ಅಥಣಿ : ಕಳೆದ ಹತ್ತಾರು ವರ್ಷಗಳಿಂದ ಬೇಡಿಕೆಯಲ್ಲಿ ಇದ್ದ ಅಥಣಿಯನ್ನು ಜಿಲ್ಲೆಯನ್ನಾಗಿ ಮಾಡಬೇಕು ಎಂದು ನಮ್ಮ ಮಾಳಿ ಸಮಾಜದ ಶ್ರೀ ಮಹಾತ್ಮಾ ಜ್ಯೋತಿಬಾ ಫುಲೆ ಸರ್ಕಲ್ ಯುವ ಕಮೀಟಿ ಹಾಗೂ ಮಾಳಿ ಸಮಾಜ ಯುವಕ ಕಮೀಟಿಯ ಎಲ್ಲ ಸದಸ್ಯರು ಸೇರಿಕೊಂಡು ಈ ಮೂಲಕ “ಅಥಣಿ ಜಿಲ್ಲಾ ಹೋರಾಟ ಸಮೀತಿ” ಗೆ ಬೆಂಬಲವನ್ನು ಘೋಷಿಸುತ್ತಿದ್ದೆವೆ ಎಂದು ಅಧ್ಯಕ್ಷ ರವಿ ಭಾಸಿಂಗಿ ಅವರು ಹೇಳಿದರು.
ಅವರು ಸ್ಥಳೀಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡ ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿ ಸದರಿ ಜಿಲ್ಲಾ ಹೋರಾಟ ಸಮೀತಿ ವತಿಯಿಂದ ಜರುಗುವ ಪ್ರತಿಯೊಂದು ಸಭೆ, ಸಮಾರಂಭ, ಪ್ರತಿಭಟನೆ ಇತ್ಯಾದಿ ಸೇರಿ ಎಲ್ಲದರಲ್ಲಿ ನಮ್ಮ ಸಂಘಟನೆಯ ಸರ್ವರೂ ಸೇರಿ ತನು, ಮನ, ಧನದಿಂದ ಭಾಗವಹಿಸುತ್ತೆವೆ ಎಂದರು.
ಅನಂತರ ಸರ್ಕಲ್ ಕಮೀಟಿ ಅಧ್ಯಕ್ಷ ರಮೇಶ ಮಾಳಿ ಮಾತನಾಡಿ ಈ ಹಿಂದೆಯೂ ಕೂಡ ನಮ್ಮ ಸಂಘದಿಂದ ಬೆಂಬಲ ಕೊಟ್ಟಿದ್ದೆವು ಮುಂದೆಯೂ ಕೂಡ ನಾವು ಅವಿರತವಾಗಿ ಬೆಂಬಲ ಸೂಚಿಸಿ ಜೊತೆಗೆ ಇರುತ್ತೆವೆ ಎಂದರು. ಈ ವೇಳೆ ಸುಭಾಶ ಮಾಳಿ, ಮಾದೇವ ಚಮಕೇರಿ, ರವಿ ಬಡಕಂಬಿ, ಅರುಣ ಮಾಳಿ, ಲಕ್ಷ್ಮಣ ಬಡಕಂಬಿ, ಸಂತೋಷ ಬಡಕಂಬಿ, ಮಾಂತೇಶ ಭಾಸಿಂಗಿ, ಬಸು ಅಣ್ಣಾ ಸೇರಿದಂತೆ ಇತರರಿದ್ದರು.