ರಾಜ್ಯದಾದ್ಯಂತ ಬಿಡುಗಡೆಗೊಂಡಿದ್ದ ಬ್ಯಾಡ್ ಮ್ಯಾನರ್ಸ್ ಚಿತ್ರ ಎಲ್ಲೆಡೆ ಭರ್ಝರಿ ಪ್ರದರ್ಶನ ಕಂಡುಬಂದಿದ್ದು ಈ ಚಿತ್ರವನ್ನು ಎಲ್ಲರು ಮೆಚ್ಚಿಕೊಂಡಿದ್ದಾರೆ ಹಾಗೆ ಯಶಸ್ವಿಯಾಗಿ ಸಹ ಪ್ರದರ್ಶನ ಕಾಣುತ್ತಿದೆ.
ಹಾಗೆ ಬ್ಯಾಡ್ ಮ್ಯಾನರ್ಸ್ ಚಿತ್ರ ಹಾಗೂ ಅಭಿಷೇಕ್ ಅಂಬರೀಶ್ ರವರ ಅಭಿನಯವನ್ನು ಮೆಚ್ಚಿ ತುಂಬು ಹೃದಯದಿಂದ ಅಶ್ವಿನಿ ಪುನೀತ್ ರಾಜಕುಮಾರ್ ಪ್ರಶಂಸೆಯನ್ನು ವ್ಯಕ್ತಪಡಿಸಿದರು.
ಬ್ಯಾಡ್ ಮ್ಯಾನರ್ಸ್ ಚಿತ್ರದ ನಿರ್ಮಾಣ ಸುಧೀರ್ ಕೆ.ಎಂ, ನಿರ್ದೇಶನ ದುನಿಯಾ ಸೂರಿ ಮಾಡಿದ್ದು ಅಭಿಷೇಕ್ ಅಂಬರೀಷ್, ರಚಿತಾ ರಾಮ್, ತಾರಾ ಅನುರಾಧಾ, ದತ್ತಣ್ಣ, ಶರತ್ ಲೋಹಿತಾಶ್ವ, ರೋಚಿತ್, ತ್ರಿವಿಕ್ರಮ್, ಸಚ್ಚಿದಾನಂದ, ಪ್ರಶಾಂತ್ ಸಿದ್ಧಿ, ಪೂರ್ಣಚಂದ್ರ ಮೈಸೂರು ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.
ಈ ಸಿನಿಮಾದಲ್ಲಿ ಅದ್ದೂರಿತನ ಕಾಣಿಸುತ್ತದೆ. ಮಾಸ್ ಪ್ರೇಕ್ಷಕರಿಗೆ ಬೇಕಾದ ಭರ್ಜರಿ ಫೈಟಿಂಗ್ ದೃಶ್ಯಗಳು ಇಲ್ಲಿವೆ. ಆದರೆ ಹೆಚ್ಚು ಲಾಜಿಕ್ ಹುಡುಕುವಂತಿಲ್ಲ. ಚರಣ್ ರಾಜ್ ಅವರು ಸಂಗೀತದ ಮೂಲಕ ಸಿನಿಮಾದ ತೂಕ ಹೆಚ್ಚಿಸಲು ಪ್ರಯತ್ನಿಸಿದ್ದಾರೆ. ಹಾಡುಗಳು ಚೆನ್ನಾಗಿದ್ದರೂ ಕಥೆಯ ಮಧ್ಯೆ ಬಲವಂತಕ್ಕೆ ತುರುಕಿದಂತಿವೆ. ಶೇಖರ್ ಎಸ್. ಅವರ ಛಾಯಾಗ್ರಹಣ ಚೆನ್ನಾಗಿದೆ