ವೇದಿಕೆಯಲ್ಲಿ ತಮ್ಮ ಮೇಲೆ ನಡೆದ ಹಲ್ಲೆ ಯತ್ನಕ್ಕೆ ಸಂಬಂಧಿಸಿದಂತೆ ಸಚಿವ ಅಶ್ವಥ್ ನಾರಾಯಣ್ ಅವರು, ಡಿಕೆ ಬ್ರದರ್ಸ್ ಗೆ ಸವಾಲ್ ಹಾಕಿದ್ದಾರೆ.ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮಗೆ ಯೋಗ್ಯತೆ, ಗಂಡಸ್ತನ ಇದ್ದರೆ ಕೆಲಸ ಮಾಡಿ ತೋರಿಸಿ, ನಿನ್ನೆ ಪರೋಕ್ಷವಾಗಿ ಹೇಳಿದ್ದೇ, ಇವತ್ತು ನೇರವಾಗಿ ಹೇಳುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ರಾಮನಗರದಲ್ಲಿ ಗಲಾಟೆ ಮಾಡಿ ಕಳುಹಿಸಬೇಕೆನ್ನುವುದು ಅವರ ಮೂಲ ಉದ್ದೇಶವಾಗಿತ್ತು. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮನಿಗೆ ಛೀಮಾರಿ ಹಾಕದೇ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ. ಇವರು ಕುತ್ತಿಗೆ ಕೊಯ್ದು ಕುತಂತ್ರ ರಾಜಕಾರಣ ಮಾಡಿಕೊಂಡು ಬಂದವರು ಎಂದು ಸಚಿವ ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ.

