Author: Author AIN

ಶಿಗ್ಗಾಂವಿಯಲ್ಲಿ ಬಿಜೆಪಿ ಲೆಕ್ಕಾಚಾರ ಉಲ್ಟಾ ಹೊಡಿತಿದೆ. 11 ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದೆ.  ಬಿಜೆಪಿ ಭರತ್‌ ಬೊಮ್ಮಾಯಿಗೆ  55, 285  ಮತ ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ  68, 078ಗ ಪಡೆದಿದ್ದು,  12, 793 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ ಕಂಡಿದೆ.

Read More

ರಾಮನಗರ: ಚನ್ನಪಟ್ಟಣದಲ್ಲಿ ಮತ ಎಣಿಕೆಯಲ್ಲಿ ಕಾಂಗ್ರೆಸ್‌ ಭಾರೀ ಮುನ್ನಡೆ ಸಾಧಿಸುತ್ತಿದೆ. 9ನೇ ಸುತ್ತು ಮುಕ್ತಾಯವಾಗಿದ್ದು, ಹತ್ತನೇ ಸುತ್ತಿನಲ್ಲಿ ಕಾಂಗ್ರೆಸ್‌ ಆಭ್ಯರ್ಥಿ ಸಿಪಿ ಯೋಗೇಶ್ವರ್ 19000 ಮತಗಳ ಮುನ್ನಡೆ ಸಾಧಿಸಿದ್ದು, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಭಾರೀ ಹಿನ್ನಡೆಯಾಗಿದೆ. https://ainlivenews.com/three-days-of-rain-from-november-27-in-these-districts-of-karnataka/

Read More

ಬಳ್ಳಾರಿ: ಸಂಡೂರು‌ ವಿಧಾನಸಭೆ ಕ್ಷೇತ್ರದ 11 ನೇ ಸುತ್ತಿನ ಮತ ಎಣಿಕೆ ಪೂರ್ಣವಾಗಿದ್ದು, ಕಾಂಗ್ರೆಸ್ ‌ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 56,236 ಮತಗಳನ್ನು ಪಡೆದರೆ, ಬಿಜೆಪಿ 51,739 ಮತ ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ 4497 ಮತಳ ಅಂತರದಲ್ಲಿ‌ ಗೆಲುವಿನ ಕಡೆ ಹೆಜ್ಜೆ ಇಡುತ್ತಿದ್ದಾರೆ. https://ainlivenews.com/three-days-of-rain-from-november-27-in-these-districts-of-karnataka/ ಸಂಡೂರು ವಿಧಾನ ಸಭೆ ಕ್ಷೇತ್ರದ ‌ಮತ ಎಣಿಕೆ ನಡೆಯುತ್ತಿದ್ದು, ಇದರ ನಡುವೆ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಟೆಂಪಲ್ ರನ್ ನಡೆಸಿದರು. ಸಂಡೂರಿನಲ್ಲಿ ಆಂಜನೇಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ‌ ಭೇಟಿ ನೀಡಿ ದರ್ಶನ ಪಡೆದರು. ಬಳ್ಳಾರಿಯಲ್ಲಿನ ಕನಕ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

Read More

ರಾಮನಗರ: ಚನ್ನಪಟ್ಟಣ  ಕ್ಷೇತ್ರದಲ್ಲಿ ನೆಕ್‌ ಟು ನೆಕ್‌ ಫೈಟ್‌ ನಡೆಯುತ್ತಿದೆ. ತೀವ್ರಗತಿಯಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಎಂಟನೇ ಸುತ್ತಿನಲ್ಲಿ ಸಿಪಿ ಯೋಗೇಶ್ವರ್ ಗೆ ಭರ್ಜರಿ ಮುನ್ನಡೆಯಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ ಸಿಪಿ ಯೋಗೇಶ್ವರ್ 15,000 ಮತಗಳ ಅಂತರದಲ್ಲಿ ಭರ್ಜರಿ ಮುನ್ನಡೆ ಪಡೆದಿದೆ.

