ಬೆಂಗಳೂರು: ಅಕ್ರಮ ತೆರಿಗೆ ವಸುಲಾತಿ ಮತ್ತು ಕಂದಾಯ ಅಧಿಕಾರಿಗಳಿಗೆ ಆಗುತ್ತಿರುವ ಕಿರುಕುಳದ ಕುರಿತಂತೆ ವಿಧಾನ ಪರಿಷತ್ ಶಾಸಕರಾದ ಟಿ. ಎ. ಶರವಣ ಅವರು ಮಾನ್ಯ ಉಪ ಮುಖ್ಯಮಂತ್ರಿಗಳಿಗೆ ಪ್ರಶ್ನಿಸಿದರು.
ಬಿಬಿಎಂಪಿ ಕಾಯಿದೆ ಸೆಕ್ಷನ್ 144 (15)b ಅಡಿ ಯಲ್ಲಿ ಪೂರ್ವನ್ವಯ ಆಗುವಂತೆ ದಂಡ, ಬಡ್ಡಿ ವಿಧಿಸೋದಕ್ಕೆ , ವಸೂಲಿ ಮಾಡೋಕೆ ಪ್ರಾವಿಷನ್ ಇಲ್ಲ. ಆದರೂ ಬಡ್ಡಿ, ದಂಡ ಅಂತ ಅಧಿಕಾರಿಗಳು ಜನರ ಶೋಷಣೆ ಮಾಡುತ್ತಿದ್ದಾರೆ, ಕಿರುಕುಳ ನೀಡುತ್ತಿದ್ದಾರೆ. ಆಸ್ತಿ ಹರಾಜು ಹಾಕ್ತೀವಿ ಅಂತ ಬೆದರಿಕೆ ಹಾಕ್ತಾ ಇದ್ದಾರೆ.ಇದನ್ನು ನಿಲ್ಲಿಸ ಬೇಕೆಂದು ಮಾನ್ಯ ಉಪಮುಖ್ಯಮಂತ್ರಿಯವರಿಗೆ ಶರವಣ ಅವರು ತಿಳಿಸಿದರು.
Bigg News: ಸುಮಲತಾಗೆ ಭಾರೀ ಠಕ್ಕರ್ ಕೊಟ್ಟ ಜೆಡಿಎಸ್: ಡಾ.ಮಂಜುನಾಥ್ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ಕೊಟ್ಟ ಬಿಜೆಪಿ
ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುತ್ತಿರುವವರ ಮೇಲೆ ಯಾವುದೇ ರೀತಿಯ ದೌರ್ಜನ್ಯವಾಗಬಾರದು. ಕಂದಾಯ ಅಧಿಕಾರಿಗಳಿಗೂ ಕಿರುಕುಳ ನೀಡಲಾಗುತ್ತಿದೆ ಲಿಖಿತವಾಗಿ ಯಾವುದೇ ಸೂಚನೆ ನೀಡದೆ, ಮೌಖಿಕವಾಗಿ ಬೆದರಿಕೆ ಹಾಕಲಾಗುತ್ತಿದೆ ಇದನ್ನು ಕೂಡ ನಿಲ್ಲಿಸಬೇಕು ಎಂದು ಈ ವೇಳೆ ಅವರು ತಿಳಿಸಿದರು.
ತಂತ್ರಜ್ಞಾನವನ್ನು ಬೆಳೆಸಿಕೊಂಡು, ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕೆಂದು ಟಿ. ಎ. ಶರವಣ ಸಲಹೆ ನೀಡಿದರು.