ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೆ ಹನಿಟ್ರ್ಯಾಪ್ ಸದ್ದು ಮಾಡಿದೆ. ವಿಧಾನಸೌಧದ ಮೊಗಸಾಲೆಯಲ್ಲಿ ಹನಿಟ್ರ್ಯಾಪ್ ಕುರಿತು ಸಾಕಷ್ಟು ಚರ್ಚೆಯಾಗಿದೆ. ಹನಿಟ್ರ್ಯಾಪ್ ಗೆ ಬಲಿಯಾದವರು ಯಾರು ಅನ್ನೋ ಬಗ್ಗೆ ಕುತೂಹಲ ಶುರುವಾಗಿದೆ. ಅಧಿಕಾರಸ್ಥ ವ್ಯಕ್ತಿಯನ್ನು ಹನಿಟ್ರ್ಯಾಪ್ ಗೆ ಒಳಪಡಿಸಿದ ಶಕ್ತಿ ಎಂತಹುದು ಎನ್ನುವುದರ ಬಗ್ಗೆಯೂ ಚರ್ಚೆ ಶುರುವಾಗಿದೆ.
Garuda Purana: ಮನೆಯಲ್ಲಿ ನಡೆಯುವ ಜಗಳಗಳಿಗೆ ಇವುಗಳೇ ಕಾರಣ.! ಗರುಡ ಪುರಾಣ ಏನು ಹೇಳುತ್ತದೆ ಗೊತ್ತಾ?
ಇನ್ನೂ ಈ ವಿಚಾರವಾಗಿ ಕಾಂಗ್ರೆಸ್ ಶಾಸಕ ಹೆಚ್ ಸಿ ಬಾಲಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಅದನ್ನು ಮಾಧ್ಯಮಗಳಲ್ಲಿ ನೋಡಿದ್ದಷ್ಟೇ ಗೊತ್ತು, ಇದು ಬಹಳ ಸೂಕ್ಷ್ಮ ವಿಚಾರ, ಇಂಥ ವಿಷಯಗಳಲ್ಲಿ ತಾನು ಪೆದ್ದು, ಸರಿಯಾದ ಮಾಹಿತಿ ಇಲ್ಲದೆ ಸಚಿವರ ತೇಜೋವಧೆ ಮಾಡುವುದು ಸರಿಯಲ್ಲ.
ಒಂದು ಪಕ್ಷ ಸುದ್ದಿ ನಿಜವೇ ಆಗಿದ್ದರೆ, ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ, ನಾಯಕನಾದವನಿಗೆ ಬಾಯಿ ಮತ್ತು ಕಚ್ಚೆ ಭದ್ರವಾಗಿರಬೇಕೆಂದು ಹಿರಿಯ ರಾಜಕಾರಣಿಗಳು ಹೇಳಿದ್ದು ನೆನಪಾಗುತ್ತಿದೆ ಎಂದು ಶಾಸಕ ಹೇಳಿದರು.