ನೆಲಮಂಗಲ: ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿ ಮೇಲೆ ಹಲ್ಲೆ ನಡೆದಿರುವ ಘಟನೆ ನೆಲಮಂಗಲ ನಗರದ ಮುಕ್ತನಾಥೇಶ್ವರ ಬಡಾವಣೆಯಲ್ಲಿ ಜರುಗಿದೆ.
ಶಿಕ್ಷಣ ಇಲಾಖೆ ವಿರುದ್ದ ಸಮರ ಸಾರಿದ ಶಿಕ್ಷಕರು: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ!
ಪೋಲಿಸರ ಸಮ್ಮುಖದಲ್ಲಿ ವ್ಯಕ್ತಿಗೆ ಜನರ ಗುಂಪು ಥಳಿಸಿದೆ. ಏಕಾಏಕಿ ವ್ಯಕ್ತಿಯ ಮೇಲೆ ಮೂರು ನಾಲ್ಕು ಜನರಿಂದ ಹಲ್ಲೆ ಆರೋಪ ಮಾಡಲಾಗಿದೆ. ಪೊಲೀಸರು ಇದ್ದ ವೇಳೆ ಅಟ್ಟಾಡಿಸಿ ರಿಯಲ್ ಎಸ್ಟೇಟ್ ಪಟಾಲಮ್ ಹಲ್ಲೆ ಮಾಡಿದ್ದಾರೆ,
ಹಲ್ಲೆಗೊಳಗಾದ ವ್ಯಕ್ತಿ ನೆಲಮಂಗಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಷ್ಟು ಜನರು ಏಕೆ ನಿಂತಿದ್ದೀರಾ ಎಂದು ಕೇಳಿದಕ್ಕೆ ಗುಂಪು ಹಲ್ಲೆ ಮಾಡಿದೆ. ಕೆ ಆರ್ ಎಸ್ ಪಾರ್ಟಿಯ ಯಲಚಗೆರೆ ಕುಮಾರ್ ಮೇಲೆ ಹಲ್ಲೆ ಮಾಡಿದೆ.
ನೆಲಮಂಗಲ ಟೌನ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಜರುಗಿದೆ.