Facebook Twitter Instagram YouTube
    ಕನ್ನಡ     English     తెలుగు
    Sunday, January 29
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home » ನಿಮ್ಮ ಮದುವೆ ವಿಳಂಬ ಆಗುತ್ತದೆಯೇ? ಇಲ್ಲಿದೆ ಸೂಕ್ತ ಮಾಹಿತಿ ಹಾಗೂ ಪರಿಹಾರ

    ನಿಮ್ಮ ಮದುವೆ ವಿಳಂಬ ಆಗುತ್ತದೆಯೇ? ಇಲ್ಲಿದೆ ಸೂಕ್ತ ಮಾಹಿತಿ ಹಾಗೂ ಪರಿಹಾರ

    ain userBy ain userJanuary 7, 2022
    Share
    Facebook Twitter LinkedIn Pinterest Email

    ಎಲ್ಲರ ಜೀವನದ ಒಂದು ಪ್ರಮುಖ ಅಂಶ ಮದುವೆ. ವಿವಾಹ ತಡವಾಗಲು ಜನ್ಮಜಾತಕದಲ್ಲಿ ಜನ್ಮ ಲಗ್ನ ಅಥವಾ ಜನ್ಮ ರಾಶಿಯಿಂದ ಎಳನೇ ಮನೆಯಲ್ಲಿ ಶನಿ ಇರುವುದು ಅಥವಾ ಏಳನೇ ಮನೆಯ ಅಧಿಪತಿ ಶನಿ ಆಗಿರುವುದು. ಇಂಥ ಪರಿಸ್ಥಿತಿಗಳಲ್ಲಿ ವಯಸ್ಸು ಮೂವತ್ತು ದಾಟುವ ತನಕ ವಿವಾಹ ಕಷ್ಟಸಾಧ್ಯ ಇಲ್ಲಿ ನಾವು ಶನಿಗ್ರಹ ದೋಷಪರಿಹಾರ ಹೊರತುಪಡಿಸಿ ಇನ್ಯಾವ ಪರಿಹಾರಗಳನ್ನು ಮಾಡಿದರೂ ಫಲ ದುರ್ಲಭ. ಶನೈಶ್ಚರ ದೋಷ ಪರಿಹಾರಕ್ಕಾಗಿ ಶಮೀಸಮಿತ್ತು ಹಾಗು ಕೃಸರಾನ್ನ ದ್ರವ್ಯದಲ್ಲಿ ಶನಿವಾರದಂದು ಶನಿ ಶಾಂತಿ ಹವನ ಮಾಡಿಸುವುದು. ಆದರೆ ಯಾವುದೇ ಕಾರಣಕ್ಕೂ ಸಪ್ತಮಾಧಿಪತಿಮ ರತ್ನವನ್ನು ಧರಿಸಬಾರದು.

    ಇನ್ನೂ ವಿವಾಹಕ್ಕೆ ವಿಘ್ನ ಮಾಡುವ ಇನ್ನೊಂದು ಪ್ರಮುಖ ಕಾರಣ ಜಾತಕದಲ್ಲಿ ಬರುವ ಸರ್ಪದೋಷ ಸರ್ಪದೋಷಗಳಲ್ಲಿ ಹತ್ತು ಹಲವು ವಿಧಿಗಳಿವೆ. ಆದರೆ ಅವುಗಳಲ್ಲಿ ವಿವಾಹಕ್ಕೆ ವಿಘ್ನ ಮಾಡುವ ಸರ್ಪದೋಷವೇ ಕಾಳ ಸರ್ಪದೋಷ. ಇಲ್ಲಿ ಗಮನಿಸಲೇ ಬೇಕಾದ ಅಂಶ ಎಂದರೆ ಆಶ್ಲೇಷಾ ಬಲಿ ಪೂಜೆ ಅಥವಾ ಸರ್ಪ ಸಂಸ್ಕಾರ ಕಾಳಸರ್ಪ ದೋಷಕ್ಕೆ ಪರಿಹಾರ ಅಲ್ಲ. ಅಷ್ಟೇ ಅಲ್ಲ ಕ್ಷೇತ್ರಗಳಲ್ಲಿ ಕೇವಲ ರಾಹುಗ್ರಹಕ್ಕೆ ಹಾಗೂ ಕೇತುಗ್ರಹಕ್ಕೆ ಒಂದು ಅಷ್ಟೋತ್ತರ ಪೂಜೆ ಮಾಡಿದರೆ ಕಾಳಸರ್ಪದೋಷಕ್ಕೆ ಪರಿಹಾರ ಆಗೊದಿಲ್ಲ. ತಾವಾಗಲೀ ತಮ್ಮ ಕುಟುಂಬದವರಿಂದಾಗಲೀ ಸರ್ಪ ವಧೆ ಆಗಿದ್ದಲ್ಲಿ ಸರ್ಪಸಂಸ್ಕಾರದ ಅವಶ್ಯಕತೆ ಇರುತ್ತದೆ ಹಾಗೂ ನಾಗದೇವತಾ ಆರಾಧನೆಗಳಲ್ಲಿ ಆಶ್ಲೇಷಾ ಬಲಿ ಪೂಜಾ ಬರುತ್ತದೆ. ಕಾಳ ಸರ್ಪ ದೋಷ ಪರಿಹಾರವಾಗಿ ವಿವಾಹ ಸಿದ್ಧಿಯಾಗಲು ವೇದೋಕ್ತ ಮಂತ್ರಗಳಿಂದ ಕಾಳಸರ್ಪದೋಷ ಪರಿಹಾರ ಶಾಂತಿ ಹವನ ಮಾಡಿಸಬೇಕು.

