ಸ್ಟೇಜ್ ಮೇಲೆ ಮಾತನಾಡುತ್ತಿರುವಾಗ, ಮದುವೆ ಫಂಕ್ಷನ್ ನಲ್ಲಿ ಡಾನ್ಸ್ ಮಾಡುತ್ತಾ, ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಾ ಅಥವಾ ಕ್ರಿಕೆಟ್ ಆಡುವಾಗಲೇ ಹೃದಯಘಾತವಾಗಿರುವ ಅನೇಕ ಪ್ರಕರಣಗಳು ನಮ್ಮ ಕಣ್ಣಮುಂದಿವೆ. ಹೀಗಾಗಿ ಪುಟ್ಟ ಹೃದಯದ ವಿಚಾರದಲ್ಲಿ ಯಾವತ್ತಿಗೂ ಕೂಡ ನಿರ್ಲಕ್ಷ್ಯ ಮಾಡಬಾರದು. https://ainlivenews.com/microfinance-should-be-shut-down-government-will-take-appropriate-decision-minister-lad/ 35- 40 ನೇ ವಯಸ್ಸಿನಲ್ಲಿ ದೇಹದಲ್ಲಿ ಅನೇಕ ರೀತಿಯ ಸಮಸ್ಯೆಗಳು ಕಂಡು ಬರಲು ಪ್ರಾರಂಭಿಸುತ್ತವೆ. ಈ ವಯಸ್ಸಿನಲ್ಲಿ ಹೃದ್ರೋಗದಿಂದ ಯಕೃತ್ತಿನ ವರೆಗೆ ನಾನಾ ರೀತಿಯ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ, ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಹಾಗಾದರೆ 35- 40 ನೇ ವಯಸ್ಸಿನಲ್ಲಿ ಆರೋಗ್ಯವಾಗಿರಲು ಯಾವ ವಿಷಯಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂಬುದನ್ನು ತಜ್ಞರಿಂದ ತಿಳಿದುಕೊಳ್ಳಿ. ಈ ವಯಸ್ಸಿನಲ್ಲಿ ಉತ್ತಮ ಜೀವನಶೈಲಿ ಮತ್ತು ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಮುಖ್ಯ. ಏಕೆಂದರೆ 35- 40 ರಲ್ಲಿ, ಮೂಳೆಗಳ ಬಲವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಫಲವತ್ತತೆಯೂ ಕ್ರಮೇಣ ಕಡಿಮೆಯಾಗುತ್ತದೆ ಮತ್ತು…
Author: AIN Author
ಬೆಂಗಳೂರು:- ಕೆಲವು ದಿನ ರಿಲೇಷನ್‌ಶಿಪ್‌ನಲ್ಲಿ ಮದುವೆ ಮಾಡಿಕೊಂಡಿದ್ದ ಹೆಂಡತಿ ನಟಿ ಶಶಿಕಲಾ ವಿರುದ್ಧ ಡೈರೆಕ್ಟರ್ ಹರ್ಷವರ್ಧನ್ ದೂರು ನೀಡಿದ್ದಾರೆ. https://ainlivenews.com/sir-new-dl-rc-smart-cards-not-available-what-does-the-transport-minister-say/ ಕನ್ನಡದ ಹಲವು ಸಿನಿಮಾಗಳು ಹಾಗೂ ಸೀರಿಯಲ್‌ಗಳಲ್ಲಿ ನಟಿಸಿರುವ ಖ್ಯಾತ ನಟಿಯ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಬ್ಲಾಕ್ ಮೇಲ್ ಮಾಡಿ ಮದುವೆ ಆಗಿ ಈಗ ಕಿರುಕುಳ ನೀಡ್ತಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಪ್ರಜಾರಾಜ್ಯ ಸಿನಿಮಾ ನಿರ್ದೇಶನ ಮಾಡಿದ್ದ ಹರ್ಷವರ್ಧನ್ ಅಲಿಯಾಸ್ ವಿಜಯಭಾರ್ಗವ ದೂರು ನೀಡಿದ್ದಾರೆ. ಹಲವು ಸಿನಿಮಾ ಹಾಗೂ ಸಿರಿಯಲ್ ನಲ್ಲಿ ನಟಿಸಿರುವ ಶಶಿಕಲಾ ಜೊತೆಗೆ ಅಮ್ಮನ ಮಡಿಲು ಎಂಬ ಅನಾಥಾಶ್ರಮ ನಡೆಸುತ್ತಿದ್ದಾರೆ. ದೂರಿನ ಅನ್ವಯ ಪೊಲೀಸರು ತನಿಖೆ ಚುರುಕು ಮಾಡಿದ್ದಾರೆ.
