ಪೋಷಕರ ಗಮನಕ್ಕೆ – ಮಾರ್ಚ್ ತಿಂಗಳಲ್ಲಿ ಪಲ್ಸ್ ಪೋಲಿಯೋ!

ಬೆಂಗಳೂರು:- 5 ವರ್ಷದ ಒಳಗಿನ ಮಕ್ಕಳಿಗೆ ಹಾಕುವ ಪೋಲಿಯೋ ಅಭಿಯಾನ ಯಾವಾಗ ಎಂದು ಜನರು ಗೊಂದಲಕ್ಕೆ ಒಳಗಾಗಿದ್ದರು. ಇದೀಗ ಸರ್ಕಾರ ಮುಂದಿನ ತಿಂಗಳು 03 ರಿಂದ 06 ರವರೆಗೆ ಪಲ್ಸ್ ಪೋಲಿಯೋ ಅಭಿಯಾನ ನಡೆಯಲಿದೆ ಎಂದು ಮಾಹಿತಿ ನೀಡಿದೆ ಈ ಅಭಿಯಾನ ಮೂರು ದಿನಗಳು ನಡೆಯಲ್ಲಿದ್ದು, ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ಜಾಗೃತಿ ಅಭಿಯಾನವನ್ನು ಬಿಬಿಎಂಪಿ ಕೈಗೊಳುತ್ತಿದೆ. ಪ್ರಾಥಮಿಕ ಚಿಕಿತ್ಸಾ ಕೇಂದ್ರ, ನಗರ ಚಿಕಿತ್ಸಾ ಕೇಂದ್ರ, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲಾಗುತ್ತದೆ