Facebook Twitter Instagram YouTube
    ಕನ್ನಡ English తెలుగు
    Friday, December 1
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    World Cup: ವಿಶ್ವಕಪ್ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ, ಭಾರತದ ಕನಸು ನುಚ್ಚುನೂರು

    AIN AuthorBy AIN AuthorNovember 19, 2023
    Share
    Facebook Twitter LinkedIn Pinterest Email

    ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಟ್ರಾವಿಸ್​ ಹೆಡ್​ ಅವರ ಶತಕದ ನೆರವಿನಿಂದ ಆತಿಥೇಯ ಭಾರತ ವಿರುದ್ಧ ಭರ್ಜರಿ ಜಯ ದಾಖಲಿಸಿದ ಆಸ್ಟ್ರೇಲಿಯಾ 6ನೇ ಬಾರಿಗೆ ವಿಶ್ವಕಪ್​ ಟ್ರೋಫಿಯನ್ನು ಎತ್ತಿಹಿಡಿದಿದೆ.

    ಭಾರತ ನೀಡಿದ 241 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಆಸಿಸ್ ಕೇವಲ​ 43 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 241 ರನ್​ ಗಳಿಸುವ ಮೂಲಕ 6 ವಿಕೆಟ್​ಗಳ ಅಂತರದಲ್ಲಿ ಸುಲಭವಾಗಿ ಗುರಿ ಮುಟ್ಟಿತು. ಕೇವಲ 47 ರನ್​ಗಳಿಗೆ ಪ್ರಮುಖ 3 ವಿಕೆಟ್​ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದ ಆಸಿಸ್​​ಗೆ ಟ್ರಾವಿಸ್​ ಹೆಡ್​ ಆಪತ್ಭಾಂದವರಾದರು. ನಿರ್ಣಾಯಕ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಹೆಡ್​, ಆಸಿಸ್​ಗೆ ಸುಲಭ ಗೆಲುವು ತಂದುಕೊಟ್ಟರು. ಭಾರತೀಯ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದ ಹೆಡ್​, ಅಕ್ಷರಶಃ ಅಮೋಘ ಆಟವಾಡಿದರು.

    Demo

    ಲಬುಶೇನ್​ ಸಾಥ್​
    ಹೆಡ್​ ಜತೆಗೆ ಮಾರ್ನಸ್​ ಲಬುಶೇನ್​ ಉತ್ತಮ ಸಾಥ್​ ನೀಡಿದರು. ಈ ಜೋಡಿ ನಿರ್ಣಾಯಕ ಪಂದ್ಯದಲ್ಲಿ 192 ರನ್​ಗಳ ಅಮೋಘ ಜತೆಯಾಟವಾಡಿದರು. ತಾಳ್ಮೆಯ ಆಟವಾಡಿದ ಲಬುಶೇನ್ 110​ ಎಸೆತಗಳಲ್ಲಿ 4 ಬೌಂಡರಿಯೊಂದಿಗೆ ಅಜೇಯ 58 ರನ್​ಗಳ ಅರ್ಧಶತಕ ಸಿಡಿಸಿ ಮಿಂಚಿದರು. ಉಳಿದಂತೆ ಗ್ಲೇನ್​ ಮ್ಯಾಕ್ಸ್​​ವೆಲ್​ 2 ರನ್​ ಗಳಿಸಿ ಅಜೇಯರಾಗಿ ಉಳಿದರು.

