮಿ ರಂಗ’, ತೇಜ ಸಜ್ಜಾ ಅಭಿನಯದ ‘ಹನುಮ್ಯಾನ್‍’, ಶಿವಕಾರ್ತಿಕೇಯನ್‍…

Read More

ಚಿಕ್ಕಮಗಳೂರು: ರಾಮ ಮಂದಿರ ಉದ್ಘಾಟನೆ ಭಾರತದ ಹಬ್ಬ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣವಾಗಬೇಕು ಎನ್ನುವುದು ದೇಶದ ಜನರ ನಿರೀಕ್ಷೆ. ಹಲವು ವರ್ಷಗಳ ಗೊಂದಲಕ್ಕೆ ಸುಪ್ರೀಂ ಕೋರ್ಟ್ ತೆರೆ ಎಳೆದಿದೆ ಎಂದರು. ಕಾಂಗ್ರೆಸ್ಸಿಗರು (Congress) ರಾಮ ಮಂದಿರ ಉದ್ಘಾಟನೆಗೆ ಹೋಗದ ವಿಚಾರಕ್ಕೆ ಕೇಳಿದ ಪ್ರಶ್ನೆಗೆ, ಯಾಕೆ ಹೋಗುವುದಿಲ್ಲ ಎಂದು ಅವರೇ ಹೇಳಬೇಕು. ಅವರ ತೀರ್ಮಾನ ನನಗೆ ಸಂಬಂಧವಿಲ್ಲ. ರಾಮ ಮಂದಿರ ನಿಜವಾದ ರಾಮ ರಾಜ್ಯದ ಕನಸು ಎಂದು ಹೇಳಿದರು. https://ainlivenews.com/cancellation-of-dog-meat-consumption-bill-passed-in-the-south-korean-parliament/ ಕಳೆದ ಬಾರಿಯ ಲೋಕಸಭೆ ಚುನಾವಣೆ (Lok Sabha Election) ಬೇರೆ. ಈ ಚುನಾವಣೆ ಬೇರೆ ಇರುತ್ತದೆ. ಇವತ್ತು ಮಂಡ್ಯದಲ್ಲಿ ಓರ್ವ ಸಾಮಾನ್ಯ ಕಾರ್ಯಕರ್ತ ಗೆಲ್ಲುವ ವಾತಾವರಣ ಇದೆ. ಕಳೆದ ಬಾರಿ ರೈತ ಸಂಘ, ಬಿಜೆಪಿ, ಕಾಂಗ್ರೆಸ್ ಎಲ್ಲರೂ ಪಕ್ಷೇತರ ಅಭ್ಯರ್ಥಿ ಪರ ಮತ ಹಾಕಿದ್ದರು. ಈಗ ಮಂಡ್ಯದಲ್ಲಿ ಆ ವಾತಾವರಣ ಇಲ್ಲಎಂದು ಹೇಳಿದರು.

Read More

ಬೆಂಗಳೂರು: ಆಸ್ತಿತೆರಿಗೆ ಹೆಸರಲ್ಲಿ ಬೆಂಗಳೂರು ಜನರ ಕಿಸೆಗೆ ಕತ್ತರಿ ಹಾಕಲು ಹೊರಟಿರುವ ಈ ಜೇಬುಗಳ್ಳ ಸರಕಾರದ ನಡೆಯನ್ನು ವಿಧಾನಪರಿಷತ್ ಹಿರಿಯ ಸದಸ್ಯ, ಜೆಡಿಎಸ್ ನಾಯಕ ಟಿ. ಎ.ಶರವಣ ಬಲವಾಗಿ ಖಂಡಿಸಿದ್ದಾರೆ. 2016- 17 ಸಾಲಿನಿಂದ ಪರಿಷ್ಕರಣೆ ತೆರಿಗೆ ಹಣ ಪಾವತಿಸುವಂತೆ ಸಾರ್ವಜನಿಕರಿಗೆ ಬಿಬಿಎಂಪಿ ನೋಟಿಸ್ ನೀಡುತ್ತಿರುವುದು ಹಗಲು ದರೋಡೆ, ಸುಲಿಗೆ ಎನ್ನಲೇಬೇಕು ಎಂದು ಅವರು ಖಂಡಿಸಿದ್ದಾರೆ. ಒಮ್ಮೆಲೆ ಏಳು ವರ್ಷಗಳ ಆಸ್ತಿ ತೆರಿಗೆ ಪರಿಷ್ಕರಿಸುವ ಕ್ರಮ ಅವೈಜ್ಞಾಿನಿಕವಾಗಿದೆ. ಇದು ಜನರ ಬದುಕಿನ ಮೇಲೆ ಬರೆ ಎಳೆಯುವ ದಂಡನೆ ಆಗಿದೆ ಎಂದು ಶರವಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಮತ್ತೊಂದು ವಿಶೇಷ ಎಂದರೆ ಬೆಂಗಳೂರು ಉಸ್ತುವಾರಿ ವಹಿಸಿರುವ ಡಿಸಿಎಂ ಶಿವಕುಮಾರ್ ಮತ್ತು ಬೆಂಗಳೂರಿಂದ ಸತತವಾಗಿ ಆಯ್ಕೆ ಆಗುತ್ತಿರುವ ಸಚಿವ ರಾಮಲಿಂಗಾರೆಡ್ಡಿ ಅವರ ನಡುವೆ ಹೊಂದಾಣಿಕೆಯೇ ಇಲ್ಲದೆ ಇರುವುದು. ಬಿಬಿಎಂಪಿ ಯ ಈ ಕ್ರಮವನ್ನು ಖುದ್ದು ರಾಮಲಿಂಗಾರೆಡ್ಡಿ ಅವರೇ ಖಂಡಿಸಿ, ಇಂಥ ನೊಟೀಸ್ ನೀಡುವುದನ್ನು ನಿಲ್ಲಿಸಬೇಕು ಎಂದು ಪತ್ರ ಬರೆದು ಹೇಳಿದ್ದಾರೆ. ಅಂದರೆ ಈ ವಿಚಾರದಲ್ಲಿ…

