Author: Author AIN

ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು ಹಲವು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯ ಕಾರಣಕ್ಕೆ ವಿದ್ಯಾರ್ಥಿಯೋರ್ವ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಡೆಂಗ್ಯೂಯಿಂದ ಬಳಲುತ್ತಿದ್ದ 18 ವರ್ಷದ ವಿದ್ಯಾರ್ಥಿಯೊಬ್ಬನನ್ನು ಢಾಕಾ ರಾಷ್ಟ್ರೀಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದ್ದು ಆತ ನವೆಂಬರ್ 18ರಂದು ಸಾವನ್ನಪ್ಪಿದ್ದ. ವಿದ್ಯಾರ್ಥಿಯ ಸಾವಿಗೆ ಆಸ್ಪತ್ರೆಯಲ್ಲಿ ನೀಡಿದ ತಪ್ಪು ಚಿಕಿತ್ಸೆ ಕಾರಣ ಎಂದು ಆತನ ಸ್ನೇಹಿತರು  ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು. ಆಸ್ಪತ್ರೆಯ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕಳೆದ 3 ದಿನಗಳಿಂದ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಢಾಕಾದ ಶಾಹಿದ್ ಸುಹ್ರವರ್ದಿ ಸರ್ಕಾರಿ ಕಾಲೇಜಿಗೆ ನುಗ್ಗಿದ ವಿದ್ಯಾರ್ಥಿಗಳ ಗುಂಪು 6 ವಾಹನಗಳನ್ನು ಜಖಂಗೊಳಿಸಿ ದಾಂಧಲೆ ನಡೆಸಿದೆ. ಬಳಿಕ ಢಾಕಾ ವೈದ್ಯಕೀಯ ಕಾಲೇಜು ಹಾಗೂ ಇತರ ಕಾಲೇಜಿಗೆ ನುಗ್ಗಲು ವಿದ್ಯಾರ್ಥಿಗಳ ಗುಂಪು ಯತ್ನಿಸಿದಾಗ ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ಘರ್ಷಣೆ ನಡೆದು 30 ಮಂದಿ ಗಾಯಗೊಂಡಿದ್ದಾರೆ. ರವಿವಾರ ಬೆಳಿಗ್ಗೆ…

Read More

ಈಜಿಪ್ಟ್ ನಗರ ಮರ್ಸ ಅಲಾಮ್ ಬಳಿ ಕೆಂಪು ಸಮುದ್ರದ ಕರಾವಳಿಯಲ್ಲಿ 31 ಪ್ರವಾಸಿಗರಿದ್ದ ದೋಣಿಯೊಂದು ಮುಳುಗಿದ್ದು 16 ಪ್ರವಾಸಿಗರನ್ನು ರಕ್ಷಿಸಿರುವುದಾಗಿ ಈಜಿಪ್ಟ್ ಅಧಿಕಾರಿಗಳು ತಿಳಿಸಿದ್ದಾರೆ. ದೋಣಿಯಲ್ಲಿ 31 ಪ್ರವಾಸಿಗರು, 14 ಸಿಬ್ಬಂದಿಗಳ ಸಹಿತ 45 ಮಂದಿಯಿದ್ದು ಉಳಿದ 29 ಮಂದಿಯ ಶೋಧ ಕಾರ್ಯಕ್ಕೆ ಹೆಲಿಕಾಪ್ಟರ್ ಬಳಸಲಾಗಿದೆ. ಈಜಿಪ್ಟ್‍ನ ಸೇನೆ ಮತ್ತು ನೌಕಾಪಡೆಯೂ ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Read More