Read More

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ನಟ ದರ್ಶನ್‌ ಗೆ ಅನಾರೋಗ್ಯದ ಕಾರಣದಿಂದ ಆರು ವಾರಗಳ ಶರತ್ತು ಬದ್ಧ ಜಾಮೀನು ಮಂಜೂರು ಮಾಡಲಾಗಿದೆ. ಈಗಾಗಲೇ ಮೂರು ವಾರ ಕಳೆದಿದ್ದು ಇದುವರೆಗೂ ದರ್ಶನ್ ಗೆ ಶಸ್ತ್ರ ಚಿಕಿತ್ಸೆ ನಡೆದಿಲ್ಲ. ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿರುವ ದರ್ಶನ್ ಪರ ವಕೀಲರು ದರ್ಶನ್ ಇನ್ನೂ ಮಾನಸಿಕವಾಗಿ ಸಿದ್ಧವಾಗದ ಕಾರಣ ಶಸ್ತ್ರಚಿಕಿತ್ಸೆ ನಡೆಸಿಲ್ಲ ಎಂದಿದ್ದಾರೆ. ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಗೆ ಹೈಕೋರ್ಟ್ 6 ವಾರಗಳ ಜಾಮೀನು ನೀಡಿತ್ತು. ಜಾಮೀನು ನೀಡಿದರೂ ದರ್ಶನ್‌ ಅವರಿಗೆ ಇನ್ನೂ ಶಸ್ತ್ರಚಿಕಿತ್ಸೆ ನಡೆದಿಲ್ಲ. ಹೀಗಾಗಿ ಶಸ್ತ್ರ ಚಿಕಿತ್ಸೆ ಯಾಕೆ ನಡೆದಿಲ್ಲ ಎಂಬ ಪ್ರಶ್ನೆಗೆ ದರ್ಶನ್‌ ಪರ ವಕೀಲರು ಆರೋಗ್ಯಕ್ಕೆ ಸಂಬಂಧಿಸಿದ ವರದಿಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ದರ್ಶನ್‌ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡುವುದಕ್ಕೆ ತಯಾರಿ ಮಾಡಲಾಗುತ್ತಿದೆ. ದರ್ಶನ್ ಕೂಡ ಶಸ್ತ್ರಚಿಕಿತ್ಸೆಗೆ ತಯಾರಾಗುತ್ತಿದ್ದಾರೆ. ಆದರೆ ಅತಿಯಾದ ರಕ್ತದೊತ್ತಡ ಸಮಸ್ಯೆ ಎದುರಾಗಿದೆ. ಆಪರೇಷನ್‌ ಮಾಡಬೇಕಾದರೆ ರಕ್ತದೊತ್ತಡ ಸಮತೋಲನ ಆಗಿರಬೇಕು. ದರ್ಶನ್ ರಕ್ತದೊತ್ತಡದ…

Read More

ಸ್ಯಾಂಡಲ್‌ವುಡ್ ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಇತ್ತೀಚೆಗೆ ಸಿಂಪಲ್ ಆಗಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಸಹೋದರನ ನಿಶ್ಚಿತಾರ್ಥದ ಫೋಟೋವನ್ನು ಶೇರ್ ಮಾಡಿರುವ ರಕ್ಷಿತಾ ಪ್ರೇಮ್ ನವ ಜೋಡಿಗೆ ಶುಭ ಹಾರೈಸಿದ್ದಾರೆ. ‘ಏಕ್ ಲವ್ ಯಾ’ ಸಿನಿಮಾ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಾಣಾ ಇದೀಗ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸರಳವಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ಸಂಭ್ರಮದಲ್ಲಿ ರಕ್ಷಿತಾ ಪ್ರೇಮ್ ಮತ್ತು ಕುಟುಂಬಸ್ಥರು ಭಾಗಿಯಾಗಿದ್ದಾರೆ. ಭಾವಿ ಪತ್ನಿ ಜೊತೆಗಿನ ರಾಣಾ ಫೋಟೋ ನೋಡಿ ಅಭಿಮಾನಿಗಳು ನವ ಜೋಡಿಗೆ ಶುಭ ಕೋರಿದ್ದಾರೆ. ಇನ್ನೂ ರಾಣಾ ಮದುವೆಯಾಗುತ್ತಿರುವ ಹುಡುಗಿ ಯಾರು, ಯಾವ ಊರು ಎಂಬುದು ರಿವೀಲ್ ಆಗಿಲ್ಲ. ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಮದುವೆ ಯಾವಾಗ, ಎಲ್ಲಿ ಎಂಬುದು ಕುಟುಂಬ ಸದಸ್ಯರು ಮಾಹಿತಿ ನೀಡಿಲ್ಲ.