    ಆರಂಭಿಕ ಆಘಾತ
    ಆರಂಭದಲ್ಲಿ ಮೊಹಮ್ಮದ್​ ಶಮಿ ಮತ್ತು ಜಸ್​ಪ್ರೀತ್​ ಬುಮ್ರಾ ಆಸಿಸ್​ ಪಡೆಗೆ ಆಘಾತ ನೀಡಿದರು. ತಂಡದ ಮೊತ್ತ 16 ರನ್​ ಇದ್ದಾಗ 7 ರನ್​ ಗಳಿಸಿದ್ದ ಡೇವಿಡ್​ ವಾರ್ನರ್​ ಮೊಹಮ್ಮದ್​ ಶಮಿ ಓವರ್​ನಲ್ಲಿ ಕೊಹ್ಲಿಗೆ ಕ್ಯಾಚಿತ್ತು ನಿರ್ಗಮಿಸಿದರು. ಇದರ ಬೆನ್ನಲ್ಲೇ ನಾನೇನು ಕಮ್ಮಿ ಎನ್ನುವಂತೆ ಮಾರಕ ಬೌಲಿಂಗ್​ ದಾಳಿ ಮಾಡಿದ ಬುಮ್ರಾ, ಮಿಚೆಲ್​ ಮಾರ್ಷ್​ (15) ಮತ್ತು ಸ್ಟೀವ್​ ಸ್ಮಿತ್​ (4) ಅವರನ್ನು ಬಂದಷ್ಟೇ ವೇಗವಾಗಿ ಪೆವಿಲಿಯನ್​ ಅಟ್ಟಿದರು. ಕೇವಲ 43 ರನ್​ಗೆ ಪ್ರಮುಖ 3 ವಿಕೆಟ್​ ಕಳೆದುಕೊಳ್ಳುವ ಮೂಲಕ ಆಸಿಸ್​ ಪಡೆ ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಗೆಲುವು ಭಾರತದ್ದೇ ಎಂಬ ಅಭಿಪ್ರಾಯ ಮೂಡಿಬಂದಿತ್ತು. ಆದರೆ, ಅಭಿಪ್ರಾಯವನ್ನು ಹೆಡ್​ ಅಕ್ಷರಶಃ ಬದಲಾಯಿಸಿಬಿಟ್ಟರು.

    ಟೀಮ್​ ಇಂಡಿಯಾ ಪರ ಜಸ್​ಪ್ರೀತ್​ ಬುಮ್ರಾ 2 ವಿಕೆಟ್ ಕಬಳಿಸಿದರೆ, ಶಮಿ ಒಂದು ವಿಕೆಟ್​ಗೆ ತೃಪ್ತಿಪಟ್ಟುಕೊಂಡರು. ಉಳಿದಂತೆ ಯಾವೊಬ್ಬ ಬೌಲರ್​ಗಳು ಕೂಡ ಆಸಿಸ್​ ಬ್ಯಾಟರ್​ಗಳಿಗೆ ಸವಾಲಾಗಲಿಲ್ಲ. ಸ್ಪಿನ್ನರ್​ಗಳಂತೂ ತಮ್ಮ ಛಾಪು ಮೂಡಿಸಲೇ ಇಲ್ಲ. ಬ್ಯಾಟಿಂಗ್​ ಮತ್ತು ಬೌಲರ್​ಗಳ ವೈಫಲ್ಯವೇ ಟೀಮ್​ ಇಂಡಿಯಾದ ಹೀನಾಯ ಸೋಲಿಗೆ ಕಾರಣ ಎಂದು ಹೇಳಬಹುದು.

    ಆರನೇ ವಿಶ್ವಕಪ್​ ಗೆಲುವು
    ಏಕದಿನ ವಿಶ್ವಕಪ್‌ ಇತಿಹಾದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್​ನಲ್ಲಿ ಮುಖಾಮುಖಿಯಾಗಿದ್ದು, ಇದು ಎರಡನೇ ಬಾರಿ. 2003ರ ವಿಶ್ವಕಪ್‌ನಲ್ಲಿ ಮೊದಲ ಬಾರಿ ಮುಖಾಮುಖಿಯಾಗಿದ್ದವು. ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ತಂಡ ಸೌರವ್ ಗಂಗೂಲಿ ನಾಯಕತ್ವದ ಭಾರತವನ್ನು ಸೋಲಿಸಿ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಇದೀಗ ಮತ್ತೊಮ್ಮೆ ಭಾರತದ ವಿರುದ್ಧ ಗೆಲುವು ಸಾಧಿಸುವ ಮೂಲಕ ಆರನೇ ಬಾರಿ ವಿಶ್ವಕಪ್​ ಗೆಲುವು ಸಂಭ್ರಮಿಸುತ್ತಿದೆ. 1987, 1999, 2003, 2007, 2015 ಮತ್ತು ಇದೀಗ 2023 ಅಲ್ಲಿಗೆ ಒಟ್ಟು ಆರು ಬಾರಿ ಆಸ್ಟ್ರೇಲಿಯಾ ವಿಶ್ವಕಪ್​ ಗೆದ್ದಂತಾಯಿತು.


    Share. Facebook Twitter LinkedIn Email WhatsApp

    Related Posts

    T20 Match: ಇಂದು ಭಾರತ – ಆಸೀಸ್‌ ನಡುವೆ 4ನೇ ಟಿ20: ಸರಣಿ ಗೆಲುವಿನ ಮೇಲೆ ಟೀಂ ಇಂಡಿಯಾ ಕಣ್ಣು!

    December 1, 2023

    ‌MS Dhoni News car: 3.30 ಕೋಟಿಯ ಕಾರು ಖರೀದಿಸಿದ MS ಧೋನಿ: ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್!

    December 1, 2023

    IPL 2024: ಗುಜರಾತ್‌ ಟೈಟಾನ್ಸ್‌ ಯುವ ಆರಂಭಿಕ ಆಟಗಾರ ಶುಭಮನ್‌ ಗಿಲ್‌ ಹೆಗಲಿಗೆ!

    December 1, 2023

    ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಅಭಿಮಾನಿಗಳಿಗೆ ಡೇವಿಡ್‌ ವಿಲ್ಲಿ ಭಾವುಕ ಸಂದೇಶ

    December 1, 2023

    ಋತುರಾಜ್‌ ಗಾಯಕ್ವಾಡ್‌ ಬಗ್ಗೆ ಸೂರ್ಯ ಕುಮಾರ್‌ ಯಾದವ್‌ ಹೇಳಿದ್ದೇನು ಗೊತ್ತಾ?

    December 1, 2023

    ದಿನೇಶ್‌ ಕಾರ್ತಿಕ್‌ ಬಗ್ಗೆ ಅಸಮಾಧಾನ ಹೊರಹಾಕಿದ ABD!

    December 1, 2023

    ವಿಶ್ವಕಪ್ ಫೈನಲ್ ನಲ್ಲಿ ಅಶ್ವಿನ್ ಗೆ ಸಿಗದ ಸ್ಥಾನ – ರೋಹಿತ್ ಬಗ್ಗೆ ಸ್ಪಿನ್​ ಮಾಂತ್ರಿಕ ಹೇಳಿದ್ದೇನು!?

    November 30, 2023

    ಎರಡು ವರ್ಷಗಳಿಗೆ ಭಾರತ ತಂಡಕ್ಕೆ ರಾಹುಲ್‌ ದ್ರಾವಿಡ್‌ ಹೆಡ್‌ ಕೋಚ್‌?: BCCI ಸ್ಪಷ್ಟನೆ!

    November 30, 2023

    Fitness Startup: ಬೆಂಗಳೂರು ಮೂಲದ  ಸ್ಟಾರ್ಟ್ಅಪ್ನಲ್ಲಿ ಹೂಡಿಕೆ ಮಾಡಿದ MS ಧೋನಿ!

    November 30, 2023

    ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಅಚ್ಚರಿ ಬೆಳವಣಿಗೆ: ಜಸ್‌ಪ್ರೀತ್ ಬುಮ್ರಾ ಔಟ್‌?

    November 30, 2023

    ICC Champions Trophy 2025: ಪಾಕ್’ನಲ್ಲಿ ನಡೆಯೋದು ಅನುಮಾನ: ಕಾರಣ?

    November 30, 2023

    IPL2024: ಮುಂಬೈ ಇಂಡಿಯನ್ಸ್ ಗೆ ಮರಳಿದ ಹಾರ್ದಿಕ್ -ಬೂಮ್ರಾಗೆ ಬೇಸರ!

    November 30, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.