ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅವರು ಪ್ರಣಾಳಿಕೆಯಲ್ಲಿ ನೀಡಿದಂತಹ ಐದು ಗ್ಯಾರಂಟಿ ಯೋಜನೆಯ ಕಾರಣ. ರಾಜ್ಯದಲ್ಲಿ ಕಾಂಗ್ರೆಸ್ 136 ಶಾಸಕರನ್ನು ಗೆಲ್ಲಿಸುವ ಮುಖಾಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು, ಅವರು ಕೊಟ್ಟಿದ್ದ 5 ಯೋಜನೆಗಳಲ್ಲಿ ಪ್ರಮುಖವಾಗಿ ಗೃಹಲಕ್ಷ್ಮಿ ಯೋಜನೆ ಸಹಾಯಧನ ಫಲಾನುಭವಿಗಳಿಗೆ ತಲುಪಿದೆ. ಇಲ್ಲಿಯವರೆಗೂ ಯೋಜನೆಗೆ 25,248 ಕೋಟಿ ರೂ. ವೆಚ್ಚವಾಗಿದೆ.
ಇನ್ನೂ ಅಕ್ರಮ ಬಿಪಿಎಲ್ ಕಾರ್ಡ್ ಹೊಂದಿದ್ದ ಹಲವರು ಕಾರ್ಡ್ ವಾಪಸ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆಹಾರ ಇಲಾಖೆಯು ಅನಧಿಕೃತ ಬಿಪಿಎಲ್ ಕಾರ್ಡ್ಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ಮಾನದಂಡಗಳನ್ನು ಮೀರಿ ಕಾರ್ಡ್ ಹೊಂದಿರುವವರಿಗೆ ಬಿಸಿ ಮುಟ್ಟಿಸುತ್ತಿದೆ.
Health Tips: ಈರುಳ್ಳಿ ತಿಂದಾಗ ಬಾಯಿ ವಾಸನೆ ಬರುತ್ತಾ..? ನಿವಾರಣೆಗೆ ಹೀಗೆ ಮಾಡಿ
ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ಕಾರ್ಡ್ಗಳನ್ನು ರದ್ದು ಮಾಡುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಇದಕ್ಕೆ ಪೂರಕವೆಂಬಂತೆ ತಾಂತ್ರಿಕ ಕಾರಣಗಳಿಂದ ಹಲವರ ಖಾತೆಗೆ ಹಣ ಜಮೆಯಾಗುವುದು ಸ್ಥಗಿತವಾಗಿದೆ. ಹೀಗಾಗಿ, ಕಾರ್ಡ್ ರದ್ದಾದ ಹಲವರು ಗೃಹಲಕ್ಷ್ಮಿ ಯೋಜನೆಯೂ ಸ್ಥಗಿತವಾಗುತ್ತದೆ ಎಂಬ ಆತಂಕ ಎದುರಿಸುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಬಿಪಿಎಲ್ ಕಾರ್ಡ್ ಮಾನದಂಡವಲ್ಲ. ರೇಷನ್ ಕಾರ್ಡ್ ಹೊಂದಿದ್ದರೆ ಸಾಕು. ಹೀಗಾಗಿ, ನಾವು ಬಿಪಿಎಲ್ ಕಾರ್ಡ್ ರದ್ದಾದವರ ಮಾಹಿತಿಯನ್ನು ಪಡೆಯುತ್ತಿಲ್ಲ. ಸದ್ಯ ಯಾರಿಗೂ ಯೋಜನೆಯಿಂದ ಕೈಬಿಡುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಬಿಪಿಎಲ್ ಕಾರ್ಡ್, ಗೃಹಲಕ್ಷ್ಮಿ ಮಾನದಂಡ ಏನು?
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳ ಆದಾಯ ವಾರ್ಷಿಕ 1.20 ಲಕ್ಷ ರೂ.ಗಿಂತ ಹೆಚ್ಚಿರಬಾರದು. ಏಳೂವರೆ ಎಕರೆ ಒಣ ಅಥವಾ ನೀರಾವರಿ ಭೂಮಿ ಹೊಂದಿರಬಾರದು. ಅನುದಾನಿತ/ಅನುದಾನರಹಿತ ಶಾಲಾ ಕಾಲೇಜು ನೌಕರರಾಗಿರಬಾರದು. ಆದರೆ, ಗೃಹಲಕ್ಷ್ಮಿ ಯೋಜನೆಗೆ ಮಾನದಂಡ ತೆರಿಗೆ ಪಾವತಿದಾರರು ಆಗರಬಾರದು ಎಂಬ ನಿಯಮವಿದೆ. ಎಪಿಎಲ್ ಕಾರ್ಡ್ ಇದ್ದರೂ ಸಾಕು. ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿ ಎಂದು ಹೆಸರಿಸಿದ ಮಹಿಳೆ ಗೃಹಲಕ್ಷ್ಮಿ ಯೋಜನೆ ಫಲಾನುಭವಿಯಾಗಲು ಅರ್ಹತೆ ಹೊಂದಿರುತ್ತಾರೆ. ಹೀಗಾಗಿ, ಮಾನದಂಡಗಳು ಬೇರೆ ಬೇರೆ ಇದ್ದು ಆತಂಕ ಪಡುವ ಅಗತ್ಯವಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಶೇಕಡಾ 97 ರಷ್ಟು ಮಹಿಳೆಯರಿಗೆ ಹಣ
ಕರ್ನಾಟದಲ್ಲಿ ಈವರೆಗೂ ಗೃಹಲಕ್ಷ್ಮಿ ಯೋಜನೆಗೆ 1.25 ಕೋಟಿ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ಸದ್ಯ 1.21 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿ ಪಾವತಿಯಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾಹಿತಿ ನೀಡಿದೆ.