Author: AIN Author

ನೆಲಮಂಗಲ: ಕಬ್ಬಿಣದ ಪೈಪ್ ತುಂಬಿದ ಬೃಹತ್ ಲಾರಿ ಪಲ್ಟಿ ಹೊಡೆದಿರುವ ಘಟನೆ ನೆಲಮಂಗಲ ತಾಲೂಕಿನ ಬೂದಿಹಾಳ್ ಗೇಟ್ ಬಳಿ ಜರುಗಿದೆ. https://ainlivenews.com/my-contest-for-bjps-presidency-is-sure-victory-is-certain-yatnal-tong-for-bsy-family/ ಘಟನೆ ಪರಿಣಾಮ, ರಸ್ತೆಯಲ್ಲಿ ಪೈಪ್ ಗಳು ಚೆಲ್ಲಾಪಿಲ್ಲಿಯಾಗಿದೆ. ತುಮಕೂರು ಮಾರ್ಗವಾಗಿ ಲಾರಿ ಬೆಂಗಳೂರು ಕಡೆ ಬರುತ್ತಿತ್ತು. ಈ ವೇಳೆ ಲಾರಿ ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ಲಾರಿ ಪಲ್ಟಿ ಆಗಿದೆ. ಬೆಳಗ್ಗಿನ ಜಾವ ಮೂರು ಗಂಟೆಗೆ ಈ ಘಟನೆ ನಡೆದಿದೆ. ಘಟನೆ ಪರಿಣಾಮ, ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾರಿ ಟ್ರಾಫಿಕ್ ಉಂಟಾಗಿದೆ. ನೆಲಮಂಗಲ ಸಂಚಾರಿ ಪೊಲೀಸರಿಂದ ತೆರವು ಕಾರ್ಯ ನಡೆದಿದೆ.

Read More

ವಿಜಯಪುರ:- ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವುದು ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. https://ainlivenews.com/bigg-boss-trophy-hanumantha-this-is-the-first-time-in-history/ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋರ್ ಕಮಿಟಿಯಲ್ಲಿ ನನ್ನ ಹೆಸರು ಅಂತಿಮವಾದರೆ ಸ್ಪರ್ಧಿಸುವೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾನು ಸಿದ್ಧ. ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದರು. ಬಿಜೆಪಿ ನಿಷ್ಠಾವಂತರ ಗುಂಪಿನ ಕೋರ್ ಕಮಿಟಿಯಲ್ಲಿ ನನ್ನ ಹೆಸರು ಅಂತಿಮವಾದರೆ ಸ್ಪರ್ಧಿಸುವೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾನು ರೆಡಿ ಎಂದರು. ಉಸ್ತುವಾರಿ ಸಭೆಗೆ ನಾನು ಹೋಗಿಲ್ಲ. ಅಲ್ಲಿ 600 ಶಾಸಕರ ಬೆಂಬಲ ಇದೆ, ಅಲ್ಲಿ ನಮಗೇನು ಕೆಲಸ. 600 ಶಾಸಕರು, 1,500 ಸಂಸದರು, 2,000 ಎಂಎಲ್‌ಸಿಗಳ ಬೆಂಬಲ ಇದೆ ಎಂದು ಯತ್ನಾಳ್ ವ್ಯಂಗ್ಯವಾಡಿದರು.