ಮಡಗಾಸ್ಕರ್ ಕರಾವಳಿ ಬಳಿ ವಲಸಿಗರ ಎರಡು ದೋಣಿಗಳು ಮುಳುಗಿ ಕನಿಷ್ಟ 22 ವಲಸಿಗರು ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸೊಮಾಲಿಯಾದಿಂದ ಹಿಂದು ಮಹಾಸಾಗರದ ಮಯೊಟ್ಟೆ ಪ್ರದೇಶಕ್ಕೆ ತೆರಳುತ್ತಿದ್ದ ದೋಣಿಗಳು ಮುಳುಗಿದ್ದು ಕನಿಷ್ಟ 22 ಸೊಮಾಲಿಯಾ ಪ್ರಜೆಗಳು ಸಾವನ್ನಪ್ಪಿದ್ದಾರೆ ಎಂದು ಸೊಮಾಲಿಯಾದ ಮಾಹಿತಿ ಸಚಿವ ದೌದ್ ಅವೀಸ್ ಹೇಳಿದ್ದಾರೆ. ಮಡಗಾಸ್ಕರ್ ಕರಾವಳಿಯ ನೋಸಿ ಇರಾಂಜ ನಗರದ ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದವರು ಮುಳುಗುತ್ತಿದ್ದ ದೋಣಿಯನ್ನು ಪತ್ತೆಹಚ್ಚಿದ್ದು 15 ಮಹಿಳೆಯರ ಸಹಿತ 25 ವಲಸಿಗರನ್ನು ರಕ್ಷಿಸಿದ್ದಾರೆ. ಆದರೆ 7 ವಲಸಿಗರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮಡಗಾಸ್ಕರ್ ನ ಕರಾವಳಿಯಲ್ಲಿ ಮುಳುಗಿದ್ದ ಮತ್ತೊಂದು ದೋಣಿಯನ್ನು ಕರಾವಳಿ ಕಾವಲು ಪಡೆ ಪತ್ತೆಹಚ್ಚಿದ್ದು 23 ವಲಸಿಗರನ್ನು ರಕ್ಷಿಸಲಾಗಿದೆ. ಆದರೆ 15 ವಲಸಿಗರು ಸಾವನ್ನಪ್ಪಿದ್ದಾರೆ ಎಂದು ಬಂದರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುಳುಗಡೆಯಾಗಿರುವ ಎರಡು ದೋಣಿಗಳಲ್ಲಿ ಒಟ್ಟು 70 ಸೊಮಾಲಿಯಾ ಪ್ರಜೆಗಳಿದ್ದರು. ಅವರಲ್ಲಿ 22 ಮಂದಿ ಸಾವನ್ನಪ್ಪಿದ್ದಾರೆ ಎಂದು ಸೊಮಾಲಿಯಾ ಸರಕಾರದ ಮೂಲಗಳು ತಿಳಿಸಿವೆ.

Read More

ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ವಿರುದ್ಧ 2020ರ ಚುನಾವಣಾ ಸೋಲಿನ ಹಿನ್ನೆಲೆಯಲ್ಲಿ ಚುನಾವಣೆ ಬಳಿಕದ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣವನ್ನು ಅಮೆರಿಕ ನ್ಯಾಯಾಲಯ ವಜಾಗೊಳಿಸಿದೆ. ಟ್ರಂಪ್ ವಿರುದ್ಧ ಈ ಸಂಬಂಧ ಎರಡು ಪ್ರಕರಣಗಳ ತನಿಖೆ ಕೈಬಿಡಬೇಕು ಎಂದು ಕೋರಿ ಅಭಿಯೋಜಕರು ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. ಹಾಲಿ ಅಧ್ಯಕ್ಷರ ವಿರುದ್ಧ ತನಿಖೆ ನಡೆಸುವುದನ್ನು ನಿಷೇಧಿಸುವುದು ನ್ಯಾಯಾಂಗ ಇಲಾಖೆಯ ನೀತಿಯಾಗಿರುವುದರಿಂದ ಪ್ರಕರಣ ಕೈಬಿಡುವಂತೆ ಮನವಿ ಮಾಡಲಾಗಿತ್ತು. 2020ರ ಚುನಾವಣಾ ಸೋಲಿನ ಹಿನ್ನೆಲೆಯಲ್ಲಿ 2021ರ ಜನವರಿ 6ರಂದು ಟ್ರಂಪ್ ಬೆಂಬಲಿಗರು ಅಮೆರಿಕದ ಸಂಸತ್ ಭವನದ ಮೇಲೆ ನಡೆಸಿದ ದಾಳಿಗೆ ಟ್ರಂಪ್ ಕುಮ್ಮಕ್ಕು ನೀಡಿದ್ದರು ಎಂಬ ಆರೋಪ ಮಾಡಲಾಗಿತ್ತು. ಎರಡೂ ಪ್ರಕರಣಗಳನ್ನು ನೋಡಿಕೊಳ್ಳುತ್ತಿದ್ದ ವಿಶೇಷ ಅಭಿಯೋಜಕ ಜ್ಯಾಕ್ ಸ್ಮಿತ್ ಅವರು, ಚುನಾವಣೆ ಸಂಬಂಧಿತ ಪ್ರಕರಣಗಳನ್ನು ವಜಾಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. ಜತೆಗೆ 2021ರಲ್ಲಿ ಅಧಿಕಾರದಿಂದ ಕೆಳಗಿಳಿಯುವ ಸಂದರ್ಭದಲ್ಲಿ ವರ್ಗೀಕೃತ ದಾಖಲೆಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ ಎಂಬ…

