ಬೆಂಗಳೂರು:– ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರೇ ಇತ್ತ ಗಮನಿಸಿ. ಬರಿ ಫ್ರೀ ಬಸ್ ಟಿಕೆಟ್ ಕೊಟ್ರೆ ಸಾಲಲ್ಲ, ಉತ್ತಮ ಬಸ್ ವ್ಯವಸ್ಥೆ ಮಾಡಿ.
ಹೌದು, ದಿನೆ ದಿನೆ ಶಕ್ತಿ ಯೋಜನೆ ವಿರುದ್ಧ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಕ್ತಿ ಎಫೆಕ್ಟ್ ನಿಂದಾಗಿ ಬಸ್ ಗಳಿಲ್ಲದೇ ಡಕೋಟ ಬಸ್ ಗಳಿಗೆ ಮೊರೆ ಹೋಗಿರುವ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. 8 ಲಕ್ಷಕ್ಕೂ ಅಧಿಕ ಸಂಚಾರ ಮಾಡಿದ ಹಳೆ ಬಸ್ಗಳನ್ನ KSRTC ನಿಗಮ ರಸ್ತೆಗಿಳಿಸಿದೆ. ಡಕೋಟ ಎಕ್ಸ್ಪ್ರೆಸ್ ನಿಂದಾಗಿ ಪ್ರಯಾಣಿಕರಿಗೆ ನಿತ್ಯವೂ ಕಿರಿ ಕಿರಿ ಉಂಟಾಗುತ್ತಿದೆ.
ಎಲ್ಲೆಂದರಲ್ಲಿ ಡಕೋಟ KSRTC ಬಸ್ ಗಳು ಕೈ ಕೊಡುತ್ತಿದ್ದು, ಕೈ ಕೊಟ್ಟ KSRTC ಬಸ್ ನಿಂದ ಪ್ರಯಾಣಿಕರ ಪರದಾಟ ನಡೆಸಿದ್ದಾರೆ. ರಸ್ತೆಯಲ್ಲಿಯೇ ನಿಂತು ಪ್ರಯಾಣಿಕರು ಹೈರಾಣಾಗಿದ್ದಾರೆ
ಹೌದು, ಬೆಂಗಳೂರುನಿಂದ ಗಂಗಾವತಿ ಹೋಗ್ತಿದ್ದ ಬಸ್ ನಲ್ಲಿ ಈ ಪರಿಸ್ಥಿತಿ ಉಂಟಾಯಿತು. ಚಿಂತಾಮಣಿ ಮಾರ್ಗವಾಗಿ ಸಂಚರಿಸುವಾಗ ಘಟನೆ ಜರುಗಿದೆ. ನಂದಗುಡಿಯಲ್ಲಿ ನಡುರಸ್ತೆಯಲ್ಲಿಯೇ ಸಂಚಾರ ಸ್ಟಾಪ್ ಆಗಿದ್ದು, ಬೆಳಗ್ಗೆ 8ಗಂಟೆಯಿಂದಲೇ ಪ್ರಯಾಣಿಕರು ರಸ್ತೆಯಲ್ಲೇ ನಿಂತು ಹೈರಾಣಾಗಿದ್ದಾರೆ 45 ನಿಮಿಷವಾದ್ರೂ ಪರ್ಯಾಯ ವ್ಯವಸ್ಥೆ ಮಾಡಿಲ್ಲವೆಂದು ಪ್ರಯಾಣಿಕರು ಕಿಡಿಕಾರಿದ್ದಾರೆ.