Read More

ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಯಾರು ಕಪ್ ಗೆಲ್ಲುತ್ತಾರೆ ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಬರೋಬ್ಬರಿ 5 ಕೋಟಿ ವೋಟ್ ಪಡೆದು ಹನುಮಂತ ಅವರು ಗೆದ್ದು ಬೀಗಿದ್ದಾರೆ. ಈ ಮೂಲಕ ಕರ್ನಾಟಕ ಜನರ ಫೇವರಿಟ್ ಎನಿಸಿಕೊಂಡಿದ್ದಾರೆ. https://ainlivenews.com/do-you-repeatedly-go-to-the-bathroom-so-it-means-that-it-is-low-in-the-body/ ಹೌದು, 120 ದಿನದ ಪಯಣ.. ಸಿಕ್ಕ ಪಟ್ಟೆ ಮನರಂಜನೆ ಕೊಟ್ಟ ಟಾಸ್ಕ್.. ನಾಲ್ಕು ಟಫೆಸ್ಟ್ ಕಂಟೆಸ್ಟೆಂಟ್.. ನೂರಾರು ಲೆಕ್ಕಾಚಾರ.. ಗೆಲುವು ಯಾರದ್ದು ಅನ್ನೋ ಕುತೂಹಲ.. ಸದ್ಯ ಇವೆಲ್ಲಕ್ಕೂ ತೆರೆ ಬಿದ್ದಿದೆ.. ಕನ್ನಡ ಬಿಗ್ ಬಾಸ್ ಪ್ರಿಯರು ಕಾತುರದಿಂದ ಕಾಯ್ತಿದ್ದ ಕ್ಷಣ ಕೊನೆಗೂ ಬಂದಿದೆ. ಬಿಗ್ ಬಾಸ್ ಸೀಸನ್ ಟ್ರೋಪಿ ಹಿಡಿಯೋರು ಯಾರು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕೇ ಬಿಟ್ಟಿದೆ. ಬಿಗ್ ಬಾಸ್ ವಿನ್ನರ್ ಯಾರ್ ಇರಬಹುದು ಅಂತಾ ಜನ ಗೆಸ್ ಮಾಡಿದ್ರೋ ಅವರೇ ಸೀಸನ್ 11ರ ವಿನ್ನರ್ ಆಗಿದ್ದಾರೆ.. ಎಸ್.. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕೊಟ್ಟು, ತನ್ನ ಮುಗ್ದತೆಯಿಂದ ಕನ್ನಡಿಗರ ಮನಗೆದ್ದಿದ್ದ ಹನುಮಂತು ಸೀಸನ್ 11ರ ಟ್ರೋಫಿಗೆ ಮುತ್ತಿಟ್ಟಿದ್ದಾನೆ.…

Read More

ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ ಸಾಮಾನ್ಯವಾದ ಸಮಸ್ಯೆಯಾಗಿದೆ. ಜಾಸ್ತಿ ನೀರನ್ನು ಕುಡಿಯದೇ ಇರುವುದು, ಹೆಚ್ಚಾಗಿ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸದಿರುವುದು, ದೈಹಿಕ ಚಟುವಟಿಕೆಯ ಕೊರತೆ ಹೀಗೆ ಹಲವಾರು ಕಾರಣಗಳಿಂದ ಮಲಬದ್ಧತೆ ಸಮಸ್ಯೆ ಉಂಟಾಗಬಹುದು. ಕೆಲವೊಮ್ಮೆ ಕೆಲ ಔಷಧಿಗಳು ಕೂಡ ಮಲಬದ್ಧತೆಗೆ ಕಾರಣವಾಗಬಹುದು. https://ainlivenews.com/the-stepfather-pulled-the-handle-from-the-water-heater-for-the-little-children/ ಮಲಬದ್ಧತೆಯನ್ನು ತಡೆಗಟ್ಟಲು ಅನೇಕ ಮಂದಿಗೆ ಹೈಡ್ರೀಕರಿಸಿದ ಆಹಾರ ಸೇವಿಸಲು ಸಲಹೆ ನೀಡಲಾಗುತ್ತದೆ. ಅಲ್ಲದೇ ಸಾಕಷ್ಟು ಫೈಬರ್ ಹೊಂದಿರುವ ಸಮತೋಲಿತ ಆಹಾರವನ್ನು ಸೇವಿಸುವುದರ ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಮಲಬದ್ಧತೆ ಸಮಸ್ಯೆಯು ನಮ್ಮ ಆಹಾರ ಕ್ರಮ, ಜೀವನಶೈಲಿ, ಒತ್ತಡ, ನಿರ್ಜಲೀಕರಣ, ಹೊಟ್ಟೆ ನೋವು, ಅಜೀರ್ಣ, ಗ್ಯಾಸ್, ಅನಾರೋಗ್ಯಕರ ಆಹಾರ, ಜಡತ್ವ, ನೀರು ಕುಡಿಯದಿರುವುದು ಇತ್ಯಾದಿಗಳಿಂದಾಗಿ ಉಂಟಾಗುತ್ತದೆ. ಈ ಸಮಸ್ಯೆ ದೊಡ್ಡವರನ್ನಷ್ಟೇ ಅಲ್ಲದೇ ಚಿಕ್ಕ ಮಕ್ಕಳನ್ನು ಕೂಡ ಕಾಡುತ್ತಿದೆ. ಇನ್ನೂ ಈ ರೋಗದ ಮುಖ್ಯ ಲಕ್ಷಣಗಳೆಂದರೆ ಮಲ ವಿಸರ್ಜನೆಗೆ ತೊಂದರೆ ಉಂಟಾಗುವುದು. ಈ ಸಮಸ್ಯೆ ಇರುವವರಿಗೆ ವಾರದಲ್ಲಿ ಮೂರು ಬಾರಿ ಮಲವಿಸರ್ಜನೆ ಮಾಡಲು ಸಹ ಕಷ್ಟವಾಗುತ್ತದೆ. ಜೊತೆಗೆ ಮಲವಿರ್ಸಜನೆ ಮಾಡುವಾಗ ಆಯಾಸವಾಗುವುದು,…

