ಬೆಂಗಳೂರು: ಮಾದಕ ಹ್ಯಾಶ್ ಆಯಿಲ್ ಮಾರಾಟಕ್ಕೆ ಯತ್ನಿಸಿದ ಇಬ್ಬರನ್ನು ಬೆಂಗಳೂರಿನ ಮೈಕೋ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೊಸವರ್ಷದ ಪಾರ್ಟಿಗಳಲ್ಲಿ ಬಳಸಲು ಈ ಹ್ಯಾಶ್ ಆಯಿಲ್ ದಂಧೆ ನಡೆಸುತ್ತಿದ್ದು, ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಪ್ರಕಾಶ್, ಧ್ಯಾಮ್ ರಾಜ್ ಬಂಧಿತ ಆರೋಪಿಗಳಾಗಿದ್ದು,
ಬಂಧಿತರಿಂದ 6 ಕೋಟಿ ಮೌಲ್ಯದ 5 ಲೀಟರ್ ಹ್ಯಾಶ್ ಆಯಿಲ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನೂ ಬಿಟಿಎಂ ಲೇಔಟ್ನ ಅಪಾರ್ಟ್ಮೆಂಟ್ನಲ್ಲಿ ಒಡಿಶಾದಿಂದ ತಂದಿದ್ದ ಹ್ಯಾಶ್ ಆಯಿಲ್ ಸಂಗ್ರಹಿಸಿದ್ದರು ಎಂಬ ಮಾಹಿತಿ ಆರೋಪಿಗಳ ವಿಚಾರಣೆಯಲ್ಲಿ ತಿಳಿದುಬಂದಿದೆ. ಸದ್ಯ ಈ ಸಂಬಂಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
