ಬೆಂಗಳೂರು:- ಸಚಿವರೊಬ್ಬರು ಸಿಎಂ ಮನೆ ರಿನೋವೇಷನ್ಗೆ ಫರ್ನಿಚರ್ ಕೊಟ್ಟಿದ್ದಾರಂತೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಸಿಎಂ ಮನೆಯಲ್ಲಿ ಕಾನ್ಫರೆನ್ಸ್ ಹಾಲ್ ಮಾಡಿದ್ದಾರೆ. ಅದಕ್ಕೆ ಎಷ್ಟೋ ಖರ್ಚು ಮಾಡಿದ್ದಾರೋ?, ನಿಮ್ಮನ್ನೆಲ್ಲ ಒಳಗೆ ಬಿಟ್ಟಿದ್ದಾರೊ ಇಲ್ಲ ಗೊತ್ತಿಲ್ಲ, ಮೂರು ಕೋಟಿನೋ ಎಷ್ಟೋ, ಅದು ಬೇರೆ ಅಂತೆ. ಸರ್ಕಾರದ ದುಡ್ಡಲ್ಲ, ಸಚಿವರೊಬ್ಬರು ಸಿಎಂ ಮನೆ ರಿನೋವೇಷನ್ಗೆ ಸ್ಟಾಂಗ್ಲೆ ಅಂತ ಫರ್ನಿಚರ್ ಕೊಟ್ಟಿದ್ದಾರಂತೆ. ಈ ಬಗ್ಗೆ ಸತ್ಯ ಹರಿಶ್ಚಂದ್ರರೇ ಉತ್ತರ ಕೊಡಬೇಕು. ಇದರ ಮೌಲ್ಯ 1.9 ಕೋಟಿ ಅಂತೆ ಒಂದು ಸೋಫಾ ಸೆಟ್” ಎಂದು ಹೆಚ್ಡಿಕೆ ಆರೋಪಿಸಿದ್ದಾರೆ.
“ಬಿಜೆಪಿ ಜೊತೆ ಜೆಡಿಎಸ್ ವಿಲೀನವಾಗಿ ನಾನು ಪ್ರತಿಪಕ್ಷ ನಾಯಕ ಆಗುವುದು ವದಂತಿ, ಬಿಜೆಪಿ ಜೊತೆ ಜೆಡಿಎಸ್ ವಿಲೀನ ಪ್ರಶ್ನೆ ಇಲ್ಲ, ನಮ್ಮ ಪಕ್ಷದ ಐಡೆಂಟಿಟಿ ಉಳಿಸಿಕೊಂಡಿದ್ದೇವೆ ಎನ್ ಡಿ.ಎ ನಲ್ಲಿ ಇದ್ದೇವೆ ಮುಂದುವರೆಯುತ್ತೇವೆ ಅಷ್ಟೆ” ಎಂದು ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.