Read More

ಮಡಿಕೇರಿ: ವಕ್ಫ್‌ ವಿರುದ್ಧ  ಬಿಜೆಪಿ ʻನಮ್ಮ ಭೂಮಿ ನಮ್ಮ ಹಕ್ಕುʼ ಘೋಷವಾಕ್ಯದ ಅಡಿಯಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ. ಮಡಿಕೇರಿಯಲ್ಲೂ ಸಹ ಬಿಜೆಪಿ ಪ್ರತಿಭಟನೆ ಜೋರಾಗಿ ನಡೆಯಿತು, ಈ ವೇಳೆ ಮಾತನಾಡಿದ ಮಾಜಿ ಸಂಸದ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಬಂದು ಒಂದು ವರ್ಷ ಆರು ತಿಂಗಳಾಗಿದೆ. ನಾವು ಚುನಾವಣೆ ಸಂದರ್ಭದಲ್ಲೇ ಕಾಂಗ್ರೆಸ್‌ ಬಂದರೆ ತಾಲಿಬಾನ್‌ ಸರ್ಕಾರ ಸ್ಥಾಪನೆ ಆಗುತ್ತೆ ಎಂದಿದ್ದವು. ಈಗ ಅದು ನಿಜವಾಗ್ತಿದೆ ಎಂದು ಕಿಡಿ ಕಾರಿದರು. https://ainlivenews.com/result-of-shiggamvi-constituency-tomorrow-all-ready-for-counting-of-votes/ ನಮ್ಮ ಭೂಮಿ ನಮ್ಮ ಹಕ್ಕು ನಮ್ಮ ಘೋಷಣೆಯಲ್ಲ, ರಾಜ್ಯದ ಜನತೆಯ ಅನುಭವ.. ಕಾಂಗ್ರೆಸ್ ಸರ್ಕಾರ ಬಂದಾಗ ಆ ಭಾಗ್ಯ, ಈ ಭಾಗ್ಯ ಅಂತಿದ್ದವರು ಈ ಎಲ್ಲವನ್ನೂ ಕೊಟ್ಟಿದ್ದಾರಾ..?. ಮೊದಲು 10 ಕೆಜಿ ಅಕ್ಕಿ ಕೊಡ್ತೀವಿ ಅಂದವರು, ಕೇಂದ್ರದಿಂದ ಬರುವ 5 ಕೆಜಿ ಅಕ್ಕಿ ಮಾತ್ರ ಕೊಡ್ತಿದ್ದಾರೆ. ಉಳಿದ ಅಕ್ಕಿಗೆ ದುಡ್ಡು ಕೊಡ್ತೀವಿ ಎಂದವರು ಅದನ್ನು ನೆಟ್ಟಗೆ ಕೊಡುತ್ತಿಲ್ಲ. ನಿರುದ್ಯೋಗಿ ಯುವಕರಿಗೆ 3 ಸಾವಿರ, ಉಚಿತ ವಿದ್ಯುತ್‌ ಆಂದರು. ಈಗ ಎಲ್ಲವನ್ನೂ…

Read More

ಹಾವೇರಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದ್ದು, ಹಾವೇರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಮತ ಎಣಿಕೆಗೆ ಸಕಲ ಸಿದ್ದತೆ ನಡೆಸಲಾಗಿದೆ. ನಾಳೆ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಬೆಳಗ್ಗೆ 7 ಗಂಟೆಗೆ ಸ್ಟ್ರಾಂಗ್ ರೂಂ ಒಪನ್ ಆಗಲಿದೆ. ಮತ ಎಣಿಕೆಗೆ 14 ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್ ಗೆ ಒಬ್ಬ ಎಣಿಕಾ ಮೇಲ್ವಿಚಾರಕ, ಒಬ್ಬರು ಸಹಾಯಕರು, ಒಬ್ಬರು ಮೈಕ್ರೋ ಅಬ್ಸರ್ವರ್ ನಿಯೋಜನೆ ಮಾಡಲಾಗಿದೆ. ಒಟ್ಟು 241 ಮತಗಟ್ಟೆಗಳಿದ್ದು 18 ಸುತ್ತಗಳ ಮತ ಎಣಿಕೆ ನಡೆಯಲಿದೆ. ಮತ ಎಣಿಕೆಯ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಭದ್ರತೆಗಾಗಿ 4 ಡಿಎಆರ್, ತುಕಡಿ ಎರಡು ಕೆಎಸ್‌ಆರ್‌ಪಿ, 250 ಸಿವಿಎಲ್ ಪೊಲೀಸರ ನಿಯೋಜನೆ ಮಾಡಲಾಗಿದೆ. https://ainlivenews.com/c-c-patil-said-that-this-time-it-will-be-a-tough-fight-for-the-implementation-of-2a-reservation/

