ಬೆಳಗಾವಿ : 50 ಸಾವಿರ ಮರಳಿ ವಾಪಸ್ ಕೊಡದಿದ್ದಕ್ಕೆ 17 ವರ್ಷದ ಅಪ್ರಾಪ್ತೆಯನ್ನೆ ಮದುವೆಯಾದನ ವಿರುದ್ಧ ಫೋಕ್ಸೋ ಕೇಸ್ ದಾಖಲಾಗಿದೆ. ಬೆಳಗಾವಿ ನಗರದ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಫೋಕ್ಸೋ ಕೇಸ್ ದಾಖಲಿಸಲಾಗಿದೆ. ಆರೋಪಿ ವಿಶಾಲ್ ಢವಳಿ ಮತ್ತು ತಾಯಿ ರೇಖಾ ಢವಳಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. https://ainlivenews.com/the-body-of-the-biker-is-broken-terrible-accident-in-vijayapur/ ವಡಗಾವಿ ನಿವಾಸಿ ರೇಖಾ ಢವಳಿ ಬಳಿ ಅಪ್ರಾಪ್ತೆಯ ತಾಯಿ ಮಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು 50 ಸಾವಿರ ಸಾಲ ಪಡೆದಿದ್ದಳು. ರೇಖಾಳಿಗೆ ಹಣ ಕೊಡಲು ಆಗದಿದ್ದರಿಂದ ಚಿನ್ನದ ಒಡವೆ ಅಡವಿಟ್ಟಿದ್ದರು. ಆದರೆ ಆರೋಪಿ ರೇಖಾ ಹಣ ವಾಪಸ್ ಕೊಡದಿದ್ದರೆ ತನ್ನ ಮಗ ವಿಶಾಲ್‌ಗೆ ಮದುವೆ ಮಾಡಿಕೊಡುವಂತೆ ಕೇಳಿದ್ದಳು. ಇದಕ್ಕೆ ನಿರಾಕರಿಸಿದ್ದ ಅಪ್ರಾಪ್ತೆಯ ತಾಯಿ ಅಡವಿಟ್ಟಿದ್ದ ಚಿನ್ನ ತಗೊಳ್ಳಿ, ಆದರೆ ಮದುವೆ ಮಾಡಿಕೊಡಲ್ಲ ಎಂದಿದ್ದಾರೆ. ಆದರೆ ಜ.17ರಂದು ಒತ್ತಾಯ ಪೂರ್ವಕವಾಗಿ ಆಟೋದಲ್ಲಿ ಅಪ್ರಾಪ್ತೆಯನ್ನ ಕರೆದುಕೊಂಡು ಹೋಗಿದ್ದಾರೆ. ಜ.18ರಂದು ಅಥಣಿಯ ದೇವಸ್ಥಾನದಲ್ಲಿ ಮದುವೆ ಮಾಡಿಸಿದ್ದು, ಅದೇ ದಿನ ರಾತ್ರಿ ಆರೋಪಿ ಅಪ್ರಾಪ್ತೆಯೊಡನೆ…
Author: Author AIN
ಮಂಡ್ಯ : ಎರಡು ಬೈಕ್ ಗಳ ನಡುವೆ ಡಿಕ್ಕಿಯಾಗಿ ಹಸೆಮಣೆ ಏರಬೇಕಿದ್ದ ಯುವತಿ ಸ್ಮಶಾನ ಸೇರಿದ್ದಾಳೆ. ಮಂಡ್ಯದ ಮಳವಳ್ಳಿಯ ಹೆಚ್ ಬಸಾಪುರ ಗೇಟ್ ಬಳಿ ದುರ್ಘಟನೆ ಸಂಭವಿಸಿದೆ. ಮಳವಳ್ಳಿಯ ಬಾಳೆಹೊನ್ನಿಗ ಗ್ರಾಮದ ಶರಣ್ಯ 26 ಮೃತ ದುರ್ದೈವಿ. https://ainlivenews.com/ramesh-jarakiholi-lashed-out-at-the-bjp-state-president-again/ ನರೇಗಾ ಯೋಜನೆಯ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ ಶರಣ್ಯಗೆ ಮದುವೆ ನಿಶ್ಚಯವಾಗಿತ್ತು. ಆದರೆ ವಿಧಿವಿಪರ್ಯಾಸ 20 ದಿನಗಳಲ್ಲಿ ಹಸಮಣೆ ಏರಬೇಕಿದ್ದ ಶರಣ್ಯ ಸಾವಿನ ಮನೆ ಸೇರಿದ್ದಾಳೆ. ಶರಣ್ಯ ಗ್ರಾಮದಿಂದ ಹಲಗೂರು ಕಡೆ ಹೊರಟಿದ್ದಳು. ಈ ವೇಳೆ ಹಿಂಬದಿಯಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಶರಣ್ಯ ತಲೆಗೆ ತೀವ್ರ ಪೆಟ್ಟು ಬಿದಿದ್ದೆ. ಅಧಿಕ ರಕ್ತ ಸ್ತ್ರಾವದಿಂದಾಗಿ ಶರಣ್ಯ ಸ್ಥಳದಲ್ಲೇ ಅಸುನೀಗಿದ್ದಾಳೆ. ಘಟನಾ ಸ್ಥಳಕ್ಕೆ ಹಲಗೂರು ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹಲಗೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಮತ್ತೆ ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ಕಿಡಿಕಾರಿದ್ದಾರೆ. ಬೆಳಗಾವಿಯ ಅಂಕಲಗಿ ಗ್ರಾಮದಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಜಗಳ ಇರೋದು ಅಧ್ಯಕ್ಷರ ಬದಲಾವಣೆಗೆ ಅಷ್ಟೆ. ಅಧ್ಯಕ್ಷ ಚೇಂಜ್ ಆಗಿದ್ರೇ ಓಕೆ ಇಲ್ಲವಾದ್ರೂ ಪಕ್ಷ ಸಂಘಟನೆ ಮಾಡ್ತೇವಿ ಎಂದಿದ್ದಾರೆ.. ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂಬ ವಿಜಯೇಂದ್ರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ಯೋಗ್ಯವಿಲ್ಲ. ಇಂದಿಗೂ ಯಡಿಯೂರಪ್ಪ ನಮ್ಮ ನಾಯಕ ಅದರಲ್ಲಿ ಎರಡು ಮಾತಿಲ್ಲ. ಇಂದಿಗೂ ನಾನು ಯಡಿಯೂರಪ್ಪ ಮೇಲೆ ಅಗೌರವದಿಂದ ಮಾತಾಡಿಲ್ಲ. ಇಂದಿಗೂ ಅವರ ಮೇಲೆ ಗೌರವ ಇದೆ. ಆದ್ರೇ ನೀನು ಸುಳ್ಳು ಹೇಳುವುದು ಬಿಡು ಎಂದು ಕಿಡಿಕಾರಿದ್ರು.. ಇನ್ನು ಬಿವೈ ವಿಜಯೆಂದ್ರ ಸವಾಲ್ ಎಸೆದಿದ್ದರ ಬಗ್ಗೆ ಮಾತನಾಡಿ, ನಾನು ಶಿಕಾರಿಪುರಕ್ಕೆ ಬರ್ತೇನಿ, ವಿಜಯೇಂದ್ರ ಮನೆ ಮುಂದಿನಿಂದ ಪ್ರವಾಸ ಶುರು ಮಾಡ್ತೇನಿ. ನಿನ್ನ ಸವಾಲು ಸ್ವೀಕಾರ ಮಾಡಿದ್ದೇನೆ ನೀನು ದಿನಾಂಕ ನಿಗದಿ…
ಹುಬ್ಬಳ್ಳಿ: ಬೆಳಗಾವಿಯಲ್ಲಿ ಆಯೋಜಿಸಿರುವ ಗಾಂಧಿ ಭಾರತ ಸಮಾವೇಶದಿಂದ ಭಯಭೀತಗೊಂಡಿರುವ ಬಿಜೆಪಿ, ಮುಡಾ ಹಗರಣದಲ್ಲಿ 300 ಕೋಟಿ ರೂ. ಸ್ಥಿರಾಸ್ತಿ ವಶಪಡಿಸಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ ಮೂಲಕ ಇಲ್ಲಸಲ್ಲದ ಆರೋಪ ಮಾಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಆರೋಪಿಸಿದ್ರು. https://ainlivenews.com/muda-scam-300-crore-immovable-property-seized-opposition-parties-and-officials-are-also-in-shock/ ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಪ್ರಧಾನಿ ನರೇಂದ್ರ ಮೋದಿ ಇಡಿ ಯನ್ನು ರಾಜಕೀಯ ದ್ವೇಷಕ್ಕೆ ಬಳಸಿಕೊಂಡಿದ್ದಾರೆ ಎಂದರು. ದೆಹಲಿಯಲ್ಲಿ ಜನಪರ ಆಡಳಿತ ನೀಡುವಲ್ಲಿ ಆಮ್ ಆದ್ಮಿ ಪಕ್ಷ ವಿಫಲವಾಗಿದೆ. ಶೀಲಾ ದೀಕ್ಷಿ್ತ್ ಅವರು 15 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದಾಗ ದೆಹಲಿ ಯಲ್ಲಿ ಉತ್ತಮ ಆಡಳಿತ ನೀಡಿದ್ದರು. ಶೀಲಾ ದೀಕ್ಷಿತ್ ಮಾದರಿ ಆಡಳಿತವನ್ನು ಜನರು ಬಯಸುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ ಎಂದರು.