Read More

ಸೂರ್ಯೋದಯ – 6:52 AM ಸೂರ್ಯಾಸ್ತ – 6:05 PM ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ, ಹೇಮಂತ್ ಋತು, ಪುಷ್ಯ ಮಾಸ, ತಿಥಿ – ತ್ರಯೋದಶಿ ನಕ್ಷತ್ರ – ಮೂಲ ಯೋಗ – ಹರ್ಷಣ ಕರಣ – ಗರಜ ರಾಹು ಕಾಲ – 07:30 ದಿಂದ 09:00 ವರೆಗೆ ಯಮಗಂಡ – 10:30 ದಿಂದ 12:00 ವರೆಗೆ ಗುಳಿಕ ಕಾಲ – 01:30 ದಿಂದ 03:00 ವರೆಗೆ ಬ್ರಹ್ಮ ಮುಹೂರ್ತ – 5:16 ಬೆ.ದಿಂದ 6:04 ಬೆ.ವರೆಗೆ ಅಮೃತ ಕಾಲ – 4:10 ಬೆ.ದಿಂದ 5:46 ಬೆ.ವರೆಗೆ ಅಭಿಜಿತ್ ಮುಹುರ್ತ – 12:06 ಮ.ದಿಂದ 12:51 ಮ.ವರೆಗೆ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ: ಮಠಾಧಿಪತಿಗಳು ಭಾಗ್ಯದ ಬಗ್ಗೆ ಚಿಂತೆ ಹಾಗೂ…

Read More

ಸ್ಟೇಜ್ ಮೇಲೆ ಮಾತನಾಡುತ್ತಿರುವಾಗ, ಮದುವೆ ಫಂಕ್ಷನ್ ನಲ್ಲಿ ಡಾನ್ಸ್ ಮಾಡುತ್ತಾ, ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಾ ಅಥವಾ ಕ್ರಿಕೆಟ್ ಆಡುವಾಗಲೇ ಹೃದಯಘಾತವಾಗಿರುವ ಅನೇಕ ಪ್ರಕರಣಗಳು ನಮ್ಮ ಕಣ್ಣಮುಂದಿವೆ. ಹೀಗಾಗಿ ಪುಟ್ಟ ಹೃದಯದ ವಿಚಾರದಲ್ಲಿ ಯಾವತ್ತಿಗೂ ಕೂಡ ನಿರ್ಲಕ್ಷ್ಯ ಮಾಡಬಾರದು. https://ainlivenews.com/microfinance-should-be-shut-down-government-will-take-appropriate-decision-minister-lad/ 35- 40 ನೇ ವಯಸ್ಸಿನಲ್ಲಿ ದೇಹದಲ್ಲಿ ಅನೇಕ ರೀತಿಯ ಸಮಸ್ಯೆಗಳು ಕಂಡು ಬರಲು ಪ್ರಾರಂಭಿಸುತ್ತವೆ. ಈ ವಯಸ್ಸಿನಲ್ಲಿ ಹೃದ್ರೋಗದಿಂದ ಯಕೃತ್ತಿನ ವರೆಗೆ ನಾನಾ ರೀತಿಯ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ, ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಹಾಗಾದರೆ 35- 40 ನೇ ವಯಸ್ಸಿನಲ್ಲಿ ಆರೋಗ್ಯವಾಗಿರಲು ಯಾವ ವಿಷಯಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂಬುದನ್ನು ತಜ್ಞರಿಂದ ತಿಳಿದುಕೊಳ್ಳಿ. ಈ ವಯಸ್ಸಿನಲ್ಲಿ ಉತ್ತಮ ಜೀವನಶೈಲಿ ಮತ್ತು ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಮುಖ್ಯ. ಏಕೆಂದರೆ 35- 40 ರಲ್ಲಿ, ಮೂಳೆಗಳ ಬಲವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಫಲವತ್ತತೆಯೂ ಕ್ರಮೇಣ ಕಡಿಮೆಯಾಗುತ್ತದೆ ಮತ್ತು…