Read More

‘ಕೋಲು ಮಂಡೆ ಜಂಗಮದೇವ’ ಖ್ಯಾತಿಯ ಕಂಸಾಳೆ ಖ್ಯಾತ ಕಲಾವಿದ, ಮೈಸೂರಿನ ಬಂಡಿಕೇರಿಯ ನಿವಾಸಿ ಕುಮಾರಸ್ವಾಮಿ ಕೊನೆಯುಸಿರೆಳೆದಿದ್ದಾರೆ. ಇಂದು ಬೆಳಗ್ಗೆ ಬೆಳಗ್ಗೆ 11 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಚಿತಗಾರದಲ್ಲಿ ಇವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇನ್ನು ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಮೈಸೂರಿನ ಹಿರಿಯ ಜಾನಪದ ಕಲಾವಿದ ಕುಮಾರಸ್ವಾಮಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. ತಮ್ಮ ತಂದೆ ಕಂಸಾಳೆ ಮಹಾದೇವಯ್ಯ ಅವರಂತೆ ಕಲಾಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಜಾನಪದ ಸೊಬಗನ್ನು ಕನ್ನಡಿಗರಿಗೆ ಉಣಬಡಿಸಿದ ಕುಮಾರಸ್ವಾಮಿ ಅವರ ಕಲಾಸೇವೆ ಅಜರಾಮರ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬವರ್ಗ ಮತ್ತು ಬಂಧುಮಿತ್ರರಿಗೆ ನನ್ನ ಸಂತಾಪಗಳು ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. 1951ರಲ್ಲಿ ವರಕೋಡು ಸಮೀಪದ ಬಡಗಲಹುಂಡಿಯಲ್ಲಿ ಜನಿಸಿದ ಕುಮಾರಸ್ವಾಮಿ ಅವರು ತಂದೆ ಕಂಸಾಳೆ ಮಹಾದೇವಯ್ಯ ಅವರಿಂದ ಕಂಸಾಳೆಯನ್ನು ಕಲಿತಿದ್ದರು. ವಿದ್ಯಾಭ್ಯಾಸವನ್ನು 7ನೇ ತರಗತಿಗೆ ನಿಲ್ಲಿಸಿ ತಂದೆಯೊಂದಿಗೆ ಪ್ರದರ್ಶನಗಳನ್ನು ನೀಡಲಾರಂಭಿಸಿದರು.ಬಳಿಕ ಅದರಲ್ಲಿಯೇ ಮುಂದುವರಿದರು.…

