ಮಧುಮೇಹ ಎನ್ನುವುದು ಜೀವನದ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ. ಎಷ್ಟೇ ಸಿಹಿ ಪ್ರಿಯರಾಗಿದ್ದರೂ ಮಧುಮೇಹ ಬಂದ ಬಳಿಕ ಇದನ್ನು ಕಡೆಗಣಿಸಲೇಬೇಕು. ಇಷ್ಟು ಮಾತ್ರವಲ್ಲದೆ, ಆಹಾರದಲ್ಲಿ ಕೂಡ ತುಂಬಾ ಜಾಗೃತೆ ವಹಿಸಿ, ನಿತ್ಯವೂ ವ್ಯಾಯಾಮ ಅಥವಾ ನಡಿಗೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು ಏರಿಕೆ ಆಗಿ ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸಬಹುದು.
ಇದಕ್ಕಾಗಿ ಮಧುಮೇಹವನ್ನು ನಿಯಂತ್ರಿಸಲು ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ. ಅದರಲ್ಲೂ ರಾತ್ರಿ ತಿನ್ನುವ ಆಹಾರವು ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆ ಮಾಡುವುದು. ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾದರೆ, ಯಾವ ಆಹಾರಗಳನ್ನು ರಾತ್ರಿ ವೇಳೆ ಸೇವನೆ ಮಾಡಬಾರದು ಎಂದು ತಿಳಿದುಕೊಂಡಿದ್ದರೆ ಒಳ್ಳೆಯದು.
ಕಿಂಗ್ ಕೊಹ್ಲಿ ಅಮೋಘ ಬ್ಯಾಟಿಂಗ್: ಭಾರತಕ್ಕೆ ಸಿಕ್ತು ಭರ್ಜರಿ ಗುಡ್ನ್ಯೂಸ್!
ಮಧುಮೇಹ ಎಂದೊಡನೆ ಅವರು ಸಕ್ಕರೆ, ಸಿಹಿ ಪದಾರ್ಥಗಳನ್ನು ಸೇವಿಸಬಾರದು ಎಂದಷ್ಟೇ ಜನ ಯೋಚಿಸುತ್ತಾರೆ. ಆದರೆ, ಮಧುಮೇಹಿಗಳಿಗೆ ಹಾನಿಕಾರಕವಾದ ಇನ್ನೂ ಕೆಲವು ಆಹಾರಗಳಿವೆ. ಅಂತಹ ಆಹಾರಗಳು ಯಾವುವೆಂದರೆ…
ಮಧುಮೇಹಿಗಳಿಗೆ ಬೇಕರಿ ಉತ್ಪನ್ನಗಳು ಅದರಲ್ಲೂ ಹೆಚ್ಚು ಮೈದಾ ಬಳಸುವಂತಹ ಬಿಳಿ ಬ್ರೆಡ್ ಸೇವನೆಯಿಂದ ಬ್ಲಡ್ ಶುಗರ್ ಹಠಾತ್ ಹೆಚ್ಚಾಗಬಹುದು. ಇದು ಇನ್ಸುಲಿನ್ ಪ್ರತಿರೋಧವನ್ನೂ ಕೂಡ ಉಲ್ಬಣಿಸುವ ಸಾಧ್ಯತೆ ಇದೆ.
ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳಲ್ಲಿ ಟ್ರಾನ್ಸ್ ಕೊಬ್ಬು ಹೆಚ್ಚಾಗಿರುತ್ತದೆ. ಇದು ದೇಹದಲ್ಲಿ ಇನ್ಸುಲಿನ್ ಪ್ರತಿರೋಧವನ್ನು ಉತ್ತೇಜಿಸಿ ಶುಗರ್ ಹೆಚ್ಚಾಗುವಂತೆ ಮಾಡಬಹುದು.
ತಂಪು ಪಾನೀಯಗಳಲ್ಲಿ ಯಾವುದೇ ಪೋಷಕಾಂಶ ಇರುವುದಿಲ್ಲ. ಜೊತೆಗೆ ಸಕ್ಕರೆ ಪ್ರಮಾಣ ಹೆಚ್ಚಿರುವುದರಿಂದ ಇದು ತ್ವರಿತವಾಗಿ ಶುಗರ್ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಸಂಸ್ಕರಿದ ಹಿಟ್ಟಿನಿಂದ ತಯಾರಿಸಿದ ಪಿಜ್ಜಾ, ಪಾಸ್ತಾದಂತಹ ಆಹಾರಗಳು, ಆಲೂಗಡ್ಡೆಯಂತಹ ಆಹಾರ ಪದಾರ್ಥಗಳಲ್ಲಿ ಗ್ಲೈಸೆಮಿಕ್ ಸೂಚಿ (GI) ಅಧಿಕವಾಗಿದ್ದು ಇದು ಬ್ಲಡ್ ಶುಗರ್ ಮಟ್ಟವನ್ನು ತ್ವರಿತವಾಗಿ ಏರಿಸುತ್ತದೆ
ಸಂಸ್ಕರಿಸಿದ ಮಾಂಸಾಹಾರಗಳಲ್ಲಿ ಉಪ್ಪು ಅಧಿಕವಾಗಿರುತ್ತದೆ. ಇದಲ್ಲದೆ, ಟ್ರಾನ್ಸ್ ಕೊಬ್ಬು ಹೆಚ್ಚಾಗಿರುವುದರಿಂದ ಈ ಆಹಾರಗಳ ಸೇವನೆಯು ಶುಗರ್ ಉಲ್ಬಣಿಸುವಂತೆ ಮಾಡಬಹುದು. ಜೊತೆಗೆ ರಕ್ತದೊತ್ತಡವನ್ನು ಕೂಡ ಹೆಚ್ಚಿಸುತ್ತದೆ.
ನೀವು ಮಧುಮೇಹಿ ಆಗಿದ್ದರೆ ಅಥವಾ ನಿಮ್ಮ ಮನೆಯಲ್ಲಿ ಮಧುಮೇಹಿ ರೋಗಿಗಳಿದ್ದರೆ ಈ ಮೇಲೆ ತಿಳಿಸಿದ ಆಹಾರಗಳ ಸೇವನೆಯನ್ನು ತಪ್ಪಿಸಿದರೆ ಶುಗರ್ ನಿಯಂತ್ರಣದಲ್ಲಿರುತ್ತದೆ.