Read More

ಬೆಂಗಳೂರು:- ಕೆಲವು ದಿನ ರಿಲೇಷನ್‌ಶಿಪ್‌ನಲ್ಲಿ ಮದುವೆ ಮಾಡಿಕೊಂಡಿದ್ದ ಹೆಂಡತಿ ನಟಿ ಶಶಿಕಲಾ ವಿರುದ್ಧ ಡೈರೆಕ್ಟರ್ ಹರ್ಷವರ್ಧನ್ ದೂರು ನೀಡಿದ್ದಾರೆ. https://ainlivenews.com/sir-new-dl-rc-smart-cards-not-available-what-does-the-transport-minister-say/ ಕನ್ನಡದ ಹಲವು ಸಿನಿಮಾಗಳು ಹಾಗೂ ಸೀರಿಯಲ್‌ಗಳಲ್ಲಿ ನಟಿಸಿರುವ ಖ್ಯಾತ ನಟಿಯ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಬ್ಲಾಕ್ ಮೇಲ್ ಮಾಡಿ ಮದುವೆ ಆಗಿ ಈಗ ಕಿರುಕುಳ ನೀಡ್ತಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಪ್ರಜಾರಾಜ್ಯ ಸಿನಿಮಾ ನಿರ್ದೇಶನ ಮಾಡಿದ್ದ ಹರ್ಷವರ್ಧನ್ ಅಲಿಯಾಸ್ ವಿಜಯಭಾರ್ಗವ ದೂರು ನೀಡಿದ್ದಾರೆ. ಹಲವು ಸಿನಿಮಾ ಹಾಗೂ ಸಿರಿಯಲ್ ನಲ್ಲಿ ನಟಿಸಿರುವ ಶಶಿಕಲಾ ಜೊತೆಗೆ ಅಮ್ಮನ ಮಡಿಲು ಎಂಬ ಅನಾಥಾಶ್ರಮ ನಡೆಸುತ್ತಿದ್ದಾರೆ. ದೂರಿನ ಅನ್ವಯ ಪೊಲೀಸರು ತನಿಖೆ ಚುರುಕು ಮಾಡಿದ್ದಾರೆ.

Read More

ಮೆದುಳಿನ ಭಾಗಗಳಿಗೆ ಸಾಕಷ್ಟು ರಕ್ತ ಪೂರೈಕೆ ಆಗದೇ ಹೋದಾಗ ಮೆದುಳಿನ ಸ್ಟ್ರೋಕ್ ಸಂಭವಿಸುತ್ತದೆ. ಮಾರಣಾಂತಿಕ ಮೆದುಳಿನ ಸ್ಟ್ರೋಕ್ ಸಾಕಷ್ಟು ಸಮಸ್ಯೆ ತಂದೊಡ್ಡುತ್ತದೆ. ಸ್ಟ್ರೋಕ್ ಆರೋಗ್ಯ ಸಮಸ್ಯೆಯನ್ನು ಕೆಲವೊಮ್ಮೆ ಮೆದುಳಿನ ದಾಳಿ ಎಂದು ಕರೆಯುತ್ತಾರೆ. ದೇಹದ ಇತರೆ ಅಂಗಗಳಿಗೆ ಹೇಗೆ ರಕ್ತ ಸಂಚಾರ ಹಾಗೂ ರಕ್ತ ಪೂರೈಕೆ ಆಗುವುದು ಮುಖ್ಯವೋ, ಅಷ್ಟೇ ಮೆದುಳಿಗೂ ರಕ್ತ ಪೂರೈಕೆಯಾಗುವುದು ಮುಖ್ಯವಾಗುತ್ತದೆ. https://ainlivenews.com/microfinance-should-be-shut-down-government-will-take-appropriate-decision-minister-lad/ ದೇಹದಲ್ಲಿ ರಕ್ತನಾಳಗಳು ರಕ್ತವನ್ನು ಸರಬರಾಜು ಮಾಡಲು ಹಾಗೂ ಆಮ್ಲಜನಕ ಪೂರೈಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ರಕ್ತನಾಗಳು ಬ್ಲಾಕ್ ಆದರೆ ಇದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಸಮಸ್ಯೆ ಉಂಟಾಗಬಹುದು. ಬ್ರೈನ್ ಸ್ಟ್ರೋಕ್ ವಿಶ್ವದಲ್ಲಿ ಸಾವಿಗೆ ಕಾರಣವಾಗಿರುವ 3 ನೇ ಸಾಮಾನ್ಯ ಕಾಯಿಲೆಯಾಗಿದೆ. ಒಮ್ಮೆ ಪಾರ್ಶ್ವವಾಯು ರೋಗಕ್ಕೆ ಒಳಗಾದವರು ಪಡುತ್ತಿರುವ ಪಾಡು ಹೇಳತೀರದು. ಹಾಗಾಗಿ ಈ ಕಾಯಿಲೆಯ ರೋಗಲಕ್ಷಣಗಳು ಮೊದಲೇ ಕಾಣಿಸಿಕೊಂಡಿದ್ದಲ್ಲಿ ಈ ಬಗ್ಗೆ ನಿರ್ಲಕ್ಷಿಸಬೇಡಿ. ಈ ಕಾಯಿಲೆಯ ಬಗ್ಗೆ ಒಂದಷ್ಟು ವಿವರವಾದ ಮಾಹಿತಿಯನ್ನು ನಾವಿಂದು ತಿಳಿಯೋಣ ಬನ್ನಿ ಸ್ಟ್ರೋಕ್ ರೋಗಿಗಳ ಜೀವನ…