ಮೆದುಳಿನ ಭಾಗಗಳಿಗೆ ಸಾಕಷ್ಟು ರಕ್ತ ಪೂರೈಕೆ ಆಗದೇ ಹೋದಾಗ ಮೆದುಳಿನ ಸ್ಟ್ರೋಕ್ ಸಂಭವಿಸುತ್ತದೆ. ಮಾರಣಾಂತಿಕ ಮೆದುಳಿನ ಸ್ಟ್ರೋಕ್ ಸಾಕಷ್ಟು ಸಮಸ್ಯೆ ತಂದೊಡ್ಡುತ್ತದೆ. ಸ್ಟ್ರೋಕ್ ಆರೋಗ್ಯ ಸಮಸ್ಯೆಯನ್ನು ಕೆಲವೊಮ್ಮೆ ಮೆದುಳಿನ ದಾಳಿ ಎಂದು ಕರೆಯುತ್ತಾರೆ. ದೇಹದ ಇತರೆ ಅಂಗಗಳಿಗೆ ಹೇಗೆ ರಕ್ತ ಸಂಚಾರ ಹಾಗೂ ರಕ್ತ ಪೂರೈಕೆ ಆಗುವುದು ಮುಖ್ಯವೋ, ಅಷ್ಟೇ ಮೆದುಳಿಗೂ ರಕ್ತ ಪೂರೈಕೆಯಾಗುವುದು ಮುಖ್ಯವಾಗುತ್ತದೆ. https://ainlivenews.com/microfinance-should-be-shut-down-government-will-take-appropriate-decision-minister-lad/ ದೇಹದಲ್ಲಿ ರಕ್ತನಾಳಗಳು ರಕ್ತವನ್ನು ಸರಬರಾಜು ಮಾಡಲು ಹಾಗೂ ಆಮ್ಲಜನಕ ಪೂರೈಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ರಕ್ತನಾಗಳು ಬ್ಲಾಕ್ ಆದರೆ ಇದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಸಮಸ್ಯೆ ಉಂಟಾಗಬಹುದು. ಬ್ರೈನ್ ಸ್ಟ್ರೋಕ್ ವಿಶ್ವದಲ್ಲಿ ಸಾವಿಗೆ ಕಾರಣವಾಗಿರುವ 3 ನೇ ಸಾಮಾನ್ಯ ಕಾಯಿಲೆಯಾಗಿದೆ. ಒಮ್ಮೆ ಪಾರ್ಶ್ವವಾಯು ರೋಗಕ್ಕೆ ಒಳಗಾದವರು ಪಡುತ್ತಿರುವ ಪಾಡು ಹೇಳತೀರದು. ಹಾಗಾಗಿ ಈ ಕಾಯಿಲೆಯ ರೋಗಲಕ್ಷಣಗಳು ಮೊದಲೇ ಕಾಣಿಸಿಕೊಂಡಿದ್ದಲ್ಲಿ ಈ ಬಗ್ಗೆ ನಿರ್ಲಕ್ಷಿಸಬೇಡಿ. ಈ ಕಾಯಿಲೆಯ ಬಗ್ಗೆ ಒಂದಷ್ಟು ವಿವರವಾದ ಮಾಹಿತಿಯನ್ನು ನಾವಿಂದು ತಿಳಿಯೋಣ ಬನ್ನಿ ಸ್ಟ್ರೋಕ್ ರೋಗಿಗಳ ಜೀವನ…
ಬಾಲ್ಯದಿಂದಲೂ ಕುರುಡರಾಗಿದ್ದ ಬಾಬಾ ವಂಗಾ ಇಲ್ಲಿಯವರೆಗೆ ಅನೇಕ ಬಾರಿ ನಿಖರವಾದ ಭವಿಷ್ಯ ನುಡಿದಿದ್ದಾರೆ. https://ainlivenews.com/these-three-got-a-great-offer-entry-into-a-new-show/ ಬಾಲ್ಕನ್ ಪ್ರದೇಶದ ನಾಸ್ಟ್ರಡಾಮಸ್ ಎಂದು ಕರೆಯಲ್ಪಡುವ ಬಾಬಾ ವಂಗಾ ನುಡಿದ ಭವಿಷ್ಯವಾಣಿಗಳಲ್ಲಿ ಶೇ 85ರಷ್ಟು ಭವಿಷ್ಯವಾಣಿ ನಿಜವಾಗಿದೆ. ಚರ್ನೋಬಿಲ್ ದುರಂತ, ರಾಜಕುಮಾರಿ ಡಯಾನಾಳ ಮರಣ ಮತ್ತು ಸೋವಿಯತ್ ಒಕ್ಕೂಟದ ವಿಸರ್ಜನೆ ಬಗ್ಗೆ ಬಾಬಾ ವಂಗಾ ನುಡಿದ ಭವಿಷ್ಯ ನಿಜವಾಗಿತ್ತು. 