ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಬೆಳ್ಳುಳ್ಳಿ ಸಾಕಷ್ಟು ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ. ಆದರೆ ನಿಮಗೆ ಗೊತ್ತಾ ಕೆಲವರು ಬೆಳ್ಳುಳ್ಳಿ ತಿನ್ನುವಾಗ ಯೋಚಿಸಿ ತಿನ್ನಬೇಕು. ಇಲ್ಲವಾದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ
ತುರಿಕೆ, ಹುಣ್ಣು, ಮೊಡವೆ, ದದ್ದು, ಕೆಂಪು ದದ್ದು ಮುಂತಾದ ಚರ್ಮ ಸಂಬಂಧಿ ಸಮಸ್ಯೆಗಳಿರುವವರು ಬೆಳ್ಳುಳ್ಳಿಯನ್ನು ಎಚ್ಚರಿಕೆಯಿಂದ ಸೇವಿಸಬೇಕು. ಏಕೆಂದರೆ ಅಂತಹವರಿಗೆ ಬೆಳ್ಳುಳ್ಳಿ ಅಲರ್ಜಿಯಾಗಿರಬಹುದು.
ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಬೆಳ್ಳುಳ್ಳಿ ತಿನ್ನಬಾರದು ಎಂದು ವೈದ್ಯರು ಸೂಚಿಸುತ್ತಾರೆ. ಯಾಕೆಂದರೆ ಅಂತಹವರು ಬೆಳ್ಳುಳ್ಳಿ ಸೇವಿಸಿದರೆ ಎದೆಯುರಿ, ವಾಕರಿಕೆಯಂತ ಸಮಸ್ಯೆಗಳು ಉಂಟಾಗುತ್ತದೆ.
ಅತಿಸಾರದ ಸಮಸ್ಯೆ ಇದ್ದರೂ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸುವುದನ್ನು ತಪ್ಪಿಸಬೇಕು. ಕೆಲವರ ಜೀರ್ಣಾಂಗ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ, ಇದರಿಂದಾಗಿ ಅವರು ಲೂಸ್ಮೋಷನ್ನಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ.
ಗರ್ಭಾವಸ್ಥೆಯಲ್ಲಿಯೂ ಸಹ, ಮಹಿಳೆಯರು ವೈದ್ಯರ ಸಲಹೆ ಮೇರೆಗೆ ಬೆಳ್ಳುಳ್ಳಿ ಸೇವಿಸಬೇಕು. ಬೆಳ್ಳುಳ್ಳಿಯ ಪರಿಣಾಮವು ಬಿಸಿಯಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ದೇಹದಲ್ಲಿ ಶಾಖ ಹೆಚ್ಚಾಗುತ್ತದೆ ಮತ್ತು ಮಹಿಳೆಯರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.