ಬೆಂಗಳೂರು:- ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಒಂದೇ ಒಂದು ರೂಪಾಯಿ ಮೀಸಲಿಟ್ಟಿಲ್ಲ, ರಾಜ್ಯವೊಂದರ ಜಿಡಿಪಿ ಹೆಚ್ಚಬೇಕಾದರೆ ಆಸ್ಪತ್ರೆ, ಶಾಲೆ, ಕಟ್ಟಡ, ಬ್ರಿಜ್ ಮತ್ತು ಫ್ಲೈಓವರ್ ಗಳ ನಿರ್ಮಾಣವಾಗಬೇಕು, ಅವೆಲ್ಲ ರಾಜ್ಯದ ಆಸ್ತಿಗಳೆನಿಸಿಕೊಳ್ಳುತ್ತವೆ ಎಂದು ಅಶೋಕ ಹೇಳಿದರು.
ಆದರೆ, ಈ ಸರ್ಕಾರಕ್ಕೆ ಅಭಿವೃದ್ಧಿ ಬಗ್ಗೆ ಯೋಚನೆ ಮಾಡೇ ಇಲ್ಲ, ಇದನ್ನು ನಾವು ಮಾತ್ರ ಹೇಳುತ್ತಿಲ್ಲ, ಕಾಂಗ್ರೆಸ್ ಶಾಸಕ ಬಿ ಆರ್ ಪಾಟೀಲ್ ಕೆಡಿಪಿ ಸಭೆಯೊಂದರಲ್ಲಿ ಅದನ್ನು ಹೇಳಿದ್ದಾರೆ. ಹಿಂದೆ ಕಾಂಗ್ರೆಸ್ ನ 20 ಶಾಸಕರು ಅಭಿವೃದ್ಧಿ ಕೆಲಸಗಳಿಗೆ ಹಣ ಬಿಡುಗಡೆ ಮಾಡಿಲ್ಲ ಪತ್ರ ಅಭಿಯಾನ ನಡೆಸಿದ್ದರು. ಬಸವರಾಜ ರಾಯರೆಡ್ಡಿ ಅವರನ್ನು ಆರ್ಥಿಕ ಸಲಹೆಗಾರನಾಗಿ ನೇಮಕಗೊಳ್ಳುವ ಮೊದಲು ಅಭಿವೃದ್ಧಿ ಕಾರ್ಯಗಳು ನಡೆಯದಿರುವ ಬಗ್ಗೆ ದನಿಯೆತ್ತಿದ್ದರು. ಅಷ್ಟೆಲ್ಲ ಯಾಕೆ? ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಖಜಾನೆಯಲ್ಲಿ ಹಣವೇ ಇಲ್ಲ, ಒಂದರೆಡು ವರ್ಷಗಳವರೆಗೆ ಅನುದಾನ ಕೇಳಬೇಡಿ ಅಂತ ಎಲ್ಲ ಶಾಸಕರಿಗೆ ಹೇಳಿದ್ದರು ಅಂತ ಅಶೋಕ್ ಸರ್ಕಾರ ಮತ್ತು ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅನ್ನು ತರಾಟೆಗೆ ತೆಗೆದುಕೊಂಡರು.