ರಾಮನಗರ: ರಾಮನಗರದಲ್ಲಿ ಪಾದಯಾತ್ರೆ ತಡೆಯುವ ಬಗ್ಗೆ ಸರ್ಕಾರ ಪ್ಲಾನ್ ವಿಚಾರಕ್ಕೆ ಸಂಬಂಧಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ನೋಡೋಣ ಅವ್ರು ಏನು ಕ್ರಮ ತೆಗೆದುಕೊಳ್ಳುತ್ತಾರೆ ಅಂತಾ?ಅವ್ರು ಏನು ಮಾಡಿದ್ರು, ಅದನ್ನು ಎದುರಿಸಲು ನಾವೆಲ್ಲ ಎಲ್ಲ ರೀತಿಯಿಂದಲೂ ರೆಡಿ ಇದ್ದೇವೆ. ಸರ್ಕಾರ ಅವರದ್ದು ಇದೆ, ಅವ್ರು ಏನಾದರೂ ಕ್ರಮ ತಗೊಂಡ್ರೆ ಲೀಗಲ್ ಆಗಿ ನಾವು ಅದನ್ನು ಎದುರಿಸುತ್ತೇವೆ ಎಂದರು. ಅಲ್ಲದೆ ತಮ್ಮ ಮೇಲೆ ಎಫ್ಐಆರ್ ದಾಖಲಾಗಿರುವ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಹಾಕ್ಲಿ… ಹಾಕ್ಲಿ ..ಎಫ್ ಐ ಆರ್ ಹಾಕಿ ಎದರಿಸೋಕೆ ಆಗುತ್ತೇನು? ಇಂತಹ ಎಫ್ಐಆರ್ ಗಳನ್ನು ನಾವು ಎಷ್ಟು ನೋಡಿಲ್ಲ. ನಿನ್ನೆ ಯೂ ಹಾಕಿದ್ದಾರೆ ಇವತ್ತು ಹಾಕಿದ್ದಾರೆ ಎಂದರು