Read More

ರಶ್ಮಿಕಾ ಮಂದಣ್ಣ, ರಣಬೀರ್​ ಕಪೂರ್​, ಬಾಬಿ ಡಿಯೋಲ್​ ಮುಂತಾದವರು ನಟಿಸಿದ ‘ಅನಿಮಲ್’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಚಿತ್ರದಲ್ಲಿ ಸಾಕಷ್ಟು ಆಕ್ಷೇಪಾರ್ಹ ದೃಶ್ಯಗಳು ಇದ್ದರು ಕಲೆಕ್ಷನ್ ನಲ್ಲಿ ಮಾತ್ರ ಸಿನಿಮಾ ಹಿಂದೇಟು ಹಾಕಿರಲಿಲ್ಲ. ಸುಮಾರು 900 ಕೋಟಿ ಕಲೆಕ್ಷನ್ ಮಾಡಿದ್ದ ಅನಿಮಲ್ ಸಿನಿಮಾದ ವಿರುದ್ಧ ಇದೀಗ ಗೀತರಚನಕಾರ ಜಾವೇದ್​ ಅಖ್ತರ್​ ಗುಡುಗಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅನಿಮಲ್ ಸಿನಿಮಾದ ಬಗ್ಗೆ ಮಾತನಾಡಿರುವ ಜಾವೇದ್ ಅಖ್ತರ್,  ‘ಅನಿಮಲ್’ ರೀತಿಯ ಕಥೆ ಇರುವ ಸಿನಿಮಾವನ್ನು ಮಾಡುವವರನ್ನು ವಿಕೃತ ಮನಸ್ಸಿನವರು ಎಂದಿದ್ದಾರೆ. ಪ್ರೇಕ್ಷಕರು ಅಂತಹ ಸಿನಿಮಾವನ್ನು ನೋಡಿ ಗೆಲ್ಲಿಸುವುದು ಅದಕ್ಕಿಂತಲೂ ದೊಡ್ಡ ದುರಂತ ಎಂದು ಅಭಿಪ್ರಾಯಪಟ್ಟಿದ್ದಾರೆ. ‘12ರಿಂದ 15 ಜನರು ಸೇರಿಕೊಂಡು ಕೆಟ್ಟ ಮೌಲ್ಯಗಳು ಇರುವ ಸಿನಿಮಾವನ್ನು ಮಾಡಿದರೆ ಅಥವಾ ಅಶ್ಲೀಲವಾದ ಒಂದು ಹಾಡನ್ನು ಮಾಡಿದರೆ ಅದು ದೊಡ್ಡ ಸಮಸ್ಯೆ ಅಲ್ಲ. 140 ಕೋಟಿ ಜನರಲ್ಲಿ 10 ಅಥವಾ 12 ಜನರು ವಿಕೃತ ಮನಸ್ಸಿನವರಾದರೆ ಪರವಾಗಿಲ್ಲ. ಆದರೆ ಅಂಥ ಸಿನಿಮಾ ಸೂಪರ್​ ಹಿಟ್​…

Read More

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸದ್ಯ ಟಾಲಿವುಡ್ ನ ಟಾಪ್ ಹೀರೋ. ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡಲು ಖ್ಯಾತ ನಿರ್ದೇಶಕರೇ ಕ್ಯೂ ನಲ್ಲಿ ನಿಂತಿರ್ತಾರೆ. ಕರ್ನಾಟಕದ ಜೊತೆಗೆ ಭಾರತದಾದ್ಯಂತೆ. ಜೊತೆಗೆ ವಿದೇಶದಲ್ಲೂ ಅಲ್ಲು ಅರ್ಜುನ್ ಗೆ ಅಭಿಮಾನಿಗಳಿದ್ದಾರೆ. ಆದ್ರೆ ಆರಂಭದಲ್ಲಿ ಅವರಿಗೆ ಆಫರ್​ಗಳೇ ಬರುತ್ತಿರಲಿಲ್ಲವಂತೆ. ಈ ಬಗ್ಗೆ ಅಲ್ಲು ಅರ್ಜುನ್ ಓಪನ್ ಆಗಿ ಹೇಳಿಕೊಂಡಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಸಹಾಯಕ್ಕೆ ಬಂದಿದ್ದು ಸುಕುಮಾರ್ ಎಂಬುದನ್ನು ಅಲ್ಲು ಅರ್ಜುನ್ ಹೇಳಿದ್ದಾರೆ. ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಮೊದಲ ‘ಆರ್ಯ’ ಸಿನಿಮಾದಲ್ಲಿ ಒಂದಾಗಿದ್ದರು. ಅಲ್ಲು ಅರ್ಜುನ್ ಗೆ ಇದು 2ನೇ ಸಿನಿಮಾವಾದರೇ, ಸುಕುಮಾರ್​ಗೆ ಮೊದಲ ಸಿನಿಮಾ ಆಗಿತ್ತು. 2004ರಲ್ಲಿ ತೆರೆಕಂಡ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಳಿಕೆ 2009ರಲ್ಲಿ ‘ಆರ್ಯ 2’ ಚಿತ್ರಕ್ಕಾಗಿ ಒಂದಾದರು. 2021ರಲ್ಲಿ ರಿಲೀಸ್ ಆದ ‘ಪುಷ್ಪ’ ಚಿತ್ರದ ಬಳಿಕ ಸದ್ಯ ರಿಲೀಸ್ ಆಗುತ್ತಿರುವ ಪುಷ್ಪ 2ಗೂ ಒಂದಾಗಿದ್ದಾರೆ. ಈ ಮೂಲಕ ನಾಲ್ಕನೇ ಬಾರಿಗೆ ಅಲ್ಲು ಅರ್ಜುನ್. ಸುಕುಮಾರನ್…