Read More

ಬಾಲ್ಯದಿಂದಲೂ ಕುರುಡರಾಗಿದ್ದ ಬಾಬಾ ವಂಗಾ ಇಲ್ಲಿಯವರೆಗೆ ಅನೇಕ ಬಾರಿ ನಿಖರವಾದ ಭವಿಷ್ಯ ನುಡಿದಿದ್ದಾರೆ. https://ainlivenews.com/these-three-got-a-great-offer-entry-into-a-new-show/ ಬಾಲ್ಕನ್ ಪ್ರದೇಶದ ನಾಸ್ಟ್ರಡಾಮಸ್ ಎಂದು ಕರೆಯಲ್ಪಡುವ ಬಾಬಾ ವಂಗಾ ನುಡಿದ ಭವಿಷ್ಯವಾಣಿಗಳಲ್ಲಿ ಶೇ 85ರಷ್ಟು ಭವಿಷ್ಯವಾಣಿ ನಿಜವಾಗಿದೆ. ಚರ್ನೋಬಿಲ್ ದುರಂತ, ರಾಜಕುಮಾರಿ ಡಯಾನಾಳ ಮರಣ ಮತ್ತು ಸೋವಿಯತ್ ಒಕ್ಕೂಟದ ವಿಸರ್ಜನೆ ಬಗ್ಗೆ ಬಾಬಾ ವಂಗಾ ನುಡಿದ ಭವಿಷ್ಯ ನಿಜವಾಗಿತ್ತು. 1996ರಲ್ಲಿ ಬಾಬಾ ವಂಗಾ ಸಾವಿಗೀಡಾಗಿದ್ದರೂ ಆಕೆ ನುಡಿದ ಭವಿಷ್ಯವಾಣಿಗಳು ನಿಜವಾಗುತ್ತವೆ ಎಂದು ಬಹುತೇಕ ಜನರು ಈಗಲೂ ನಂಬುತ್ತಿದ್ದಾರೆ. ಬಾಬಾ ವಂಗಾ ಅವರ ಮುಂದಿನ ಭವಿಷ್ಯವಾಣಿ ಜಗತ್ತಿಗೆ ಕೆಟ್ಟದ್ದು ಸಂಭವಿಸುತ್ತದೆ ಎಂಬುದರ ಬಗ್ಗೆಯಾಗಿದೆ. 1911 ರಲ್ಲಿ ಜನಿಸಿದಳು, ಮತ್ತು 12 ವರ್ಷಗಳ ಸಾಮಾನ್ಯ ಮನುಷ್ಯನ ಜೀವನವನ್ನು ನಡೆಸಿದ ನಂತರ, ಅವಳು ಪ್ರವಾದಿಯಾದಳು. ಹಾಗೆಯೇ ಅವರು 1996 ರಲ್ಲಿ ನಿಧನರಾದರು. ಆದರೆ ಜನರು ಅವರ ಭವಿಷ್ಯವಾಣಿಗಳು ನಿಜವಾಗುವುದನ್ನು ನೋಡಿದರು. ಮರಣದ ನಂತರ ಇದು ಹೇಗೆ ಸಾಧ್ಯ? ಬಾಬಾ ವಂಗಾ ಅವರ ಭವಿಷ್ಯವಾಣಿಗಳನ್ನು ಬಿಚ್ಚಿಡಲು ವಿವಿಧ ಗುಂಪುಗಳು ಕೆಲಸ ಮಾಡುತ್ತವೆ.…