1996ರಲ್ಲಿ ಬಾಬಾ ವಂಗಾ ಸಾವಿಗೀಡಾಗಿದ್ದರೂ ಆಕೆ ನುಡಿದ ಭವಿಷ್ಯವಾಣಿಗಳು ನಿಜವಾಗುತ್ತವೆ ಎಂದು ಬಹುತೇಕ ಜನರು ಈಗಲೂ ನಂಬುತ್ತಿದ್ದಾರೆ. ಬಾಬಾ ವಂಗಾ ಅವರ ಮುಂದಿನ ಭವಿಷ್ಯವಾಣಿ ಜಗತ್ತಿಗೆ ಕೆಟ್ಟದ್ದು ಸಂಭವಿಸುತ್ತದೆ ಎಂಬುದರ ಬಗ್ಗೆಯಾಗಿದೆ. 1911 ರಲ್ಲಿ ಜನಿಸಿದಳು, ಮತ್ತು 12 ವರ್ಷಗಳ ಸಾಮಾನ್ಯ ಮನುಷ್ಯನ ಜೀವನವನ್ನು ನಡೆಸಿದ ನಂತರ, ಅವಳು ಪ್ರವಾದಿಯಾದಳು. ಹಾಗೆಯೇ ಅವರು 1996 ರಲ್ಲಿ ನಿಧನರಾದರು. ಆದರೆ ಜನರು ಅವರ ಭವಿಷ್ಯವಾಣಿಗಳು ನಿಜವಾಗುವುದನ್ನು ನೋಡಿದರು. ಮರಣದ ನಂತರ ಇದು ಹೇಗೆ ಸಾಧ್ಯ? ಬಾಬಾ ವಂಗಾ ಅವರ ಭವಿಷ್ಯವಾಣಿಗಳನ್ನು ಬಿಚ್ಚಿಡಲು ವಿವಿಧ ಗುಂಪುಗಳು ಕೆಲಸ ಮಾಡುತ್ತವೆ.…
ಬೆಂಗಳೂರು:- ಕರ್ನಾಟಕದಲ್ಲಿ ಕಳೆದ 1 ತಿಂಗಳಿಂದ ಹೊಸ ಡಿಎಲ್, ಆರ್‌ಸಿ ಸ್ಮಾರ್ಟ್ ಕಾರ್ಡ್ ಸಿಗುತ್ತಿಲ್ಲ. ಇದೇ ವಿಚಾರವಾಗಿ ಇಂದು ಸಾರಿಗೆ ಸಚಿವರನ್ನು ಮಾಧ್ಯಮದವರು ಪ್ರಶ್ನೆ ಮಾಡಿದರು. https://ainlivenews.com/child-laborers-right-hand-rubbed-by-punching-machine-the-owners-fled/ ಇದಕ್ಕೆ ನಗರದಲ್ಲಿ ಉತ್ತರಿಸಿದ ಸಚಿವರು, ಡಿಎಲ್ ಹಾಗೂ ಆರ್‌ಸಿ ಸ್ಮಾರ್ಟ್ ಕಾರ್ಡ್‌ಗಳನ್ನು ರವಾನಿಸುವಲ್ಲಿ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಡಿಎಲ್ ಹಾಗೂ ಆರ್‌ಸಿ ಸ್ಮಾರ್ಟ್ ಕಾರ್ಡ್‌ಗಳ ಪೂರೈಕೆ ಗುತ್ತಿಗೆಯನ್ನು ಪಡೆದಿದ್ದ ರೋಸ್‌ಮೆರ್ಟಾ ಕಂಪನಿ ಟೆಂಡರ್ ಮುಕ್ತಾಯವಾಗಿದೆ. ಹೀಗಾಗಿ, ಸ್ಮಾರ್ಟ್ ಕಾರ್ಡ್‌ಗಳ ಪೂರೈಕೆಗಾಗಿ ಹೊಸ ಟೆಂಡರ್ ಆಹ್ವಾನಿಸಿದ್ದೇವೆ. ಪ್ರತಿದಿನ 20 ಸಾವಿರ ಡಿಎಲ್ ಕಾರ್ಡ್‌ಗಳು ಹೊಸದಾಗಿ ಬರ್ತಿದ್ದು, ಪೇಡಿಂಗ್ ಉಳಿಯುತ್ತಿವೆ. 