Read More

 ಬಿಪಿಎಲ್ ಕಾರ್ಡ್ ರದ್ದಾದ ಅರ್ಹ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಬಿಪಿಎಲ್ ಕಾರ್ಡ್ ಸಮಸ್ಯೆ ಪರಿಹಾರಕ್ಕೆ ಆಹಾರ ಇಲಾಖೆ ಅಧಿಕಾರಿಗಳಿಗೆ ಹೊಸ ಡೆಡ್ ಲೈನ್ ನೀಡಲಾಗಿದ್ದು, ಇದೇ ನವೆಂಬರ್ 28ರವರೆಗೆ ಸರಿಪಡಿಸಲು ಸಮಯಾವಕಾಶವನ್ನು ಆಹಾರ ಸಚಿವ ಮುನಿಯಪ್ಪ ನೀಡಿದ್ದಾರೆ. ಅರ್ಹರಾಗಿದ್ದು ಬಿಪಿಎಲ್ ಕಾರ್ಡ್ ವಂಚಿತರಾದವರು ಚಿಂತೆ ಮಾಡಬೇಕಾಗಿಲ್ಲ. ಇನ್ನೂ 3 ದಿನದೊಳಗಡೆ ಪಡಿತರ ಪಡೆಯಬಹುದು ಎಂದು ಆಹಾರ ಸಚಿವರು ಹೇಳಿದ್ದಾರೆ. ಪರಿಶೀಲನೆ ಮಾಡಿ ಅರ್ಹರಿಗೆ ಬಿಪಿಎಲ್ ಕಾರ್ಡ್ ವಾಪಸ್ ಆಗಲಿದೆ. ನವೆಂಬರ್ 28ರೊಳಗೆ ಸಮಸ್ಯೆಗೆ ಪರಿಹಾರ ಕೊಡಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುನಿಯಪ್ಪ ಹೇಳಿದ್ದಾರೆ ಬಿಪಿಎಲ್ ಕಾರ್ಡ್​ಗಳ ಗೊಂದಲ ನಿವಾರಣೆ ಆಗಿದೆ. ಒಂದು ವಾರದಲ್ಲಿ ಗೊಂದಲ ಪರಿಹರಿಸುವುದಾಗಿ ಹೇಳಿದ್ದೆ. ನವೆಂಬರ್ 28 ರ ನಂತ್ರ ಹಿಂದಿನಂತೆ ಬಿಪಿಎಲ್ ಕಾರ್ಡ್‌ನವ್ರು ಪಡಿತರ ಪಡೆಯಬಹುದು. ಬಿಪಿಎಲ್ ಕಾಡ್೯ ಪರಿಷ್ಕರಣೆಯಲ್ಲಿ ನಾವು ಕೇಂದ್ರ ಸರ್ಕಾರದ ಮಾನದಂಡಗಳು ಅನುಸರಿಸಿದ್ದೇವೆ ಹೊರತು ಯಾವುದೇ ಅವೈಜ್ಞಾನಿಕ ಕ್ರಮ ಅನುಸರಿಸಿಲ್ಲ ಎಂದಿದ್ದಾರೆ.

Read More

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು ಹೈಕೋರ್ಟ್​ನಲ್ಲಿ ನಡೆಯಲಿದೆ. ಮಧ್ಯಂತರ ಜಾಮೀನು ಪಡೆದ ಬಳಿಕ ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಚಿಕಿತ್ಸೆಗಾಗಿ ಈಗಾಗಲೇ ಆರು ವಾರಗಳ ಕಾಲ ಮಧ್ಯಂತರ ಜಾಮೀನು ಪಡೆದಿರುವ ದರ್ಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದರ್ಶನ್ ಜಾಮೀನು ಅರ್ಜಿಗೆ ಎಸ್​ಪಿಪಿ ಪ್ರಸನ್ನಕುಮಾರ್ ಅವರು ಆಕ್ಷೇಪಣೆ ಸಲ್ಲಿಸಿದ್ದಾರೆ. ದರ್ಶನ್​ಗೆ ನೀಡುತ್ತಿರುವ ಚಿಕಿತ್ಸೆ ಕುರಿತು ವೈದ್ಯಕೀಯ ವರದಿ ಸಲ್ಲಿಸಲಾಗಿದೆ. ವೈದ್ಯರ ವರದಿ ಆಧಾರಿಸಿ ಎಸ್​ಪಿಪಿ ಪ್ರತಿವಾದ ಮಂಡಿಸುವ ಸಾಧ್ಯತೆ ಇದ್ದು, ಚಿಕಿತ್ಸೆ ಹಾಗೂ ಆಪರೇಷನ್ ಸಂಬಂಧ ವೈದ್ಯರಿಂದ ವರದಿ ಸಲ್ಲಿಕೆಯಾಗಿದೆ. ಇಂದು ದರ್ಶನ್ ಸೇರಿ ಒಟ್ಟು 6 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ದರ್ಶನ್, ಪವಿತ್ರಾಗೌಡ, ನಾಗರಾಜ್, ಅನುಕುಮಾರ್ ಲಕ್ಷ್ಮಣ ಹಾಗೂ ಜಗದೀಶ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಇಂದು ನಡೆಯಲಿದ್ದು. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ಪೀಠದಲ್ಲಿ ವಿಚಾರಣೆ ನಡೆಯಲಿದೆ. ನಟ ದರ್ಶನ್ ಪರ ಇಂದು ಹಿರಿಯ ವಕೀಲ ಸಿ.ವಿ.ನಾಗೇಶ್ ಹೈಕೋರ್ಟ್​​ಗೆ ಹಾಜರಾಗಲಿದ್ದಾರೆ.…