Read More

ಬೆಂಗಳೂರು:- ಕರ್ನಾಟಕದಲ್ಲಿ ಕಳೆದ 1 ತಿಂಗಳಿಂದ ಹೊಸ ಡಿಎಲ್‌, ಆರ್‌ಸಿ‌ ಸ್ಮಾರ್ಟ್ ಕಾರ್ಡ್ ಸಿಗುತ್ತಿಲ್ಲ. ಇದೇ ವಿಚಾರವಾಗಿ ಇಂದು ಸಾರಿಗೆ ಸಚಿವರನ್ನು ಮಾಧ್ಯಮದವರು ಪ್ರಶ್ನೆ ಮಾಡಿದರು. https://ainlivenews.com/child-laborers-right-hand-rubbed-by-punching-machine-the-owners-fled/ ಇದಕ್ಕೆ ನಗರದಲ್ಲಿ ಉತ್ತರಿಸಿದ ಸಚಿವರು, ಡಿಎಲ್ ಹಾಗೂ ಆರ್‌ಸಿ ಸ್ಮಾರ್ಟ್ ಕಾರ್ಡ್‌ಗಳನ್ನು ರವಾನಿಸುವಲ್ಲಿ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಡಿಎಲ್ ಹಾಗೂ ಆರ್‌ಸಿ ಸ್ಮಾರ್ಟ್‌ ಕಾರ್ಡ್‌ಗಳ ಪೂರೈಕೆ ಗುತ್ತಿಗೆಯನ್ನು ಪಡೆದಿದ್ದ ರೋಸ್‌ಮೆರ್ಟಾ ಕಂಪನಿ ಟೆಂಡರ್ ಮುಕ್ತಾಯವಾಗಿದೆ. ಹೀಗಾಗಿ, ಸ್ಮಾರ್ಟ್ ಕಾರ್ಡ್‌ಗಳ ಪೂರೈಕೆಗಾಗಿ ಹೊಸ ಟೆಂಡರ್ ಆಹ್ವಾನಿಸಿದ್ದೇವೆ. ಪ್ರತಿದಿನ 20 ಸಾವಿರ ಡಿಎಲ್ ಕಾರ್ಡ್‌ಗಳು ಹೊಸದಾಗಿ ಬರ್ತಿದ್ದು, ಪೇಡಿಂಗ್ ಉಳಿಯುತ್ತಿವೆ. 15 ದಿನದಲ್ಲಿ ಈ ಸಮಸ್ಯೆ ಬಗೆಹರಿಸಲಾಗುವುದು ಎಂದರು. ಇನ್ನೂ ರಾಜ್ಯದಲ್ಲಿ ಹೊಸ ವಾಹನಗಳನ್ನು ಖರೀದಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದರೆ, ಕಳೆದ ಒಂದೆರಡು ತಿಂಗಳಿನಿಂದ ಹೊಸ ವಾಹನ ಖರೀದಿಸುವವರಿಗೆ ಆರ್‌ಟಿಒ ಶಾಕ್ ನೀಡಿದೆ. ಹೊಸ ವಾಹನದಲ್ಲಿ ಜಾಲಿ ರೈಡ್ ಮಾಡಬೇಕು ಎನ್ನುವವರಿಗೆ ಕಳೆದ ಒಂದೆರಡು ತಿಂಗಳಿಂದ ಡಿಎಲ್, ಆರ್‌ಸಿ ಬುಕ್ಕೇ ಸಿಗ್ತಿಲ್ಲ. ಹೊಸ…

Read More