ಬೆಂಗಳೂರು: ಯುಕೆಯಲ್ಲಿ ಕೋಟಿ – ಕೋಟಿ ಹಣ ಸಂಪಾದಿಸುವ ಕನಸು ಕಂಡಿದ್ದ ಯುವಕ ಖತರ್ನಾಕ್ ಪ್ಲ್ಯಾನ್ ಮಾಡಿ ಸಿಕ್ಕಿಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಾವಿರ ಸುಳ್ಳು ಹೇಳಿ, ನಕಲಿ ದಾಖಲೆ ಸೃಷ್ಟಿಸಿ ನಕಲಿ ಸ್ಟೂಡೆಂಟ್ ವೀಸಾ ಪಡೆದು ಇಂಡಿಯಾ ದಿಂದ ಯುಕೆಗೆ ಹೋಗಲು ಯುವಕ ಮಾಸ್ಟರ್ ಪ್ಲ್ಯಾನ್ ಹಾಕಿದ್ದ. ಕೇರಳ ವೈನಾಡು ಮೂಲದ ಸೊಜು ಸಜತುವೀಟಿಲ್ ಶಾಜಿ ಎಂಬ ಸೇಲ್ಸ್ ಮ್ಯಾನ್ ನಕಲಿ ಅಂಕಪಟ್ಟಿ ಪಡೆದ ಯುವಕ ಎಂದು ಹೇಳಲಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುವಕನ ದಾಖಲೆಗಳನ್ನು ನೋಡಿ ಅನುಮಾನಗೊಂಡ ಇಮಿಗ್ರೇಷನ್ ಆಫೀಸರ್ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಇದರಿಂದ ತಪ್ಪಿಬ್ಬಾದ ಯುವಕ ಸಿಕ್ಕಿಬಿದ್ದಿದ್ದಾನೆ. ಸದ್ಯ ಯುವಕನನ್ನು ಏರ್ಪೋರ್ಟ್ ಪೊಲೀಸರು ಬಂಧಿಸಿದ್ದು, ಆತನ ಮಾಹಿತಿ ಅನ್ವಯ ನಕಲಿ ಅಂಕಪಟ್ಟಿ ನೀಡಿದ್ದ ಅನುರಾಗ್ ಕೂಡ ಅರೆಸ್ಟ್ ಆಗಿದ್ದಾನೆ. ಅಲ್ಲದೇ ಆರೋಪಿಗಳ ವಿರುದ್ಧ ನಕಲಿ ದಾಖಲೆ ಸೃಷ್ಟಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