Read More

ಕನ್ನಡ ಬಿಗ್ ಬಾಸ್ ಖ್ಯಾತಿಯ ನಟಿ ನಮ್ರತಾ ಗೌಡ ಸದ್ಯ ದುಬೈನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಅಲ್ಲಿನ ಸುಂದರ ಸ್ಥಳಗಳಿಗೆ ಭೇಟಿ ನೀಡಿರುವ ನಟಿ ಅಲ್ಲಿ ತೆಗೆದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿ ನಮೃತಾ ಗೌಡ ದೂರದ ದುಬೈಯಲ್ಲಿಯೇ ಸದ್ಯ ಸ್ನೇಹಿತೆಯ ಜೊತೆಗೆ ಜಾಲಿ ಟ್ರಿಪ್ ಹೊಡೆಯುತ್ತಿದ್ದಾರೆ. ಇಲ್ಲಿ ಮರಳುಗಾಡಿನ ಮೇಲೆ ಇನ್ನಿಲ್ಲದಂತೆ ಓಡಾಡಿದ್ದಾರೆ. ರಣಹದ್ದನ್ನ ಕೈಯಲ್ಲಿ ಹಿಡಿದು ಖುಷಿ ಪಟ್ಟಿದ್ದು ಅದರ ಜೊತೆಗೆ ಚಂದದ ಫೋಟೋ ತೆಗೆಸಿಕೊಂಡಿದ್ದಾರೆ. ದುಬೈಗೆ ಹೋದ್ರೆ ಪ್ರತಿಯೊಬ್ಬರು ಅಲ್ಲಿನ ಬುರ್ಜ್ ಖಲೀಫಾಗೆ ಭೇಟಿ ನೀಡ್ತಾರೆ. ಇದನ್ನ ನಮ್ರತಾ ಗೌಡ ಕೂಡ ಎಂಜಾಯ್ ಮಾಡಿದ್ದಾರೆ. ಸ್ನೇಹಿತರ ಜೊತೆಗೆ ಬುರ್ಜ್ ಖಲೀಫಾ ಮುಂದೆ ನಿಂತು ಮಸ್ತ್ ಫೋಸ್ ಕೊಟ್ಟಿದ್ದಾರೆ. ನಮ್ರತಾ ಗೌಡ ಇಲ್ಲಿ ಕಪ್ಪು ಬಣ್ಣದ ಡ್ರೆಸ್ ತೊಟ್ಟಿದ್ದು ಸಖತ್ತಾಗೆ ಕಾಣಿಸಿಕೊಂಡಿದ್ದಾರೆ. ಡ್ರೆಸ್‌ ನಲ್ಲಿ ಸಿಲ್ವರ್ ಕಲರ್ ಡಿಸೈನ್ ಇದ್ದು ಇದು ಇಡೀ ಡ್ರೆಸ್‌ಗೆ ಬೇರೆ ಮೆರಗು ತಂದುಕೊಟ್ಟಿದೆ. ಎಲ್ಲರೂ ಸೇರಿ ನಮ್ರತಾ ಗೌಡ ಬ್ಯೂಟಿಫುಲ್ ಆಗಿಯೇ ಕಾಣಿಸುತ್ತಿದ್ದಾರೆ.…

Read More