ಅಥಣಿ : ತಾಲೂಕಿನ ಅನಂತಪುರ ಗ್ರಾಮದಲ್ಲಿ ಬೆಳೆದ ೨೫ ಹೇಕ್ಟರ್ ಗು ಅಧಿಕ ದ್ರಾಕ್ಷಿ ಬೆಳೆ ಅಕಾಲಿಕ ಮಳೆಯಿಂದ ಹಾನಿಯಾಗಿದೆ ವರ್ಷಪೂರ್ತಿ ಕಷ್ಟ ಪಟ್ಟು ಬೆಳೆದ ದ್ರಾಕ್ಷಿ ಬೆಳೆ ಕೈಗೇಟುಕದ ಕಾರಣ ರೈತರು ಕಂಗಾಲಾಗಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅನಂತಪುರ ಗ್ರಾಮದಲ್ಲಿ ಮೊನ್ನೆ ಸುರಿದ ಅಕಾಲಿಕ ಮಳೆಯಿಂದ ದ್ರಾಕ್ಷಿ ಬೆಳೆಗಳು ರೋಗಬಾಧೆಗೆ ತುತ್ತಾಗಿ ದ್ರಾಕ್ಷಿ ಹಣ್ಣಿನಲ್ಲಿ ನೀರು ತುಂಬಿ ಒಡೆದು ನಾಶಗೊಳ್ಳುತ್ತಿದೆ.
ನೀರಿಲ್ಲದೆ ಹತ್ತು ಎಕರೆ ಕಬ್ಬು ಒಣಗಿಸಿ ಸುಮಾರು ಆರು ಲಕ್ಷ ಖರ್ಚು ಮಾಡಿ ದ್ರಾಕ್ಷಿ ಬೆಳೆದಿದ್ದೆ ಕಟಾವಿನ ಹಂತಕ್ಕೆ ಬಂದ ದ್ರಾಕ್ಷಿ ಬೆಳೆ ಈ ರೀತಿ ನಾಶವಾಗಿದೆ ಮುಂದೇನು ಅಂತಾ ತೋಚದಾಗಿದೆ ಎಂದು ರೈತರು ತಮ್ಮ ಅಲಳನ್ನ ತೋಡಿಕೊಂಡಿದ್ದಾರೆ.