ವಿಜಯಪುರ: ಬುಲೆರೋ ಪಿಕ್ ಅಪ್ ವಾಹನ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ನಿಡಗುಂದಿ ರಸ್ತೆಯಲ್ಲಿ ಘಟನೆ ನಡೆದಿದ್ದು, ಮೃತ ಬೈಕ್ ಸವಾರನ ಹೆಸರು ಮತ್ತು ವಿಳಾಸ ತಿಳಿದು ಬಂದಿಲ್ಲಾ. ಇನ್ನೂ ಅಪಘಾತದ ಭೀಕರೆತೆಗೆ ಬೈಕ್ ಸವಾರನ ರುಂಡ ಮುಂಡ ಬೇರ್ಪಟ್ಟಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಸವನ ಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. https://ainlivenews.com/fir-filed-against-two-people-who-cheated-without-filling-the-atm/
ಬೆಂಗಳೂರು: ಕರ್ನಾಟಕದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅನ್ನೋದಕ್ಕೆ ದರೋಡೆ ಪ್ರಕರಣ ಸಾಕ್ಷಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರು ಬ್ಯಾಂಕ್ ದರೋಡೆ ಪ್ರಕರಣ ಮತ್ತು ಬೀದರ್ ಎಟಿಎಮ್ ದರೋಡೆ ಪ್ರಕರಣದ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕ ಈಗ ಲಾಲು ಪ್ರಸಾದ್ ಯಾದವ್ ರಾಜ್ಯದ ತರಹ ಪ್ರಸಿದ್ಧಿ ಆಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೆ ಆಗಿದೆ. ಮಂಗಳೂರಿನಲ್ಲಿ 5 ನಿಮಿಷದಲ್ಲಿ 15 ಕೋಟಿ ರೂ. ಲೂಟಿ ಆಗಿದ್ದು, ಹಾಲಿವುಡ್ ಸಿನಿಮಾ ರೀತಿ ದರೋಡೆ ಆಗಿದೆ ಎಂದು ಕಿಡಿಕಾರಿದರು. ಸಿಎಂ ಮಂಗಳೂರಿನಲ್ಲಿ ಇದ್ದಾಗಲೇ ದರೋಡೆ ಮಾಡಿದ್ದಾರೆ. ಕರ್ನಾಟಕದ ಪೊಲೀಸರ ಬಗ್ಗೆ ಅವರಿಗೆ ಎಷ್ಟು ಭಯ ಇದೆ ಎಂದು ಗೊತ್ತಾಗುತ್ತದೆ. ಫಟಾಫಟ್ ಅಂತ ರಾಹುಲ್ ಗಾಂಧಿ ಹೇಳಿದ್ದರು, https://ainlivenews.com/do-you-know-the-benefits-of-eating-sesame-seeds-in-winter-for-women/ ಇಲ್ಲಿ 5 ನಿಮಿಷಗಳಲ್ಲಿ ಫಟಾಫಟ್ ಅಂತ 15 ಕೋಟಿ ರೂ. ಲೂಟಿ ಆಗಿದೆ. ಸಿಎಂ ಸಮಕ್ಷಮದಲ್ಲಿ ದರೋಡೆ ಆಗಿದೆ ಅಂತ ಹೇಳಬಹುದು. ಸಿಎಂ ಆಡಳಿತಕ್ಕೆ ಹಿಡಿದ ಕೈಗನ್ನಡಿ, ಅವರ ಅಸಹಾಯಕತೆಯಿಂದ…