    Demo

    ಇನ್ನೂ ಮಾತುಕತೆ ಹಂತದಲ್ಲೇ ಮದುವೆಗಳು ಮುರಿದು ಬೀಳಲು ಮತ್ತೊಂದು ಪ್ರಮುಖವಾದ ಕಾರಣ ಜನ್ಮಲಗ್ನ ಅಥವಾ ರಾಶಿಯಿಂದ ಏಳನೇ ಮನೆಯಲ್ಲಿ ಕೇತುಗ್ರಹ ಕುಟುಂಬದಲ್ಲಿ ಇರುವ ಪ್ರೇತಭಾಧೆಗಳಿಂದ ವಿವಾಹದಲ್ಲಿ ತೊಂದರೆಗಳನ್ನು ಸಪ್ರಮದ ಕೇತು ತಿಳಿಸುತ್ತಾನೆ. ಇದಕ್ಕಾಗಿ ಗೋಕರ್ಣಾದಿ ಕ್ಷೇತ್ರಗಳಲ್ಲಿ ಪ್ರೇತೋದ್ಧಾರ-ಮೋಕ್ಷನಾರಾಯಣ ಬಲಿಪೂಜಾ ಆಚರಿಸುವುದು ಪರಿಹಾರ. ಇಲ್ಲಿ ತಿಳಿಯಬೇಕಾದ ಇನ್ನೊಂದು ಅಂಶ ಎಂದರೆ ಕೇತುಗ್ರಹ ಅಭಿಮಾನಿ ದೇವತೆ ಮಹಾಗಣಪತಿ ಆಗಿರುವುದರಿಂದ ಅಷ್ಟದ್ರವ್ಯ ಮಹಾಗಣಪತಿ ಹವನದಿಂದಲೂ ಸಹ ನಿರ್ವಘ್ನವಾಗಿ ವಿವಾಹ ಸಿದ್ಧಿಯಾಗುತ್ತದೆ.
    ಇನ್ನೂ ಸರ್ವರಿಗೂ ಅನ್ವಯಿಸುವಂತೆ ಹೇಳಬೇಕಾದರೆ ಉತ್ತಮ ವಿವಾಹ ಸಿದ್ಧಿ ಆಗಬೇಕು ಎಂದಾದಲ್ಲಿ ಅವರ ಜನ್ಮಲಗ್ನ ಹಾಗು ಜನ್ಮರಾಶಿಯ ಏಳನೇ ಮನೆಯ ಅಧಿಪತಿ ಗ್ರಹವನ್ನು ಹಾಗೂ ಆಗ್ರಹದ ಅಭಿಮಾನಿ ದೇವತೆಯ ಆರಾಧನೆ ಮಾಡಬೇಕು. ಹೇಗೆ ಅಂದರೆ

    ಮೇಷ-ವೃಶ್ಚಿಕ ಲಗ್ನ ಅಥವಾ ರಾಶಿಯವರು ಶುಕ್ರಗ್ರಹದ ಆರಾಧನೆ, ಲಕ್ಷ್ಮಿನಾರಾಯಣ ಹೃದಯ ಪಾರಾಯಣ ದುರ್ಗಾ ಆರಾಧನೆ, ಚಂಡಿಕಾ ಪಾರಾಯಣ ಮಾಡಿಸಬಹುದು.
    .
    ವೃಷಭ- ತುಲಾ ರಾಶಿ ಅಥವಾ ಲಗ್ನದವರು ಕುಜ ಜಪ, ಹವನ, ಸುಬ್ರಹ್ಮಣ್ಯ ಕ್ಷೇತ್ರ ದರ್ಶನ ಹಾಗೂ ಆರಾಧನೆ, ತೊಗರಿಬೆಳೆ ದಾನ ಇತ್ಯಾದಿಗಳನ್ನು ಮಾಡಬಹುದು
    .
    ಮಿಥನ-ಕನ್ಯಾ ರಾಶಿ ಹಾಗೂ ಲಗ್ನದವರು ಗುರು ಮಂತ್ರ ಜಪ-ಹವನ, ರಾಘವೇಂದ್ರ ಸ್ವಾಮಿಗಳ ಆರಾಧನೆ, ಶಿರಡಿ ಸಾಯಿಬಾಬಾ ಪೂಜೆ, ಕಡಲೆ ದಾನ ಮಾಡುವುದು ಉತ್ತಮ.

