ಬಿಜೆಪಿ ಬೆಂಬಲಿಸುವಂತೆ ಶಾಸಕರಿಗೆ ಆಮೀಷ ಒಡ್ಡಿರುವ ಆರೋಪದ ಹಿನ್ನೆಲೆ, ಸಚಿವ ಸಿ ಎನ್ ಅಶ್ವಥ್ ನಾರಾಯಣ್ & ಶಾಸಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಪಕ್ಷಾಂತರಕ್ಕೆ ಬಿಜೆಪಿ ನಾಯಕರು ಶಾಸಕರಿಗೆ ಆಮಿಷ ಒಡ್ಡಿರುವುದಾಗಿ ತಿಳಿಸಿ ಟಿ.ಜೆ.ಅಬ್ರಹಾಂ ಖಾಸಗಿ ದೂರು ದಾಖಲಿಸಿದ್ದರು. ಈ ಸಂಬಂಧವಾಗಿ ಸಮನ್ಸ್ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಅಲ್ಲದೇ ಪ್ರಕರಣವನ್ನ ಮತ್ತೆ ವಿಶೇಷ ಕೋರ್ಟ್ಗೆ ಮರಳಿಸಿದ್ದು ಖಾಸಗಿ ದೂರು ಪರಿಗಣಿಸುವಾಗ ಪ್ರಕ್ರಿಯೆಗಳನ್ನು ಪಾಲಿಸುವಂತೆ ಸೂಚಿಸಿದೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಮತ್ತು ಪೂರ್ವಾನುಮತಿಗೆ ಸಂಬಂಧಿಸಿದಂತೆ ನಿಯಮ ಪಾಲಿಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ ಎಂದು ಹೇಳಲಾಗಿದೆ.