ಬೆಂಗಳೂರು: ಅವ್ರಿಬ್ರು ಸಂಬಂಧಿಕರೇ..ಮದುವೆಗು ಮುಂಚೆ ಪರಸ್ಪರ ಪ್ರೀತಿ ಮಾಡ್ತಿದ್ರು..ಕುಟುಂಬಸ್ಥರು ಒಪ್ಪದೇ ಇದ್ದಾಗ ಬೇರೆ ಬೇರೆ ವಿವಾಹವಾಗಿದ್ರು..ಮುಂಬೈನಲ್ಲಿದ್ದ ಆತ ಪತ್ನಿ ಬಿಟ್ಟು ಬೆಂಗಳೂರೊಗೆ ಬಂದಿದ್ದ..ಪತಿ ಬಿಟ್ಟಿದ್ದ ಮಾಜಿ ಪ್ರಿಯತಮೆ ಕೂಡ ಈತನನ್ನ ಸೇರೋದಕ್ಕೆ ಶುರು ಮಾಡಿದ್ಳು..ಹೊಸವರ್ಷಕ್ಕೆ ಇನಿಯನ ಮನೆಗೆ ಹೋದವಳು ಸಿಕ್ಕಿದ್ದು ಶವವಾಗಿ. ಪೊಲೀಸ್ ತನಿಖೆ ವೇಳೆ ಪಾಗಲ್ ಅಂಕಲ್ ನ ನವರಂಗಿ ಆಟ ರಿವೀಲ್ ಆಗಿದೆ. ಈ ಫೋಟೊದಲ್ಲಿ ಕಾಣ್ತಿರೊ ಮಹಿಳೆಯ ಹೆಸರು..ಉಜ್ಮಾ ಖಾನ್..44 ವರ್ಷ ಪ್ರಾಯ..ಹೆಚ್ ಬಿ ಆರ್ ಲೇಔಟ್ ನಲ್ಲಿ ತಾಯಿ ಜೊತೆಗೆ ವಾಸವಿದ್ದ ಈ ಚೆಲುವೆ ಗಂಡನಿಂದ ವಿಚ್ಛೇದನ ಪಡೆದು ದೂರವಾಗಿದ್ಳು..ಇನ್ನು ಈತ 53 ವರ್ಷದ ಇಮ್ದಾದ್ ಬಾಷ..ಮುಂಬೈನಲ್ಲಿ ಕೆಲಸ ಮಾಡ್ತಿದ್ದ ಈ ಟೆಕ್ಕಿ ಪತ್ನಿ ಜೊತೆಗೆ ಸರಿಹೊಂದದೇ ಮುಂಬೈ ಬಿಟ್ಟು ಬೆಂಗಳೂರುಗೆ ಬಂದಿದ್ದ..ಕುಂದಲಹಳ್ಳಿ ಸಮೀಪದ ಸ್ಪೈಸ್ ಗಾರ್ಡನ್ ನಲ್ಲಿ ಮನೆ ಮಾಡಿಕೊಂಡು ವಾಸವಿದ್ದ..ಅಷ್ಟೇ ಅಲ್ಲ ಆಗಿನ ಲವ್ ಬರ್ಡ್ಸ್ ಮತ್ತೆ..ಒಂದಾಗಿದ್ರು..ಇಮ್ದಾದ್ ಮನೆಗೆ ಉಜ್ಮಾ ಖಾನ್ ಆಗಾಗ ಬಂದು ಹೋಗ್ತಿದ್ಳು..ಆದ್ರೆ ಹೊಸ ವರ್ಷದ ದಿನ ಈ ಮನೆಯಲ್ಲಿ…
ಬೆಂಗಳೂರು: ಮುಡಾ ಕೇಸ್ ನಲ್ಲಿ ಇ ಡಿ ಹಂಚಿಕೊಂಡಿರುವ ಮಾಹಿತಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.. ಮುಡಾ ಹಗರಣದಲ್ಲಿ ಸಿ ಎಂ ಸಿದ್ದರಾಮಯ್ಯನೂ ಭಾಗಿಯಾರಿರೋ ಬಗ್ಗೆ ಉಲ್ಲೇಖ ಮಾಡಿರುವ ಇ ಡಿ ಇಡೀ ಮುಡಾ ಸೈಟು ಹಂಚಿಕೆಯಲ್ಲಿ 300 ಕೋಟಿ ಅವ್ಯವಹಾರದ ಬಗ್ಗೆ ಹೇಳಿದೆ. ಈಗ ಮುಡಾ ಪ್ರಕರಣ ಸಿ ಎಂ ಸಿದ್ದರಾಮಯ್ಯ & ಫ್ಯಾಮಿಲಿಗೆ ಮಾತ್ರ ವಲ್ಲದೆ ವಿರೋಧ ಪಕ್ಷದವರಿಗೆ ಹಾಗು ಈ ಹಿಂದಿನ ಅಧಿಕಾರಿಗಳಿಗೂ ನಡುಕ ಶುರುವಾಗಿದೆ. ಇ ಡಿ ಪ್ರಕಟನೆ ಕಂಪ್ಲೀಟ್ ರಿಪೋರ್ಟ್ ತೋರಿಸ್ತೀವಿ ನೋಡಿ ಮುಡಾ ಕೇಸ್ ನಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು ಸಿ ಎಂ ಭಾಗಿಯಾಗಿರೋ ಬಗ್ಗೆ ಇಡಿ ಉಲ್ಲೇಖ ಮಾಡಿದೆ. ಅಷ್ಟೇ ಅಲ್ಲ 300 ಕೋಟಿ ಮೌಲ್ಯದ 142 ಸ್ಥಿರಾಸ್ತಿಗಳನ್ನು ಸೀಜ್ ಮಾಡಿರೋದಾಗಿ ಇ ಡಿ ತಿಳಿಸಿದೆ. ಈ ಬಗ್ಗೆ ಇಡಿ ತನ್ನ ಅಧಿಕೃತ ಸಾಮಾಜಿಕ ಜಾಲ ತಾಣದಲ್ಲಿ ಪ್ರಕಟಿಸಿದೆ. ಇ ಡಿ ಮುಡಾ ಕೇಸ್ ನಲ್ಲಿ ಆಗಿರುವ ತನಿಖೆ ವಿಚಾರ ಪ್ರಕಟಿಸುತ್ತಿದ್ದಂತೆ ರಾಜ್ಯ…
ಬೆಂಗಳೂರು: ಇದು ಪಾಪರ್ ಸರ್ಕಾರ. ಸರ್ಕಾರ ಕೂಡಲೇ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ವಿಪಕ್ಷ ನಾಯಕ ಅಶೋಕ್ ಸವಾಲ್ ಹಾಕಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬಸವರಾಜ ಬೊಮ್ಮಾಯಿ ಇದ್ದಾಗ ಎಷ್ಟು ಹಣ ಬಿಡುಗಡೆ ಮಾಡಿದ್ರು ಎಂದು ಕಾಂಗ್ರೆಸ್‌ನವರು ಮೊದಲು ನೋಡಲಿ. ಇದು ಪಾಪರ್ ಸರ್ಕಾರ. ಸರ್ಕಾರ ಕೂಡಲೇ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಸವಾಲ್ ಹಾಕಿದ್ದಾರೆ. ಕಾಂಗ್ರೆಸ್‌ನವರು ಮನೆ ಹಾಳರು, ಅವರೇ ಸಾಲ ಮಾಡಿದ್ದು. ಈಗ ನಮ್ಮ ಮೇಲೆ ಹೇಳ್ತಾರೆ. 60 ವರ್ಷ ಕಾಂಗ್ರೆಸ್ ಆಡಳಿತ ಮಾಡಿತ್ತು. ಆಗ ಸಾಲ ಮಾಡಿರಲಿಲ್ಲವಾ? ಅಂಕಿಅಂಶಗಳನ್ನ ಬಿಡುಗಡೆ ಮಾಡಿ. ಕಾಂಗ್ರೆಸ್ 60 ವರ್ಷಗಳ ಅಂಕಿಅಂಶಗಳನ್ನ ಬಿಡುಗಡೆ ಮಾಡಿ. ನಾವು 9 ವರ್ಷಗಳ ಅಂಕಿಅಂಶಗಳನ್ನ ಬಿಡುಗಡೆ ಮಾಡ್ತೀವಿ ಎಂದಿದ್ದಾರೆ. https://ainlivenews.com/do-you-know-the-benefits-of-eating-sesame-seeds-in-winter-for-women/ ಸಿದ್ದರಾಮಯ್ಯ ಸಾಲ ಮಾಡದೇ ಬಜೆಟ್ ಮಾಡಿದ್ರಾ? ಹೇಳಲಿ. ಬೊಮ್ಮಾಯಿ ಸರ್ ಪ್ಲಸ್ ಬಜೆಟ್ ಮಾಡಿದ್ರು. ಯಾವುದೇ ಬೆಲೆ ಏರಿಕೆ ಮಾಡಿರಲಿಲ್ಲ. ಮನೆ ಹಾಳು…