Read More

ಗದಗ: 2A ಮೀಸಲಾತಿ ಜಾರಿಗಾಗಿ ಈ ಬಾರಿ ಕಠೋರ ಹೋರಾಟ ಮಾಡುತ್ತೇವೆ ಮಾಜಿ ಸಚಿವ ಸಿ ಸಿ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ. ಗದಗದಲ್ಲಿ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಅವರ ನೇತೃತ್ವದಲ್ಲಿ ಜಯ ಮೃತ್ಯುಂಜಯ ಶ್ರೀಗಳ ಸಾನಿಧ್ಯದಲ್ಲಿ ಕಠೋರ ಹೋರಾಟ ಮಾಡುತ್ತೇವೆ. ಸಾವಿರಾರು ಟ್ರಾಕ್ಟರ್ ತೆಗೆದುಕೊಂಡು ಸುವರ್ಣ ಸೌಧ ಮುತ್ತಿಗೆ ಹಾಕೋದು ಅಂತಾ ಬಸವ ಜಯ ಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ. ದೆಹಲಿ ಮಾದರಿಯಲ್ಲಿ ನಾವು ಸಹ ಮಾಡು ಇಲ್ಲವೇ ಮಡಿ ಹೋರಾಟ ಮಾಡ್ತೇವೆ ಎಂದರು. ಇನ್ನೂ ಇದೇ ವೇಳೆ ಕೋವಿಡ್‌ ಹಗರಣದ ಬಗ್ಗೆ ನ್ಯಾಯಮೂರ್ತಿ ಖನ್ನಾ ವರದಿ ವಿಚಾರವಾಗಿ ಮಾತನಾಡಿ, ನ್ಯಾಯಮೂರ್ತಿ ಖನ್ನಾ ನೇಮಕ ಮಾಡಿದಾಗಲೇ ಅವರು ಏನು ವರದಿ ಕೊಡ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿತ್ತು. ಅವರು ಯಾವ ಕಮ್ಯೂನಿಟಿ ಪ್ರತಿನಿಧಿಸ್ತಾರೆ..? ವರದಿ ಪೂರ್ಣ ಪ್ರಮಾಣದ್ದಲ್ಲ, ಮಧ್ಯಂತರ ವರದಿಯಷ್ಟೇ.. ಮಧ್ಯಂತರ ವರದಿ ಮೇಲೆ ಯಡಿಯೂರಪ್ಪ ಮೇಲೆ ಎಸ್‌ಐಟಿ ಬೇಡ, ಸಿದ್ದರಾಮಯ್ಯನವರೇ ಸೇಡಿನ ರಾಜಕಾರಣ ಬೇಡ ಎಂದಿದ್ದಾರೆ. ಸೂರ್ಯ ಚಂದ್ರರು ಇರೋವರೆಗೂ ಅಂತಾ ಡಿ…

Read More

ನವದೆಹಲಿ: ಗೋವಾ ಕರಾವಳಿಯ ಬಳಿ ಭಾರತೀಯ ಮೀನುಗಾರಿಕಾ ಹಡಗು ಭಾರತೀಯ ಜಲಾಂತರ್ಗಾಮಿ ನೌಕೆಗೆ ಡಿಕ್ಕಿ ಹೊಡೆದಿದೆ. ಗೋವಾ ಕರಾವಳಿಯಿಂದ 70 ನಾಟಿಕಲ್ ಮೈಲು ದೂರದಲ್ಲಿ 13 ಸಿಬ್ಬಂದಿಯಿದ್ದ ಸ್ಪಾರ್ಪೀನ್‌ ದರ್ಜೆಯ ಜಲಾಂತರ್ಗಾಮಿ ನೌಕೆಗೆ ಮೀನುಗಾರಿಕೆ ಹಡಗು ಡಿಕ್ಕಿ ಹೊಡೆದಿದೆ. ಆರು ಹಡಗುಗಳು ಮತ್ತು ವಿಮಾನಗಳ ಮೂಲಕ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದ್ದು, 11 ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ಇಬ್ಬರು ಇನ್ನೂ ನಾಪತ್ತೆಯಾಗಿದ್ದಾರೆ.  ಉಳಿದ ಇಬ್ಬರಿಗಾಗಿ ಹುಡುಕಾಟ ನಡೆಯುತ್ತಿವೆ. https://ainlivenews.com/security-force-operation-10-naxals-encounter/

Read More