Read More

ಬೆಂಗಳೂರು: ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸದೆ ಇರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಮ್ಮ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಅಧೀರ್ ಚೌದರಿ ಅವರ ತೀರ್ಮಾನ ಸರಿಯಾಗಿದೆ, ಇದನ್ನು ನಾನು ಬೆಂಬಲಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಓಷ್ಠಿ ನಡೆಸಿದ ಅವರು,    ಜಾತಿ, ಧರ್ಮ, ಪಕ್ಷ-ಪಂಥವನ್ನು ಮೀರಿ ಸರ್ವರನ್ನೂ ಒಳಗೊಂಡು ಭಕ್ತಿ ಮತ್ತು ಗೌರವದಿಂದ ನಡೆಸಬೇಕಾದ ಒಂದು ಧಾರ್ಮಿಕ ಕಾರ್ಯಕ್ರಮವನ್ನು ಒಂದು ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಘ ಪರಿವಾರದ ನಾಯಕರು ಶ್ರೀರಾಮನಿಗೆ ಹಾಗೂ ದೇಶದ 140 ಕೋಟಿ ಜನತೆಗೆ ಅಗೌರವವನ್ನುಂಟು ಮಾಡಿದ್ದಾರೆ. ಶ್ರದ್ದಾಪೂರ್ವಕವಾಗಿ ನಡೆಸಬೇಕಾಗಿದ್ದ ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯ ಪ್ರಚಾರದ ಅಭಿಯಾನವನ್ನಾಗಿ ಮಾಡಿದ್ದು ಸಮಸ್ತ ಹಿಂದೂ ಬಾಂಧವರಿಗೆ ಮಾಡಿರುವ ದ್ರೋಹವಾಗಿದೆ. ಹಿಂದೂ ಧರ್ಮದ ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ಪ್ರತಿನಿತ್ಯ ಉಪದೇಶ ನೀಡುವ ಬಿಜೆಪಿ ಮತ್ತು ಆರ್.ಎಸ್‌.ಎಸ್ ನಾಯಕರು ಅಪೂರ್ಣಗೊಂಡಿರುವ ಶ್ರೀರಾಮನ ದೇವಸ್ಥಾನವನ್ನು…

Read More

ಬೆಂಗಳೂರು: ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯಿಂದ ರಾಮ ಭಕ್ತರಿಗೆ ಗುಡ್ ನ್ಯೂಸ್​ವೊಂದು ಸಿಕ್ಕಿದೆ. ಹೌದು,ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ರಾಮಮಂದಿರ ಉದ್ಘಾಟನೆ ಹೊತ್ತಲ್ಲೇ ಅಯೋಧ್ಯೆಯಲ್ಲಿ‌ ಕರ್ನಾಟಕ ಯಾತ್ರಿ ನಿವಾಸ ಕಟ್ಟಲು ಅನುಮತಿ ನೀಡುವಂತೆ ಕರ್ನಾಟಕ ಮುಜರಾಯಿ ಇಲಾಖೆ ಉತ್ತರ ಪ್ರದೇಶಕ್ಕೆ ಪತ್ರ ಬರೆದಿದೆ. ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಕರ್ನಾಟಕ ಯಾತ್ರಿ ನಿವಾಸ ರಾಜ್ಯದ ಭಕ್ತರ ಅನುಕೂಲಕ್ಕಾಗಿ ಅತಿಥಿಗೃಹ ನಿರ್ಮಾಣ ಕೋರಿ ಅರ್ಜಿ ಉತ್ತರಪ್ರದೇಶ ಸರ್ಕಾರಕ್ಕೆ ರಾಜ್ಯ ಮುಜರಾಯಿ ಇಲಾಖೆಯಿಂದ ಪತ್ರ ಯಾತ್ರಿಗಳ ವಾಸ್ತವ್ಯ, ಊಟದ ವ್ಯವಸ್ಥೆಗಾಗಿ ಅತಿಥಿಗೃಹ ನಿರ್ಮಾಣ 10 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಅತಿಥಿ ಗೃಹ ನಿರ್ಮಾಣಕ್ಕೆ ಮನವಿ ಸರಯೂ ನದಿ ಬಳಿ ಅತಿಥಿ ಗೃಹ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮನವಿ ಮಾಡಲಾಗಿದೆ. ಈಗಾಗಲೇ ಉತ್ತರ ಪ್ರದೇಶ ಸರ್ಕಾರಕ್ಕೆ ಪತ್ರ ಬರದಿರುವ ರಾಜ್ಯಸರ್ಕಾರ ಸರಯೂ ನದಿ ಸಮೀಪದಲ್ಲಿ ಅತಿಥಿ ಗೃಹ ನಿರ್ಮಿಸುವಂತೆ 2023ರ ಆಗಸ್ಟ್ ತಿಂಗಳಲ್ಲಿ ಉತ್ತರ ಪ್ರದೇಶ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಸಹ ಪತ್ರವನ್ನ ಬರೆದು ಮನವಿ ಮಾಡಿದ್ರು. 2020ರಲ್ಲಿ ಯುಪಿ…

Read More