15 ದಿನದಲ್ಲಿ ಈ ಸಮಸ್ಯೆ ಬಗೆಹರಿಸಲಾಗುವುದು ಎಂದರು. ಇನ್ನೂ ರಾಜ್ಯದಲ್ಲಿ ಹೊಸ ವಾಹನಗಳನ್ನು ಖರೀದಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದರೆ, ಕಳೆದ ಒಂದೆರಡು ತಿಂಗಳಿನಿಂದ ಹೊಸ ವಾಹನ ಖರೀದಿಸುವವರಿಗೆ ಆರ್‌ಟಿಒ ಶಾಕ್ ನೀಡಿದೆ. ಹೊಸ ವಾಹನದಲ್ಲಿ ಜಾಲಿ ರೈಡ್ ಮಾಡಬೇಕು ಎನ್ನುವವರಿಗೆ ಕಳೆದ ಒಂದೆರಡು ತಿಂಗಳಿಂದ ಡಿಎಲ್, ಆರ್‌ಸಿ ಬುಕ್ಕೇ ಸಿಗ್ತಿಲ್ಲ. ಹೊಸ…
ಆನೇಕಲ್:- ಬೆಂಗಳೂರು ಹೊರವಲಯದ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿರುವ ಸಾಯಿ ಪ್ಯಾಕೇಜಿಂಗ್ ಕಾರ್ಖಾನೆಯಲ್ಲಿ ಅವಘಡ ಒಂದು ಸಂಭವಿಸಿದೆ. ಕೆಲಸ ಮಾಡುತ್ತಿದ್ದ ವೇಳೆ ಬಾಲ ಕಾರ್ಮಿಕನ ಬಲಗೈ ನಜ್ಜುಗುಜ್ಜಾಗಿದೆ. ಘಟನೆ ಬಳಿಕ ಕಾರ್ಖಾನೆ ಮಾಲೀಕರು ಎಸ್ಕೇಪ್ ಆಗಿದ್ದಾರೆ. https://ainlivenews.com/flag-hoisting-by-minister-k-h-muniyappa-at-devanahalli-government-ground/ ಗಂಭೀರವಾಗಿ ಗಾಯಗೊಂಡ ಬಾಲ ಕಾರ್ಮಿಕನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 17 ವರ್ಷದ ಬಾಲಕಾರ್ಮಿಕನನ್ನು ಅಸ್ಸಾಂ ಮೂಲದವ ಎನ್ನಲಾಗಿದೆ. ಕಳೆದ 18ನೇ ತಾರೀಖು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪಂಚಿಂಗ್ ಮಷಿನ್ ನಲ್ಲಿ ಕೈ ಸಿಲುಕಿದ ಹಿನ್ನೆಲೆ ಬಲಗೈ ಸಂಪೂರ್ಣ ನಜ್ಜುಗುಜ್ಜಾಗಿದೆ. ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಇನ್ನೂ ಘಟನೆ ಬಳಿಕ ಕಂಪನಿ ಮಾಲೀಕರಾದ ಹೇಮಂತ್ ಅಗರ್ವಾಲ್ ಮತ್ತು ಪ್ರೀತಿ ಎಂಬುವವರು ಕೇವಲ 30 ಸಾವಿರ ಆಸ್ಪತ್ರೆಗೆ ದಾಖಲಿಸಿ ಎಸ್ಕೇಪ್ ಆಗಿದ್ದಾರೆ. ಇನ್ನೂ ಈ ಬಾಲಕನಿಗೆ ಸರ್ಜರಿ ಮಾಡದಿದ್ದರೆ ಪೂರ್ಣ ಕೈ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ.