    ಧನು ಹಾಗೂ ಮೀನ ರಾಶಿ ಲಗ್ನಕ್ಕೆ ಸೇರಿದವರು ಬುಧ ಮಂತ್ರ ಜಪ, ಹವನ, ವಿಷ್ಣು ಸಹಸ್ರನಾಮ ಪಾರಾಯಣ, ಪುರುಷ ಸೂಕ್ತ ಹವನ, ಹೆಸರು ಕಾಳು ದಾನ ಮಾಡಬಹುದು.

    ಕರ್ಕಟ ಹಾಗು ಸಿಂಹ ರಾಶಿ ಲಗ್ನಕ್ಕೆ ಸೇರಿದವರು ಅವಶ್ಯವಾಗಿ ಶನೈಶ್ವರನ ಆರಾಧನೆ ಮಾಡಬೇಕು. ಅದರಲ್ಲೂ ವಿಶೇಷವಾಗಿ ಶನಿ ಶಾಂತಿ ಹವನ, ಶನೈಶ್ವರ ವ್ರತ, ರುದ್ರದೇವರ ಆರಾಧನೆ ಮಾಡುವುದು, ಕರಿ ಎಳ್ಳು ಹಾಗೂ ಉತ್ತಮವಾದ ಶುದ್ಧವಾದ ಎಳ್ಳೆಣ್ಣೆ ದಾನ ಮಾಡಬೇಕು.

    ಮಕರ ರಾಶಿ, ಲಗ್ನಕ್ಕೆ ಸೇರಿದವರು ಚಂದ್ರ ಜಪ-ಹವನ, ದುರ್ಗಾ ದೀಪ ನಮಸ್ಕಾರ, ಪೂಜೆ, ಮುತೈದೆಯರ ಆರಾಧನೆ ಮಾಡಬಹುದು.

    ಕುಂಭ ಲಗ್ನ, ರಾಶಿಗೆ ಸೇರಿದವರು ಆದಿತ್ಯ ಹೃದಯ ಪರಣ, ಗೋದಿ ದಾನ, ಸೂರ್ಯ ಮಂತ್ರ ಜಪ, ಹವನ, ಈಶ್ವರನ ಆರಾಧನೆ ಮಾಡಬಹುದು.
    ವಿವಾಹ ಸಿದ್ಧಿಗಾಗಿ ರತ್ನಧಾರಣೆ ಮಾಡುವವರೂ ಜನ್ಮ ಲಗ್ನ ಅಥವಾ ರಾಶಿಯ ಪಂಚಮಾಧಿಪತಿ ಭಾಗ್ಯಾಧಿಪತಿ ಅಥವಾ ಲಾಭಾಧಿಪತಿ ಗ್ರಹದ ರತ್ನಕ್ಕೆ ಜಲ, ಕ್ಷೀರ ಹಾಗೂ ಆ ಗ್ರಹದ ಧಾನ್ಯದಿಂದ ಸಂಸ್ಕರಿಸಿ ಧಾರಣೆ ಮಾಡಿದರೆ ಉತ್ತಮ ಫಲ ಸಿಗುವುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿರಿ.

    -ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    Share. Facebook Twitter LinkedIn Email WhatsApp

    Related Posts

    ಭಾನುವಾರ- ರಾಶಿ ಭವಿಷ್ಯ ಜನವರಿ-29,2023

    January 29, 2023

    ಶನಿವಾರ- ರಾಶಿ ಭವಿಷ್ಯ ಜನವರಿ-28,2023

    January 28, 2023

    ಶುಕ್ರವಾರ- ರಾಶಿ ಭವಿಷ್ಯ ಜನವರಿ-27,2023

    January 27, 2023

    ಗುರುವಾರ- ರಾಶಿ ಭವಿಷ್ಯ ಜನವರಿ-26,2023

    January 26, 2023

    ಬುಧವಾರ ರಾಶಿ ಭವಿಷ್ಯ -ಜನವರಿ-25,2023

    January 25, 2023

    ಮಂಗಳವಾರ ರಾಶಿ ಭವಿಷ್ಯ-ಜನವರಿ-24,2023

    January 24, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.