ರ್ಮಿಂಗ್‌ಹ್ಯಾಂ: ತಮ್ಮ ಜೀವನ ಸಂಗಾತಿಗಳನ್ನು ಕಂಡುಕೊಳ್ಳಲು ಜನರು ಸಾಕಷ್ಟು ಪ್ರಯತ್ನಗಳನ್ನು ಮಾಡುವುದು ನಮಗೆಲ್ಲಾ ಗೊತ್ತೇ ಇದೆ. ಬ್ರಿಟನ್‌ನಲ್ಲಿ ಬ್ಯಾಚಲರ್ ಒಬ್ಬರು ಈ ವಿಚಾರದಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. 29 ವರ್ಷದ ಮೊಹಮ್ಮದ್ ಮಲ್ಲಿಕ್ ಎಂಬ ಯುವಕ
ಬರ್ಮಿಂಗ್ ಹ್ಯಾಂ ತುಂಬಾ ಭಿತ್ತಿಪತ್ರಗಳ ಮುಖಾಂತರ ತಾನು ತೆಳ್ಳನೆಯ ದೇಹ ಹೊಂದಿದ್ದು, ಕ್ರಿಯೇಟಿವಿಟಿ ವ್ಯಕ್ತಿಯಾಗಿದ್ದು ತನಗೊಬ್ಬ ಸೂಕ್ತ ವಧು ಬೇಕಾಗಿದ್ದಾಳೆ ಎಂದು ಜಾಹಿರಾತು ಹಾಕಿದ್ದಾರೆ.

ಬರ್ಮಿಂಗ್‌ಹ್ಯಾಂ ಲೈವ್‌ನಲ್ಲಿ ಸೂಕ್ತ ಹುಡುಗಿ ಪತ್ತೆ ಮಾಡಲು ತಾನು ಪಡುತ್ತಿರುವ ಪಾಡನ್ನು ವಿವರಿಸಿದ ಮಲಿಕ್, “ನಾನು ಇನ್ನೂ ಸೂಕ್ತ ಹುಡುಗಿಯನ್ನು ಕಂಡುಕೊಂಡಿಲ್ಲ. ಇದು ಬಲು ಕಷ್ಟ,” ಎಂದು ಹೇಳಿಕೊಂಡಿದ್ದು, ಈಮೂಲಕ ಹೊಸ ಐಡಿಯಾ ಒಂದಕ್ಕೆ ಮುಂದಾಗಿದ್ದಾರೆ.
ತನ್ನ 20ರ ಹರೆಯದಲ್ಲಿರುವ ಮುಸ್ಲಿಂ ಹುಡುಗಿಯನ್ನು ಆದ್ಯತೆ ಮಾಡಿಕೊಂಡಿರುವುದಾಗಿ ಹೇಳುವ ಮಲ್ಲಿಕ್, ಈ ವಿಚಾರದಲ್ಲಿ ನಂಬಿಕೆ ಮತ್ತು ವ್ಯಕ್ತಿತ್ವಕ್ಕೂ ಮನ್ನಣೆ ನೀಡುವುದಾಗಿ ತಿಳಿಸಿದ್ದಾರೆ.
“ನನ್ನನ್ನು ಅರೇಂಜ್ ಮದುವೆಯಿಂದ ಪಾರು ಮಾಡಿ,” ಎಂದು ಕೇಳಿಕೊಳ್ಳುತ್ತಿರುವ ಮಲಿಕ್‌ನ ಭಿತ್ತಿಪತ್ರಗಳು ನಗರಾದ್ಯಂತ ಗಮನ ಸೆಳೆಯುತ್ತಿದ್ದು. ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