ನವದೆಹಲಿ: ಭಾರತದ ಗ್ರಾಮಗಳ ಸಬಲೀಕರಣ ಪ್ರಯತ್ನಗಳಲ್ಲಿ ಪ್ರಮುಖವಾಗಿರುವ ‘ಸ್ವಾಮಿತ್ವ’ ಯೋಜನೆ ಅಡಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು 65 ಲಕ್ಷ ಕುಟುಂಬಗಳಿಗೆ ಆಸ್ತಿ ಕಾರ್ಡ್ ವಿತರಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಯೋಜನೆ ಫಲಾನುಭವಿಗಳಿಗೆ ಕಾರ್ಡ್ ಹಂಚಿದ್ದಾರೆ. ಇದು ಗ್ರಾಮೀಣ ಕುಟುಂಬಗಳಿಗೆ ಕಾನೂನುಬದ್ಧ ಆಸ್ತಿ ಹಕ್ಕುಗಳೊಂದಿಗೆ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಮಾಲೀಕತ್ವದ ಮಹತ್ವವನ್ನು ಎತ್ತಿ ತೋರಿಸಿರುವ ಮೋದಿ ಬಡತನವನ್ನು ಕಡಿಮೆ ಮಾಡುವ ಮತ್ತು ಗ್ರಾಮಗಳನ್ನು ಬಲಪಡಿಸುವಲ್ಲಿ ಅದರ ಪಾತ್ರವನ್ನು ಒತ್ತಿ ಹೇಳಿದರು. https://ainlivenews.com/do-you-know-the-benefits-of-eating-sesame-seeds-in-winter-for-women/ ಈ ಕಾರ್ಯಕ್ರಮವನ್ನು ವರ್ಚುವಲ್ ಆಗಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಗ್ರಾಮಗಳ ಅಭಿವೃದ್ಧಿಯಲ್ಲಿ ಆಸ್ತಿ ಹಕ್ಕುಗಳ ಮಹತ್ವವನ್ನು ಒತ್ತಿ ಹೇಳಿದರು. “ಮಾಲೀಕತ್ವ ವ್ಯವಸ್ಥೆಗಳು ಗ್ರಾಮಗಳ ಅಭಿವೃದ್ಧಿಗೆ ಆಧಾರವಾಗಲಿವೆ” ಎಂದು ಅವರು ಹೇಳಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಹಾತ್ಮ ಗಾಂಧಿಯವರ ಗ್ರಾಮೀಣಾಭಿವೃದ್ಧಿಯ ದೃಷ್ಟಿಕೋನವನ್ನು ಎತ್ತಿ ತೋರಿಸಿದ್ದಾರೆ. ಗ್ರಾಮೀಣ ಆರ್ಥಿಕತೆಯನ್ನು ಆಧುನೀಕರಿಸುವ ಒಂದು ಹೆಜ್ಜೆಯಾಗಿ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವಲ್ಲಿ ಸರ್ಕಾರದ ಪ್ರಯತ್ನಗಳನ್ನು ಪ್ರಧಾನಿಯವರು ಎತ್ತಿ ತೋರಿಸಿದರು. “ಕಳೆದ 7ರಿಂದ…