ದೇವನಹಳ್ಳಿ:- 76ನೇ ಗಣರಾಜ್ಯೋತ್ಸವ ದಿನಾಚರಣೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಸರ್ಕಾರಿ ಮೈದಾನದಲ್ಲಿ ಅದ್ಧೂರಿಯಾಗಿ ನಡೆದಿದೆ. https://ainlivenews.com/bajpes-businessman-received-a-threatening-call-from-an-underworld-criminal/ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಧ್ವಜಾರೋಹಣ ಮಾಡಿಲಾಯ್ತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಸನ್ಮಾನಿಸಿ ಗೌರವಿಸಲಾಯ್ತು. ಕಾರ್ಯಕ್ರಮದಲ್ಲಿ ಪ್ರಭಾರ ಜಿಲ್ಲಾಧಿಕಾರಿಗಳಾದ ಅನುರಾಧ, ಎಸ್.ಪಿ. ಸಿ.ಕೆ.ಬಾಬಾ ಮತ್ತಿತರ ಗಣ್ಯರು ಭಾಗವಹಿಸಿದ್ರು.
ಸಾಮಾನ್ಯವಾಗಿ ಎಲ್ಲರಿಗೂ ಒಂದಲ್ಲಾ ಒಂದು ಕಾರಣದಿಂದ ಹೋಟೆಲ್ನಲ್ಲಿ ಉಳಿಯುವ ಸಂದರ್ಭ ಬಂದೇ ಬರುತ್ತದೆ. ಎಲ್ಲಾದರೂ ಟ್ರಿಪ್ಗೆ ಹೋಗುವಾಗ, ಒಂದು ದಿನ ಔಟಿಂಗ್ ಹೋಗಲು ಪ್ಲ್ಯಾನ್ ಮಾಡಿದ್ದರೆ ನೀವು ಹೋಟೆಲ್ನಲ್ಲಿ ಉಳಿದುಕೊಳ್ಳುತ್ತೀರಿ, ಹಾಗೆ ನೀವು ಹೋಟೆಲ್ಗೆ ಹೋದಾಗ ರೂಂನಲ್ಲಿ ಗಮನಿಸಬೇಕಾದ ಕೆಲವು ವಿಷಯಗಳ ಕುರಿತು ನಾವಿಲ್ಲಿ ಮಾಹಿತಿ ನೀಡುತ್ತಿದ್ದೇವೆ. https://ainlivenews.com/should-you-not-apply-aloe-vera-gel-to-your-head-in-winter-stop-the-confusion-and-know-the-answer/ ನೀವು ಹೋಟೆಲ್ಗೆ ಹೋದರೆ ಮೊದಲು ಬೆಡ್, ಬೆಡ್ಶೀಟ್ ಸರಿ ಇದೆಯೇ, ಬಾತ್ರೂಂ ನೀಟ್ ಆಗಿದೆಯೇ, ಕೋಣೆಯ ಡೋರ್ಗಳ ಬಗ್ಗೆ ಯೋಚನೆ ಮಾಡ್ತೀರಿ ಆದರೆ ಇವೆಲ್ಲವನ್ನೂ ಹೊರತುಪಡಿಸಿ ನೀವು ಸೂಕ್ಷ್ಮವಾಗಿ ಗಮನಿಸಬೇಕಾದ ಕೆಲವು ವಸ್ತುಗಳಿವೆ ಇತ್ತೀಚೆಗೆ ಲಾಡ್ಜ್, ಹೋಟೆಲ್‌ಗಳಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿರೋ ಸುದ್ದಿಯನ್ನು ನಾವೆಲ್ಲಾ ನೋಡಿರುತ್ತೇವೆ. ಈ ಬಗ್ಗೆ ಹಲವಾರು ವಿಡಿಯೋಗಳು, ಫೋಟೋಗಳು ವೈರಲ್ ಆಗಿತ್ತು. ಇದೀಗ ಇಂತಹದ್ದೇ ಬೆಚ್ಚಿಬೀಳಿಸುವ ಸುದ್ದಿಯೊಂದು ವೈರಲ್ ಆಗುತ್ತಿದೆ ನೋಡಿ. ಗಗನಸಖಿಯೊಬ್ಬರುಲಾಡ್ಜ್ ಎಸಿ ಬಗ್ಗೆ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ಗಗನಸಖಿಯೊಬ್ಬರು ಇದೀಗ ಲಾಡ್ಜ್‌ವೊಂದರ ಸೀಕ್ರೆಟ್ ಅನ್ನು ರಿವೀಲ್ ಮಾಡಿದ್ದಾರೆ. ಇದರಲ್ಲಿ ಲಾಡ್ಜ್, ಹೋಟೆಲ್‌ಗಳಿಗೆ ಹೋಗಿ ಎಸಿ ಆನ್…
ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿರತೆ ಕಾಟದಿಂದ ಜನರು ಆತಂಕಗೊಂಡಿದ್ದಾರೆ. https://ainlivenews.com/accused-arrested-for-raping-a-married-hindu-woman-and-attempting-to-convert-her-to-islam/ ಪದೇ ಪದೇ ಚಿರತೆ ಪ್ರತ್ಯಕ್ಷದಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಕಳೆದ ದಿನಗಳ ಹಿಂದೆಯಷ್ಟೇ ನಾಯಿಗಳ ಮೇಲೆ ಚಿರತೆ ದಾಳಿ ನಡೆಸಿತ್ತು.ಈಗ ಚಿರತೆಯ ಓಡಾಟ ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರು ಓಡಾಡಲು ಭಯ ಪಡುತ್ತಿದ್ದಾರೆ. ಯಲಹಂಕ ಸುತ್ತಮುತ್ತಲಿನ ಶಿವಕೋಟೆ, ಮಾವಳಿಪುರ, ಕಾಳೇನಹಳ್ಳಿ ಲಿಂಗನಹಳ್ಳಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಯಲಹಂಕ ತಾಲೂಕಿನ ಹೆಸರಘಟ್ಟ ಸುತ್ತಮುತ್ತ ಚಿರತೆಗಳ ಹಿಂಡು ವಾಸವಾಗಿದೆ ಅಂತ ಗ್ರಾಮಸ್ಥರು ಆತಂಕ ಹೊರ ಹಾಕುತ್ತಿದ್ದಾರೆ. ಕೆರೆಗಳಲ್ಲಿ ಜಾಲಿ ಮರಗಳ ಮರೆಯಲ್ಲಿ ಚರತೆಗಳು ವಾಸಿಸುತ್ತಿವೆ ಅನ್ನೋ ಶಂಕೆ ವ್ಯಕ್ತವಾಗಿದೆ. ಮುಂಜಾನೆ ವೇಳೆ ಕುರಿ ಶೆಡ್ ಹಾಗೂ ನಾಯಿಗಳ ಮೇಲೆ ಚಿರತೆ ದಾಳಿ ಮಾಡಿತ್ತಿದೆ ಅಂತ ಗ್ರಾಮಸ್ಥರು ದೂರು ಕೊಟ್ಟಿದ್ದಾರೆ. ಬೆಂಗಳೂರು ಉತ್ತರ ಯಲಹಂಕ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಆತಂಕ ಗ್ರಾಮಸ್ಥರಲ್ಲಿ ಕಾಡುತ್ತಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಹಿಂದೂ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ, ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ. https://ainlivenews.com/ipl-2025-this-is-the-next-captain-of-rcb-fans-are-surprised/ ಇಮ್ರಾನ್ ಬಂಧಿತ ಆರೋಪಿ. ವಿವಾಹಿತ ಮಹಿಳೆ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದ. ಅನ್ಯ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದ. ಆರೋಪಿಯು ಜನವರಿ 9 ರಂದು ತನ್ನೊಂದಿಗೆ ಬರಲು ಮಹಿಳೆಗೆ ಆಮಿಷವೊಡ್ಡಿದ್ದ, ಪತಿಯ ದೂರಿನ ಮೇರೆಗೆ ಪೊಲೀಸರು ಕ್ಷಿಪ್ರ ಕ್ರಮ ಕೈಗೊಂಡು ಇಮ್ರಾನ್‌ನನ್ನು ಬಂಧಿಸಿದ್ದಾರೆ. ಮಹಿಳೆಯನ್ನು ರಕ್ಷಿಸಲಾಗಿದೆ. ಸಂತ್ರಸ್ತೆಯ ಪತಿ ನೀಡಿದ ದೂರಿನ ಆಧಾರದ ಮೇಲೆ ಇಮ್ರಾನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ . ಪತಿ ತನ್ನ ದೂರಿನಲ್ಲಿ ಇಮ್ರಾನ್ ತನ್ನ ಹೆಂಡತಿಯನ್ನು ಮನೆಯಿಂದ ಹೊರಹೋಗುವಂತೆ ಆಮಿಷವೊಡ್ಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಜನವರಿ 24 ರಂದು ಸೆಕ್ಷನ್ 87 ಮತ್ತು ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಖೋಡಾ ನಿವಾಸಿಯಾಗಿರುವ ಇಮ್ರಾನ್ ತನ್ನ ಹೆಂಡತಿಗೆ ತಮ್ಮ…